ಟೀ ಜೊತೆ ಸಿಗರೇಟ್ ಸೇದುವ ಅಭ್ಯಾಸ ನಿಮಗೂ ಇದ್ಯಾ, ಭವಿಷ್ಯದಲ್ಲಿ ಬಹುದೊಡ್ಡ ಆಪತ್ತು ಎದುರಾಗಬಹುದು ಎಚ್ಚರ-health news impact of having tea and cigarette together for health side effects of tea and cigarette together rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಟೀ ಜೊತೆ ಸಿಗರೇಟ್ ಸೇದುವ ಅಭ್ಯಾಸ ನಿಮಗೂ ಇದ್ಯಾ, ಭವಿಷ್ಯದಲ್ಲಿ ಬಹುದೊಡ್ಡ ಆಪತ್ತು ಎದುರಾಗಬಹುದು ಎಚ್ಚರ

ಟೀ ಜೊತೆ ಸಿಗರೇಟ್ ಸೇದುವ ಅಭ್ಯಾಸ ನಿಮಗೂ ಇದ್ಯಾ, ಭವಿಷ್ಯದಲ್ಲಿ ಬಹುದೊಡ್ಡ ಆಪತ್ತು ಎದುರಾಗಬಹುದು ಎಚ್ಚರ

ಧೂಮಪಾನ ಅಥವಾ ಸಿಗರೇಟ್ ಸೇದುವ ಅಭ್ಯಾಸ ಇರುವ ಬಹುತೇಕರು ಟೀ ಕುಡಿಯುತ್ತಾ ಸಿಗರೇಟ್ ಸೇದುತ್ತಾರೆ. ಆ ಕ್ಷಣಕ್ಕೆ ಇದು ಖುಷಿ, ಮೋಜು ನೀಡಬಹುದು. ಆದರೆ ಇದರಿಂದ ನಿಮ್ಮ ಭವಿಷ್ಯವನ್ನು ನೀವೇ ನರಕಕ್ಕೆ ತಳ್ಳುತ್ತೀರಿ. ಈ ಅಭ್ಯಾಸವು ನಿಮಗೆ ಗೊತ್ತಿಲ್ಲದೆ ನಿಮ್ಮ ಹೃದಯದ ಆರೋಗ್ಯವನ್ನು ಹಾಳುಮಾಡುತ್ತದೆ, ಅಲ್ಲದೇ ಇನ್ನೂ ಹಲವು ಆರೋಗ್ಯ ಸಮಸ್ಯೆಗಳು ಬರಲು ಕಾರಣವಾಗಬಹುದು.

ಟೀ ಜೊತೆ ಸಿಗರೇಟ್ ಸೇದುವ ಅಭ್ಯಾಸ ಇದ್ಯಾ, ಭವಿಷ್ಯದಲ್ಲಿ ಆಪತ್ತು ಎದುರಾಗಬಹುದು ಎಚ್ಚರ
ಟೀ ಜೊತೆ ಸಿಗರೇಟ್ ಸೇದುವ ಅಭ್ಯಾಸ ಇದ್ಯಾ, ಭವಿಷ್ಯದಲ್ಲಿ ಆಪತ್ತು ಎದುರಾಗಬಹುದು ಎಚ್ಚರ

ಕೆಲಸದ ಒತ್ತಡ ನಿವಾರಿಸಿಕೊಳ್ಳಲು ಹಲವರು ಮಧ್ಯೆ ಮಧ್ಯೆ ಟೀ ಬ್ರೇಕ್ ತೆಗೆದುಕೊಳ್ಳುತ್ತಾರೆ. ಆಗಾಗ ಟೀ ಕುಡಿಯುವುದರಿಂದ ಮೈಂಡ್ ರಿಫ್ರೆಶ್ ಆಗುತ್ತದೆ ಎನ್ನುವ ನಂಬಿಕೆ ಅವರದ್ದು, ಕೆಲವರಿಗೆ ಟೀ ಜೊತೆ ಸಿಗರೇಟ್ ಸೇದುವ ಅಭ್ಯಾಸವೂ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಟೀ, ಸಿಗರೇಟ್ ಜೊತೆಯಾಗಿ ಸೇವಿಸುವ ಅಭ್ಯಾಸ ಹಲವರಲ್ಲಿ ಚಟವಾಗಿ ಬೆಳೆದಿದೆ. ಆದರೆ ಚಹಾ ಕುಡಿಯುತ್ತಾ ಸಿಗರೇಟ್ ಸೇದುವುದು ಭವಿಷ್ಯಕ್ಕೆ ಮಾರಕ, ಇದರಿಂದ ಹೃದ್ರೋಗ ಸೇರಿದಂತೆ ಇತರ ಗಂಭೀರ ಸಮಸ್ಯೆಗಳು ಎದುರಾಗಬಹುದು ಎನ್ನುತ್ತಿದೆ ಅಧ್ಯಯನ.

ಹೃದಯಾಘಾತ

ಒಂದು ಸಿಗರೇಟಿನಲ್ಲಿ ಸುಮಾರು 6 ರಿಂದ 12 ಮಿಗ್ರಾಂ ನಿಕೋಟಿನ್ ಇರುತ್ತದೆ. ಸಿಗರೇಟ್ ಸೇದುವವರಿಗೆ ಹೃದಯಾಘಾತವಾಗುವ ಸಾಧ್ಯತೆ ಸಾಮಾನ್ಯ ಜನರಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚು. ಸಿಗರೇಟಿನಲ್ಲಿರುವ ನಿಕೋಟಿನ್ ಹೃದಯಕ್ಕೆ ರಕ್ತವನ್ನು ಪೂರೈಸುವ ಅಪಧಮನಿಗಳ ಕಿರಿದಾಗುವಿಕೆಗೆ ಕಾರಣವಾಗುತ್ತದೆ, ಹೃದಯಕ್ಕೆ ಶುದ್ಧ ರಕ್ತ ಪೂರೈಕೆಯನ್ನು ತಡೆಯುತ್ತದೆ. ಇದು ಹೃದಯಾಘಾತದ ಅಪಾಯವನ್ನು ಅಪಾರವಾಗಿ ಹೆಚ್ಚಿಸುತ್ತದೆ.

ಚಹಾದ ಅಡ್ಡಪರಿಣಾಮ

ಚಹಾದಲ್ಲಿ ಕಂಡುಬರುವ ಪಾಲಿಫಿನಾಲ್ಸ್ ಎಂಬ ನೈಸರ್ಗಿಕ ಸಂಯುಕ್ತಗಳು ಸಾಮಾನ್ಯವಾಗಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಚಹಾಕ್ಕೆ ಹಾಲು ಸೇರಿಸುವುದರಿಂದ ಅದರ ಉತ್ತಮ ಗುಣಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಹಾಲಿನಲ್ಲಿ ಕಂಡುಬರುವ ಪ್ರೊಟೀನ್ ಚಹಾದಲ್ಲಿನ ಪಾಲಿಫಿನಾಲ್ ಅಂಶಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ, ಹೆಚ್ಚು ಚಹಾವನ್ನು ಕುಡಿಯುವುದರಿಂದ ಹೃದಯ ಬಡಿತ ಹೆಚ್ಚಿಸಬಹುದು. ರಕ್ತದೊತ್ತಡವೂ ಹೆಚ್ಚುತ್ತದೆ. ಹಾಗಾಗಿ ಹಾಲಿನ ಟೀ ಕುಡಿಯದಿರುವುದು ಉತ್ತಮ.

ಕ್ಯಾನ್ಸರ್ ಅಪಾಯ

ಚಹಾದೊಂದಿಗೆ ಸಿಗರೇಟ್ ಸೇದುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಶೇ 30ರಷ್ಟು ಹೆಚ್ಚಿದೆ ಎಂದು ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ. ಚಹಾದಲ್ಲಿ ಇರುವ ವಿಷಕಾರಿ ಅಂಶಗಳು ಸಿಗರೇಟಿನ ಹೊಗೆಯೊಂದಿಗೆ ಸೇರಿಕೊಂಡರೆ, ಅವು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾಗಿ ಚಹಾದೊಂದಿಗೆ ಸಿಗರೇಟ್ ಸೇದಬೇಡಿ. ಈ ಅಭ್ಯಾಸ ಕಡಿಮೆಯಾದಷ್ಟೂ ಕಡಿಮೆ ಮಾಡಿದ್ರೆ ಒಳ್ಳೆಯದು.

ಚಹಾ–ಸಿಗರೇಟ್ ಒಟ್ಟಿಗೆ ಸೇದುವುದರಿಂದ ಎದುರಾಗುವ ಸಮಸ್ಯೆಗಳು

* ಹೃದಯ ಮತ್ತು ಮೆದುಳಿನ ಸ್ಟ್ರೋಕ್ ಅಪಾಯ

* ಕೈ ಕಾಲುಗಳಲ್ಲಿ ಗ್ಯಾಂಗ್ರೀನ್

* ನೆನಪಿನ ಶಕ್ತಿ ಕುಂಠಿತ

* ಶ್ವಾಸಕೋಶದಲ್ಲಿ ಸಂಕೋಚನ

* ಹೊಟ್ಟೆಯ ಹುಣ್ಣುಗಳು

* ಬಂಜೆತನದ ಸಮಸ್ಯೆ

ಚಹಾ, ಸಿಗರೇಟ್ ಚಟ ತೊರೆಯಲು ಪರಿಹಾರ

ಚಹಾ ಮತ್ತು ಸಿಗರೇಟ್ ಸಂಯೋಜನೆಗೆ ಅಂಟಿಕೊಳ್ಳಲು ನಿಮಗೆ ಬಲವಾದ ಇಚ್ಛಾಶಕ್ತಿ ಬೇಕು. ಈ ವ್ಯಸನದಿಂದ ಹೊರಬರಲು ನೀವು ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇದರಿಂದ ಸುಲಭವಾಗಿ ಹೊರಬರಲು ಏನು ಮಾಡಬೇಕೆಂದು ತಿಳಿಯಿರಿ.

ಪದೇ ಪದೇ ಟೀ ಕುಡಿಯುವುದರಿಂದ ಮೂತ್ರ ವಿಸರ್ಜನೆ ಪ್ರಮಾಣ ಹೆಚ್ಚುತ್ತದೆ, ಇದು ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಚಟವನ್ನು ಮಾತ್ರ ಬಿಡಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಕುಟುಂಬ ಅಥವಾ ಆಪ್ತ ಸ್ನೇಹಿತರ ಸಹಾಯವನ್ನು ಪಡೆಯಿರಿ. ಚಹಾ ಕುಡಿಯುವಾಗ ನಿಮ್ಮ ಪ್ರೀತಿಪಾತ್ರರೊಂದಿಗೆ ಫೋನ್‌ನಲ್ಲಿ ಮಾತನಾಡಿ. ಸಾಧ್ಯವಾದರೆ ಮನೋವೈದ್ಯರ ಸಹಾಯವನ್ನೂ ಪಡೆಯಿರಿ.

ಸಾಮಾನ್ಯವಾಗಿ ಜನರು ಒತ್ತಡದಲ್ಲಿದ್ದಾಗ ಮಾತ್ರ ಹೆಚ್ಚು ಚಹಾ ಕುಡಿಯಲು ಅಥವಾ ಸಿಗರೇಟ್ ಸೇದಲು ಪ್ರಾರಂಭಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಚಹಾ–ಸಿಗರೇಟ್‌ಗೂ ಮೊದಲು ನಿಮ್ಮ ಒತ್ತಡದ ಕಾರಣವನ್ನು ತಿಳಿದುಕೊಳ್ಳುವ ಮೂಲಕ ಅದನ್ನು ನಿಯಂತ್ರಿಸಲು ಪ್ರಯತ್ನಿಸಿ. ಏಕೆಂದರೆ ಟೀ, ಸಿಗರೇಟಿನ ಚಟ ಇರುವವರು ಸ್ವಲ್ಪ ಒತ್ತಡ, ಚಡಪಡಿಕೆ ಅನಿಸಿದಾಗ ಸಿಗರೇಟ್, ಟೀ ಕುಡಿಯಲು ಆರಂಭಿಸುತ್ತಾರೆ. ಹಾಗಾಗಿ ಒತ್ತಡ ಕಡಿಮೆಯಾದರೆ ಟೀ ಮತ್ತು ಸಿಗರೇಟಿನ ಕಾಂಬಿನೇಷನ್ ಆಸೆಯೂ ಕಡಿಮೆಯಾಗುತ್ತದೆ.

mysore-dasara_Entry_Point