Chicken Soup: ಸಕ್ಕತ್ ರುಚಿಯಾದ ಚಿಕನ್ ಸೂಪ್; ರೆಸ್ಟೊರೆಂಟ್‌ ಸ್ಟೈಲ್‌ನಲ್ಲಿ ಮನೆಯಲ್ಲೇ ರೆಡಿ ಮಾಡಿ ಸವಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Chicken Soup: ಸಕ್ಕತ್ ರುಚಿಯಾದ ಚಿಕನ್ ಸೂಪ್; ರೆಸ್ಟೊರೆಂಟ್‌ ಸ್ಟೈಲ್‌ನಲ್ಲಿ ಮನೆಯಲ್ಲೇ ರೆಡಿ ಮಾಡಿ ಸವಿಯಿರಿ

Chicken Soup: ಸಕ್ಕತ್ ರುಚಿಯಾದ ಚಿಕನ್ ಸೂಪ್; ರೆಸ್ಟೊರೆಂಟ್‌ ಸ್ಟೈಲ್‌ನಲ್ಲಿ ಮನೆಯಲ್ಲೇ ರೆಡಿ ಮಾಡಿ ಸವಿಯಿರಿ

ಒಂದೊಳ್ಳೆ ಸೂಪ್‌ಅನ್ನು ಮನೆಯಲ್ಲೇ ತಯಾರಿಸಿ ಮನ ಬಂದಷ್ಟು ಕುಡಿಯಬೇಕು ಎಂಬ ಆಲೋಚನೆ ಮಾಡುತ್ತಿದ್ದರೆ. ಈ ಸೂಪ್ ಮಾಡಿ ಕುಡಿಯಿರಿ. ಚಿಕನ್ ಕರಿ ಮತ್ತು ಚಿಕನ್ ಬಿರಿಯಾನಿಯನ್ನು ನೀವೆಷ್ಟು ಇಷ್ಟಪಡುತ್ತೀರೋ ಇದೂ ನಿಮಗೆ ಅಷ್ಟೇ ಇಷ್ಟವಾಗಬಹುದು, ಇಲ್ಲೇ ಇದೆ ರೆಸಿಪಿ. ನೀವು ಟ್ರೈ ಮಾಡುವುದೊಂದೇ ಬಾಕಿ.

ಮನೆಯಲ್ಲೇ ಮಾಡಿ ರುಚಿಯಾದ ಚಿಕನ್ ಸೂಪ್
ಮನೆಯಲ್ಲೇ ಮಾಡಿ ರುಚಿಯಾದ ಚಿಕನ್ ಸೂಪ್

ನೀವು ಸಾಯಂಕಾಲದ ಹೊತ್ತು ಟೀ ಕುಡಿಯುವ ಬದಲು ಏನಾದರೂ ಹೊಟ್ಟೆ ತುಂಬುವಂತ ಬಿಸಿಬಿಸಿಯಾದ ಸೂಪ್ ಕುಡಿಯಬೇಕು ಎಂದು ಅಂದುಕೊಳ್ಳುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಬೆಸ್ಟ್‌ ಸೂಪ್‌ ರೆಸಿಪಿ. ನೀವು ನಾನ್‌ವೆಜ್ ಪ್ರಿಯರಾಗಿದ್ದರೆ ಈ ಸೂಪ್‌ ಹೀರಿ ಹೀರಿ ಕುಡಿತೀರಾ. ಇದರ ಸ್ವಾದಕ್ಕೆ ಮರುಳಾಗದೆ ಇರೋದೇ ಇಲ್ಲ. ಇದನ್ನು ಸುಲಭವಾಗಿ ತಯಾರಿಸಲು ಸಾಧ್ಯವಿಲ್ಲ. ಆದರೆ ಎಷ್ಟು ಕಷ್ಟಪಟ್ಟು ತಯಾರಿಸಿದ್ದೀರೋ ಅದಕ್ಕಿಂತಲೂ ಹೆಚ್ಚಿನ ರುಚಿಯನ್ನು ಇದು ನಿಮಗೆ ನೀಡುತ್ತದೆ.

ಚಿಕನ್ ಸೂಪ್ ಮಾಡಲು ಬೇಕಾಗುವ ಪದಾರ್ಥಗಳು

ಚಿಕನ್ ಪೀಸ್‌

ಈರುಳ್ಳಿ - ಒಂದು

ಜೀರಿಗೆ - ಒಂದು ಚಮಚ

ಕೊತ್ತಂಬರಿ - ಎರಡು ಚಮಚ

ಮೆಣಸು - ಅರ್ಧ ಚಮಚ

ದಾಲ್ಚಿನ್ನಿ - ಸಣ್ಣ ತುಂಡು

ಲವಂಗ - ನಾಲ್ಕು

ಶುಂಠಿ - ಸಣ್ಣ ತುಂಡು

ಕ್ಯಾರೆಟ್ - ಒಂದು

ಆಲೂಗಡ್ಡೆ - ಒಂದು

ಮೆಣಸಿನಕಾಯಿ - ಎರಡು

ನೀರು - ಅರ್ಧ ಲೀಟರ್

ಉಪ್ಪು - ರುಚಿಗೆ ತಕ್ಕಷ್ಟು

ತುಪ್ಪ - ಒಂದೂವರೆ ಚಮಚ

ಏಲಕ್ಕಿ - ಮೂರು

ಲವಂಗ - ಮೂರು

ದಾಲ್ಚಿನ್ನಿ - ಮೂರು

ಬಿರಿಯಾನಿ ಎಲೆಗಳು - ಎರಡು

ಪುದೀನ

ಧನಿಯಾ ಪೌಡರ್

ಜೋಳದ ಹಿಟ್ಟು - ಎರಡು ಚಮಚ

ಚಿಕನ್ ಸೂಪ್ ಮಾಡುವ ವಿಧಾನ

1. ಚಿಕನ್‌ ಪೀಸ್‌ಗಳನ್ನು ಮೊದಲು ಸೆಲೆಕ್ಟ್‌ ಮಾಡಿಕೊಳ್ಳಿ. ಅದರ ಜೊತೆಗೆ ಮೂಳೆಯೂ ಇರಲಿ.

2. ಈರುಳ್ಳಿ, ಜೀರಿಗೆ, ಕೊತ್ತಂಬರಿ, ಮೆಣಸು, ದಾಲ್ಚಿನ್ನಿ, ಬೆಳ್ಳುಳ್ಳಿ ಎಸಳು, ಶುಂಠಿ ಸೇರಿಸಿ ನಯವಾದ ಪೇಸ್ಟ್‌ ಮಾಡಿಕೊಳ್ಳಿ.

3. ಈಗ ಚಿಕನ್ ತುಂಡುಗಳು ಮತ್ತು ಈ ಮಸಾಲಾ ಪೇಸ್ಟ್‌ಅನ್ನು ಕುಕ್ಕರ್‌ಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

4. ಕ್ಯಾರೆಟ್, ಆಲೂಗಡ್ಡೆ, ಹಸಿಮೆಣಸಿನ ತುಂಡುಗಳನ್ನು ಹಾಕಿ ಚೆನ್ನಾಗಿ ಮತ್ತೊಮ್ಮೆ ಮಿಕ್ಸ್‌ ಮಾಡಿ.

5. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಅವುಗಳನ್ನು ಕುದಿಸಲು ಅರ್ಧ ಲೀಟರ್ ನೀರು ಸೇರಿಸಿ ಕುಕ್ಕರ್ ಮುಚ್ಚಿ ಸೀಟಿ ಹಾಕಿಸಿ.

6. ನಾಲ್ಕೈದು ಸೀಟಿ ಆಗುವವರೆಗೆ ಬೇಯಿಸಿ.

7.ನಂತರ ಕುಕ್ಕರ್‌ನ ಮುಚ್ಚಳವನ್ನು ತೆಗೆದು ಪಕ್ಕಕ್ಕಿಡಿ

8. ಬಾಣಲೆಗೆ ತುಪ್ಪ ಹಾಕಿ . ಜೀರಿಗೆ, ಮೆಣಸು, ಏಲಕ್ಕಿ, ಲವಂಗ, ದಾಲ್ಚಿನ್ನಿ, ಬಿರಿಯಾನಿ ಎಲೆ ಸೇರಿಸಿ ಹುರಿಯಿರಿ.

9. ನಂತರ ಇದೆಲ್ಲವನ್ನೂ ಕುಕ್ಕರ್‌ಗೆ ಹಾಕಬೇಕು.

10. ಮೇಲೆ ಪುದೀನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿ

11. ಇದು ಬೇಯುತ್ತಿರುವಾಗಲೇ ಸ್ವಲ್ಪ ನೀರು ತೆಗೆದುಕೊಂಡು ಅದರಲ್ಲಿ ಎರಡು ಚಮಚ ಕಾರ್ನ್ ಫ್ಲೋರ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಹಾಕಿ.

12. ಹೀಗೆ ಮಾಡಿದ ನಂತರ ಮೂರು ನಿಮಿಷಗಳ ಕಾಲ ಬೇಯಿಸಲು ಬಿಡಿ.

13. ಈ ಸೂಪ್ ಸ್ವಲ್ಪ ದಪ್ಪವಾಗಿರುತ್ತದೆ. ನಂತರ ಒಲೆ ಆಫ್ ಮಾಡಿ.

14. ಇದನ್ನು ಬಿಸಿಯಾಗಿ ಕುಡಿಯಿರಿ

Whats_app_banner