IIIT Dharwad inauguration: ಸೆಪ್ಟೆಂಬರ್‌ 26ರಂದು ಐಐಐಟಿ ಧಾರವಾಡ ಹೊಸ ಕ್ಯಾಂಪಸ್‌ ಉದ್ಘಾಟನೆ, ರಾಷ್ಟ್ರಪತಿಯವರನ್ನು ಸ್ವಾಗತಿಸಲಿದೆ ರೋಬೋಟ್
ಕನ್ನಡ ಸುದ್ದಿ  /  ಕರ್ನಾಟಕ  /  Iiit Dharwad Inauguration: ಸೆಪ್ಟೆಂಬರ್‌ 26ರಂದು ಐಐಐಟಿ ಧಾರವಾಡ ಹೊಸ ಕ್ಯಾಂಪಸ್‌ ಉದ್ಘಾಟನೆ, ರಾಷ್ಟ್ರಪತಿಯವರನ್ನು ಸ್ವಾಗತಿಸಲಿದೆ ರೋಬೋಟ್

IIIT Dharwad inauguration: ಸೆಪ್ಟೆಂಬರ್‌ 26ರಂದು ಐಐಐಟಿ ಧಾರವಾಡ ಹೊಸ ಕ್ಯಾಂಪಸ್‌ ಉದ್ಘಾಟನೆ, ರಾಷ್ಟ್ರಪತಿಯವರನ್ನು ಸ್ವಾಗತಿಸಲಿದೆ ರೋಬೋಟ್

ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಧಾರವಾಡದ (ಐಐಐಟಿ- ಧಾರವಾಡ) ನೂತನ ಕ್ಯಾಂಪಸ್‌ ನಾಡಿದ್ದು, ಅಂದರೆ ಸೆಪ್ಟೆಂಬರ್‌ 26ರಂದು ಉದ್ಘಾಟನೆಗೊಳ್ಳಲ್ಲಿದೆ. ಧಾರವಾಡದ ತಡಸಿನಕಪ್ಪ ಲೇಔಟ್‌ನಲ್ಲಿ ನಿರ್ಮಾಣಗೊಂಡಿರುವ ಈ ನೂತನ ಕ್ಯಾಂಪಸ್‌ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದಾರೆ.

<p>ಸೆಪ್ಟೆಂಬರ್‌ 26ರಂದು ಐಐಐಟಿ ಧಾರವಾಡ ಹೊಸ ಕ್ಯಾಂಪಸ್‌ ಉದ್ಘಾಟನೆ</p>
ಸೆಪ್ಟೆಂಬರ್‌ 26ರಂದು ಐಐಐಟಿ ಧಾರವಾಡ ಹೊಸ ಕ್ಯಾಂಪಸ್‌ ಉದ್ಘಾಟನೆ

ಧಾರವಾಡ: ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಧಾರವಾಡದ (ಐಐಐಟಿ- ಧಾರವಾಡ) ನೂತನ ಕ್ಯಾಂಪಸ್‌ ನಾಡಿದ್ದು, ಅಂದರೆ ಸೆಪ್ಟೆಂಬರ್‌ 26ರಂದು ಉದ್ಘಾಟನೆಗೊಳ್ಳಲ್ಲಿದೆ. ಧಾರವಾಡದ ತಡಸಿನಕಪ್ಪ ಲೇಔಟ್‌ನಲ್ಲಿ ನಿರ್ಮಾಣಗೊಂಡಿರುವ ಈ ನೂತನ ಕ್ಯಾಂಪಸ್‌ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದಾರೆ.

"ಎಸ್‌ಪಿಜಿ ತಂಡವು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದೆ. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇವಲ 700 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಈ ಕ್ಯಾಂಪಸ್‌ಗೆ ಭೂಮಿ ನೀಡಿರುವ ರೈತರನ್ನು ಕಾರ್ಯಕ್ರಮದಲ್ಲಿ ಆಹ್ವಾನಿಸಲಾಗುತ್ತದೆʼʼ ಎಂದು ಶಾಸಕ ಅರವಿಂದ್‌ ಬೆಲ್ಲದ್‌ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮವು ನಾಡಿದ್ದು ಅಪರಾಹ್ನ ಮೂರು ಗಂಟೆಗೆ ಆರಂಭಗೊಂಡು ನಾಲ್ಕು ಗಂಟೆಗೆ ಮುಗಿಯಲಿದೆ. ದ್ರೌಪದಿ ಮುರ್ಮು ಅವರು ಮಧ್ಯಾಹ್ನವೇ ಐಐಐಟಿಗೆ ಆಗಮಿಸಿ ಅಲ್ಲೇ ಭೋಜನ ಮಾಡಲಿದ್ದಾರೆ. ಬಳಿಕ ಐಐಐಟಿ-ಧಾರವಾಡವನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ಗಣ್ಯರು ವೇದಿಕೆಯಲ್ಲಿ ಇರಲಿದ್ದಾರೆʼʼ ಎಂದು ಅವರು ಹೇಳಿದ್ದಾರೆ.

ರಾಷ್ಟ್ರಪತಿಯವರ ಊಟಕ್ಕೆ ನಿಗದಿತ ಮೆನುವನ್ನು ರಾಷ್ಟ್ರಪತಿ ಕಚೇರಿಯವರು ನೀಡಿದ್ದಾರೆ. ಹೀಗಿದ್ದರೂ, ಉತ್ತರ ಕರ್ನಾಟಕದ ಒಂದಿಷ್ಟು ತಿನಿಸುಗಳನ್ನು ಮಾಡಿಸಲಾಗುತ್ತದೆ. ರಾಷ್ಟ್ರಪತಿ ಬಯಸಿದರೆ ಉತ್ತರ ಕರ್ನಾಟಕದ ತಿನಿಸುಗಳನ್ನು ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಕೋವಿಡ್‌-೧೯ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರ್ಯಕ್ರಮದ ವೇದಿಕೆಯಲ್ಲಿ ಭಾಗವಹಿಸಲು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಇದೇ ಸಂದರ್ಭದಲ್ಲಿ ರಾಷ್ಟ್ರಪತಿಗಳ ಕಾರ್ಯಕ್ರಮಕ್ಕೆ ನಾನು ಗೌನ್‌ ಹಾಕುವುದಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಮಹಾಪೌರ ಈರೇಶ್‌ ಅಂಚಟಗೇರಿ ಹೇಳಿದ್ದಾರೆ. ಗೌನ್‌ ಧರಿಸುವುದು ಬ್ರಿಟಿಷ್‌ ಸಂಸ್ಕೃತಿ. ಸರಕಾರ ಗೌನ್‌ ಹಾಕಲೇಬೇಕು ಎಂದು ತಿಳಿಸಿದರೆ ಮಾತ್ರ ಹಾಕುವೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರಪತಿಯವರಿಗೆ ರೋಬೋಟ್‌ ಸ್ವಾಗತ

<p>ಸೆಪ್ಟೆಂಬರ್‌ 26ರಂದು ಐಐಐಟಿ ಧಾರವಾಡ ಹೊಸ ಕ್ಯಾಂಪಸ್‌ ಉದ್ಘಾಟನೆ</p>
ಸೆಪ್ಟೆಂಬರ್‌ 26ರಂದು ಐಐಐಟಿ ಧಾರವಾಡ ಹೊಸ ಕ್ಯಾಂಪಸ್‌ ಉದ್ಘಾಟನೆ

ನೂತನ ಐಐಐಟಿ ಧಾರವಾಡವನ್ನು ಉದ್ಘಾಟಿಸಲು ಆಗಮಿಸುವ ರಾಷ್ಟ್ರಪತಿಯವರನ್ನು ಸ್ವಾಗತಿಸಲು ರೋಬೊವೊಂದು ಸಿದ್ಧವಾಗಿದೆ. ಇದರೊಂದಿಗೆ ರಿಮೋಟ್‌ ಮೂಲಕ ಐಐಟಿ ಉದ್ಘಾಟನೆ ಮಾಡುವ ಕುರಿತೂ ಆಲೋಚಿಸಲಾಗುತ್ತಿದೆ. ರಾಷ್ಟ್ರಪತಿಯವರಿಗೆ ಈ ರಿಮೋಟ್‌ ಅನ್ನು ರೋಬೋಟ್‌ ಮೂಲಕ ನೀಡುವ ಯೋಚನೆಯೂ ಇದೆ ಎನ್ನಲಾಗಿದೆ.

Whats_app_banner