Nirmala Sitharaman: ಚೆನ್ನೈನ ಲೋಕಲ್‌ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಬಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌! ವಿಡಿಯೋ ವೈರಲ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nirmala Sitharaman: ಚೆನ್ನೈನ ಲೋಕಲ್‌ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಬಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌! ವಿಡಿಯೋ ವೈರಲ್

Nirmala Sitharaman: ಚೆನ್ನೈನ ಲೋಕಲ್‌ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಬಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌! ವಿಡಿಯೋ ವೈರಲ್

Nirmala Sitharaman: ಚೆನ್ನೈನ ಲೋಕಲ್‌ ಮಾರ್ಕೆಟ್‌ನಲ್ಲಿ ತರಕಾರಿ ಖರೀದಿಗೆ ಆಗಮಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಜನ ಸಾಮಾನ್ಯರ ಗಮನಸೆಳೆದರು. ಇದರ ವಿಡಿಯೋ ವೈರಲ್‌ ಇಲ್ಲಿದೆ ಗಮನಿಸಿ.

<p>ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚೆನ್ನೈನ ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಆಗಮಿಸಿ, ಜನರ ಗಮನಸೆಳೆದರು.&nbsp;</p>
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚೆನ್ನೈನ ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಆಗಮಿಸಿ, ಜನರ ಗಮನಸೆಳೆದರು.&nbsp; (ANI)

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನಿನ್ನೆ ಚೈನ್ನನಲ್ಲಿದ್ದರು. ಒಂದು ದಿನದ ಪ್ರವಾಸಕ್ಕೆ ಆಗಮಿಸಿದ್ದ ಅವರು, ಅನಿರೀಕ್ಷಿತವಾಗಿ ಚೆನ್ನೈನ ಲೋಕಲ್‌ ಮಾರ್ಕೆಟ್‌ಗೆ ಹೋಗಿದ್ದರು. ಅಲ್ಲಿ, ಜನಸಾಮಾನ್ಯರ ನಡುವೆ ತರಕಾರಿ ಖರೀದಿ ಮಾಡಿದರು. ಲೋಕಲ್‌ ವೆಂಡರ್‌ಗಳ ಜತೆಗೆ ಮತ್ತು ಸ್ಥಳೀಯರ ಜತೆಗೂ ಮಾತನಾಡಿದರು. ಈ ವಿಡಿಯೋ ವೈರಲ್‌ ಆಗಿದ್ದು, ದೇಶದ ಗಮನಸೆಳೆದಿದೆ.

ಮೈಲಾಪುರ ಮಾರ್ಕೆಟ್‌ನಲ್ಲೆ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕಾಣಿಸಿಕೊಂಡದ್ದು. ಅವರು ತರಕಾರಿ ಖರೀದಿ ಮಾಡುತ್ತಿರುವ ಮತ್ತು ಜನಸಾಮಾನ್ಯರ ಜತೆಗೆ ಮಾತನಾಡುತ್ತಿರುವ ದೃಶ್ಯದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

"ಚೆನ್ನೈಗೆ ತನ್ನ ದಿನದ ಭೇಟಿಯ ಸಮಯದಲ್ಲಿ, ಶ್ರೀಮತಿ ನಿರ್ಮಲಾ ಸೀತಾರಾಮನ್‌ (@nsitharaman) ಅವರು ಮೈಲಾಪುರ ಮಾರುಕಟ್ಟೆಯಲ್ಲಿ ಮಾರಾಟಗಾರರು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿದರು ಮತ್ತು ತರಕಾರಿಗಳನ್ನು ಖರೀದಿಸಿದರು" ಎಂದು ಹಣಕಾಸು ಸಚಿವರ ಕಚೇರಿಯ ಟ್ವೀಟ್ ತಿಳಿಸಿದೆ.

ಅವರ ಈ ವಿಡಿಯೋದ ಕೆಳಗೆ ಒಬ್ಬ ಟ್ವಿಟರ್‌ ಬಳಕೆದಾರ, ಏನು ಡೌನ್‌ ಟು ಅರ್ಥ್‌ ಅಪ್ರೋಚ್‌ ಮೇಡಂ ಫೈನಾನ್ಸ್‌ ಮಿನಿಸ್ಟರ್.‌ ನನಗೆ ಗೊತ್ತಿರುವ ಮಟ್ಟಿಗೆ ಯಾವುದೇ ಹಣಕಾಸು ಸಚಿವರು ತರಕಾರಿ ವ್ಯಾಪಾರಿ ಬಳಿ ಬಂದು ನೇರ ತರಕಾರಿ ಖರೀದಿಸಿದ್ದು ಗೊತ್ತಿಲ್ಲ. ನಿಮ್ಮ ನಡವಳಿಕೆಯು ನಮ್ಮನ್ನು ಸುರಕ್ಷಿತ ಭಾವನೆಯಲ್ಲಿ ಇರಿಸಿವೆ ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನೊಬ್ಬ ಬಳಕೆದಾರನ ಪ್ರಕಾರ, ಅದರಲ್ಲಿ ಅತಿಶಯವಾದ್ದು ಏನೂ ಇಲ್ಲ. “ಇದರಲ್ಲಿ ಅನಿರೀಕ್ಷಿತವಾದ್ದು ಏನಿದೆ? ನಾವು ಭಾರತದಲ್ಲಿ ಜನಸೇವಕರನ್ನು ದೇವರ ಸ್ಥಾನಕ್ಕೆ ಏರಿಸಿಬಿಟ್ಟಿದ್ದೇವೆ. ಇದಕ್ಕೆ ಅಪವಾದವೆನಿಸುವಂಥವು ಗೋಚರಿಸಿದಾಗ ಅಚ್ಚರಿ ವ್ಯಕ್ತಪಡಿಸುತ್ತೇವೆ. ವಾಸ್ತವದಲ್ಲಿ ರಾಜಕಾರಣಿಗಳು ಕೂಡ ಸಾಮಾನ್ಯರ ಬದುಕು ಬದುಕಲೇ ಬೇಕು. ಆದರೆ, ಭಾರತೀಯ ಲೋಕತಂತ್ರದ ಮಾಯೆಯೇ ವಿಭಿನ್ನವಾದುದು” ಎಂದು ಬರೆದುಕೊಂಡಿದ್ದಾರೆ.

ಚೆನ್ನೈನಲ್ಲಿ ನಿರ್ಮಲಾ ಸೀತಾರಾಮನ್‌ ಕಾರ್ಯಕ್ರಮ ಏನಿತ್ತು?

ನಿರ್ಮಲಾ ಸೀತಾರಾಮನ್ ಅವರು ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ತಮಿಳುನಾಡಿನ ಅಂಬತ್ತೂರು ಜಿಲ್ಲೆಯ ಚೆನ್ನೈನಲ್ಲಿ ಬಹುಶಿಸ್ತೀಯ "ಆನಂದ ಕರುಣಾ ವಿದ್ಯಾಲಯಮ್" ಅನ್ನು ತೆರೆದರು. ವಿಶೇಷ ಆರೈಕೆಯನ್ನು ಪಡೆಯಲು ಸಾಧ್ಯವಾಗದ ಕುಟುಂಬಗಳಿಗೆ ಸಹಾಯ ಮಾಡುವುದರ ಮೇಲೆ ಕೇಂದ್ರೀಕರಿಸಿ, ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಸ್ವಲೀನತೆ, ಡಿಸ್ಲೆಕ್ಸಿಯಾ ಮತ್ತು ನಿಧಾನಗತಿಯ ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಮಕ್ಕಳಿಗಾಗಿ ಕಲಿಕಾ ಕೇಂದ್ರವನ್ನು 2018 ರಲ್ಲಿ ಸ್ಥಾಪಿಸಲಾಗಿದೆ.

ನಿರ್ಮಲಾ ಸೀತಾರಾಮನ್‌ ಅವರ ಕಚೇರಿ ಮಾಡಿರುವ ಟ್ವೀಟ್‌ ಪ್ರಕಾರ, ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೇಕ್ಷಕರ ಜತೆಗೂ ಮಾತುಕತೆ ನಡೆಸಿದ್ದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.