ಮಳೆಗಾಲದಲ್ಲಿ ದೇವರ ನಾಡು ಕೇರಳ ಸೌಂದರ್ಯ ಸವಿಯಬೇಕೇ; ಹೀಗಿದೆ ಬೆಂಗಳೂರು-ಮುನ್ನಾರ್-ಕೊಚ್ಚಿ-ಅತಿರಪಲ್ಲಿ ರೈಲು ಟೂರ್ ಪ್ಯಾಕೇಜ್
ಐಆರ್‌ಸಿಟಿಸಿ ಪ್ರತಿ ಗುರುವಾರ ಆಯೋಜಿಸುವ ಬೆಂಗಳೂರಿನಿಂದ ಮುನ್ನಾರ್, ಕೊಚ್ಚಿ, ಅತಿರಪಲ್ಲಿ ರೈಲು ಟೂರ್ ಪ್ಯಾಕೇಜ್ ದರ ಎಷ್ಟಿರಲಿದೆ, ಯಾವೆಲ್ಲಾ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದು, ಎಲ್ಲಿ ಉಳಿದುಕೊಳ್ಳಲಾಗುತ್ತಿದೆ ಎಂಬುದರ ಮಾಹಿತಿಯನ್ನು ತಿಳಿಯೋಣ.
ಕೇರಳವನ್ನು ದೇವರ ಸ್ವಂತ ನಾಡು ಅಂತ ಕರೆಯಲಾಗುತ್ತದೆ. ಪ್ರಾಚೀನ ಕಾಲದ ಹಿನ್ನೀರಿನ ತಾಣಗಳು, ಕಡಲ ತೀರಗಳು, ಕಣ್ಣು ಹಾಯಿಸಿದಷ್ಟು ದೂರ ಹಸಿರಿನಿಂದ ಕೂಡಿದ ಪರ್ವತ, ಗುಡ್ಡಗಳು, ಪ್ರಶಾಂತವಾದ ಹಳ್ಳಿಗಳು, ಸಾಂಪ್ರದಾಯಿಕ ಊಟ, ತಿನಿಸುಗಳು, ಕಲಾ ಸಂಸ್ಕೃತಿ, ಭಾಷೆ ಹಾಗೂ ಇಲ್ಲಿನ ವೈವಿಧ್ಯತೆಗೆ ಮನಸೋಲದವರೇ ಇಲ್ಲ. ಮಂಜಿನಿಂದ ಕೂಡಿದ ಗಿರಿಧಾಮಗಳು, ವಿವಿಧ ಸಸ್ಯ ಸಂಕುಲ, ಪ್ರಾಣಿಗಳಿಂದ ಸಮೃದ್ಧವಾಗಿರುವ ಅರಣ್ಯ ಪ್ರದೇಶಗಳು, ಐತಿಹಾಸಿಕ ಸ್ಮಾರಕಗಳು, ದೇವಾಲಯಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುವಂತ ತಾಣಗಳಿಗೆ ಕೇರಳ ಹೆಸರುವಾಸಿ. ಒಂದು ವೇಳೆ ನೀವೇನಾದರೂ ಈ ಬಾರಿಯ ಮಳೆಗಾಲದಲ್ಲಿ ಕೇರಳ ಪ್ರವಾಸ ಕೈಗೊಳ್ಳಬೇಕು, ಅದರಲ್ಲೂ ಮುನ್ನಾರ್ ಕೊಚ್ಚಿ ಅತಿರಪಲ್ಲಿಯಲ್ಲಿನ ಪ್ರಮುಖ ತಾಣಗಳನ್ನು ಕಣ್ತುಂಬಿಕೊಳ್ಳಬೇಕೆಂದು ಬಯಸಿದರೆ ನಿಮಗಾಗಿ ಐಆರ್‌ಸಿಟಿಸಿ ಟೂರ್ ಪ್ಯಾಕೇಜ್ ಮಾಹಿತಿ ಇಲ್ಲಿದೆ.
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರ್ ಕಾರ್ಪೊರೇಷನ್ - ಐಆರ್‌ಸಿಟಿಸಿ ಪ್ರತಿ ಗುರುವಾರ ಬೆಂಗಳೂರಿನಿಂದ ಮುನ್ನಾರ್, ಕೊಚ್ಚಿ, ಅತಿರಪಲ್ಲಿ ರೈಲು ಟೂರ್ ಪ್ಯಾಕೇಜ್ (Bangalore Munnar Kochi Athirapally IRCTC Tour Package) ಕೈಗೊಂಡಿದೆ. ಈ ಪ್ಯಾಕೇಜ್‌ನಲ್ಲಿ ಏನೆಲ್ಲಾ ಇರುತ್ತೆ, ನೋಡುವಂತ ತಾಣಗಳು, ಎಲ್ಲಿಂದ ಹೊರಡುವುದು, ಎಷ್ಟು ದಿನಗಳ ಪ್ರವಾಸ, ಎಲ್ಲಿ ಉಳಿದುಕೊಳ್ಳುವುದು, ರೈಲು ನಿಲ್ದಾಣದಿಂದ ಪ್ರವಾಸಿ ತಾಣಗಳಿಗೆ ತಲುಪಲು ಕ್ಯಾಬ್ ವ್ಯವಸ್ಥೆ ಹೀಗೆ ಪ್ರಮುಖ ಮಾಹಿತಿ ಇಲ್ಲಿ ನೀಡಲಾಗಿದೆ.
ಬೆಂಗಳೂರು-ಮುನ್ನಾರ್-ಕೊಚ್ಚಿ-ಅತಿರಪಲ್ಲಿ ರೈಲು ಟೂರ್ ಪ್ಯಾಕೇಜ್‌ನಲ್ಲಿ ಪ್ರತಿ ವ್ಯಕ್ತಿಗೆ ಟಿಕೆಟ್ ದರದ ವಿವರ
ಕಂಫರ್ಟ್ (3ಎಸಿ): ಒಬ್ಬರಿಗೆ 31,40 ರೂಪಾಯಿ, ಇಬ್ಬರಿಗೆ ತಲಾ 17,750 ರೂಪಾಯಿ, ಮೂವರಿಗೆ ತಲಾ 14,720 ರೂಪಾಯಿ, ಹಾಸಿಗೆ ಇರುವ ಮಗು (5-11 ವರ್ಷ) 12,820 ರೂಪಾಯಿ, ಹಾಸಿಗೆ ಇಲ್ಲದ ಮಗು (5-11 ವರ್ಷ) 10,040 ರೂಪಾಯಿ.
ಪ್ರಮಾಣಿತ (ಎಸ್‌ಎಲ್): ಒಬ್ಬರಿಗೆ 29,290 ರೂಪಾಯಿ, ಇಬ್ಬರಿಗೆ ತಲಾ 15,540 ರೂಪಾಯಿ, ಮೂವರಿಗೆ ತಲಾ 12,520 ರೂಪಾಯಿ, ಹಾಸಿಗೆ ಇರುವ ಮಗು (5-11 ವರ್ಷ) 10,620 ರೂಪಾಯಿ, ಹಾಸಿಗೆ ಇಲ್ಲದ ಮಗು (5-11 ವರ್ಷ) 7,830 ರೂಪಾಯಿ.
5 ರಾತ್ರಿಗಳು, 6 ದಿನಗಳ ಎರ್ನಾಕುಲಂ-ಮುನ್ನಾರ್-ಕೊಚ್ಚಿ-ಅತಿರಪಲ್ಲಿ-ತ್ರಿಶೂರ್ ಪ್ಯಾಕೇಜ್‌ನ ಮೊದಲ ದಿನ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ 16526 ಸಂಖ್ಯೆಯ ರೈಲು ಪ್ರತಿ ಗುರುವಾರ ರಾತ್ರಿ 8.10ಕ್ಕೆ ಹೊರಡಲಿದು, ರಾತ್ರಿಯ ಪ್ರಯಾಣದ ನಂತರ ಮರುದಿನ ಬೆಳಗ್ಗೆ 7.20ಕ್ಕೆ ಎರ್ನಾಕುಲಂ ಚೌನ್ ರೈಲು ನಿಲ್ದಾಣ ತಲುಪಲಿದೆ. ಅಲ್ಲಿಂದ ಪಿಕ್ ಅಪ್, ಹೆೋಟೆಲ್ ಚೆಕ್ ಇನ್, ನೋಡುವಂತ ಪ್ರವಾಸಿ ತಾಣಗಳು ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಐಆರ್‌ಸಿಟಿಸಿ ಅಧಿಕೃತ ಜಾಲತಾಣ irctctourism.com ಗೆ ಭೇಟಿ. ನೀಡಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)