Modi Cabinet: ಸಚಿವರಿಗೆ ಖಾತೆ ಹಂಚಿದ ಪ್ರಧಾನಿ ನರೇಂದ್ರ ಮೋದಿ; ಹಿಂದಿನ ಖಾತೆಗಳನ್ನೇ ಪಡೆದ ಅಮಿತ್ ಶಾ, ರಾಜನಾಥ್; ಸಂಪೂರ್ಣ ಪಟ್ಟಿ ಇಲ್ಲಿದೆ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 3ನೇ ಅವಧಿಯ ಸಚಿವ ಸಂಪುಟದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಅದರ ಸಂಪೂರ್ಣ ಪಟ್ಟಿ ಇಲ್ಲಿದೆ.
ದೆಹಲಿ: ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜೂನ್ 10, ಸೋಮವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ (PM Narendra Modi Cabinet Meeting) ತಮ್ಮ ಸಂಪುಟದ ಸಚಿವರಿಗೆ ಖಾತೆಗಳನ್ನು ಹಂಚಿಕೆ (PM Modi Allotted Portfolios to Ministers) ಮಾಡಿದ್ದಾರೆ. ಅಮಿತ್ ಶಾ ಅವರಿಗೆ ಗೃಹ ಖಾತೆ ಹಾಗೂ ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆಯನ್ನು ನೀಡಲಾಗಿದೆ. ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು, ಎಸ್ ಜೈಶಂಕರ್ ಅವರಿಗೆ ವಿದೇಶಾಂಗ ವ್ಯವಹಾರಗಳ ಖಾತೆಯನ್ನು ನೀಡಲಾಗಿದೆ. ಈ ಪ್ರಮುಖ ಸಚಿವರು ಹಿಂದಿನ ಸರ್ಕಾರದಲ್ಲೂ ಇದೇ ಖಾತೆಗಳನ್ನು ಪಡೆದಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆಪಿ ನಡ್ಡಾ ಅವರಿಗೆ ಆರೋಗ್ಯ ಖಾತೆಯನ್ನು ನೀಡಲಾಗಿದೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಇಂಧನ ಖಾತೆ ನೀಡಲಾಗಿದೆ. ನಿತಿನ್ ಗಡ್ಕರಿ ಅವರು ರಸ್ತೆ ಸಾರಿಗೆ ಸಚಿವರಾಗಿ ಮುಂದುವರಿಯಲಿದ್ದು, ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಶಿಕ್ಷಣ ಖಾತೆಯನ್ನು ಉಳಿಸಿಕೊಳ್ಳಲಿದ್ದಾರೆ.
ಕಿರಣ್ ರಿಜಿಜು ಅವರನ್ನು ಭೂ ವಿಜ್ಞಾನ ಸಚಿವಾಲಯದಿಂದ ಸಂಸದೀಯ ವ್ಯವಹಾರಗಳ ಸಚಿವಾಲಯಕ್ಕೆ ವರ್ಗಾಯಿಸಲಾಗಿದ್ದು, ಅರ್ಜುನ್ ರಾಮ್ ಮೇಘವಾಲ್ ಅವರನ್ನು ಕಾನೂನು ಸಚಿವರಾಗಿ ಮುಂದುವರಿಸಲಾಗಿದೆ. ಸರ್ಬಾನಂದ ಸೋನೊವಾಲ್ ಹಡಗು ಖಾತೆಯನ್ನು ಉಳಿಸಿಕೊಂಡಿದ್ದಾರೆ. ಉತ್ತರ ಗೋವಾದಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಶ್ರೀಪಾದ್ ಯೆಸ್ಸೊ ನಾಯಕ್ ಅವರನ್ನು ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯಗಳ ರಾಜ್ಯ ಸಚಿವರಾಗಿ ನೇಮಿಸಲಾಗಿದೆ.
ಯಾರಿಗೆ ಯಾವ ಖಾತೆ ಎಂಬುದರ ಸಂಪೂರ್ಣ ಪಟ್ಟಿ
ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದುಕೊಂಡು, ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಖಾತೆ, ಅಟೋಮಿಕ್ ಎನರ್ಜಿ, ಬಾಹ್ಯಾಕಾಶ ಇಲಾಖೆಗಳ ಹೊಣೆಗಾರಿಕೆ ಹೊಂದಿದ್ದಾರೆ. ಇದಲ್ಲದೆ, ಎಲ್ಲ ಪ್ರಮುಖ ನೀತಿ ನಿರೂಪಣೆ ವಿಷಯಗಳು ಮತ್ತು ಯಾವುದೇ ಸಚಿವರಿಗೆ ಹಂಚದೇ ಇರುವ ಖಾತೆಗಳ ಹೊಣೆಗಾರಿಕೆಯನ್ನೂ ಹೊಂದಿದ್ದಾರೆ.
- ರಾಜನಾಥ್ ಸಿಂಗ್ - ರಕ್ಷಣಾ ಇಲಾಖೆ
- ಅಮಿತ್ ಶಾ - ಗೃಹ ಖಾತೆ, ಸಹಕಾರ ಖಾತೆ ಸಚಿವ
- ನಿತಿನ್ ಜೈರಾಮ್ ಗಡ್ಕರಿ - ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ
- ಜೆಪಿ ನಡ್ಡಾ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
- ಶಿವರಾಜ್ ಸಿಂಗ್ ಚೌಹಾಣ್ - ಕೃಷಿ ಮತ್ತು ಕೃಷಿಕ ಕಲ್ಯಾಣ ಸಚಿವಾಲಯ, ಗ್ರಾಮೀಣ ಅಭಿವೃದ್ಧಿ ಸಚಿವಾಲಯ
- ನಿರ್ಮಲಾ ಸೀತಾರಾಮನ್ - ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಇಲಾಖೆ
- ಡಾ.ಸುಬ್ರಮಣ್ಯಂ ಜೈಶಂಕರ್ - ವಿದೇಶಾಂಗ ವ್ಯವಹಾರಗಳ ಸಚಿವ
- ಮನೋಹರ್ ಲಾಲ್ ಖಟ್ಟರ್ - ಇಂಧನ, ವಸತಿ ಮತ್ತು ನಗರಾಭಿವೃದ್ಧಿ
- ಹೆಚ್‌ಡಿ ಕುಮಾರಸ್ವಾಮಿ - ಬೃಹತ್ ಕೈಗಾರಿಕೆ ಮತ್ತು ಉಕ್ಕು ಇಲಾಖೆ ಸಚಿವ
- ಪಿಯೂಷ್ ಗೋಯಲ್ - ವಾಣಿಜ್ಯ ಮತ್ತು ಕೈಗಾರಿಕಾ ಸಚಿವ
- ಧರ್ಮೇಂದ್ರ ಪ್ರಧಾನ್ - ಶಿಕ್ಷಣ ಸಚಿವ
- ಜಿತನ್ ರಾಮ್ ಮಾಂಝಿ - ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ
- ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ - ಪಂಚಾಯತ್ ರಾಜ್ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೈರಿ
- ಸರ್ಬಾನಂದ ಸೋನೊವಾಲ್ - ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ
- ಡಾ. ವೀರೇಂದ್ರ ಕುಮಾರ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ
- ರಾಮಮೋಹನ್ ನಾಯ್ಡು - ನಾಗರಿಕ ವಿಮಾನಯಾನ ಸಚಿವಾಲಯ
- ಪ್ರಲ್ಹಾದ್ ಜೋಶಿ - ಆಹಾರ ಮತ್ತು ನಾಗರಿಕ ಇಲಾಖೆ, ನವೀಕರಿಸಬಹುದಾದ ಇಂಧನ
- ಜುಯಲ್ ಓರಾಮ್ - ಬುಡಕಟ್ಟು ವ್ಯವಹಾರಗಳ ಸಚಿವ
- ಗಿರಿರಾಜ್ ಸಿಂಗ್ - ಜವಳಿ ಸಚಿವ
- ಅಶ್ವಿನಿ ವೈಷ್ಣವ್ - ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಮಾಹಿತಿ ಮತ್ತು ಪ್ರಸಾರ ಖಾತೆ
- ಜ್ಯೋತಿರಾದಿತ್ಯ ಸಿಂದಿಯಾ - ದೂರಸಂಪರ್ಕ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ
- ಭೂಪೇಂದರ್ ಯಾದವ್ - ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ
- ಗಜೇಂದ್ರ ಸಿಂಗ್ ಶೇಖಾವತ್ - ಸಂಸ್ಕೃತಿ ಮತ್ತು ಪ್ರವಾಸೋದ್ಯಮ
- ಅನ್ನಪೂರ್ಣಾ ದೇವಿ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ
- ಕಿರಣ್ ರಿಜಿಜು - ಸಂಸದೀಯ ವ್ಯವಹಾರಗಳ ಸಚಿವಾಲಯ
- ಹರ್ದೀಪ್ ಸಿಂಗ್ ಪುರಿ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ
- ಮನ್ಸುಖ್ ಮಾಂಡವೀಯ - ಕಾರ್ಮಿಕ ಮತ್ತು ಉದ್ಯೋಗ, ಯುವ ವ್ಯವಹಾರಗಳು ಮತ್ತು ಕ್ರೀಡಾ ಖಾತೆ
- ಜಿ ಕಿಶನ್ ರೆಡ್ಡಿ - ಕಲ್ಲಿದ್ದಲು, ಗಣಿಗಾರಿಕೆ ಸಚಿವ\
- ಚಿರಾಗ್ ಪಾಸ್ವನ್ - ಆಹಾರ ಸಂಸ್ಕರಣಾ ಕೈರಿಗಾರಿಕೆಗಳ ಸಚಿವ
- ಸಿ ಆರ್ ಪಾಟೀಲ್ - ಜಲಶಕ್ತಿ ಸಚಿವ
ಸ್ವತಂತ್ರ ಖಾತೆ ಸಚಿವರು
- ರಾವ್ ಇಂದ್ರಜಿತ್ ಸಿಂಗ್ - ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಖಾತೆ), ಯೋಜನಾ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಖಾತೆ) ಹಾಗೂ ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವರು.
- ಡಾ. ಜಿತೇಂದ್ರ ಸಿಂಗ್ - ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಖಾತೆ), ಭೂ ವಿಜ್ಞಾನ ಸಚಿವಾಲಯದ ರಾಜ್ಯ ಮಂತ್ರಿ (ಸ್ವತಂತ್ರ ಖಾತೆ), ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಸಚಿವರು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ರಾಜ್ಯ ಸಚಿವರು, ಪರಮಾಣು ಶಕ್ತಿ ಇಲಾಖೆಯಲ್ಲಿ ರಾಜ್ಯ ಸಚಿವರು; ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ರಾಜ್ಯ ಸಚಿವರು.
- ಅರ್ಜುನ್ ರಾಮ್ ಮೇಘವಾಲ್ - ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಖಾತೆ) ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು
- ಪ್ರತಾಪ್‌ರಾವ್ ಗಣಪತ್ ರಾವ್ ಜಾಧವ್ - ಆಯುಷ್ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಖಾತೆ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು
- ಜಯಂತ್ ಚೌಧರಿ - ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಖಾತೆ) ಮತ್ತು ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರು
ರಾಜ್ಯ ಖಾತೆ ಸಚಿವರ ವಿವರ
1. ಜಿತಿನ್ ಪ್ರಸಾದ - ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರು
2. ಶ್ರೀಪಾದ್ ಯೆಸ್ಸೋ ನಾಯ್ಕ್ - ವಿದ್ಯುತ್ ಖಾತೆ ಮತ್ತು
ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಖಾತೆ
3. ಪಂಕಜ್ ಚೌಧರಿ - ಹಣಕಾಸು ಸಚಿವಾಲಯದ ರಾಜ್ಯ ಖಾತೆ
4. ಕೃಷ್ಣ ಪಾಲ್ - ಸಹಕಾರ ಸಚಿವಾಲಯದ ರಾಜ್ಯ ಖಾತೆ
5. ರಾಮದಾಸ್ ಅಠವಳೆ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಖಾತೆ
6. ರಾಮ್‌ನಾಥ್ ಠಾಕೂರ್ - ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಖಾತೆ
7. ನಿತ್ಯಾನಂದ ರಾಯ್ - ಗೃಹ ಸಚಿವಾಲಯದ ರಾಜ್ಯ ಖಾತೆ
8. ಅನುಪ್ರಿಯಾ ಪಟೇಲ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಖಾತೆ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ರಾಜ್ಯ ಖಾತೆ
9. ವಿ.ಸೋಮಣ್ಣ ಜಲ ಶಕ್ತಿ ಸಚಿವಾಲಯದ ರಾಜ್ಯ ಖಾತೆ ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಖಾತೆ
10. ಡಾ. ಚಂದ್ರಶೇಖರ್ ಪೆಮ್ಮಸಾನಿ - ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಖಾತೆ ಮತ್ತು ಸಂವಹನ ಸಚಿವಾಲಯದ ರಾಜ್ಯ ಸಚಿವರು
11. ಪ್ರೊ.ಎಸ್.ಪಿ.ಸಿಂಗ್ ಬಘೇಲ್ - ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಖಾತೆ ಸಚಿವರು; ಮತ್ತು ಪಂಚಾಯತ್ ರಾಜ್ ಸಚಿವಾಲಯದ ರಾಜ್ಯ ಖಾತೆ
12. ಶೋಭಾ ಕರಂದ್ಲಾಜೆ - ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಖಾತೆ ಸಚಿವರು ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಖಾತೆ
13. ಕೀರ್ತಿವರ್ಧನ್ ಸಿಂಗ್ - ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಖಾತೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು
14. ಬಿ.ಎಲ್. ವರ್ಮಾ - ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಖಾತೆ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಖಾತೆ
15. ಶಂತನು ಠಾಕೂರ್ - ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ರಾಜ್ಯ ಖಾತೆ
16. ಸುರೇಶ್ ಗೋಪಿ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಖಾತೆ ಮತ್ತು ಪ್ರವಾಸೋದ್ಯಮ ಸಚಿವಾಲಯದ ರಾಜ್ಯ ಖಾತೆ
17. ಡಾ. ಎಲ್. ಮುರುಗನ್ - ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಖಾತೆ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವರು
18. ಅಜಯ್ ತಮ್ತಾ - ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಖಾತೆ
19. ಬಂಡಿ ಸಂಜಯ್ ಕುಮಾರ್ - ಗೃಹ ಸಚಿವಾಲಯದ ರಾಜ್ಯ ಖಾತೆ
20. ಕಮಲೇಶ್ ಪಾಸ್ವಾನ್ - ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಖಾತೆ
21. ಭಗೀರಥ ಚೌಧರಿ - ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಖಾತೆ
22. ಸತೀಶ್ ಚಂದ್ರ ದುಬೆ - ಕಲ್ಲಿದ್ದಲು ಸಚಿವಾಲಯದ ರಾಜ್ಯ ಖಾತೆ ಮತ್ತು
ಗಣಿ ಸಚಿವಾಲಯದ ರಾಜ್ಯ ಖಾತೆ
23. ಸಂಜಯ್ ಸೇಠ್ - ರಕ್ಷಣಾ ಸಚಿವಾಲಯದ ರಾಜ್ಯ ಖಾತೆ
24. ರವನೀತ್ ಸಿಂಗ್ - ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಖಾತೆ ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಖಾತೆ
25. ದುರ್ಗಾದಾಸ್ ಉಯಿಕೆ - ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ
26. ರಕ್ಷಾ ನಿಖಿಲ್ ಖಡ್ಸೆ - ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಖಾತೆ
27. ಸುಕಾಂತ ಮಜುಂದಾರ್- ಶಿಕ್ಷಣ ಸಚಿವಾಲಯದಲ್ಲಿ ರಾಜ್ಯ ಖಾತೆ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ರಾಜ್ಯ ಖಾತೆ
28. ಸಾವಿತ್ರಿ ಠಾಕೂರ್ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ರಾಜ್ಯ ಖಾತೆ
29. ತೋಖನ್ ಸಾಹು - ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ
30. ರಾಜ್ ಭೂಷಣ್ ಚೌಧರಿ - ಜಲ ಶಕ್ತಿ ಸಚಿವಾಲಯದ ರಾಜ್ಯ ಖಾತೆ
31. ಭೂಪತಿ ರಾಜು ಶ್ರೀನಿವಾಸ ವರ್ಮ - ಭಾರೀ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಖಾತೆ ಮತ್ತು ಉಕ್ಕಿನ ಸಚಿವಾಲಯದ ರಾಜ್ಯ ಖಾತೆ
32. ಹರ್ಷ ಮಲ್ಹೋತ್ರಾ - ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ರಾಜ್ಯ ಖಾತೆ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಖಾತೆ
33. ನಿಮುಬೆನ್ ಜಯಂತಿಭಾಯಿ ಬಂಭನಿಯಾ - ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಖಾತೆ
34. ಮುರಳೀಧರ ಮೊಹೋಲ್ - ಸಹಕಾರ ಸಚಿವಾಲಯದ ರಾಜ್ಯ ಖಾತೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಖಾತೆ
35. ಜಾರ್ಜ್ ಕುರಿಯನ್ - ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ; ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಖಾತೆ
36. ಪಬಿತ್ರಾ ಮಾರ್ಗರಿಟಾ - ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಮತ್ತು ಜವಳಿ ಸಚಿವಾಲಯದ ರಾಜ್ಯ ಖಾತೆ
ರಾಷ್ಟ್ರಪತಿ ಭವನದಲ್ಲಿ ಭಾನುವಾರ (ಜೂನ್ 9) ನಡೆದ ಸಮಾರಂಭದಲ್ಲಿ ಮೋದಿ ಮತ್ತು 71 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)