ಆರೋಗ್ಯ, ಸೌಂದರ್ಯ, ಫಿಟ್‌ನೆಸ್ ಎಲ್ಲದಕ್ಕೂ ಬೇಕು; ನಿತ್ಯ ಬೀಟ್‌ರೂಟ್ ಸೇವಿಸೋಕೆ ಈ 6 ಕಾರಣಗಳು ಸಾಕು-health and fitness 6 benefits of eating beetroot daily healthy diet plan with beetroot beauty tips jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆರೋಗ್ಯ, ಸೌಂದರ್ಯ, ಫಿಟ್‌ನೆಸ್ ಎಲ್ಲದಕ್ಕೂ ಬೇಕು; ನಿತ್ಯ ಬೀಟ್‌ರೂಟ್ ಸೇವಿಸೋಕೆ ಈ 6 ಕಾರಣಗಳು ಸಾಕು

ಆರೋಗ್ಯ, ಸೌಂದರ್ಯ, ಫಿಟ್‌ನೆಸ್ ಎಲ್ಲದಕ್ಕೂ ಬೇಕು; ನಿತ್ಯ ಬೀಟ್‌ರೂಟ್ ಸೇವಿಸೋಕೆ ಈ 6 ಕಾರಣಗಳು ಸಾಕು

Beetroot: ಕೆಂಪು ಬಣ್ಣದೊಂದಿಗೆ ಕಣ್ಣಿಗೆ ಆಕರ್ಷಕವಾಗಿ ಕಾಣುವ ಬೀಟ್‌ರೂಟ್‌ ಆರೋಗ್ಯಕ್ಕೂ ಅಷ್ಟೇ ಉತ್ತಮ. ಮಾತ್ರವಲ್ಲದೆ ಸೌಂದರ್ಯ ಮತ್ತು ಫಿಟ್‌ನೆಸ್‌ ಕಾಪಾಡುವಲ್ಲೂ ಬೀಟ್‌ರೂಟ್‌ ನೆರವಾಗುತ್ತದೆ.

ನಿತ್ಯ ಬೀಟ್‌ರೂಟ್ ಸೇವಿಸಿದರೆ ಆರೋಗ್ಯಕ್ಕೆ ಈ 6 ಲಾಭಗಳು
ನಿತ್ಯ ಬೀಟ್‌ರೂಟ್ ಸೇವಿಸಿದರೆ ಆರೋಗ್ಯಕ್ಕೆ ಈ 6 ಲಾಭಗಳು (Pixabay)

ಹಲವು ಸೆಲೆಬ್ರಿಟಿಗಳು ನಿತ್ಯ ಬೀಟ್‌ರೂಟ್‌ ಜ್ಯೂಸ್‌ ಕುಡಿಯುವ ಬಗ್ಗೆ ನೀವೂ ಕೇಳಿರ್ತೀರಿ. ಒಂದಷ್ಟು ಆರೋಗ್ಯಕರ ಅಂಶಗಳನ್ನು ತನ್ನೊಳಗೆ ಹೊತ್ತುಕೊಂಡಿರುವ ಈ ಕೆಂಪು ಬಣ್ಣದ ಗಡ್ಡೆಯನ್ನು ವಿವಿಧ ಬಗೆಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಇದರ ಬಣ್ಣವೇ ಆಕರ್ಷಕ. ಅದರಂತೆಯೇ ಹಲವಾರು ಪೌಷ್ಟಿಕಾಂಶಗಳಿರುವ ಈ ತರಕಾರಿಯು ಉತ್ತಮ ಸುವಾಸನೆ ಹೊಂದಿದೆ. ಜೊತೆಗೆ ಹತ್ತು ಹಲವು ಆರೋಗ್ಯ ಪ್ರಯೋಜನಗಳಿಂದಾಗಿ ಹೆಚ್ಚಿನವರು ಈ ತರಕಾರಿಯನ್ನು ನಿತ್ಯ ಬಳಕೆ ಮಾಡುತ್ತಾರೆ. ರಕ್ತದೊತ್ತಡವನ್ನು ಆರೋಗ್ಯಕರವಾಗಿಡುವುದು ಮಾತ್ರವಲ್ಲದೆ, ದೇಹವನ್ನು ಫಿಟ್‌ ಆಗಿ ಇರಿಸಲು ನೆರವಾಗುತ್ತದೆ.

ಕಡಿಮೆ ಕ್ಯಾಲರಿ ಇದ್ದರೂ, ಅಗತ್ಯ ಜೀವಸತ್ವಗಳು, ಖನಿಜಗಳು ಇದರಲ್ಲಡಗಿವೆ. ಬೇಯಿಸಿದ ಬೀಟ್‌ರೂಟ್‌ನ 3.5 ಔನ್ಸ್‌ನಲ್ಲಿ ಫೋಲೇಟ್, ಮ್ಯಾಂಗನೀಸ್, ತಾಮ್ರ, ಪೊಟ್ಯಾಸಿಯಮ್ ಮಾತ್ರವಲ್ಲದೆ ವಿಟಮಿನ್ ಸಿ ಯಂತಹ ಹಲವು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ಗಮನಾರ್ಹ ಅಂಶವೆಂದರೆ, ಇದರ ಹೆಚ್ಚಿನ ಫೋಲೇಟ್ ಅಂಶವು ದೇಹದ ಬೆಳವಣಿಗೆ ಮತ್ತು ಹೃದಯದ ಆರೋಗ್ಯಕ್ಕೆ ಅವಶ್ಯಕ. ಅತ್ತ ಮ್ಯಾಂಗನೀಸ್ ಮತ್ತು ತಾಮ್ರ ಮಾನವ ದೇಹದ ವಿವಿಧ ಶಾರೀರಿಕ ಕ್ರಿಯೆಗಳಿಗೆ ಅಗತ್ಯ ಎಂದು ತಜ್ಞರು ಹೇಳುತ್ತಾರೆ.

ಬೀಟ್‌ರೂಟ್‌ನ ವಿವಿಧ ಆರೋಗ್ಯ ಪ್ರಯೋಜನಗಳ ಕುರಿತು ವಿವರವಾಗಿ ನೋಡೋಣ

  1. ತೂಕ ನಿರ್ವಹಣೆಗೆ ಸಹಕಾರಿ

ತೂಕ ನಿರ್ವಹಣೆಗೆ ಅನುಕೂಲಕರವಾದ ಅಂಶಗಳು ಇದರಲ್ಲಿವೆ. ಕಡಿಮೆ ಕ್ಯಾಲರಿಗಳು ಹಾಗೂ ಹೆಚ್ಚು ನೀರು, ಫೈಬರ್ ಮತ್ತು ಪ್ರೋಟೀನ್‌ ಇರುವ ಬೀಟ್‌ರೂಟ್ ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಆದರೂ ಆಹಾರದ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ತೂಕ ನಿರ್ವಹಣೆಗೆ ನೆರವಾಗುತ್ತದೆ.

2. ದೇಹದ ತ್ರಾಣವನ್ನು ಹೆಚ್ಚಿತ್ತದೆ

ನಿತ್ಯ ಜೀವನದಲ್ಲಿ ದೈಹಿಕ ಕಾರ್ಯಕ್ಷಮತೆ ಬೇಕೇಬೇಕು. ದೇಹದಲ್ಲಿ ಸ್ಟಾಮಿನ ಸುಧಾರಿಸಲು ಬೀಟ್ರೂಟ್‌ ಅಗತ್ಯ. ಮುಖ್ಯವಾಗಿ ಕ್ರೀಡಾಪಟುಗಳು ಮತ್ತು ಫಿಟ್ನೆಸ್ ಉತ್ಸಾಹಿಗಳು ಬೀಟ್‌ರೂಟ್‌ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದರಲ್ಲಿರುವ ಆಹಾರದ ನೈಟ್ರೇಟ್‌ಗಳು ಆಯಾಸ ಕಡಿಮೆ ಮಾಡುತ್ತದೆ. ಹೀಗಾಗಿ ದೈಹಿಕ ಸಾಮರ್ಥ್ಯ ಪ್ರದರ್ಶನಕ್ಕಿಂತ ಕೆಲವು ಗಂಟೆಗಳ ಮೊದಲು ಬೀಟ್‌ರೂಟ್‌ ಸೇವನೆಯಿಂದ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು.

3. ಕರುಳಿನ ಆರೋಗ್ಯ, ಜೀರ್ಣಕ್ರಿಯೆಗೆ ನೆರವು

ಬೀಟ್‌ರೂಟ್‌ನಲ್ಲಿರುವ ಫೈಬರ್ ಅಂಶವು ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸುವಲ್ಲಿ ನೆರವಾಗುತ್ತದೆ. ಕರುಳಿನ ನಿಯಮಿತ ಚಲನೆಗೆ ಫೈಬರ್ ಸಹಾಯ ಮಾಡುತ್ತದೆ. ಮಲಬದ್ಧತೆ ಮತ್ತು ಉರಿಯೂತದ ಕರುಳಿನ ಕಾಯಿಲೆಯಂತಹ ಜೀರ್ಣಕಾರಿ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಫೈಬರ್ ಹೇರಳವಾಗಿರುವ ಆಹಾರಗಳು ಕರುಳಿನ ಕ್ಯಾನ್ಸರ್ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.

4. ರಕ್ತದೊತ್ತಡ ನಿಯಂತ್ರಣ

ಅಧಿಕ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಬೀಟ್‌ರೂಟ್‌ ಪ್ರಮುಖ ತರಕಾರಿ ಎಂಬುದನ್ನು ಹಲವಾರು ಅಧ್ಯಯನಗಳು ಹೇಳಿವೆ. ಇದರಲ್ಲಿರುವ ಹೆಚ್ಚಿನ ನೈಟ್ರೇಟ್‌ಗಳು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಗೊಂಡು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಬೇಯಿಸಿ ತಿನ್ನುವುದಕ್ಕಿಂತ ಹೆಚ್ಚಾಗಿ ಹಸಿ ಬೀಟ್‌ರೂಟ್‌ ತಿಂದರೆ ದೀರ್ಘಕಾಲದ ಹೃದಯದ ಆರೋಗ್ಯ ಪ್ರಯೋಜನಗಳು ಸಿಗುತ್ತವೆ.

‌5. ಕ್ಯಾನ್ಸರ್‌ ದೂರಮಾಡುವ ಸಾಮರ್ಥ್ಯ

ಬೀಟೈನ್ ಮತ್ತು ಬೆಟಾಲೈನ್‌ ಸೇರಿದಂತೆ, ಬೀಟ್ರೂಟ್‌ನಲ್ಲಿರುವ ಕೆಲವು ಸಂಯುಕ್ತಗಳು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಈ ಸಂಯುಕ್ತಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಬಹುತೇಕ ಹತೋಟಿಗೆ ತರುತ್ತವೆ. ಆ ಮೂಲಕ ಕಾಯಿಲೆಯು ಮಾರಣಾಂತಿಕವಾಗುವ ಅಪಾಯವನ್ನು ನಿಧಾನ ಮಾಡುತ್ತದೆ.

6. ಮೆದುಳಿನ ಕಾರ್ಯ ಚುರುಕು

ಬೀಟ್‌ರೂಟ್‌ನಲ್ಲಿರುವ ನೈಟ್ರೇಟ್‌ಗಳು ಮೆದುಳಿಗೆ ರಕ್ತದ ಹರಿವನ್ನು ಸುಧಾರಿಸುವ ಸಾಮರ್ಥ್ಯ ಹೊಂದಿದ್ದು, ಆ ಮೂಲಕ ಅರಿವಿನ ಕಾರ್ಯ ವರ್ಧಿಸಲು ನೆರವಾಗುತ್ತದೆ.

mysore-dasara_Entry_Point