ಕನ್ನಡ ಸುದ್ದಿ  /  ಕ್ರೀಡೆ  /  ದಾಖಲೆಯ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್; ಜಾಸ್ಮಿನ್ ಪಾವೊಲಿನಿಗೆ ಚೊಚ್ಚಲ ಟ್ರೋಫಿ ಕನಸು ಭಗ್ನ

ದಾಖಲೆಯ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್; ಜಾಸ್ಮಿನ್ ಪಾವೊಲಿನಿಗೆ ಚೊಚ್ಚಲ ಟ್ರೋಫಿ ಕನಸು ಭಗ್ನ

French Open 2024 : 2024ರ ಫ್ರೆಂಚ್ ಓಪನ್ ಫೈನಲ್ ಪಂದ್ಯದಲ್ಲಿ ಪೋಲೆಂಡ್‌ ಇಗಾ ಸ್ವಿಯಾಟೆಕ್ ಅವರು ಜಾಸ್ಮಿನ್ ಪಾವೊಲಿನಿ ಅವರನ್ನು ಮಣಿಸಿ ಸತತ ಮೂರನೇ ಟ್ರೋಫಿಯನ್ನು ಗೆದ್ದುಕೊಂಡಿದೆ.

ದಾಖಲೆಯ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್; ಜಾಸ್ಮಿನ್ ಪಾವೊಲಿನಿಗೆ ಚೊಚ್ಚಲ ಟ್ರೋಫಿ ಕನಸು ಭಗ್ನ
ದಾಖಲೆಯ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್; ಜಾಸ್ಮಿನ್ ಪಾವೊಲಿನಿಗೆ ಚೊಚ್ಚಲ ಟ್ರೋಫಿ ಕನಸು ಭಗ್ನ

ವಿಶ್ವ ಶ್ರೇಯಾಂಕದ ನಂಬರ್​ 1 ಆಟಗಾರ್ತಿ ಪೋಲೆಂಡ್‌ನ‌ ಇಗಾ ಸ್ವಿಯಾಟೆಕ್‌ (Iga Swiatek) ಅವರು 2024ರ ಫ್ರೆಂಚ್‌ ಓಪನ್‌ (French Open Final 2024) ಟೂರ್ನಿಯಲ್ಲಿ ಸತತ ಮೂರನೇ ಬಾರಿಗೆ ಚಾಂಪಿಯನ್ ಆಗಿದ್ದಾರೆ. ಜೂನ್ 8ರ ಶನಿವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 12ನೇ ಶ್ರೇಯಾಂಕದ ಜಾಸ್ಮಿನ್ ಪಾವೊಲಿನಿ ಅವರನ್ನು ಸೋಲಿಸುವ ಮೂಲಕ ಇಗಾ ಸ್ವಿಯಾಟೆಕ್​ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಗಾ ಸ್ವಿಯಾಟೆಕ್ ಅವರಿಗಿದು ಫ್ರೆಂಚ್ ಓಪನ್​​ನಲ್ಲಿ ಹ್ಯಾಟ್ರಿಕ್​ ಪ್ರಶಸ್ತಿ ಮತ್ತು ವೃತ್ತಿ ಜೀವನದ 5ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಇದಾಗಿದೆ. ಫ್ರೆಂಚ್ ಓಪನ್​​​ನಲ್ಲಿ 4 ಮತ್ತು ಯುಎಸ್​ ಓಪನ್​ನಲ್ಲೂ ಒಂದು ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಸ್ವಿಯಾಟೆಕ್​ ಅವರ ಸ್ಫೋಟಕ ಆಟದೆದರು ಪಾವೊಲಿನಿ ಆಟ ಸಂಪೂರ್ಣ ಮಂಕಾಯಿತು. ಯಾವುದೇ ಕ್ಷಣದಲ್ಲೂ ಪೈಪೋಟಿ ನೀಡದ ಕಾರಣ ಪಾವೊಲಿನಿ 6-2, 6-1 ನೇರ ಸೆಟ್​ಗಳಿಂದ ಹೀನಾಯ ಸೋಲು ಅನುಭವಿಸಿದರು. 68 ನಿಮಿಷದಲ್ಲಿ ಈ ಪಂದ್ಯ ಅಂತ್ಯಗೊಂಡಿತು.

ದಾಖಲೆ ಬರೆದ ಸ್ವಿಯಾಟೆಕ್

ರೋಲ್ಯಾಂಡ್​ ಗ್ಯಾರಸ್​ನಲ್ಲಿ ಸ್ವಿಯಾಟೆಕ್‌ ಸತತ 21 ಪಂದ್ಯಗಳ ಅಜೇಯ ಓಟ ಮುಂದುವರಿಸಿ ಪ್ರಾಬಲ್ಯ ಸಾಧಿಸಿದ್ದಾರೆ. ಚೊಚ್ಚಲ ಗ್ರ್ಯಾಂಡ್​ ಸ್ಲಾಮ್​ ಫೈನಲ್​ ಪ್ರವೇಶಿಸಿದ್ದ ಇಟಲಿಯ 28 ವರ್ಷದ ಪಾವೊಲಿನಿ, ಮೊದಲ ಪ್ರಶಸ್ತಿ ಎತ್ತಿ ಹಿಡಿಯಿವ ನಿರೀಕ್ಷೆಯಲ್ಲಿದ್ದರು. ಆದರೆ ಇದಕ್ಕೆ ಸ್ವಿಯಾಟೆಕ್​ ಅವಕಾಶ ನೀಡಲಿಲ್ಲ. ಸ್ವಿಯಾಟೆಕ್​ 3 ವರ್ಷಗಳ ಕಾಲ ಟೂರ್ನಿಯನ್ನು ಜಯಿಸಿದ ಮೂರನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಬೆಲ್ಜಿಯಂ ಟೆನಿಸ್ ತಾರೆ ಹೆನಿನ್, 2005-07ರಲ್ಲಿ ಕೊನೆಯದಾಗಿ ಈ ಸಾಧನೆ ಮಾಡಿದ್ದರು. ಸರ್ಬಿಯಾದ ಮೋನಿಕಾ ಸೆಲೆಸ್ 1990ರ ದಶಕದ ಆರಂಭದಲ್ಲಿ ಈ ದಾಖಲೆ ಬರೆದಿದ್ದರು. ಅವರು ಐದು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಅತ್ಯಂತ ಕಿರಿಯ ಟೆನಿಸ್ ಆಟಗಾರ್ತಿಯಾದರು. ಮತ್ತು ಕೇವಲ 23 ನೇ ವಯಸ್ಸಿನಲ್ಲಿ ದಂತಕಥೆ ಮಾರಿಯಾ ಶರಪೋವಾ ಮತ್ತು ಮಾರ್ಟಿನಾ ಹಿಂಗಿಸ್ ಅವರ ಪ್ರಮುಖ ದಾಖಲೆಯನ್ನು ಸರಿಗಟ್ಟಿದರು.

ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ

ಕಳೆದ ಹತ್ತು ವರ್ಷಗಳಲ್ಲಿ ಸತತ 3 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಸ್ವಿಯಾಟೆಕ್ ಪಾತ್ರರಾಗಿದ್ದಾರೆ. ಲೆಜೆಂಡರಿ ಸೆರೆನಾ ವಿಲಿಯಮ್ಸ್ ಕೊನೆಯ ಬಾರಿಗೆ 2012-2014ರಲ್ಲಿ ಸತತ ಮೂರು ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದಿದ್ದರು. ಮತ್ತು ಮಾಜಿ ವಿಶ್ವದ ನಂ.1 ಜಸ್ಟಿನ್ ಹೆನಿನ್ ಕೊನೆಯದಾಗಿ 2005-07 ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಹ್ಯಾಟ್ರಿಕ್ ದಾಖಲಿಸಿದರು.

ಜ್ವೆರೆವ್ ಮತ್ತು ಅಲ್ಕರಾಜ್ ಫೈನಲ್

ಜೂನ್ 9ರಂದು ನಡೆಯುವ ಪುರುಷರ ಸಿಂಗಲ್ಸ್​ ಫೈನಲ್​​ನಲ್ಲಿ​ ವಿಶ್ವದ 3ನೇ ರ್ಯಾಂಕ್ ಕಾರ್ಲೋಸ್‌ ಅಲ್ಕರಾಜ್‌ ಮತ್ತು 4ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ಪ್ರಶಸ್ತಿಗೆ ಕಾದಾಟ ನಡೆಸಲಿದ್ದಾರೆ. ಅಲ್ಕರಾಜ್​ ಅವರಿಗಿದು ಚೊಚ್ಚಲ ಫ್ರೆಂಚ್​ ಓಪನ್​ ಫೈನಲ್​ ಆಗಿದೆ. 14 ಬಾರಿಯ ಚಾಂಪಿಯನ್​ ರಾಫೆಲ್​ ನಡಾಲ್​ ಮತ್ತು ಸರ್ಬಿಯಾದ ನೊವಾಕ್​ ಜೋಕೊವಿಕ್​ ಗಾಯದಿಂದಾಗಿ ಟೂರ್ನಿಯಿಂದ ಹೊರ ಬಿದ್ದ ನಂತರ ಅಲ್ಕರಾಜ್ ಪ್ರಶಸ್ತಿ ಜಯಿಸುವ ಫೇವರಿಟ್​ ಎನಿಸಿಕೊಂಡಿದ್ದಾರೆ.