Mosquito Day; ಹೆಣ್ಣು ಸೊಳ್ಳೆ ರಕ್ತ ಹೀರೋದೇಕೆ, ಗಂಡು ಸೊಳ್ಳೆಗಳದ್ದೇನು ಕಥೆ, ವಿಶ್ವ ಸೊಳ್ಳೆ ದಿನ- ಸಂಶೋಧಕ ಸಮರ್ಥ ಡಿಕೆ ಅವರ ವಿಶೇಷ ಲೇಖನ-world mosquito day 2024 why do mosquitoes suck your blood article by samartha dk researcher nimhans bangalore news uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Mosquito Day; ಹೆಣ್ಣು ಸೊಳ್ಳೆ ರಕ್ತ ಹೀರೋದೇಕೆ, ಗಂಡು ಸೊಳ್ಳೆಗಳದ್ದೇನು ಕಥೆ, ವಿಶ್ವ ಸೊಳ್ಳೆ ದಿನ- ಸಂಶೋಧಕ ಸಮರ್ಥ ಡಿಕೆ ಅವರ ವಿಶೇಷ ಲೇಖನ

Mosquito Day; ಹೆಣ್ಣು ಸೊಳ್ಳೆ ರಕ್ತ ಹೀರೋದೇಕೆ, ಗಂಡು ಸೊಳ್ಳೆಗಳದ್ದೇನು ಕಥೆ, ವಿಶ್ವ ಸೊಳ್ಳೆ ದಿನ- ಸಂಶೋಧಕ ಸಮರ್ಥ ಡಿಕೆ ಅವರ ವಿಶೇಷ ಲೇಖನ

World Mosquito Day 2024; ಸೊಳ್ಳೆಗಳಿಗೂ ಒಂದು ದಿನ ಮೀಸಲಿದೆ ನೋಡಿ. ಆಗಸ್ಟ್ 20 ರಂದು ವಿಶ್ವ ಸೊಳ್ಳೆ ದಿನ ಆಚರಿಸುತ್ತಾರೆ. ಸೊಳ್ಳೆಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವೇ?, ಹಾಗಾದರೆ, ಹೆಣ್ಣು ಸೊಳ್ಳೆ ರಕ್ತ ಹೀರೋದು ಯಾಕೆ, ಗಂಡು ಸೊಳ್ಳೆಗಳದ್ದೇನು ಕಥೆ ಎಂಬಿತ್ಯಾದಿ ಒಂದಷ್ಟು ಕುತೂಹಲಕಾರಿ ಅಂಶಗಳಿರುವ ಲೇಖನ ಬರೆದಿದ್ದಾರೆ ನಿಮ್ಹಾನ್ಸ್‌ನ ಸಂಶೋಧಕ ಸಮರ್ಥ ಡಿಕೆ.

World Mosquito Day; ವಿಶ್ವ ಸೊಳ್ಳೆ ದಿನದ ನಿಮಿತ್ತ ಬೆಂಗಳೂರು ನಿಮ್ಹಾನ್ಸ್‌ನ ಸಂಶೋಧಕ ಸಮರ್ಥ ಡಿಕೆ ಅವರ ಲೇಖನ
World Mosquito Day; ವಿಶ್ವ ಸೊಳ್ಳೆ ದಿನದ ನಿಮಿತ್ತ ಬೆಂಗಳೂರು ನಿಮ್ಹಾನ್ಸ್‌ನ ಸಂಶೋಧಕ ಸಮರ್ಥ ಡಿಕೆ ಅವರ ಲೇಖನ

ಸೊಳ್ಳೆ ಎಂದು ಕೇಳಿದ ಕೂಡಲೇ ಮನದಲ್ಲಿ ಇರಿಸುಮುರಿಸು. ಸೊಳ್ಳೆ ರಕ್ತಹೀರುವ ಹಾಗು ತನ್ನ ರಾಗಮಯವಾದ ಝೇಂಕಾರದಿಂದ ಸುಖ ನಿದ್ರೆ ಹಾಳು ಮಾಡಲೆಂದೇ ಇರುವ ಕೀಟ ಎಂಬುದು ಅಭಿಪ್ರಾಯ. ಸುಂದರ ಸ್ವಪ್ನವನ್ನು ಹಾಳುಮಾಡುವ, ನಮ್ಮನ್ನು ಸಿಟ್ಟೆಬ್ಬಿಸುವ ಈ ಸಣ್ಣ ಕೀಟ ಸೊಳ್ಳಗೆ ಸಹಾ ಒಂದು ದಿನಾಚರಣೆ ಇದೆ. ಹೌದು, ಪ್ರತಿವರ್ಷ ಆಗಸ್ಟ್‌ 20 ರಂದು ವಿಶ್ವ ಸೊಳ್ಳೆ ದಿನ ಎಂದು ಆಚರಿಸಲಾಗುತ್ತದೆ.

ಇತಿಹಾಸದ ಪುಟ ತಿರುವಿ ನೋಡಿದರೆ, 1897ರ ಆಗಸ್ಟ್‌ 20 ರಂದು ಬ್ರಿಟಿಷ್‌ ವೈದ್ಯ ಸರ್‌ ರೊನಾಲ್ಡ್‌ ರೊಸ್ಸ್‌ ಅವರು ಮೊದಲಬಾರಿಗೆ ಮಲೇರಿಯಾ ರೋಗವನ್ನುಂಟು ಮಾಡುವ ಪರಾವಲಂಬಿಯನ್ನು (Parasite) ಅನೊಫೆಲೆಸ್‌ (Anopheles) ಕುಲಕ್ಕೆ ಸೇರಿದ ಸೋಂಕಿತ ಹೆಣ್ಣು ಸೊಳ್ಳೆಯ ಜಠರದಲ್ಲಿ ಕಂಡುಹಿಡಿದರು. ಇದರಿಂದಾಗಿಯೇ ಮಲೇರಿಯಾ ರೋಗವು ಮನುಷ್ಯನಿಂದ ಮನುಷ್ಯನಿಗೆ ಪಸರಿಸುತ್ತದೆ ಎಂದು ಅನ್ವೇಷಿಸಿದರು. ಸರ್‌ ರೊನಾಲ್ಡ್‌ ರೊಸ್ಸ್‌ರವರ ಈ ಅನ್ವೇಷಣೆಯನ್ನು ಸ್ಮರಿಸುವುದಕ್ಕಾಗಿ ಹಾಗೂ ಸೊಳ್ಳೆಯಿಂದ ಹರಡುವ ಕಾಯಿಲೆಬಗ್ಗೆ ಮತ್ತಷ್ಟು ಜಾಗೃತೆ ಮೂಡಿಸುವುದೆ ಈ ದಿನದ ಮೂಲ ಉದ್ದೇಶ.

ಮಲೇರಿಯಾ ಪ್ಯಾರಸೈಟ್‌

ಮಲೇರಿಯಾ ಪ್ಯಾರಸೈಟ್‌ - ಪ್ಲಾಸ್ಮೋಡಿಯಮ್‌ (Plasmodium) ಕುಲಕ್ಕೆ ಸೇರುವವು ಅದರಲ್ಲೂ ಪ್ಲಾಸ್ಮೋಡಿಯಮ್‌ ವೈವಾಕ್ಸ್‌ (Plasmodium vivax) ಅಥವಾ ಪ್ಲಾಸ್ಮೋಡಿಯಮ್‌ ಫಾಲ್ಸಿಪೆರಮ್‌ (Plasmodium falciparum) ಮನುಷ್ಯನಿಗೆ ಹಚ್ಚಿನ ಪ್ರಮಾಣದಲ್ಲಿ ಸೋಂಕನ್ನುಂಟು ಮಾಡುತ್ತವೆ. ಸೊಳ್ಳೆ ಒಬ್ಬ ಸೋಂಕಿತ ವ್ಯಕ್ತಿಯ ರಕ್ತವನ್ನು ಹೀರಿದಾಗ ರೋಗವನ್ನುಂಟು ಮಾಡುವಾ ಪ್ಯಾರಸೈಟ್ (Parasite) ರಕ್ತದ ಮೂಲಕ ಸೊಳ್ಳೆಯ ಜಠರಕ್ಕೆ ಸೇರುತ್ತದೆ, ಜಠರದಿಂದ ಸೊಳ್ಳೆಯ ಲಾಲಾರಸ‌ ತಯಾರಿಸುವ ಗ್ರಂಥಿಗೆ (Salivary gland) ತಲಪುತ್ತದೆ. ಸೊಳ್ಳೆಯು ಮತ್ತೊಮ್ಮೆ ಬೇರೆಯ ವ್ಯಕ್ತಿಯನ್ನು ಕಡಿದಾಗ, ಸೊಳ್ಳೆಯ ಲಾಲಾರಸದ ಮೂಲಕ ಸೋಂಕು ಸೋಂಕ್ಕಿಲ್ಲದ ವ್ಯಕ್ತಿಗೆ ಹರಡುತ್ತದೆ. ಹೀಗೆ ಸೊಳ್ಳೆಯು ಮಲೇರಿಯಾ ರೋಗವನ್ನು ಹರಡುವ ವಾಹಕವಾಗುತ್ತವೆ (Vectors).

2022ರ ವರದಿಯ ಪ್ರಕಾರ ವಿಶ್ವದ ಒಟ್ಟಾರೆ 85 ದೇಶಗಳಲ್ಲಿ 249 ಮಿಲಿಯನ್‌ ಮಲೇರಿಯಾ ಕೇಸ್‌ ದಾಖಲಾಗಿದ್ದವು. ಇದರ ಬಹುಪಾಲು ಎಂದರೆ ಶೇಕಡ 66% ಭಾರತದಲ್ಲಿ ದಾಖಲಾದವು. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ 30 ಏಪ್ರಿಲ್‌ 2024ರವರೆಗೆ ವಿಶ್ವದಾದ್ಯಂತ 7.6 ಮಿಲಿಯನ್‌ ಡೆಂಗ್ಯೂ ಕೇಸ್ ದಾಖಲಾಗಿರುತ್ತದೆ. ಡೆಂಗ್ಯೂ ರೋಗವು ಕೂಡ ಮಲೇರಿಯಾ ಮಾದರಿಯಲ್ಲೆ ಹರಡುವುದು. ಆದರೆ ಡೆಂಗ್ಯೂ ಉಂಟಾಗುವುದು ಫ್ಲಾವಿವೈರಸ್‌ (Flavivirus) ಎಂಬ ಕುಲಕ್ಕೆ ಸೇರಿದ ವೈರಾಣುವಿನಿಂದ ಮತ್ತು ಅದನ್ನು ಹರಡುವ ಹೆಣ್ಣು ಸೊಳ್ಳೆ ಏಡಿಸ್‌ (Aedes) ಕುಲಕ್ಕೆ ಸೇರಿರುವವು ಅದರಲ್ಲೂ ಏಡಿಸ್‌ ಏಜಿಪ್ಟಿ (Aedes aegypti) ಮಾತ್ತು ಏಡಿಸ್‌ ಆಲ್ಬೊಪಿಕ್ಟಸ್ (Aedes albopictus). ಎಂಬ ಜಾತಿಗೆ ಸೇರಿದ ಸೊಳ್ಳೆಗಳು ರೋಗವನ್ನು ಪಸರಿಸುವಲ್ಲಿ ಸಮರ್ಥರು. ಮಲೇರಿಯಾ ಸೋಂಕಿಗೆ ಔಷಧಿಗಳು ಸಿಗುತ್ತವೆ ಹಾಗೂ ಬೇಗನೆ ಗುಣಮುಖರಾಗಬಹುದು. ಆದರೆ ಡೆಂಗ್ಯೂ ಸೋಂಕಿಗೆ ನಿರ್ಧಿಷ್ಟ ಔಷಧಿಗಳು ಲಭ್ಯವಿಲ್ಲ.

ಸೊಳ್ಳೆಗಳ ವಿಚಾರದಲ್ಲಿ ಹಲವು ಸತ್ಯಾಸತ್ಯ - 5 ಅಂಶಗಳು

1) ಹೆಣ್ಣು ಸೊಳ್ಳೆ ಯಾಕೆ ರಕ್ತವನ್ನು ಹೀರುತ್ತದೆ?

ಹೆಣ್ಣು ಸಂತತಿಗೆ ಸೇರುವ ಸೊಳ್ಳೆಯು ಆಹಾರಕ್ಕಾಗಿ ರಕ್ತವನ್ನು ಹೀರುತ್ತದೆ. ರಕ್ತದಲ್ಲಿರುವ ಪ್ರೋಟೀನ್‌ ಹಾಗು ಕಬ್ಬಿಣದ ಅಂಶವನ್ನು ಉಪಯೋಗಿಸಿಕೊಂಡು ಮೊಟ್ಟೆಯನ್ನು ತಯಾರಿಸಿ ತನ್ನ ಸಂತಾನೋತ್ಪತ್ತಿ ಚಕ್ರವನ್ನು ಪೂರ್ಣಗೊಳಿಸುತ್ತದೆ.

2) ಹಾಗದರೆ ಗಂಡು ಸೊಳ್ಳೆ ರಕ್ತ ಹೀರುವುದಿಲ್ಲವೆ?

ಈ ಪ್ರಶ್ನೆ ಮೂಡುವುದು ಸಹಜ. ಗಂಡು ಸೊಳ್ಳೆಯು ಸಸ್ಯಹಾರಿ, ತನ್ನ ಆಹಾರಕ್ಕಾಗಿ ಸಸ್ಯದಲ್ಲಿ ಉತ್ಪತ್ತಿಯಾಗುವ ಮಕರಂದವನ್ನು ಹೀರುತ್ತದೆ.

3) ಸೊಳ್ಳೆ ಏಕೆ ಹಾಡುತ್ತವೆ?

ಸೊಳ್ಳೆಗಳಗೆ ಧ್ವನಿ ಪೆಟ್ಟಿಗೆ ಇರುವುದಿಲ್ಲ. ಬದಲಿಗೆ ಸೊಳ್ಳೆಗಳು ಹಾರುವಾಗ ತಮ್ಮ ರಕ್ಕೆಯನ್ನು ಪ್ರತಿ ಸೆಕೆಂಡ್‌ಗೆ 500-1000 ಬಾರಿಗೆ ಬಡಿಯುತ್ತವೆ ಇದರಿಂದಾಗಿ ಶಬ್ಧ ಉತ್ಪತ್ತಿಯಾಗುತ್ತದೆ.

4) ಸೊಳ್ಳೆ ಹೇಗೆ ಮನುಷ್ಯನನ್ನು ಗುರುತಿಸುತ್ತವೆ?

ಮನುಷ್ಯನ ಉಸಿರಾಟದಿಂದ ಉತ್ಪತ್ತಿಯಾಗುವ ಇಂಗಾಲ-ಡೈ-ಆಕ್ಸೈಡ್‌ನ್ನು (Carbon-di-oxide) ಸೊಳ್ಳೆಗಳು ಗುರುತಿಸಬಲ್ಲವು. ಮನುಷ್ಯನ ಬೆವರು, ಮೈಯಿಂದ ಬರುವ ಶಾಖವನ್ನು ಗುರುತಿಸಬಲ್ಲವು. ಅದಲ್ಲದೆ ಅವುಗಳ ಕಣ್ಣು ಹಾಗು ಗ್ರಾಹಕಗಳು ಮನುಷ್ಯನನ್ನು ಕಂಡುಹಿಡಿಯಬಲ್ಲವು.

5) ಯಾವ ರಕ್ತದ ಗುಂಪಿಗೆ ಸೇರಿದವರು ಪ್ರೀತಿಪಾತ್ರರು?

ಹಲವಾರು ಸಂಶೋಧನೆಗಳು O Positive - O +ve ರಕ್ತದ ಗುಂಪು ಹೊಂದಿರುವ ಮನುಷ್ಯರನ್ನು ಕಂಡರೆ ಸೊಳ್ಳೆಗಳಿಗೆ ಅತ್ಯಂತ ಅಕ್ಕರೆ ಎಂದು ಬೆರಳು ಮಾಡುತ್ತವೆ. ಹಾಗೂ DARK ವರ್ಣದ ಬಟ್ಟಗಳೆಂದರೆ ಅವುಗಳಿಗೆ ಪ್ರೀತಿ.

ದೂರ ವಿರುವುದು ಹೇಗೆ? ಮುನ್ನೆಚರಿಕೆಗಳೇನು?

1) ಸೊಳ್ಳೆಪರದೆ, ಸೊಳ್ಳೆ ನಿವಾರಕಗಳನ್ನು ಉಪಯೋಗಿಸುವುದು.

2) ಮನೆಯ ಸುತ್ತಲು ಸ್ವಚ್ಛತೆ ಕಾಪಾಡಿಕೊಳ್ಳುವುದು.

3) ಮಳೆಯ ನೀರನ್ನು ಅಥವಾ ಕೊಳಚೆ ನೀರನ್ನು ನಿಲ್ಲದಂತೆ ನೋಡಿಕೊಳ್ಳುವುದು. ಏಕೆಂದರೆ ಸೊಳ್ಳಯು ನಿಂತ ನೀರಿನಲ್ಲಿ ಮೊಟ್ಟ ಇಡುತ್ತವೆ.

4) ಮಲೇರಿಯಾ ಮಾತ್ತು ಡೆಂಗ್ಯೂ ಹರಡುವ ಸೊಳ್ಳೆಗಳು ಬೆಳಕಿನ ಸಮಯದಲ್ಲಿ ಅತಿಹೆಚ್ಚು ಸಕ್ರಿಯವಾಗಿರುತ್ತವೆ ಹಾಗಾಗಿ ಮೈತುಂಬ ಬಟ್ಟೆಯನ್ನು ಧರಿಸುವುದು ಉತ್ತಮ.