ಕನ್ನಡ ಸುದ್ದಿ  /  ಜೀವನಶೈಲಿ  /  Kfc Chicken: ಸಿಂಪಲ್‌ ಆಗಿ ಮನೆಯಲ್ಲೇ ತಯಾರಿಸಬಹುದು ಕೆಎಫ್‌ಸಿ ಚಿಕನ್‌, ಏನೆಲ್ಲಾ ಬೇಕು, ಮಾಡೋದು ಹೇಗೆ? ಇಲ್ಲಿದೆ ವಿವರ

KFC Chicken: ಸಿಂಪಲ್‌ ಆಗಿ ಮನೆಯಲ್ಲೇ ತಯಾರಿಸಬಹುದು ಕೆಎಫ್‌ಸಿ ಚಿಕನ್‌, ಏನೆಲ್ಲಾ ಬೇಕು, ಮಾಡೋದು ಹೇಗೆ? ಇಲ್ಲಿದೆ ವಿವರ

ಕೆಎಫ್‌ಸಿ ಚಿಕನ್‌ ಹೆಸರು ಕೇಳಿದ್ರೆ ಮಾಂಸಾಹಾರಿಗಳ ಬಾಯಲ್ಲಿ ನೀರು ಬರುತ್ತೆ. ಮಕ್ಕಳು ಕೂಡ ಈ ಗರಿಗರಿ ಚಿಕನ್ ಅನ್ನು ಇಷ್ಟಪಡುತ್ತಾರೆ. ಎಲ್ಲರಿಗೂ ಫೇವರಿಟ್‌ ಆಗಿರುವ ಕೆಎಫ್‌ಸಿ ಚಿಕನ್‌ ಅನ್ನು ತುಂಬಾ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಇದಕ್ಕೆ ಏನೆಲ್ಲಾ ಬೇಕು, ಹೇಗೆ ತಯಾರಿಸೋದು ಎಂಬ ವಿವರ ಇಲ್ಲಿದೆ. ನೀವೂ ಮನೆಯಲ್ಲಿ ಮಾಡಿ ತಿನ್ನಿ.

ಸಿಂಪಲ್‌ ಆಗಿ ಮನೆಯಲ್ಲೇ ತಯಾರಿಸಬಹುದು ಕೆಎಫ್‌ಸಿ ಚಿಕನ್‌, ಏನೆಲ್ಲಾ ಬೇಕು, ಮಾಡೋದು ಹೇಗೆ? ಇಲ್ಲಿದೆ ವಿವರ
ಸಿಂಪಲ್‌ ಆಗಿ ಮನೆಯಲ್ಲೇ ತಯಾರಿಸಬಹುದು ಕೆಎಫ್‌ಸಿ ಚಿಕನ್‌, ಏನೆಲ್ಲಾ ಬೇಕು, ಮಾಡೋದು ಹೇಗೆ? ಇಲ್ಲಿದೆ ವಿವರ

ಕೆಎಫ್‌ಸಿ ಚಿಕನ್ ಸಖತ್‌ ಕ್ರಿಸ್ಪಿ ಹಾಗೂ ಟೇಸ್ಟಿ ಆಗಿರುತ್ತೆ. ಇದನ್ನ ತಿಂತಾ ಇದ್ರೆ ತಿಂತಾನೇ ಇರಬೇಕು ಅನ್ನಿಸುತ್ತೆ. ಹಾಗಂತ ಬೇಕಾಬಿಟ್ಟಿ ತಿನ್ನೋಕೆ ಆಗೊಲ್ಲ, ಯಾಕೆಂದ್ರೆ ಇದರ ಬೆಲೆ ದುಬಾರಿ. ಕೆಎಫ್‌ಸಿ ಚಿಕನ್‌ ಬೇಕು, ಆದರೆ ಅಷ್ಟೊಂದು ಹಣ ಕೊಡೋಕೆ ಆಗೊಲ್ಲ ಅನ್ನೋರು ಮನೆಯಲ್ಲೇ ಕೆಎಫ್‌ಸಿ ಚಿಕನ್‌ ಮಾಡಿ ತಿನ್ನಬಹುದು. ಆಗೊಮ್ಮೆ ಈಗೊಮ್ಮೆ ಮನೆಯಲ್ಲಿ ಮಾಡಿ ತಿನ್ನುವುದರಿಂದ ಆರೋಗ್ಯವೂ ಕೆಡುವುದಿಲ್ಲ, ಬಾಯಿ ಚಪಲವನ್ನೂ ನೀಗಿಸಿಕೊಳ್ಳಬಹುದು.

ಕೆಎಫ್‌ಸಿ ಚಿಕನ್ ಮಾಡುವ ವಿಧಾನ ಇಲ್ಲಿದೆ. ಈ ಕ್ರಮವನ್ನು ಅನುಸರಿಸಿದರೆ ಗರಿಗರಿಯಾದ ಮತ್ತು ಕ್ರಿಸ್ಪಿ ಕೆಎಫ್‌ಸಿ ಚಿಕನ್ ಮನೆಯಲ್ಲೇ ಸಿದ್ಧವಾಗುತ್ತದೆ.

ಕೆಎಫ್‌ಸಿ ಚಿಕನ್ ರೆಸಿಪಿಗೆ ಬೇಕಾಗುವ ಪದಾರ್ಥಗಳು

ಚಿಕನ್ ತುಂಡುಗಳು - ಅರ್ಧ ಕೆಜಿ, ಮೊಟ್ಟೆ - ಎರಡು, ಮೈದಾ - ಎರಡು ಕಪ್, ಬೆಳ್ಳುಳ್ಳಿ ಜಜ್ಜಿದ್ದು - ಎರಡು ಚಮಚಗಳು, ಎಣ್ಣೆ - ಹುರಿಯಲು ಸಾಕಷ್ಟು, ಹಾಲು - ಎರಡು ಚಮಚ, ಓಟ್ಸ್ - ಎರಡು ಚಮಚ, ಉಪ್ಪು - ರುಚಿಗೆ, ಈರುಳ್ಳಿ ಜಜ್ಜಿದ್ದು - ಎರಡು ಚಮಚ, ಮೆಣಸಿನಕಾಯಿ - ಒಂದು ಚಮಚ, ನಿಂಬೆ ರಸ - ಒಂದು ಚಮಚ, ಕಾಳುಮೆಣಸಿನ ಪುಡಿ - ಅರ್ಧ ಚಮಚ, ಬ್ರೆಡ್ ಪುಡಿ - ಎರಡು ಚಮಚ

ಟ್ರೆಂಡಿಂಗ್​ ಸುದ್ದಿ

ಕೆಎಫ್‌ಸಿ ಚಿಕನ್ ಮಾಡುವ ವಿಧಾನ

1. ಚಿಕನ್ ಅನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಅತಿ ಚಿಕ್ಕದಾಗಿ ಮಾಡಬೇಡಿ.

2. ಅವುಗಳನ್ನು ಸ್ವಚ್ಛವಾಗಿ ತೊಳೆದು ಟಿಶ್ಯೂ ಪೇಪರ್‌ನಿಂದ ನೀರು ಇರದಂತೆ ಚೆನ್ನಾಗಿ ಒರೆಸಿ.

3. ಈಗ ಒಂದು ಪಾತ್ರೆಯಲ್ಲಿ ನಿಂಬೆ ರಸ, ಮೆಣಸಿನಕಾಯಿ, ಕಾಳುಮೆಣಸಿನ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅದರಲ್ಲಿ ಚಿಕನ್ ತುಂಡುಗಳನ್ನು ಹಾಕಿ.

4. ಈ ಮಿಶ್ರಣಕ್ಕೆ ಚಿಕನ್ ತುಂಡುಗಳನ್ನು ಸೇರಿಸಿ ಮಿಶ್ರಣ ಮಾಡಿ. ಎರಡು ಗಂಟೆಗಳ ಕಾಲ ಮ್ಯಾರಿನೇಟ್ ಮಾಡಿ.

5. ಈಗ ಇನ್ನೊಂದು ಬೌಲ್‌ನಲ್ಲಿ ಮೊಟ್ಟೆಗಳನ್ನು ಒಡೆದು ಹಾಕಿ ಚೆನ್ನಾಗಿ ವಿಸ್ಕ್ ಮಾಡಿ.

6. ಅದರಲ್ಲಿ ಹಾಲು ಹಾಕಿ. ಇನ್ನೊಂದು ಪಾತ್ರೆಯಲ್ಲಿ ಮೈದಾ, ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನ ಪುಡಿ, ಕಾಳುಮೆಣಸಿನ ಪುಡಿ, ಓಟ್ಸ್ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

7. ಜೊತೆಗೆ ಬ್ರೆಡ್ ಪೌಡರ್ ಸೇರಿಸಿ.

8. ಈಗ ಪ್ಯಾನ್ ಅನ್ನು ಒಲೆಯ ಮೇಲೆ ಇರಿಸಿ ಮತ್ತು ಡೀಪ್‌ ಫ್ರೈ ಮಾಡಲು ಸಾಕಷ್ಟು ಎಣ್ಣೆಯನ್ನು ಸೇರಿಸಿ.

9. ಮೊದಲೇ ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಮೊಟ್ಟೆಯ ಮಿಶ್ರಣದಲ್ಲಿ ಒಮ್ಮೆ ಅದ್ದಿ.

10. ಅವುಗಳನ್ನು ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿ.

11. ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿ ಮತ್ತು ಟಿಶ್ಯೂ ಪೇಪರ್ ಮೇಲೆ ಹರಡಿ.

12. ಟಿಶ್ಯೂ ಪೇಪರ್ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ.

13. ಎಲ್ಲಾ ಚಿಕನ್ ತುಂಡುಗಳನ್ನು ಈ ರೀತಿ ಫ್ರೈ ಮಾಡಿ ಮತ್ತು ಬಡಿಸಿ.

14. ಅಷ್ಟೇ ಕ್ರಿಸ್ಪಿ ಕೆಎಫ್‌ಸಿ ಚಿಕನ್ ತಿನ್ನಲು ರೆಡಿ. ಮಕ್ಕಳು ಇದನ್ನು ತಿನ್ನಲು ಇಷ್ಟಪಡುತ್ತಾರೆ. ರುಚಿ ಕೂಡ ಅದ್ಭುತವಾಗಿದೆ. ಒಮ್ಮೆ ಮಾಡಿದ ನಂತರ ನೀವು ಅದನ್ನು ಬಹಳ ಸುಲಭವಾಗಿ ಮಾಡಬಹುದು.

ಕೆಎಫ್‌ಸಿ ಚಿಕನ್ ಮೇಲೆ ಹಲವು ಆರೋಪಗಳಿವೆ. ಕೆಲವೆಡೆ ಇದನ್ನು ಹಾಳಾದ ಕೋಳಿ ಮಾಂಸದಿಂದ ತಯಾರಿಸುತ್ತಾರೆ ಎಂಬ ವರದಿಯೂ ಬಂದಿದೆ. ಆದ್ದರಿಂದ ಹೊರಗಡೆ ಖರೀದಿಸಿ ತಿನ್ನುವ ಬದಲು ಮನೆಯಲ್ಲಿಯೇ ತಯಾರಿಸುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಮಕ್ಕಳು ಕೂಡ ಖುಷಿಯಿಂದ ತಿನ್ನುತ್ತಾರೆ. ಚಿಕನ್ ಕರಿ ತಿನ್ನಲು ಇಷ್ಟಪಡದ ಮಕ್ಕಳಿಗೆ ಕೆಎಫ್‌ಸಿ ಚಿಕನ್ ಮಾಡಿಕೊಟ್ಟರೆ ಇಷ್ಟಪಟ್ಟು ಕೇಳಿ ಹಾಕಿಸಿಕೊಂಡು ತಿನ್ನುತ್ತಾರೆ. ವಯಸ್ಕರು ಈ ಪಾಕವಿಧಾನವನ್ನು ಇಷ್ಟಪಡುತ್ತಾರೆ. ಕೆಎಫ್‌ಸಿ ಚಿಕನ್ ಅನ್ನು ಟೊಮೆಟೊ ಕೆಚಪ್‌ ಜೊತೆ ತಿಂದ್ರೆ ಆಹಾ ಸ್ವರ್ಗ ಸುಖ.