ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಹೀನಾ ಖಾನ್‌ ನುಗ್ಗೆಸೊಪ್ಪಿನ ಪುಡಿ ತಿನ್ನೋದ್ಯಾಕೆ? ಇದರ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ-health tips hina khan fighting with breast cancer takes moringa powder you must know its tremendous benefits ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಹೀನಾ ಖಾನ್‌ ನುಗ್ಗೆಸೊಪ್ಪಿನ ಪುಡಿ ತಿನ್ನೋದ್ಯಾಕೆ? ಇದರ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಹೀನಾ ಖಾನ್‌ ನುಗ್ಗೆಸೊಪ್ಪಿನ ಪುಡಿ ತಿನ್ನೋದ್ಯಾಕೆ? ಇದರ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಹಿಂದಿ ಸಿನಿಮಾ, ಕಿರುತೆರೆ ನಟಿ ಹೀನಾ ಖಾನ್‌ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇತ್ತೀಚೆಗೆ ಚೇತರಿಸಿಕೊಳ್ಳುತ್ತಿದ್ದಾರೆ. ಇವರು ಪ್ರತಿದಿನ ಒಂದು ಚಮಚ ನುಗ್ಗೆಸೊಪ್ಪಿನ ಪುಡಿ ತಿನ್ನುತ್ತಾರಂತೆ. ಇದಕ್ಕೆ ಕಾರಣವೇನು, ನುಗ್ಗೆಸೊಪ್ಪಿನ ಪುಡಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬ ಮಾಹಿತಿ ಇಲ್ಲಿದೆ.

ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಹೀನಾ ಖಾನ್‌ ನುಗ್ಗೆಸೊಪ್ಪಿನ ಪುಡಿ ತಿನ್ನೋದ್ಯಾಕೆ? ಇದರ ಅದ್ಭುತ ಪ್ರಯೋಜನಗಳ ಬಗ್ಗೆ ನೀವೂ ತಿಳಿಯಿರಿ
ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಹೀನಾ ಖಾನ್‌ ನುಗ್ಗೆಸೊಪ್ಪಿನ ಪುಡಿ ತಿನ್ನೋದ್ಯಾಕೆ? ಇದರ ಅದ್ಭುತ ಪ್ರಯೋಜನಗಳ ಬಗ್ಗೆ ನೀವೂ ತಿಳಿಯಿರಿ

ಹಿಂದಿ ನಟಿ ಹೀನಾ ಖಾನ್‌ ಇತ್ತೀಚೆಗಷ್ಟೇ ತಮಗೆ ಸ್ತನ ಕ್ಯಾನ್ಸರ್‌ ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದರು, ಮಾತ್ರವಲ್ಲ ಅವರು ಕ್ಯಾನ್ಸರ್‌ ವಿರುದ್ಧ ಧೈರ್ಯದಿಂದ ಹೋರಾಡುತ್ತಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಲ್ತ್‌ ಅಪ್‌ಡೇಟ್‌ ನೀಡುತ್ತಿರುವ ಈ ನಟಿ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ನುಗ್ಗೆಸೊಪ್ಪಿನ ಪುಡಿಯ ಪ್ಯಾಕೆಟ್‌ ಹಂಚಿಕೊಂಡಿದ್ದರು. ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ನಟಿ ನುಗ್ಗೆಸೊಪ್ಪಿನ ಪುಡಿಯನ್ನು ಪ್ರತಿನಿತ್ಯ ಸೇವಿಸುತ್ತಾರೆ ಎನ್ನಲಾಗುತ್ತಿದೆ. ಹಾಗಾದರೆ ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ, ಇದನ್ನು ತಿನ್ನುವ ಉದ್ದೇಶವೇನು ತಿಳಿಯಿರಿ.

ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಹೀನಾ ಖಾನ್‌ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕ್ಯಾನ್ಸರ್‌ ಅನ್ನು ಧೈರ್ಯವಾಗಿ ಎದುರಿಸುತ್ತಿರುವ ಇವರು ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಆ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇತ್ತೀಚಿನ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅವರು ಮೊರಿಂಗಾ ಪುಡಿ ಅಥವಾ ನುಗ್ಗೆಸೊಪ್ಪಿನ ಪುಡಿಯ ಚಿತ್ರವನ್ನು ಹಂಚಿಕೊಂಡಿದ್ದರು. ಹಾಗಾಗಿ ಜನರು ನುಗ್ಗೆಸೊಪ್ಪಿನ ಪುಡಿಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ.

ಮೊರಿಂಗಾ ಪುಡಿಯ ಅದ್ಭುತ ಪ್ರಯೋಜನಗಳು

ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧ: ನುಗ್ಗೆಸೊಪ್ಪು ಜೀವಸತ್ವಗಳು, ಖನಿಜಗಳು, ಫ್ಲೇವನಾಯ್ಡ್‌ಗಳು ಮತ್ತು ಆಲ್ಕಲಾಯ್ಡ್‌ಗಳು ಸೇರಿದಂತೆ ಜೈವಿಕ ಸಕ್ರಿಯ ಸಂಯುಕ್ತಗಳಲ್ಲಿ ಸಮೃದ್ಧವಾಗಿವೆ. ಈ ಅಗತ್ಯ ಪೋಷಕಾಂಶಗಳು ನಿಮ್ಮ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ: ನುಗ್ಗೆಸೊಪ್ಪು ಪ್ರಯೋಜನಕಾರಿ ಫೈಟೊನ್ಯೂಟ್ರಿಯೆಂಟ್‌ಗಳಲ್ಲಿ ಸಮೃದ್ಧವಾಗಿದೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಇದು ಸೋಂಕನ್ನು ತೊಡೆದು ಹಾಕಲು ಸಹಾಯ ಮಾಡುತ್ತವೆ.

ಜೀರ್ಣಕ್ರಿಯೆ ಹೆಚ್ಚಲು ಪ್ರಯೋಜನಕಾರಿ: ನುಗ್ಗೆಸೊಪ್ಪಿನ ಪುಡಿಯು ನಾರಿನಾಂಶ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಿಂದಾಗಿ ಮಧುಮೇಹ ಮತ್ತು ಹೊಟ್ಟೆಯ ಕ್ಯಾನ್ಸರ್‌ನಂತಹ ರೋಗಗಳ ಅಪಾಯ ಕಡಿಮೆಯಾಗುತ್ತದೆ. ಹೆಚ್ಚುವರಿಯಾಗಿ, ಅದರ ಉರಿಯೂತದ ಗುಣಲಕ್ಷಣಗಳು ಕೊಲೈಟಿಸ್‌ನಂತಹ ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರವನ್ನು ಒದಗಿಸಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ: ಈ ಪುಡಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅನೇಕ ವರದಿಗಳು ಸೂಚಿಸುತ್ತವೆ. 50 ಗ್ರಾಂ ಮೊರಿಂಗಾ ಎಲೆಗಳನ್ನು ಆಹಾರದಲ್ಲಿ ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟದ ಹೆಚ್ಚಳವನ್ನು ಶೇ 21 ರಷ್ಟು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಮಧುಮೇಹಕ್ಕೆ ಚಿಕಿತ್ಸೆ: ನುಗ್ಗೆಸೊಪ್ಪಿನ ಸಾರವು ಮಧುಮೇಹ ಇರುವವರಿಗೆ ಪ್ರಯೋಜನಕಾರಿಯಾಗಿದೆ. ಇದು ಇನ್ಸುಲಿನ್ ನಿಯಂತ್ರಣವನ್ನು ಸರಿಪಡಿಸುತ್ತದೆ ಮತ್ತು ಅಂಗಾಂಗ ಹಾನಿಯನ್ನು ತಡೆಯುತ್ತದೆ.