ಎಣ್ಣೆ ಬಳಸದೆಯೇ ಆರೋಗ್ಯಕರ ಪೂರಿ ಮಾಡುವುದು ತುಂಬಾ ಸಿಂಪಲ್: ಈ ಟಿಪ್ಸ್ ಫಾಲೋ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಎಣ್ಣೆ ಬಳಸದೆಯೇ ಆರೋಗ್ಯಕರ ಪೂರಿ ಮಾಡುವುದು ತುಂಬಾ ಸಿಂಪಲ್: ಈ ಟಿಪ್ಸ್ ಫಾಲೋ ಮಾಡಿ

ಎಣ್ಣೆ ಬಳಸದೆಯೇ ಆರೋಗ್ಯಕರ ಪೂರಿ ಮಾಡುವುದು ತುಂಬಾ ಸಿಂಪಲ್: ಈ ಟಿಪ್ಸ್ ಫಾಲೋ ಮಾಡಿ

ಪೂರಿ ಎಂದರೆ ತುಂಬಾ ಜನರಿಗೆ ಇಷ್ಟವಾದಉಪಾಹಾರ. ಯಾವುದೇ ಎಣ್ಣೆಯನ್ನು ಬಳಸದೆ ಪೂರಿಗಳನ್ನು ತಯಾರಿಸಬಹುದು. ಇತ್ತೀಚೆಗೆ ಈ ಝೀರೋ ಆಯಿಲ್ ಪೂರಿಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಎಣ್ಣೆಯನ್ನು ಬಳಸದೆಯೇ ಪೂರಿಯನ್ನು ರುಚಿಕರವಾಗಿ ತಯಾರಿಸಬಹುದು. ಎಣ್ಣೆ ಇಲ್ಲದೆ ಪೂರಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಎಣ್ಣೆ ಬಳಸದೆಯೇ ಆರೋಗ್ಯಕರ ಪೂರಿ ಮಾಡುವುದು ತುಂಬಾ ಸಿಂಪಲ್: ಈ ಟಿಪ್ಸ್ ಫಾಲೋ ಮಾಡಿ
ಎಣ್ಣೆ ಬಳಸದೆಯೇ ಆರೋಗ್ಯಕರ ಪೂರಿ ಮಾಡುವುದು ತುಂಬಾ ಸಿಂಪಲ್: ಈ ಟಿಪ್ಸ್ ಫಾಲೋ ಮಾಡಿ

ಪೂರಿ ಎಂದರೆ ತುಂಬಾ ಜನರಿಗೆ ಇಷ್ಟವಾದ ಉಪಾಹಾರ. ಬಹುತೇಕ ಎಲ್ಲಾ ಮಕ್ಕಳು ಬೆಳಗ್ಗೆ ಏನು ತಿಂಡಿ ಬೇಕು ಎಂದು ಕೇಳಿದ್ರೆ ಪೂರಿನೇ ಬೇಕು ಅಂತಾ ಹೇಳುತ್ತಾರೆ. ಹೋಟೆಲ್‍ಗಳಿಗೆ ಹೋದರೂ ಪೂರಿ ಬೇಕು ಅಂತಾ ಹಟ ಹಿಡಿಯುತ್ತಾರೆ. ಬೆಳಗಿನ ಉಪಾಹಾರಕ್ಕಾಗಿ ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಪೂರಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ, ತೂಕ ಇಳಿಸಿಕೊಳ್ಳಲು ಬಯಸುವವರು ಮತ್ತು ಹೆಚ್ಚು ಆರೋಗ್ಯ ಪ್ರಜ್ಞೆಯುಳ್ಳವರು ಹೆಚ್ಚು ಪೂರಿಗಳನ್ನು ತಿನ್ನಬಾರದು. ಏಕೆಂದರೆ ಪೂರಿಗಳನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಹೆಚ್ಚಿನ ಎಣ್ಣೆಯಂಶದಿಂದಾಗಿ ಪೂರಿಗಳಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ. ಹೀಗಾಗಿ ಕೆಲವರು ಪೂರಿಗಳಲ್ಲಿ ಎಣ್ಣೆ ಹೆಚ್ಚಿರುವ ಕಾರಣ ತಿನ್ನಲು ಮುಂದಾಗುವುದಿಲ್ಲ. ಆದರೆ, ನಿಮಗೆ ಗೊತ್ತೆ ಸ್ವಲ್ಪವೂ ಎಣ್ಣೆಯಿಲ್ಲದೆ ಪೂರಿಗಳನ್ನು ತಯಾರಿಸಬಹುದು. ಎಣ್ಣೆ ಇಲ್ಲದೆ ಪೂರಿ ಮಾಡುವುದು ಸುಲಭ. ಎಣ್ಣೆಯನ್ನು ಬಳಸದೆಯೇ ಪೂರಿಯನ್ನು ರುಚಿಕರವಾಗಿ ತಯಾರಿಸಬಹುದು. ಎಣ್ಣೆ ಇಲ್ಲದೆ ಪೂರಿ ತಯಾರಿಸಲು ಏರ್ ಫ್ರೈಯರ್ ಅತ್ಯಗತ್ಯ. ಎಣ್ಣೆಯ ಅಗತ್ಯವಿಲ್ಲದೆ ಪೂರಿಗಳನ್ನು ಮಾಡುವ ವಿಧಾನ ಇಲ್ಲಿದೆ.

ಎಣ್ಣೆಯ ಅಗತ್ಯವಿಲ್ಲದೆ ಪೂರಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು- ಒಂದು ಕಪ್, ಮೊಸರು- ಎರಡು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಹಿಟ್ಟು ಬೆರೆಸಲು ನೀರು

ತಯಾರಿಸುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದರ ನಂತರ ಮೊಸರು ಸೇರಿಸಿ, ಮಿಶ್ರಣ ಮಾಡಿ. ಅದರ ನಂತರ ಸ್ವಲ್ಪ ನೀರು ಸೇರಿಸಿ ಬೆರೆಸಿಕೊಳ್ಳಿ. ಹಿಟ್ಟನ್ನು ಚೆನ್ನಾಗಿ ಬೆರೆಸಿದ ನಂತರ, ಪ್ಲೇಟ್ ಮುಚ್ಚಿ. 15 ರಿಂದ 20 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.

20 ನಿಮಿಷದ ನಂತರ ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಅವು ಸ್ವಲ್ಪ ದಪ್ಪಗಿರುವಂತೆ ಚಪಾತಿ ಲಟ್ಟಣಿಗೆಯಿಂದ ಒತ್ತಬೇಕು. ಈ ವೇಳೆ ಸ್ಟೌವ್‍ನಲ್ಲಿ ಬಾಣಲೆಯಿಟ್ಟು ನೀರು ಹಾಕಿ ಕುದಿಯಲು ಮಾಡಿ. ಕುದಿಯುವ ನೀರಿಗೆ ಒಂದೊಂದಾಗಿ ಪೂರಿಗಳನ್ನು ಹಾಕಿ. ಪೂರಿಯನ್ನು ಸುಮಾರು ಎರಡು ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ಅದು ನೀರಿನ ಮೇಲೆ ತೇಲಿದಾಗ, ಅದನ್ನು ಹೊರತೆಗೆಯಿರಿ. ಎಲ್ಲಾ ಪೂರಿಗಳನ್ನು ಒಂದೊಂದಾಗಿ ನೀರಿನಲ್ಲಿ ಕುದಿಸಿ.

ನೀರಿನಲ್ಲಿ ಕುದಿಸಿದ ಪೂರಿಗಳ ಮೇಲಿನ ತೇವಾಂಶವನ್ನು ಶುದ್ಧ ಬಟ್ಟೆಯಿಂದ ಒರೆಸಿ ಒಣಗಿಸಿ. ನಂತರ ಏರ್ ಫ್ರೈಯರ್ನಲ್ಲಿ ಪೂರಿಗಳನ್ನು ಹಾಕಿ. ಶಾಖವನ್ನು ಸುಮಾರು 180 ಡಿಗ್ರಿಗಳಿಗೆ ಹೊಂದಿಸಿ, ಐದು ನಿಮಿಷಗಳ ಕಾಲ ಇರಿಸಿ. ಒಂದಕ್ಕಿಂತ ಹೆಚ್ಚು ಪೂರಿಗಳನ್ನು ಏರ್ ಫ್ರೈಯರ್‌ನಲ್ಲಿ ಒಮ್ಮೆಗೆ ಹಾಕಬಹುದು. ಆದರೆ, ಹೆಚ್ಚಾಗದಂತೆ ಎಚ್ಚರಿಕೆ ವಹಿಸಬೇಕು. ಪೂರಿಯನ್ನು ಏರ್ ಫ್ರೈಯರ್‌ನಲ್ಲಿ 180 ಡಿಗ್ರಿಯಲ್ಲಿ 4 ನಿಮಿಷಗಳ ಕಾಲ ಫ್ರೈ ಮಾಡಿ. ಯಾವುದೇ ಸಂದರ್ಭದಲ್ಲಿ ಅದನ್ನು ಅತಿಯಾಗಿ ಬೇಯಿಸಬಾರದು. ಏರ್ ಫ್ರೈಯರ್‌ನಲ್ಲಿ ಸುಮಾರು 4 ರಿಂದ 5 ನಿಮಿಷಗಳ ನಂತರ, ಪೂರಿಗಳು ಉಬ್ಬುತ್ತವೆ. ಹೊರತೆಗೆದು ಪೂರಿ ಪಲ್ಯ ಅಥವಾ ಗ್ರೇವಿಯೊಂದಿಗೆ ಬಡಿಸಬಹುದು.

Whats_app_banner