ಮಧುಮೇಹಿಗಳಿಗೆ ಬೆಸ್ಟ್ ಈ ನುಗ್ಗೆಸೊಪ್ಪಿನ ರೈಸ್: ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್, ಇಲ್ಲಿದೆ ಪಾಕವಿಧಾನ
ಮಧುಮೇಹಿಗಳು ಅನ್ನವನ್ನು ಕಡಿಮೆ ಸೇವಿಸಬೇಕು. ಆದರೆ, ಆಗಾಗ ಈ ರೀತಿ ಅನ್ನ ಮಾಡಿ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನವಿದೆ. ನುಗ್ಗೆಸೊಪ್ಪು ಮಧುಮೇಹಿಗಳು ತಿನ್ನಲೇಬೇಕಾದ ಆಹಾರಗಳಲ್ಲಿ ಒಂದಾಗಿದೆ. ಹೀಗಾಗಿ ನುಗ್ಗೆಸೊಪ್ಪಿನ ರೈಸ್ ಮಾಡಿ ತಿನ್ನಬಹುದು. ಈ ರೆಸಿಪಿ ಮಾಡುವುದು ತುಂಬಾ ಸರಳ, ಇಲ್ಲಿದೆ ಪಾಕವಿಧಾನ.
ನುಗ್ಗೆಸೊಪ್ಪನ್ನು ಸೂಪರ್ ಫುಡ್ ಎಂದೇ ಹೇಳಲಾಗುತ್ತದೆ. ನುಗ್ಗೆಸೊಪ್ಪು ಮಧುಮೇಹಿಗಳು ತಿನ್ನಲೇಬೇಕಾದ ಆಹಾರಗಳಲ್ಲಿ ಒಂದಾಗಿದೆ. ಆದರೆ, ಮಧುಮೇಹ ರೋಗಿಗಳಿಗೆ ಅನ್ನವನ್ನು ಕಡಿಮೆ ತಿನ್ನುವಂತೆ ವೈದ್ಯರು ಹೇಳುತ್ತಾರೆ. ಅನೇಕ ಮಧುಮೇಹ ರೋಗಿಗಳು ದಿನಕ್ಕೆ ಒಂದು ಬಾರಿ ಅನ್ನವನ್ನು ಸೇವಿಸುತ್ತಾರೆ. ಬೆಳ್ತಿಗೆ ಅಥವಾ ಬಿಳಿ ಅನ್ನಕ್ಕಿಂತ ಬ್ರೌನ್ ರೈಸ್ (ಕೆಂಪಕ್ಕಿ ಅನ್ನ) ತಿನ್ನುವುದು ಉತ್ತಮ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಆದರೆ, ನುಗ್ಗೆಸೊಪ್ಪಿನಿಂದ ಮಾಡಿದ ಬಿಳಿ ಅನ್ನ ತಿಂದರೆ ಅಂತಹ ಕೆಟ್ಟ ಪರಿಣಾಮ ಬರುವುದಿಲ್ಲ. ನುಗ್ಗೆಸೊಪ್ಪಿನ ರೈಸ್ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.
ನುಗ್ಗೆಸೊಪ್ಪಿನ ರೈಸ್ ರೆಸಿಪಿ ಮಾಡುವುದು ಹೀಗೆ
ಬೇಕಾಗುವ ಪದಾರ್ಥಗಳು: ನುಗ್ಗೆಸೊಪ್ಪು- ಒಂದು ಕಪ್, ಬೆಳ್ಳುಳ್ಳಿ ಎಸಳು- ಆರು, ಜೀರಿಗೆ- ಒಂದು ಟೀ ಚಮಚ, ಕರಿಮೆಣಸು- ನಾಲ್ಕು, ಎಳ್ಳು- ಒಂದು ಟೀ ಚಮಚ, ಕೊತ್ತಂಬರಿ- ಒಂದು ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಅಕ್ಕಿ- ಒಂದು ಕಪ್, ಕಾಳುಮೆಣಸಿನ ಪುಡಿ- ಒಂದು ಟೀ ಚಮಚ, ಸಾಸಿವೆ- ಒಂದು ಟೀ ಚಮಚ, ಕಡಲೆಬೇಳೆ- ಒಂದು ಟೀ ಚಮಚ, ಹೆಸರು ಬೇಳೆ- ಒಂದು ಟೀ ಚಮಚ, ಗೋಡಂಬಿ- 6.
ನುಗ್ಗೆಸೊಪ್ಪಿನ ರೈಸ್ ರೆಸಿಪಿ ಮಾಡುವ ವಿಧಾನ: ಸ್ಟೌವ್ ಮೇಲೆ ಪ್ಯಾನ್ ಇಟ್ಟು ನುಗ್ಗೆಸೊಪ್ಪು, ಎರಡು ಕರಿಮೆಣಸು, ಕೊತ್ತಂಬರಿ, ಎಳ್ಳು, ಜೀರಿಗೆ, ಬೆಳ್ಳುಳ್ಳಿ ಎಸಳು ಮತ್ತು ಜೀರಿಗೆಯನ್ನು ಹುರಿಯಿರಿ. ಇದನ್ನು ತಣ್ಣಗಾಗಿಸಿ, ಪುಡಿಯಾಗಿ ಮಿಶ್ರಣ ಮಾಡಿದರೆ ನುಗ್ಗೆಸೊಪ್ಪಿನ ಪುಡಿ ಸಿದ್ಧವಾಗುತ್ತದೆ. ಈಗ ಇನ್ನೊಂದು ಬಾಣಲೆಯನ್ನು ಸ್ಟೌವ್ ಮೇಲೆ ಇಟ್ಟು ಎಣ್ಣೆ ಹಾಕಿ. ಅದಕ್ಕೆ ಸಾಸಿವೆ, ಕಡಲೆಬೇಳೆ, ಹೆಸರುಬೇಳೆ, ಎರಡು ಕರಿಮೆಣಸು, ಕತ್ತರಿಸಿದ ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಗೋಡಂಬಿ ಸೇರಿಸಿ ಅದನ್ನು ಫ್ರೈ ಮಾಡಿ. ನಂತರ ಅದರಲ್ಲಿ ಮೊದಲೇ ಬೇಯಿಸಿದ ಅನ್ನವನ್ನು ಸೇರಿಸಿ ಮಿಶ್ರಣ ಮಾಡಿ. ಇದಕ್ಕೆ ಮಾಡಿಟ್ಟ ನುಗ್ಗೆಸೊಪ್ಪಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಪುಳಿಯೋಗರೆ ಮಿಶ್ರಣ ಮಾಡುವಂತೆ ಮಿಕ್ಸ್ ಮಾಡಿ. ಹೀಗೆ ಮಾಡಿದರೆ ರುಚಿಕರವಾದ ನುಗ್ಗೆಸೊಪ್ಪಿನ ಅನ್ನ ರೆಡಿ. ಇದು ಆರೋಗ್ಯಕ್ಕೂ ಉತ್ತಮ, ತಿನ್ನಲೂ ತುಂಬಾ ರುಚಿಕರವಾಗಿರುತ್ತದೆ.
ನುಗ್ಗೆಸೊಪ್ಪಿನ ಆರೋಗ್ಯ ಪ್ರಯೋಜನಗಳು
ನುಗ್ಗೆಸೊಪ್ಪನ್ನು ತಿನ್ನುವುದರಿಂದ ಮಧುಮೇಹಿಗಳಿಗೆ ಮಾತ್ರವಲ್ಲ ಎಲ್ಲರಿಗೂ ಹಲವಾರು ಪ್ರಯೋಜನಗಳಿವೆ. ನುಗ್ಗೆಸೊಪ್ಪಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಹಾಗಾಗಿ ರೋಗ ನಿರೋಧಕ ಶಕ್ತಿ ತುಂಬಾ ಹೆಚ್ಚುತ್ತದೆ. ಕೂದಲು ಉದುರುವಿಕೆ, ಕೀಲು ನೋವು ಮತ್ತು ಅಸ್ತಮಾದಿಂದ ಬಳಲುತ್ತಿರುವವರು ನುಗ್ಗೆಸೊಪ್ಪನ್ನು ತಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳಬೇಕು. ತೂಕ ಇಳಿಸಿಕೊಳ್ಳಲು ಬಯಸುವವರೂ ಇದನ್ನು ನಿಯಮಿತವಾಗಿ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ನುಗ್ಗೆಸೊಪ್ಪು ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಯಕೃತ್ತ್, ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ನುಗ್ಗೆಸೊಪ್ಪು ತುಂಬಾ ಒಳ್ಳೆಯದು.
ವಿಭಾಗ