ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ ಅಲ್ಲದೆ, ಟಿ20 ಕ್ರಿಕೆಟ್ ಚರಿತ್ರೆಯಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ ಎಸ್​ಆರ್​ಹೆಚ್; ಈ ದಾಖಲೆ ಬರೆದ ವಿಶ್ವದ ಮೊದಲ ತಂಡ

ಐಪಿಎಲ್ ಅಲ್ಲದೆ, ಟಿ20 ಕ್ರಿಕೆಟ್ ಚರಿತ್ರೆಯಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ ಎಸ್​ಆರ್​ಹೆಚ್; ಈ ದಾಖಲೆ ಬರೆದ ವಿಶ್ವದ ಮೊದಲ ತಂಡ

  • Sunrisers Hyderabad : ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 266 ರನ್ ಗಳಿಸುವ ಮೂಲಕ ಸನ್​ರೈಸರ್ಸ್ ಹೈದರಾಬಾದ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿತು.

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶನಿವಾರ (ಏಪ್ರಿಲ್ 20) ನಡೆದ ಐಪಿಎಲ್​​ನಲ್ಲಿ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್​​ರೈಸರ್ಸ್ ಹೈದರಾಬಾದ್ ವಿನಾಶಕಾರಿ ಬ್ಯಾಟಿಂಗ್ ಮಾಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಸ್​ಆರ್​ಹೆಚ್​ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿತು. ಇದರೊಂದಿಗೆ ಐಪಿಎಲ್​ ಮಾತ್ರವಲ್ಲದೆ, ಒಟ್ಟಾರೆ ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಎಸ್ಆರ್​ಹೆಚ್​ ಹೊಸ ವಿಶ್ವದಾಖಲೆ ಬರೆದಿದೆ.
icon

(1 / 5)

ಹೈದರಾಬಾದ್ ತಂಡವು ಟಿ20 ಟೂರ್ನಮೆಂಟ್​ನಲ್ಲಿ 3 ಬಾರಿ 250 ರನ್ ಗಡಿ ದಾಟಿದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವದ ಬೇರೆ ಯಾವುದೇ ತಂಡವು ಈ ದಾಖಲೆಯನ್ನು ಹೊಂದಿಲ್ಲ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​​ನಂತಹ ತಂಡಗಳೇ ಈ ಸಾಧನೆಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಐಪಿಎಲ್ 2024ರಲ್ಲಿ ಸನ್​ರೈಸರ್ಸ್ ಮೊದಲು ಮುಂಬೈ ಇಂಡಿಯನ್ಸ್ ವಿರುದ್ಧ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ನಂತರ ಆರ್​ಸಿಬಿ ವಿರುದ್ಧ 3 ವಿಕೆಟ್ ನಷ್ಟಕ್ಕೆ 287 ರನ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿತು.
icon

(2 / 5)

ಸನ್​​ರೈಸರ್ಸ್ ಹೈದರಾಬಾದ್ ತಂಡವು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ 150 ರನ್ ಗಳಿಸಿದ ದಾಖಲೆ ನಿರ್ಮಿಸಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಸ್​ಆರ್​​ಹೆಚ್ 8.3 ಓವರ್ ಗಳಲ್ಲಿ 150 ರನ್ ಗಳಿಸಿತು. ಕೇವಲ 51 ಎಸೆತಗಳಲ್ಲಿ 150 ರನ್ ಗಡಿ ದಾಟಿತು. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ.
icon

(3 / 5)

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ 6 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 125 ರನ್ ಗಳಿಸಿದೆ. ಐಪಿಎಲ್ ಮಾತ್ರವಲ್ಲ, ಟಿ20 ಕ್ರಿಕೆಟ್​​​ ಇತಿಹಾಸದಲ್ಲಿ ಎಸ್​ಆರ್​ಹೆಚ್ ಪವರ್​​​ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾರ್ವಕಾಲಿಕ ದಾಖಲೆ ನಿರ್ಮಿಸಿತು.
icon

(4 / 5)

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ 5 ಓವರ್​​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 103 ರನ್ ಗಳಿಸಿತು. ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ 100 ರನ್ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಹೈದರಾಬಾದ್ ಪಾತ್ರವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್​​​ನಲ್ಲಿ 30 ಎಸೆತಗಳಲ್ಲಿ 100 ರನ್ ಗಡಿ ದಾಟಿದ ಘಟನೆ ಹಿಂದೆಂದೂ ನಡೆದಿಲ್ಲ.
icon

(5 / 5)

IPL_Entry_Point

ಇತರ ಗ್ಯಾಲರಿಗಳು