ಫೇಸ್‌ಬುಕ್ ಮಾಲೀಕ ಈಗ ಜಗತ್ತಿನ ಎರಡನೇ ಅಗ್ರ ಶ್ರೀಮಂತ; ಜೆಫ್ ಬಿಜೋಸ್ ಹಿಂದಿಕ್ಕಿದ ಮಾರ್ಕ್ ಜುಕರ್‌ಬರ್ಗ್
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಈಗ ಜಗತ್ತಿನ ಅಗ್ರ 2ನೇ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಇವರ ನಿವ್ವಳ ಸಂಪತ್ತು 206.2 ಶತಕೋಟಿ ಡಾಲರ್‌ಗೆ ತಲುಪಿದೆ. ಈ ಮೂಲಕ ಜೆಫ್ ಬಿಜೋಸ್‌ರನ್ನು ಹಿಂದಿಕ್ಕಿದ್ದಾರೆ.
ಬೆಂಗಳೂರು: ಮಾರ್ಕ್ ಜುಕರ್‌ಬರ್ಗ್ ಇದೇ ಮೊದಲ ಬಾರಿಗೆ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್‌ನ ಷೇರುಗಳು ಏರುತ್ತಲೇ ಇರುವುದರಿಂದ ಜೆಫ್ ಬಿಜೋಸ್‌ರನ್ನು ಹಿಂದಿಕ್ಕಿದ್ದಾರೆ.
ಮೆಟಾವರ್ಸ್‌ನಲ್ಲಿ ಜುಕರ್‌ಬರ್ಗ್‌ನ ಹೂಡಿಕೆಯ ಕುರಿತು ಆರಂಭದಲ್ಲಿ ಸಾಕಷ್ಟು ಅನುಮಾನ ಇತ್ತು. ಆದರೆ, ಇತ್ತೀಚೆಗೆ ಇದು ಇದರ ನಿವ್ವಳ ಮೌಲ್ಯವನ್ನು 206.2 ಶತಕೋಟಿ ಡಾಲರ್‌ಗೆ ತಲುಪಿಸಿದೆ. ಇದು ಅಮೆಜಾನ್.ಕಾಂನ ಬಿಜೋಸ್ ಅವರ ಸಂಪತ್ತಿಗಿಂತ 1.1 ಶತಕೋಟಿಯಷ್ಟು ಹೆಚ್ಚು. ಟೆಸ್ಲಾ ಇಂಕ್‌ನ ಎಲೋನ್ ಮಸ್ಕ್ ಆದಾಯಕ್ಕಿಂತ 50 ಶತಕೋಟಿ ಡಾಲರ್ ಹಿಂದಿದೆ.
ಎರಡನೇ ತ್ರೈಮಾಸಿಕದಲ್ಲಿ ಮೆಟಾದ ಮಾರಾಟವು ನಿರೀಕ್ಷೆಗಿಂತ ಹೆಚ್ಚಾಗಿತ್ತು. ಎಐ ಚಾಟ್‌ಬಾಟ್‌ಗಳಿಗೆ ಶಕ್ತಿ ತುಂಬುವ ದೊಡ್ಡ ಭಾಷಾ ಮಾದರಿಗಳ ಪ್ರಚಾರವೂ ಹೆಚ್ಚಾಗಿತ್ತು. ಇದರಿಂದ ಮೆಟಾ ಕಂಪನಿಯ ಷೇರುಗಳು ಶೇಕಡ 23ರಷ್ಟು ಹೆಚ್ಚಾಗಿದೆ. ಗುರುವಾ ಕಂಪನಿಯ ಷೇರು ದರ ಸಾರ್ವಕಾಲಿಕ ಗರಿಷ್ಠ ಮೊತ್ತ 582.77 ಡಾಲರ್‌ಗೆ ತಲುಪಿತು.
ಕಂಪನಿಯು ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಲ್ಲಿ ಪ್ರಮುಖ ಸ್ಥಾನ ಪಡೆಯಲು ಕೆಲಸ ಮಾಡುತ್ತಿದೆ. ಇದಕ್ಕಾಗಿ ಮೆಟಾ ಕಂಪನಿಯು ಡೇಟಾ ಸೆಂಟರ್‌ಗಳು ಕಂಪ್ಯೂಟರ್ ಪವರ್ ಮೇಲೆ ಹೆಚ್ಚು ಖರ್ಚು ಮಾಡಿದೆ. ಕಂಪನಿಯು ಕಳೆದ ತಿಂಗಳು ಓರಿಯನ್ ಆಗ್ಮೆಂಟೆಡ್ ರಿಯಾಲಿಟಿ ಗ್ಲಾಸ್‌ಗಳನ್ನು ಪರಿಚಯಿಸಿತ್ತು. ಇಂತಹ ಅನೇಕ ದೀರ್ಘಾವಧಿಯ ಯೋಜನೆಗಳನ್ನು ಮುಂದುವರೆಸಿದೆ.
ಕ್ಯಾಲಿಫೋರ್ನಿಯಾ ಮೂಲದ ಕಂಪನಿಯಾದ ಮೆನ್ಲೋ ಪಾರ್ಕ್‌ನಲ್ಲಿ ಜುಕನ್‌ಬರ್ಗ್ ಶೇಕಡ 13 ಪಾಲು ಹೊಂದಿದೆ. ಮೆಟಾ ಕಪನಿಯು ಈ ವರ್ಷ ಇಲ್ಲಿಯವರೆಗೆ 78 ಶತಕೋಟಿ ಡಾಲರ್‌ಗಳಷ್ಟು ಬೆಳವಣಿಗೆ ಕಂಡಿದೆ. ಬ್ಲೂಮ್‌ಬರ್ಗ್ ಸೂಚ್ಯಂಕ ಪ್ರಕಾರ ವಿಶ್ವದ 500 ಶ್ರೀಮಂತರಲ್ಲಿ ಇವರು ಅಗ್ರ ಸ್ಥಾನದಲ್ಲಿದ್ದಾರೆ.
ಈ ವರ್ಷದ ಸಂಪತ್ತು ಸೂಚಿಯಲ್ಲಿ 40 ವರ್ಷದ ಜುಕರ್ ಬರ್ಗ್ ಅಗ್ರ ನಾಲ್ಕನೇ ಸ್ಥಾನ ಪಡೆದಿದ್ದರು.
ಜಗತ್ತಿನ ಹತ್ತು ಅಗ್ರ ಶ್ರೀಮಂತರು (ಹೊಸ ಪಟ್ಟಿ)
- ಎಲಾನ್ ಮಸ್ಕ್
- ಮಾರ್ಕ್ ಜುಕರ್‌ಬರ್ಗ್
- ಜೆಫ್ ಬಿಜೋಸ್
- ಬೆರ್ನಾರ್ಡ್ ಅರ್ನಾಲ್ಟ್
- ಲ್ಯಾರಿ ಎಲಿಸನ್
- ಬಿಲ್ ಗೇಟ್ಸ್
- ಲ್ಯಾರಿ ಪೇಜ್
- ಸ್ಟೀವ್ ಬಾಲ್ಮೆರ್
- ವಾರೆನ್ ಬಫೆಟ್
- ಸೆರ್ಜರಿ ಬ್ರಿನ್