ವೀಸಾ ಇಲ್ಲದೆ ವಿದೇಶ ಪ್ರವಾಸ ಮಾಡಬಯಸುವಿರಾ? ಈ 27 ದೇಶಗಳು ಭಾರತೀಯರಲ್ಲಿ ವೀಸಾ ಕೇಳೋದೇ ಇಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ವೀಸಾ ಇಲ್ಲದೆ ವಿದೇಶ ಪ್ರವಾಸ ಮಾಡಬಯಸುವಿರಾ? ಈ 27 ದೇಶಗಳು ಭಾರತೀಯರಲ್ಲಿ ವೀಸಾ ಕೇಳೋದೇ ಇಲ್ಲ

ವೀಸಾ ಇಲ್ಲದೆ ವಿದೇಶ ಪ್ರವಾಸ ಮಾಡಬಯಸುವಿರಾ? ಈ 27 ದೇಶಗಳು ಭಾರತೀಯರಲ್ಲಿ ವೀಸಾ ಕೇಳೋದೇ ಇಲ್ಲ

ಹಿಂದೆಲ್ಲಾ ಫಾರಿನ್‌ ಟ್ರಿಪ್‌ ಅಂದ್ರೆ ದುಡ್ಡಿಗಿಂತ ಹೆಚ್ಚು ಚಿಂತೆಯಾಗ್ತಾ ಇದ್ದಿದ್ದು ವೀಸಾದ್ದು. ಪಾಸ್‌ಪೋರ್ಟ್‌ ಮಾಡಿಸುವುದು ಸುಲಭ ಇರ್ಲಿಲ್ಲಾ. ಈಗ ಭಾರತೀಯರು ಹಲವು ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣ ಮಾಡಬಹುದು, ಮಾತ್ರವಲ್ಲ ಒಂದಿಷ್ಟು ದಿನಗಳ ಕಾಲ ಅಲ್ಲಿಯೇ ಉಳಿಯಬಹುದು. ಹಾಗಾದರೆ ಯಾವೆಲ್ಲಾ ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣ ಮಾಡಬಹುದು ವಿವರ ಇಲ್ಲಿದೆ.

ವೀಸಾ ಇಲ್ಲದೆ ವಿದೇಶ ಪ್ರವಾಸ ಮಾಡಬಯಸುವಿರಾ? ಈ 27 ದೇಶಗಳು ಭಾರತೀಯರಲ್ಲಿ ವೀಸಾ ಕೇಳೋದೇ ಇಲ್ಲ
ವೀಸಾ ಇಲ್ಲದೆ ವಿದೇಶ ಪ್ರವಾಸ ಮಾಡಬಯಸುವಿರಾ? ಈ 27 ದೇಶಗಳು ಭಾರತೀಯರಲ್ಲಿ ವೀಸಾ ಕೇಳೋದೇ ಇಲ್ಲ

ಫಾರಿನ್‌ ಟ್ರಿಪ್‌ ಹೋಗ್ಬೇಕು ಅಂತ ಹಲವರು ಕನಸು ಕಾಣುತ್ತಾರೆ. ವಿದೇಶಗಳಲ್ಲಿನ ಸ್ಥಳಗಳನ್ನು ಫೋಟೊಗಳಲ್ಲಿ ವಿಡಿಯೊಗಳಲ್ಲಿ ನೋಡಿದಾಗ ಆ ಸ್ಥಳಕ್ಕೆ ನೇರವಾಗಿ ಭೇಟಿ ನೀಡಿ ಫೋಟೊ ತೆಗೆಸಿಕೊಳ್ಳಬೇಕು ಎಂದು ಅನ್ನಿಸುವುದು ಸಹಜ. ಹಿಂದೆಲ್ಲಾ ಫಾರಿನ್‌ಗೆ ಹೋಗುವುದು ಎಂದರೆ ದೊಡ್ಡ ಸಾಹಸ. ಪಾಸ್‌ಪೋರ್ಟ್‌ ಮಾಡಿಸುವುದರಿಂದ ಹಿಡಿದು ವೀಸಾದವರೆಗೆ ಸಾಕಷ್ಟು ಕೆಲಸಗಳಿರುತ್ತಿದ್ದವು. ಆದರೆ ಕಳೆದೊಂದು ವರ್ಷದಿಂದ ವಿದೇಶ ಪ್ರವಾಸ ಪ್ರಯಾಸ ಇಲ್ಲದಂತಾಗಿದೆ. ಯಾಕೆಂದರೆ ಈ ಭಾರತೀಯರು ಸುಮಾರು 27 ದೇಶಗಳಿಗೆ ವೀಸಾ ಇಲ್ಲದೇ ಪ್ರಯಾಣ ಮಾಡಬಹುದು. ಮಾತ್ರವಲ್ಲ ಕೆಲವು ದಿನಗಳ ಕಾಲ ಅಲ್ಲಿಯೇ ಉಳಿದುಕೊಳ್ಳಬಹುದು.

ನೀವು ಶ್ರೀಲಂಕಾ, ಮಲೇಷ್ಯಾ, ಮಾರಿಷಿಯಸ್‌ನಂತಹ ದೇಶಗಳಿಂದ ಪ್ರವಾಸ ಮಾಡಲು ಬಯಸಿದ್ದರು ಈಗಲೇ ಪ್ಲಾನ್‌ ಮಾಡಿ. ಯಾವೆಲ್ಲಾ ದೇಶಗಳಲ್ಲಿ ಸದ್ಯ ವೀಸಾ ಇಲ್ಲದೇ ಪ್ರಯಾಣ ಮಾಡಬಹುದು ಎಂಬ ಪಟ್ಟಿ ಇಲ್ಲಿದೆ.

ಥಾಯ್ಲೆಂಡ್‌ಗೆ ನೀವು 2024 ನವೆಂಬರ್‌ 11ರವರೆಗೆ ವೀಸಾ ಇಲ್ಲದೇ ಪ್ರಯಾಣ ಮಾಡಬಹುದು. ಮೊದಲು ಮೇ 10ರವರೆಗೆ ಮಾತ್ರ ಪ್ರಯಾಣ ಮಾಡಬಹುದು ಎಂದಿತ್ತು. ಈ ಸೌಲಭ್ಯವನ್ನು ಜಾರಿಗೆ ತಂದ ನಂತರ ಭಾರತದಿಂದ ಥಾಯ್ಲೆಂಡ್‌ಗೆ ಪ್ರವಾಸ ಮಾಡುವವರ ಸಂಖ್ಯೆ ಏರಿಕೆಯಾಗಿದೆ ಎಂದು ಥಾಯ್ಲೆಂಡ್ ಪ್ರವಾಸೋದ್ಯಮ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ವೀಸಾ ಮುಕ್ತ ಪ್ರಯಾಣ ಎಂದರೇನು?

ವೀಸಾ ಫ್ರಿ ಅಥವಾ ವೀಸಾ-ಮುಕ್ತ ಪ್ರಯಾಣ ಎಂದರೆ ನೀವು ಮುಂಚಿತವಾಗಿ ವೀಸಾ ಪಡೆಯದೆಯೇ ದೇಶವನ್ನು ಪ್ರವೇಶಿಸಬಹುದು. ಇದು ವೀಸಾ ಪ್ರಕ್ರಿಯೆಯ ಸಂಕೀರ್ಣತೆ ಹಾಗೂ ವೀಸಾ ಶುಲ್ಕವನ್ನು ಉಳಿಸುವ ಮೂಲಕ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಈಗಾಗಲೇ ಹಲವಾರು ದೇಶಗಳು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಭಾರತೀಯರು ಸುದೀರ್ಘವಾದ ಕಾರ್ಯವಿಧಾನಗಳಿಲ್ಲದೆ ಭೇಟಿ ನೀಡಲು ಅವಕಾಶ ಮಾಡಿಕೊಟ್ಟಿದೆ. ವಿಶಿಷ್ಟವಾಗಿ, ವೀಸಾ-ಮುಕ್ತ ದೇಶಗಳಲ್ಲಿ ಕಸ್ಟಮ್ಸ್ ಮೂಲಕ ಹಾದುಹೋಗಲು ನಿಮಗೆ ಪಾಸ್‌ಪೋರ್ಟ್ ಮಾತ್ರ ಅಗತ್ಯವಿದೆ. ಅದಾಗ್ಯೂ ಕೆಲವು ದೇಶಗಳಿಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಪುರಾವೆಯ ರೂಪದಲ್ಲಿ ನೀಡಬೇಕಾಗಬಹುದು. ಕೆಲವು ಸ್ಥಳಗಳಲ್ಲಿ, ನೀವು ವಿಮಾನ ನಿಲ್ದಾಣ ಅಥವಾ ನಿರ್ಗಮನ ತೆರಿಗೆಯನ್ನು ಸಹ ಪಾವತಿಸಬೇಕಾಗಬಹುದು.

ಭಾರತೀಯರು ಯಾವೆಲ್ಲಾ ದೇಶಗಳಲ್ಲಿ ವೀಸಾ ಇಲ್ಲದೇ ಪ್ರಯಾಣ ಮಾಡಬಹುದು?

1. ಅಂಗೋಲಾ: 30 ದಿನಗಳವರೆಗೆ, ವೀಸಾ ಮುಕ್ತ ಪ್ರಯಾಣ

2. ಬಾರ್ಬಡಸ್‌: 90 ದಿನಗಳವರೆಗೆ, ವೀಸಾ ಮುಕ್ತ ಪ್ರಯಾಣ

3. ಭೂತಾನ್‌: 14 ದಿನಗಳವರೆಗೆ, ವೀಸಾ ಫ್ರಿ

4. ಡೊಮಿನಿಕಾ: 180 ದಿನಗಳವರೆಗೆ, ವೀಸಾ ಮುಕ್ತ ಪ್ರಯಾಣ

5. ಸಾಲ್ವಡಾರ್‌: 90 ದಿನಗಳವರೆಗೆ, ವೀಸಾ ಮುಕ್ತ ಪ್ರಯಾಣ

6. ಫಿಜಿ: 120 ದಿನಗಳವರೆಗೆ, ವೀಸಾ ಫ್ರಿ

7. ಗ್ಯಾಂಬಿಯಾ: 90 ದಿನಗಳವರೆಗೆ ವೀಸಾ ಮುಕ್ತ ಪ್ರಯಾಣ

8. ಗ್ರೆನಡಾ: 90 ದಿನಗಳವರೆಗೆ ವೀಸಾ ಫ್ರಿ

9. ಹೈಟಿ: 90 ದಿನಗಳವರೆಗೆ ವೀಸಾ ಮುಕ್ತ ಪ್ರಯಾಣ

10. ಇರಾನ್‌: 15 ದಿನಗಳವರೆಗೆ ವೀಸಾ ಮುಕ್ತ ಪ್ರಯಾಣ

11. ಜಮೈಕಾ: ವೀಸಾ ಫ್ರಿ

12. ಕಝಾಕಿಸ್ತಾನ್‌: 14 ದಿನಗಳವರೆಗೆ ವೀಸಾ ಫ್ರಿ

13. ಕಿರಿಬಾಟಿ: 90 ದಿನಗಳವರೆಗೆ ವೀಸಾ ಮುಕ್ತ ಪ್ರಯಾಣ

14. ಮಕಾವೊ: 30 ದಿನಗಳು, ವೀಸಾ ಮುಕ್ತ

15. ಮಲೇಷ್ಯಾ: 30 ದಿನಗಳು, ವೀಸಾ ಫ್ರಿ

16. ಮಾರಿಷಸ್‌: 90 ದಿನಗಳು, ವೀಸಾ ಫ್ರಿ

17. ಮೈಕ್ರೋನೇಶಿಯಾ: ವೀಸಾ-ಮುಕ್ತ: 30 ದಿನಗಳು

18. ನೇಪಾಳ: ವೀಸಾ-ಮುಕ್ತ

19. ಪ್ಯಾಲೇಸ್ಟಿನಿಯನ್ ಪ್ರಾಂತ್ಯಗಳು: ವೀಸಾ-ಮುಕ್ತ

20. ರುವಾಂಡಾ: ವೀಸಾ-ಮುಕ್ತ: 30 ದಿನಗಳು

21. ಸೇಂಟ್ ಕಿಟ್ಸ್ ಮತ್ತು ನೆವಿಸ್: ವೀಸಾ-ಮುಕ್ತ: 90 ದಿನಗಳು

22. ಸೆನೆಗಲ್: ವೀಸಾ-ಮುಕ್ತ: 90 ದಿನಗಳು

23. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್: ವೀಸಾ-ಮುಕ್ತ: 90 ದಿನಗಳು

24. ಶ್ರೀಲಂಕಾ: ವೀಸಾ-ಮುಕ್ತ: 30 ದಿನಗಳು

25. ಥೈಲ್ಯಾಂಡ್: ವೀಸಾ-ಮುಕ್ತ: 30 ದಿನಗಳು

26. ಟ್ರಿನಿಡಾಡ್ ಮತ್ತು ಟೊಬಾಗೊ: ವೀಸಾ-ಮುಕ್ತ: 90 ದಿನಗಳು

27. ವನವಾಟು: ವೀಸಾ-ಮುಕ್ತ: 30 ದಿನಗಳು

ವೀಸಾ ಮುಕ್ತ ದೇಶಗಳಿಗೆ ಭಾರತೀಯರಿಗೆ ಅಗತ್ಯ ಇರುವ ದಾಖಲೆಗಳು

* ವಾಲಿಡ್‌ ಪಾಸ್‌ಪೋರ್ಟ್‌

* ವಾಸ್ತವ್ಯದ ಗರಿಷ್ಠ ಅವಧಿ

* ಹಿಂದಿರುಗಿ ಹೋಗಲು ದಾಖಲೆ ಅಥವಾ ರಿಟನ್‌ ಟಿಕೆಟ್‌

* ನಿಮ್ಮ ಬಳಿ ಸಾಕಷ್ಟು ಹಣ ಇರುವುದಕ್ಕೆ ಪುರಾವೆ

* ಪ್ರಯಾಣ ಹಾಗೂ ವೈದ್ಯಕೀಯ ವಿಮೆ

* ಕ್ರಿಮಿನಲ್‌ ರೆಕಾರ್ಡ್‌ ಚೆಕ್‌

* ಕಸ್ಟಮ್ಸ್‌ ಮತ್ತು ಡಿಕ್ಲರೇಷನ್‌ಗಳು.

ಭಾರತೀಯರು ಪಾಸ್‌ಪೂರ್ಟ್‌ ಇಲ್ಲದೆ ಪ್ರಯಾಣ ಮಾಡಬಹುದಾದ ದೇಶಗಳು

ಭಾರತೀಯರು ವೀಸಾ ಮಾತ್ರವಲ್ಲದೇ ಪಾಸ್‌ಪೋರ್ಟ್‌ ಕೂಡ ಇಲ್ಲದೇ ಎರಡು ದೇಶಗಳಿಗೆ ಪ್ರಯಾಣ ಮಾಡಬಹುದು. ಆ ದೇಶಗಳು ನೇಪಾಳ ಮತ್ತು ಭೂತಾನ್‌. ಇಲ್ಲಿಗೆ ವೀಸಾ, ಪಾಸ್‌ಪೋರ್ಟ್‌ ಅಗತ್ಯವಿಲ್ಲ. ಆದರೆ ಭಾರತೀಯರು ಈ ದೇಶಗಳಿಗೆ ಪ್ರಯಾಣಿಸುವಾಗ ಭಾರತೀಯ ನಾಗರಿಕರು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ಮತದಾರರ ಗುರುತಿನ ಚೀಟಿಯಂತಹ ಮಾನ್ಯ ಗುರುತಿನ ದಾಖಲೆಗಳನ್ನು ಹೊಂದಿರಬೇಕು.

Whats_app_banner