ಮೊಸರಿನೊಂದಿಗೆ ಉಪ್ಪು ಅಥವಾ ಸಕ್ಕರೆ, ಯಾವುದನ್ನು ಬೆರೆಸಿ ತಿನ್ನೋದು ಆರೋಗ್ಯಕ್ಕೆ ಉತ್ತಮ? ಇಲ್ಲಿದೆ ತಜ್ಞರ ಉತ್ತರ-health tips curd with salt or sugar ind out which is better for you and why here is the answer probiotics benefits rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮೊಸರಿನೊಂದಿಗೆ ಉಪ್ಪು ಅಥವಾ ಸಕ್ಕರೆ, ಯಾವುದನ್ನು ಬೆರೆಸಿ ತಿನ್ನೋದು ಆರೋಗ್ಯಕ್ಕೆ ಉತ್ತಮ? ಇಲ್ಲಿದೆ ತಜ್ಞರ ಉತ್ತರ

ಮೊಸರಿನೊಂದಿಗೆ ಉಪ್ಪು ಅಥವಾ ಸಕ್ಕರೆ, ಯಾವುದನ್ನು ಬೆರೆಸಿ ತಿನ್ನೋದು ಆರೋಗ್ಯಕ್ಕೆ ಉತ್ತಮ? ಇಲ್ಲಿದೆ ತಜ್ಞರ ಉತ್ತರ

ಅನಾದಿ ಕಾಲದಿಂದಲೂ ಭಾರತದಲ್ಲಿ ಮೊಸರಿನ ಬಳಕೆ ಇತ್ತು. ಊಟಕ್ಕೆ ಉಪ್ಪಿನಕಾಯಿಯಷ್ಟೇ ಮೊಸರಿಗೂ ಪ್ರಾಮುಖ್ಯವಿದೆ. ಮೊಸರು ಸೇವಿಸುವುರರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಕೆಲವರಿಗೆ ಮೊಸರಿಗೆ ಸಕ್ಕರೆ ಬೆರೆಸಿ ತಿನ್ನುತ್ತಾರೆ, ಇನ್ನೂ ಕೆಲವರು ಉಪ್ಪು ಬೆರೆಸುತ್ತಾರೆ. ಹಾಗಾದರೆ ಈ ಎರಡರಲ್ಲಿ ಯಾವ ವಿಧಾನ ಆರೋಗ್ಯಕ್ಕೆ ಉತ್ತಮ.

ಮೊಸರಿನೊಂದಿಗೆ ಉಪ್ಪು ಅಥವಾ ಸಕ್ಕರೆ, ಯಾವುದನ್ನು ಬೆರೆಸಿ ತಿನ್ನೋದು ಆರೋಗ್ಯಕ್ಕೆ ಉತ್ತಮ?
ಮೊಸರಿನೊಂದಿಗೆ ಉಪ್ಪು ಅಥವಾ ಸಕ್ಕರೆ, ಯಾವುದನ್ನು ಬೆರೆಸಿ ತಿನ್ನೋದು ಆರೋಗ್ಯಕ್ಕೆ ಉತ್ತಮ?

ಮೊಸರು ಇಷ್ಟಪಡದೇ ಇರುವವರ ಸಂಖ್ಯೆ ಕಡಿಮೆ ಎನ್ನಬಹುದು. ಊಟಕ್ಕೆ ಏನೂ ಇಲ್ಲದೇ ಇದ್ದಾಗಲೂ ಮೊಸರು ಹಾಗೂ ಉಪ್ಪಿನಕಾಯಿ ಇದ್ದರೆ ಘಮ್ಮತ್ತಿನ ಊಟ ಮಾಡಬಹುದು. ಕೆಲವರಿಗೆ ಮೊಸರನ್ನು ಹಾಗೇ ಸೇವಿಸುವ ಅಭ್ಯಾಸವೂ ಇದೆ. ಮೊಸರು ತಿನ್ನುವಾಗ ಕೆಲವರು ಸಕ್ಕರೆ ಬೆರೆಸಿ ತಿಂದ್ರೆ ಇನ್ನೂ ಕೆಲವರು ಉಪ್ಪು ಬೆರೆಸಿ ತಿನ್ನುತ್ತಾರೆ. ಹಾಗಾದರೆ ಈ ಎರಡಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ ಎಂಬ ಚರ್ಚೆ ಶುರುವಾಗಿದೆ.

ಹಲವು ಆಹಾರಪದ್ಧತಿಗಳಲ್ಲಿ ಮೊಸರಿಗೆ ಅಗ್ರಸ್ಥಾನವಿದೆ. ಇದು ಪ್ರೊಬಯೋಟಿಕ್‌ಗಳಿಂದ ಸಮೃದ್ಧವಾಗಿದೆ. ವಿವಿಧ ಖಾದ್ಯಗಳ ತಯಾರಿಕೆಗೂ ಮೊಸರು ಬಳಸುತ್ತಾರೆ. ಇದರಿಂದ ಖಾದ್ಯಗಳ ರುಚಿ ಹೆಚ್ಚೋದು ಸುಳ್ಳಲ್ಲ. ಮೊಸರಿಗೆ ಉಪ್ಪು ಹಾಕಿ ತಿನ್ನುವವರಿಗಿಂತ ಸಕ್ಕರೆ ಹಾಕಿ ತಿನ್ನುವವರ ಸಂಖ್ಯೆಯೇ ಹೆಚ್ಚು.

ಉಪ್ಪು vs ಸಕ್ಕರೆ ಯಾವುದು ಉತ್ತಮ

ಪೌಷ್ಟಿಕತಜ್ಞೆ ಹಾಗೂ ಮಧುಮೇಹ ಶಿಕ್ಷಣತಜ್ಞೆ ಕನ್ನಿಕಾ ಮಲ್ಹೋತ್ರ ಅವರ ಪ್ರಕಾರ ಮೊಸರಿನೊಂದಿಗೆ ಸಕ್ಕರೆ ಸೇರಿಸಿ ಸೇವಿಸುವುದರಿಂದ ಕ್ಯಾಲೊರಿ ಅಂಶ ಹೆಚ್ಚಬಹುದು. ಆದರೆ ಸ್ವಲ್ಪ ಪ್ರಮಾಣದಲ್ಲಿ ಉಪ್ಪು ಸೇರಿಸಿ ಸೇವಿಸುವುದರಿಂದ ಕ್ಯಾಲೊರಿ ಹೆಚ್ಚುವುದಿಲ್ಲ ಎಂದು ಹೇಳುತ್ತಾರೆ.

ಉಪ್ಪಿಗೆ ಹೋಲಿಸಿದರೆ ಸಕ್ಕರೆಯು ಕಾರ್ಬೋಹೈಡ್ರೇಟ್ ಅಂಶವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಉಪ್ಪಿನ ಸೇವನೆಯಿಂದ ದೇಹದಲ್ಲಿ ಸೋಡಿಯಂ ಪ್ರಮಾಣ ಏರಿಕೆಯಾಗುತ್ತದೆ. ಇದು ಎಲೆಕ್ಟ್ರೋಲೈಟ್ ಹೆಚ್ಚಲು ಕಾರಣವಾಗುತ್ತದೆ. ಆದರೆ ಉಪ್ಪು ಕೂಡ ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ. ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಉಪ್ಪು ಹಾನಿಕರ.

ಎರಡೂ ಆಯ್ಕೆಗಳು ಮೊಸರಿನ ಮೂಲ ಪೋಷಕಾಂಶಗಳನ್ನು ಉಳಿಸಿಕೊಳ್ಳುತ್ತವೆ - ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಕಾರಣ ಇದು ಉತ್ತಮ. ಮಧುಮೇಹ ಅಥವಾ ತೂಕ ನಿರ್ವಹಣೆ ಗುರಿಗಳನ್ನು ಹೊಂದಿರುವವರಿಗೆ, ಉಪ್ಪಿನೊಂದಿಗೆ ಮೊಸರು ಉತ್ತಮ ಆಯ್ಕೆಯಾಗಿದೆ ಎಂದು ಅವರು ಪ್ರತಿಪಾದಿಸುತ್ತಾರೆ ಎಂದು ಕನ್ನಿಕಾ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮೊಸರಿಗೆ ಉಪ್ಪು ಮತ್ತು ಸಕ್ಕರೆ ಸೇರಿಸುವುದರ ಪರಿಣಾಮ

ಮೊಸರಿಗೆ ಉಪ್ಪನ್ನು ಸೇರಿಸುವುದರಿಂದ "ಕರುಳಿನ ಬ್ಯಾಕ್ಟೀರಿಯಾದ ಮೇಲೆ ನೇರ ಪರಿಣಾಮ ಬೀರುವುದಿಲ್ಲ" ಎಂದು ಮಲ್ಹೋತ್ರಾ ಹೇಳುತ್ತಾರೆ. ಇದು ಹೊಟ್ಟೆಯ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಕೆಲವರಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಮತ್ತೊಂದೆಡೆ ಅತಿಯಾದ ಸಕ್ಕರೆ ಸೇವನೆಯು ಕರುಳಿನ ಸೂಕ್ಷ್ಮಜೀವಿಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ, ಮೊಸರಿನಲ್ಲಿ ಪ್ರೋಬಯಾಟಿಕ್‌ಗಳ ಪ್ರಯೋಜನಗಳನ್ನು ಸಂಭಾವ್ಯವಾಗಿ ಕಡಿಮೆ ಮಾಡುತ್ತದೆ.

ಸಕ್ಕರೆಯೊಂದಿಗೆ ಮೊಸರು ಮತ್ತು ಉಪ್ಪಿನೊಂದಿಗೆ ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ಸಂಭವನೀಯ ಆರೋಗ್ಯ ಪ್ರಯೋಜನಗಳು ಮತ್ತು ಅಪಾಯಗಳು

ಉಪ್ಪಿನೊಂದಿಗೆ ಮೊಸರು:

*ಪ್ರಯೋಜನಗಳು: ಎಲೆಕ್ಟ್ರೋಲೈಟ್ ಸಮತೋಲನವನ್ನು ಬೆಂಬಲಿಸುತ್ತದೆ, ಹೊಟ್ಟೆ ತುಂಬಿದ ಭಾವ ನೀಡುತ್ತದೆ, ಪ್ರೋಬಯಾಟಿಕ್ ಪ್ರಯೋಜನಗಳನ್ನು ಉಳಿಸಿಕೊಳ್ಳುತ್ತದೆ.

*ಅಪಾಯಗಳು: ಅತಿಯಾದ ಸೋಡಿಯಂ ಸೇವನೆಯು ಕೆಲವರಲ್ಲಿ ರಕ್ತದೊತ್ತಡವನ್ನು ಹೆಚ್ಚಿಸಬಹುದು.

ಸಕ್ಕರೆಯೊಂದಿಗೆ ಮೊಸರು:

*ಪ್ರಯೋಜನಗಳು: ಇದು ತ್ವರಿತ ಶಕ್ತಿಯ ಮೂಲವನ್ನು ಒದಗಿಸುತ್ತದೆ, ಸಿಹಿ ಹಲ್ಲು ಹೊಂದಿರುವವರಿಗೆ ರುಚಿಕರವಾಗಿರಬಹುದು.

*ಅಪಾಯಗಳು: ಹೆಚ್ಚಿದ ಕ್ಯಾಲೋರಿ ಸೇವನೆ, ಮತ್ತು ಸಂಭಾವ್ಯ ರಕ್ತದಲ್ಲಿನ ಸಕ್ಕರೆಯ ಸ್ಪೈಕ್‌ಗಳು ಅತಿಯಾದ ಸಕ್ಕರೆಯೊಂದಿಗೆ ಪ್ರೋಬಯಾಟಿಕ್‌ಗಳ ಪ್ರಯೋಜನಗಳಿಗೆ ಅಡ್ಡಿಯಾಗಬಹುದು.

ಮೊಸರಿನೊಂದಿಗೆ ಉಪ್ಪು ಅಥವಾ ಸಕ್ಕರೆ ಬೆರೆಸಿ ತಿನ್ನುವುದರಿಂದ ಎರಡರಿಂದಲೂ ಅಪಾಯವೂ ಇದೆ, ‍ಪ್ರಯೋಜನವೂ ಇದೆ. ಆದರೆ ಉಪ್ಪು ಸೇರಿಸಿ ತಿನ್ನುವುದೇ ಹೆಚ್ಚು ಪ್ರಯೋಜನಕಾರಿ ಎಂದು ತಜ್ಞರು ಅಭಿಪ್ರಾಯ ಮಾಡುತ್ತಾರೆ.