ರತನ್ ಟಾಟಾಗೆ ಐಬಿಎಂನಲ್ಲಿ ಜಾಬ್ ಆಗಿತ್ತು! ಜೆಆರ್‌ಡಿ ಟಾಟಾ ಕೇಳಿದಾಗ ಇವರಲ್ಲಿ ಸಿವಿ ಇರಲಿಲ್ಲ, ಟೈಪ್‌ರೈಟರ್‌ನಲ್ಲಿ ರೆಸ್ಯುಮೆ ಟೈಪಿಸಿದ್ರು
ರತನ್ ಟಾಟಾ ಅಕ್ಟೋಬರ್ 9ರಂದು ತನ್ನ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಬದುಕಿನ ಪುಟಗಳಲ್ಲಿ ಹಲವು ಅಚ್ಚರಿಯ ಕಥೆಗಳಿವೆ. ಅವರು ಹಿಂದೊಮ್ಮೆ ಐಬಿಎಂನಲ್ಲಿ ಉದ್ಯೋಗ ಪಡೆದಿದ್ದರು. ಆದರೆ, ಇದು ಜೆಆರ್‌ಡಿ ಟಾಟಾಗೆ ಇಷ್ಟವಾಗಿರಲಿಲ್ಲ.
ಭಾರತದ ಪ್ರಮುಖ ಕೈಗಾರಿಕೋದ್ಯಮಿ ರತನ್ ಟಾಟಾ ಅಕ್ಟೋಬರ್ 9ರಂದು ನಿಧನರಾಗಿದ್ದಾರೆ. ತನ್ನ 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು. ತನ್ನ ವ್ಯಕ್ತಿತ್ವ, ಜೀವನದಿಂದ ಜನರ ಗಮನ ಸೆಳೆದ ಪ್ರಮುಖ ವ್ಯಕ್ತಿ ಇವರಾಗಿದ್ದಾರೆ. ಇವರ ಬಿಸ್ನೆಸ್ ಕೌಶಲ ಮಾತ್ರವಲ್ಲದೆ ಯೋಚನಾ ಕ್ರಮವೂ ಸ್ಪೂರ್ತಿದಾಯಕವಾಗಿತ್ತು. ಜಗತ್ತಿನಾದ್ಯಂತ ಇವರಿಗೆ ಅಭಿಮಾನಿಗಳಿದ್ದಾರೆ. ಅವರ ಜೀವನದ ಅನೇಕ ಕಥೆಗಳಲ್ಲಿ “ಐಬಿಎಂನಿಂದ ಜಾಬ್ ಆಫರ್ ಪಡೆದ” ಕಥೆಯೂ ಒಂದಾಗಿದೆ. ಟಾಟಾ ಗ್ರೂಪ್‌ನ ಅನರ್ಘ್ಯ ರತ್ನವಾಗಿದ್ದ ರತನ್ ಟಾಟಾಗೆ ಐಟಿ ಕ್ಷೇತ್ರದಲ್ಲಿ ಉದ್ಯೋಗ ಮಾಡುವ ಕನಸಿತ್ತು. ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಈ ವಿಚಾರದ ಕುರಿತು ರತನ್ ಟಾಟಾ ಹೇಳಿದ್ದರು. ನನ್ನ ಜೀವನದಲ್ಲಿ ಸಾಧನೆ ಮಾಡಲು ಜೆಆರ್‌ಡಿ ಟಾಟಾರ ಪ್ರೋತ್ಸಾಹ ಯಾವ ರೀತಿ ಇತ್ತು ಎಂದು ಅವರು ಹೇಳಿದ್ದರು.
ಶಿಕ್ಷಣ ಮತ್ತು ಆರಂಭಿಕ ಕರಿಯರ್
ದಿವಂಗತ ರತನ್ ಟಾಟಾ ಅವರು ಕಾರ್ನೆಲ್ ಯುನಿರ್ಸಿಟಿಯ ಹಳೆ ವಿದ್ಯಾರ್ಥಿಯಾಗಿದ್ದರು. ಆರ್ಕಿಟೆಕ್ಚರ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು. ಆ ಸಮಯದಲ್ಲಿ ಅಮೆರಿಕದ ಜೀವನಶೈಲಿಗೆ ಮಾರು ಹೋಗಿದ್ದರು. ಲಾಸ್ ಏಂಜೆಲ್ಸ್‌ನಲ್ಲೇ ಕರಿಯರ್ ರೂಪಿಸಲು ಬಯಸಿದ್ದರು. ಆದರೆ, ಅಜ್ಜಿಯ ಆರೋಗ್ಯ ಕೆಟ್ಟ ಕಾರಣ ಭಾರತಕ್ಕೆ ವಾಪಸ್ ಬರಬೇಕಾಯಿತು.
ಐಬಿಎಂನಲ್ಲಿ ಜಾಬ್ ಸಿಕ್ಕಿತ್ತು
ಭಾರತಕ್ಕೆ ಹಿಂತುರುಗುವ ಸಮಯದಲ್ಲಿ ರತನ್ ಟಾಟಾಗೆ ಐಬಿಎಂ ಕಂಪನಿಯಲ್ಲಿ ಉದ್ಯೋಗ ದೊರಕಿತ್ತು. ಆದರೆ, ಐಬಿಎಂನಲ್ಲಿ ಕೆಲಸ ಮಾಡುವುದು ಇವರ ಮೆಂಟರ್ ಜೆಆರ್‌ಡಿ ಟಾಟಾಗೆ ಇಷ್ಟವಿರಲಿಲ್ಲ. “ಅವರು ಒಂದು ದಿನ ನನ್ನ ಕರೆದರು. ನೀನು ಐಬಿಎಂನಲ್ಲಿ ಕೆಲಸ ಮಾಡಲು ಇರುವುದಲ್ಲ ಎಂದು ಹೇಳಿದರು” ಎಂದು ದಿವಂಗತ ರತನ್ ಟಾಟಾ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು. ಈ ಮಾತುಕತೆಯು ರತನ್ ಟಾಟಾ ಕರಿಯರ್‌ನಲ್ಲಿ ಪ್ರಮುಖ ಟರ್ನಿಂಗ್ ಪಾಯಿಂಟ್ ಆಗಿತ್ತು.
ರೆಸ್ಯುಮೆ ಕೇಳಿದ್ರು ಜೆಆರ್‌ಡಿ ಟಾಟಾ
ಟಾಟಾ ಗ್ರೂಪ್‌ನ ಹುದ್ದೆಯೊಂದಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದರು. ಇದಕ್ಕಾಗಿ ಜೆಆರ್‌ಡಿ ಟಾಟಾ ಇವರಲ್ಲಿ ರೆಸ್ಯುಮೆ ಕೇಳಿದ್ರು. “ನನಗೆ ನೆನಪಿದೆ, ಅವರು (ಜೆಆರ್‌ಡಿ ಟಾಟಾ) ನನ್ನಲ್ಲಿ ರೆಸ್ಯುಮೆ ಕೇಳಿದ್ದರು. ಆದರೆ, ನನ್ನಲ್ಲಿ ಇರಲಿಲ್. ಅಂದು ಸಂಜೆ ಟೈಪ್‌ರೈಟರ್ ಮುಂದೆ ಕುಳಿತು ರೆಸ್ಯುಮೆ ಬರೆದೆ” ಎಂದು ಅವರ ಹೇಳಿದ್ದರು. ಈ ಮೂಲಕ ತನ್ನ ಕರಿಯರ್ ಆರಂಭದ ಕುರಿತು ಮಾಹಿತಿ ನೀಡಿದ್ದರು.
ಟಾಟಾಗೆ ಶಕ್ತಿ ತುಂಬಿದ ರತನ್
ಈ ರೀತಿ ಟಾಟಾ ಗ್ರೂಪ್‌ನಲ್ಲಿ ರತನ್ ಟಾಟಾ ಕರಿಯರ್ ಆರಂಭಿಸಿದ್ದರು. 1962ರಲ್ಲಿ ಟಾಟಾ ಇಂಡಸ್ಟ್ರೀಸ್‌ಗೆ ಸೇರಿದರು. ಸುಮಾರು ಮೂರು ದಶಕಗಳ ಬಳಿಕ ಅಂದರೆ 1991ರಲ್ಲಿ ಜೆಆರ್‌ಡಿ ಟಾಟಾ ಬಳಿಕ ಚೇರ್ಮನ್ ಹುದ್ದೆಗೆ ಏರಿದರು. ಇವರು ಟಾಟಾ ಗ್ರೂಪ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದರು.