ಮಹಿಳೆಯರನ್ನು ನಿರಂತರವಾಗಿ ಬಾಧಿಸುವ ತಲೆನೋವು ತಡೆಯಲು 8 ಟಿಪ್ಸ್; ವೈದ್ಯರ ಸಲಹೆ ತಪ್ಪದೆ ಪಾಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಹಿಳೆಯರನ್ನು ನಿರಂತರವಾಗಿ ಬಾಧಿಸುವ ತಲೆನೋವು ತಡೆಯಲು 8 ಟಿಪ್ಸ್; ವೈದ್ಯರ ಸಲಹೆ ತಪ್ಪದೆ ಪಾಲಿಸಿ

ಮಹಿಳೆಯರನ್ನು ನಿರಂತರವಾಗಿ ಬಾಧಿಸುವ ತಲೆನೋವು ತಡೆಯಲು 8 ಟಿಪ್ಸ್; ವೈದ್ಯರ ಸಲಹೆ ತಪ್ಪದೆ ಪಾಲಿಸಿ

ತಲೆನೋವಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ, ಅದು ಮೈಗ್ರೇನ್ ರೂಪ ಪಡೆಯುತ್ತಿದ್ದರೆ, ವೈದ್ಯರ ಸಲಹೆಯಂತೆ ಈ ಕೆಲಸಗಳನ್ನು ಮಾಡಿ. ಮಹಿಳೆಯರಲ್ಲಿ ತಲೆನೋವಿನ ಸಮಸ್ಯೆ ಹೆಚ್ಚುತ್ತಿದ್ದು, ಅಗತ್ಯ ಪರಿಹಾರ ಕಂಡುಕೊಳ್ಳಬೇಕು.

ಮಹಿಳೆಯರನ್ನು ನಿರಂತರವಾಗಿ ಬಾಧಿಸುವ ತಲೆನೋವು ತಡೆಯಲು 8 ಟಿಪ್ಸ್
ಮಹಿಳೆಯರನ್ನು ನಿರಂತರವಾಗಿ ಬಾಧಿಸುವ ತಲೆನೋವು ತಡೆಯಲು 8 ಟಿಪ್ಸ್

ತಲೆನೋವಿನ ಸಮಸ್ಯೆ ಅನೇಕ ಮಹಿಳೆಯರನ್ನು ಕಾಡುತ್ತದೆ. ಹಾಗಂತಾ ತಲೆ ನೋವು ಆದಾಗೆಲ್ಲಾ ಪ್ರತಿ ಬಾರಿಯೂ ಅದನ್ನು ಮೈಗ್ರೇನ್ ಎಂದು ತಪ್ಪಾಗಿ ಭಾವಿಸಬಾರದು. ಸತತ ಕೆಲವು ದಿನಗಳವರೆಗೆ ತಲೆನೋವಿನ ಸಮಸ್ಯೆ ಕಂಡುಬಂದರೆ, ವೈದ್ಯರನ್ನು ಭೇಟಿಯಾಗಿ ಔಷಧಿ ತೆಗೆದುಕೊಳ್ಳುವುದು ಒಳ್ಳೆಯದು. ಏಮ್ಸ್‌ನ ನ್ಯೂರಾಲಜಿಯ ಡಾ.ಪ್ರಿಯಾಂಕಾ ಶರಾವತ್ ಅವರು ತಲೆನೋವು ಪರಿಹಾರಕ್ಕೆ ಕೆಲವು ಸಲಹೆಗಳನ್ನು ಸೂಚಿಸಿದ್ದಾರೆ. ಕೆಲವು ದಿನಗಳಿಂದ ತಲೆನೋವಿನ ಸಮಸ್ಯೆ ಹೆಚ್ಚಾಗುತ್ತಿದ್ದರೆ ಕೆಲವೊಂದು ವಿಷಯದಲ್ಲಿ ಎಚ್ಚರದಿಂದಿರಬೇಕು. ಹಾರ್ಮೋನುಗಳು, ರಕ್ತಸ್ರಾವ ಅಥವಾ ಗರ್ಭಾಶಯಕ್ಕೆ ಸಂಬಂಧಿಸಿದ ಋತುಚಕ್ರಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಈ 2 ಕೆಲಸಗಳನ್ನು ಮಾಡಬೇಕು ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ಔಷಧಿಗಳನ್ನು ಸೇವಿಸಿದ ನಂತರ ತಲೆನೋವಿನ ಸಮಸ್ಯೆ ಹೆಚ್ಚಾದರೆ, ನಿಮ್ಮ ಔಷಧಿಗಳ ಪ್ರಮಾಣವನ್ನು ಕಡಿಮೆ ಮಾಡಲು ವೈದ್ಯರಲ್ಲಿ ಹೇಳಿ. ಏಕೆಂದರೆ ಹಾರ್ಮೋನ್ ಸಮತೋಲನ ಔಷಧಿಗಳಲ್ಲಿ ಮೈಗ್ರೇನ್ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಅಂಥಾ ಔಷಧಿಗಳಿಂದ ಉಂಟಾಗುವ ತಲೆನೋವಿನ ಬಗ್ಗೆ ವೈದ್ಯರೊಂದಿಗೆ ಮಾತನಾಡಿ. ಡೋಸ್ ಕಡಿಮೆ ಮಾಡುವ ಮೂಲಕ ಅಥವಾ ಔಷಧಿಗಳನ್ನು ಬದಲಾಯಿಸುವ ಮೂಲಕ ತಲೆನೋವಿನ ಸಮಸ್ಯೆ ಕಡಿಮೆ ಮಾಡಬಹುದು.

ಹಾರ್ಮೋನುಗಳ ಔಷಧಿಗಳಿಂದಾಗಿ, ಮೆದುಳಿನಲ್ಲಿ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಇದು ತಲೆನೋವಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಕಣ್ಣುಗಳಲ್ಲಿ ಮಸುಕಾಗುವುದು ಮತ್ತು ತಲೆನೋವು ಕಾಣಿಸುತ್ತದೆ. ಈ ಸಂದರ್ಭದಲ್ಲಿ, ಕಣ್ಣಿನ ವೈದ್ಯರ ಬಳಿಗೆ ಹೋಗಿ ರೆಟಿನಾ ತಪಾಸಣೆ ಮಾಡಿಸಿಕೊಳ್ಳಿ. ಹಾರ್ಮೋನ್ ಔಷಧಿಗಳು ರೆಟಿನಾದ ನರಗಳ ಮೇಲೆ ಒತ್ತಡ ಹೇರುತ್ತವೆ. ಇದು ನಿಮ್ಮ ವಿಷಯದಲ್ಲೂ ಆಗಿದ್ದಲ್ಲಿ ತಪಾಸಣೆಯ ಸಮಯದಲ್ಲಿ ಗೋಚರಿಸುತ್ತದೆ. ಹೀಗಾಗಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು.

ತಲೆನೋವಿನ ಸಮಸ್ಯೆ ಹೆಚ್ಚಾದರೆ, ವೈದ್ಯರು ಸೂಚಿಸಿದ ಈ ಕೆಲಸಗಳನ್ನು ಮಾಡಿ

  • ಪ್ರತಿದಿನ ಕನಿಷ್ಠ 7ರಿಂದ 8 ಗಂಟೆ ನಿದ್ರೆ ಮಾಡಿ.
  • ದಿನವಿಡೀ ಕನಿಷ್ಠ 6-8 ಲೋಟ ನೀರು ಕುಡಿಯಿರಿ. ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಿ.
  • ಪ್ರತಿದಿನ ಬೆಳಗ್ಗೆ ಉಪಾಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ.
  • ತಲೆನೋವಿನ ಸಮಸ್ಯೆ ನಿಮ್ಮನ್ನು ಆಗಾಗ ಕಾಡುತ್ತಿದ್ದರೆ, ದೀರ್ಘಕಾಲದವರೆಗೆ ಹಸಿವಿನಿಂದ ಬಳಲಬೇಡಿ. ಹೊಟ್ಟೆ ಖಾಲಿ ಬಿಡಬೇಡಿ. ಉಪವಾಸ ಕೂರುವುದನ್ನು ತಪ್ಪಿಸಿ.
  • ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯಲು ಮರೆಯಬೇಡಿ. ಸಂಜೆ 6 ಗಂಟೆಯ ನಂತರ ಯಾವುದೇ ರೀತಿಯ ಚಹಾ ಅಥವಾ ಕಾಫಿ ಕುಡಿಯಬೇಡಿ.

ಇದನ್ನೂ ಓದಿ | ಈ ಗಿಡಗಳನ್ನ ತಪ್ಪಿಯೂ ಮನೆಯೊಳಗೆ ಬೆಳೆಸಬೇಡಿ; ಇದರಿಂದ ನಕಾರಾತ್ಮಕ ಅಂಶ ಹರಡುವುದು ಮಾತ್ರವಲ್ಲ, ಮನೆಯವರ ನೆಮ್ಮದಿ ಕೆಡುತ್ತೆ

  • ತಲೆನೋವು ಮತ್ತು ಮೈಗ್ರೇನ್ ಸಮಸ್ಯೆಗಳು ಪುನರಾವರ್ತನೆಯಾದರೆ ನೇರವಾಗಿ ಸೂರ್ಯನ ಬೆಳಕಿಗೆ ಹೊರ ಹೋಗಬೇಡಿ. ಸೂರ್ಯನ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸಲು, ಸನ್‌ಗ್ಲಾಸ್ ಅಥವಾ ಛತ್ರಿ ಹಿಡಿದುಕೊಳ್ಳಿ.
  • ಮಲಗುವುದಕ್ಕಿಂತ ಕನಿಷ್ಠ ಎರಡು ಗಂಟೆಗಳ ಮೊದಲು ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಎಲ್ಲಾ ಡಿಜಿಟಲ್ ಸಾಧನಗಳನ್ನು ಬಳಸುವುದು ನಿಲ್ಲಸಿ.
  • ಜೋರಾಗಿ ಮಾತನಾಡಬೇಡಿ. ಇದೇ ವೇಳೆ ಹೆಚ್ಚು ಸದ್ದು ಗದ್ದಲ ಇರುವ ಸ್ಥಳಕ್ಕೆ ಹೋಗಬೇಡಿ.

ಇದನ್ನೂ ಓದಿ | ಸುಳಿವು ನೀಡದೆ ಮಕ್ಕಳಲ್ಲಿ ಆವರಿಸುತ್ತಿದೆ ಕ್ಯಾನ್ಸರ್‌; ಈ ರೋಗಲಕ್ಷಣಗಳನ್ನು ಕಡೆಗಣಿಸದಿರಿ, ಆರಂಭಿಕ ಪತ್ತೆಗೆ ನೀಡಿ ಆದ್ಯತೆ

Whats_app_banner