ಕರ್ಮ ರಿಟರ್ನ್ಸ್‌ ಅಂದ್ರೆ ಇದೇ! ಪಕ್ಷಪಾತ, ಟಾಸ್ಕ್‌ ಸೋಲು, ಕೊನೆಗೆ ಬಾತ್‌ರೂಮ್‌ನಲ್ಲಿ ಚೈತ್ರಾ ಕುಂದಾಪುರ ಕಣ್ಣೀರು
ಕನ್ನಡ ಸುದ್ದಿ  /  ಮನರಂಜನೆ  /  ಕರ್ಮ ರಿಟರ್ನ್ಸ್‌ ಅಂದ್ರೆ ಇದೇ! ಪಕ್ಷಪಾತ, ಟಾಸ್ಕ್‌ ಸೋಲು, ಕೊನೆಗೆ ಬಾತ್‌ರೂಮ್‌ನಲ್ಲಿ ಚೈತ್ರಾ ಕುಂದಾಪುರ ಕಣ್ಣೀರು

ಕರ್ಮ ರಿಟರ್ನ್ಸ್‌ ಅಂದ್ರೆ ಇದೇ! ಪಕ್ಷಪಾತ, ಟಾಸ್ಕ್‌ ಸೋಲು, ಕೊನೆಗೆ ಬಾತ್‌ರೂಮ್‌ನಲ್ಲಿ ಚೈತ್ರಾ ಕುಂದಾಪುರ ಕಣ್ಣೀರು

ಈ ವಾರದ ಟಾಸ್ಕ್‌ನಲ್ಲಿ ಚೈತ್ರಾ ಕುಂದಾಪುರ ಅತ್ಯಂತ ಕೆಟ್ಟ ಆಟ ಆಡಿದ್ದಾರೆ. ನನಗೆ ಆಟ ಆಡಲು ಬರಲ್ಲ, ನಾನು ಬರೀ ಉಸ್ತುವಾರಿಗಷ್ಟೇ ಲಾಯಕ್ಕು ಎಂಬುದನ್ನು ಮತ್ತೆ ತೋರಿಸಿದ್ದಾರೆ. ಚೈತ್ರಾ ಅವರ ಈ ಒಂದು ನಡೆಯಿಂದ ಇಡೀ ತಂಡ ಸೋತು ಸುಣ್ಣವಾಯ್ತು. ಕೊನೆಗೆ ಟೀಕೆಗಳನ್ನು ಎದುರಿಸದೇ ಬಾತ್‌ರೂಮ್‌ ಸೇರಿಕೊಂಡು ಕಣ್ಣೀರಿಟ್ಟರು.

ಕರ್ಮ ರಿಟರ್ನ್ಸ್‌ ಅಂದ್ರೆ ಇದೇ! ಪಕ್ಷಪಾತ, ಟಾಸ್ಕ್‌ ಸೋಲು, ಕೊನೆಗೆ ಬಾತ್‌ರೂಮ್‌ನಲ್ಲಿ ಚೈತ್ರಾ ಕುಂದಾಪುರ ಕಣ್ಣೀರು
ಕರ್ಮ ರಿಟರ್ನ್ಸ್‌ ಅಂದ್ರೆ ಇದೇ! ಪಕ್ಷಪಾತ, ಟಾಸ್ಕ್‌ ಸೋಲು, ಕೊನೆಗೆ ಬಾತ್‌ರೂಮ್‌ನಲ್ಲಿ ಚೈತ್ರಾ ಕುಂದಾಪುರ ಕಣ್ಣೀರು (Chaitra Kundapura)

Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧೆ ಜೋರಾಗುತ್ತಿದೆ. ಫಿನಾಲೆ ಸಮೀಪಿಸುತ್ತಿದ್ದಂತೆ, ಸ್ಪರ್ಧಿಗಳ ಎದೆಯಲ್ಲೂ ನಡುಕ ಶುರುವಾಗಿದೆ. ಈ ನಡುವೆ ಬಿಗ್‌ ಬಾಸ್‌ ಮನೆಯಲ್ಲಿ ತಮ್ಮ ಮಾತುಗಳಿಂದಲೇ ಸದ್ದು ಜತೆಗೆ ಸುದ್ದಿಯಲ್ಲಿ ಇರುವವರು ಚೈತ್ರಾ ಕುಂದಾಪುರ. ಮಾತು ಮಾತಿಗೂ ಎದುರಿನವರಿಗೆ ಕಿರಿಕಿರಿ ಉಂಟು ಮಾಡುವ ಚೈತ್ರಾ, ಮಾನಸಿಕವಾಗಿ ನನ್ನನ್ನು ಕುಗ್ಗಿಸುವುದು ಅಸಾಧ್ಯ ಎಂದು ಕೂಗಿ ಕೂಗಿ ಹೇಳಿದ್ದರು. ಈಗ ಇದೇ ಚೈತ್ರಾ ಮಾನಸಿಕವಾಗಿ ಬಳಲಿ ಬೆಂಡಾಗಿದ್ದಾರೆ. ತಮ್ಮದೇ ಎಡವಟ್ಟಿನಿಂದ ಟಾಸ್ಕ್‌ ಸೋತು, ಇತರರ ಬಾಯಿಗೆ ಆಹಾರವಾಗಿದ್ದಾರೆ. ಇದೆಲ್ಲದರಿಂದ ಬೇಸತ್ತು, ನೇರವಾಗಿ ಬಾತ್‌ರೂಮ್‌ ಸೇರಿ ಕಣ್ಣೀರಿಟ್ಟಿದ್ದಾರೆ.

ಈ ವಾರದ ಟಾಸ್ಕ್‌ನಲ್ಲಿ ಚೈತ್ರಾ ಕುಂದಾಪುರ ಅತ್ಯಂತ ಕೆಟ್ಟ ಆಟ ಆಡಿದ್ದಾರೆ. ನನಗೆ ಆಟ ಆಡಲು ಬರಲ್ಲ, ನಾನು ಬರೀ ಉಸ್ತುವಾರಿಗಷ್ಟೇ ಲಾಯಕ್ಕು ಎಂಬುದನ್ನು ಮತ್ತೆ ತೋರಿಸಿದ್ದಾರೆ. ಉದ್ದನೆಯ ಕೋಲಿನ ಮೂಲಕ ಚೆಂಡನ್ನು ಇನ್ನೊಂದು ಕೋಲಿಗೆ ಸಾಗಿಸುವ ಟಾಸ್ಕ್‌ನಲ್ಲಿ ಏನಿಲ್ಲ ಅಂದರೂ 100 ಬಾರಿಯಾದರೂ ಪ್ರಯತ್ನಿಸಿದ್ದಾರೆ ಚೈತ್ರಾ. ಆದರೆ, ಒಂದೇ ಒಂದು ಸಲ ಅದನ್ನು ಸರಿಯಾಗಿ ಮಾಡಲಿಲ್ಲ. ಚೈತ್ರಾ ಅವರ ಈ ಒಂದು ನಡೆಯಿಂದ ಇಡೀ ತಂಡ ಸೋತು ಸುಣ್ಣವಾಯ್ತು. ಈ ವಾರದ ನಾಮಿನೇಷನ್‌ನಲ್ಲಿ ಸೇವ್‌ ಮಾಡುವ ಆಯ್ಕೆ ಎದುರಾಳಿ ತಂಡಕ್ಕೆ ಸಲೀಸಾಗಿ ಹೋಯ್ತು.

ಟಾಸ್ಕ್‌ನಲ್ಲೂ ಮುಂದುವರಿದ ಕೆಟ್ಟ ಪ್ರದರ್ಶನ

ಇದು ಟಾಸ್ಕ್‌ ವಿಚಾರ ಆದರೆ, ಉಸ್ತುವಾರಿ ವಹಿಸಿದಾಗಲೂ ಬೇಕು ಅಂತಲೇ ಎದುರಾಳಿ ತಂಡವನ್ನೇ ಟಾರ್ಗೇಟ್‌ ಮಾಡಿ, ನಿಯಮಗಳು ಇಲ್ಲದೇ ಹೋದರೂ, ಪೌಲ್‌ ಕೊಡುವ ಮೂಲಕವೇ ಇಡೀ ಆಟವನ್ನೇ ಹಾಳು ಮಾಡಿದ್ದೂ ಇದೇ ಚೈತ್ರಾ ಎಂಬುದು ವೀಕ್ಷಕರ ಅಭಿಪ್ರಾಯ. ಚೈತ್ರಾ ಅವರ ಆ ನಿರ್ಧಾರದಿಂದ ಇಡೀ ಆಟವನ್ನೇ ರದ್ದಾಯ್ತು. ಬಿಗ್‌ ಬಾಸ್‌ ಮನೆ ಮಂದಿ ಮಾತ್ರವಲ್ಲದೆ, ವೀಕ್ಷಕರಿಗೂ ಚೈತ್ರಾ ಅವರ ಈ ಆಟ ಅಸಹನೀಯ ಎನಿಸಿತು. ಕೂಗಾಟ, ಚೀರಾಟ ಬಿಟ್ಟು, ಅವರಿಂದ ನಿಯತ್ತಿನ ಆಟ ಕಾಣಲೇ ಇಲ್ಲ. ಉಸ್ತುವಾರಿ ವಿಚಾರದಲ್ಲಿಯೂ ಎಡವಿದ ಚೈತ್ರಾ, ಟಾಸ್ಕ್‌ನಲ್ಲಿಯೂ ಕೆಟ್ಟ ಪ್ರದರ್ಶನ ನೀಡಿದರು.

ಬಾತ್‌ರೂಮ್‌ನಲ್ಲಿ ಚೈತ್ರಾ ಕಣ್ಣೀರು..

ಟಾಸ್ಕ್‌ ಗೆದ್ದವರಿಗೆ ನಾಮಿನೇಷನ್‌ನಿಂದ ಒಬ್ಬರನ್ನು ಪಾರು ಮಾಡುವ ಅವಕಾಶ ಇದೆ ಎಂದು ಬಿಗ್‌ ಬಾಸ್‌ ಘೋಷಣೆ ಮಾಡುತ್ತಾರೆ. ಅಲ್ಲಿಗೆ, ಎರಡೂ ತಂಡಗಳ ಪೈಕಿ ರಜತ್‌ ಅವರ ತಂಡ ಮೂರು ಬಾಲ್‌ಗಳನ್ನು ನಿಗದಿತ ಸ್ಥಳಕ್ಕೆ ಹಾಕಿ ಜಯಶಾಲಿಯಾಗುತ್ತೆ. ಆದರೆ, ಇನ್ನೊಂದು ಬದಿಯಲ್ಲಿ ಚೈತ್ರಾ ಅವರಿಂದಲೇ ಶುರುವಾದ ಆಟ ಮುಂದುವರಿಯಲೇ ಇಲ್ಲ. ಒಂದೇ ಒಂದು ಚೆಂಡನ್ನೂ ಅವರು ಮುಂದಿನ ಸ್ಪರ್ಧಿಗೆ ಪಾಸ್‌ ಮಾಡಲಿಲ್ಲ. ಮಾಡಿದ್ದುಣ್ಣೋ ಮಾರಾಯ ಅನ್ನೋ ರೀತಿಯಲ್ಲಿ ತಮ್ಮ ತಂಡದಿಂದಲೇ ಅವರು ಟಾರ್ಗೆಟ್‌ ಆದರು. ಎಲ್ಲರಿಂದಲೂ ಟೀಕೆಗಳನ್ನು ಎದುರಿಸಿದರು. ಕೊನೆಗೆ ಬಾತ್‌ರೂಮ್‌ ಸೇರಿಕೊಂಡು ಕಣ್ಣೀರಿಟ್ಟರು.

ಇದು ಕರ್ಮದ ಫಲ

ಇತ್ತ ರಜತ್‌, ಐಶ್ವರ್ಯಾ ಚೈತ್ರಾ ಅವರನ್ನು ನೋಡಿ, ಇದು ಕರ್ಮದ ಫಲ ಎಂದು ಮಾತನಾಡಿಕೊಂಡರು. ಈ ವಾರ ಬಿಗ್‌ಬಾಸ್‌ನಿಂದ ಹೊರಹೋಗಲು ರಜತ್‌, ತ್ರಿವಿಕ್ರಮ್‌, ಮೋಕ್ಷಿತಾ, ಹನಮಂತ ಮತ್ತು ಮೋಕ್ಷಿತಾ ನಾಮಿನೇಟ್‌ ಆಗಿದ್ದಾರೆ. ಟಾಸ್ಕ್‌ ಗೆಲ್ಲುವ ಮೂಲಕ ನಾಮಿನೇಷನ್‌ನಿಂದ ಐಶ್ವರ್ಯಾ ಮತ್ತು ಮೋಕ್ಷಿತಾ ಪೈಕಿ ಐಶ್ವರ್ಯಾ ಅವರನ್ನು ತಂಡದ ಎಲ್ಲರೂ ನಿರ್ಧರಿಸಿ ಸೇವ್‌ ಮಾಡಿದ್ದಾರೆ. ಈ ವಾರದ ಎಲಿಮಿನೇಷನ್‌ ತೂಗುಗತ್ತಿ ಮೋಕ್ಷಿತಾ ತಲೆ ಮೇಲಿದೆ. ಕಳಪೆ ಪ್ರದರ್ಶನ ನೀಡಿದ ಚೈತ್ರಾಗೆ ಮತ್ತೊಮ್ಮೆ ಅದೇ ಕಳಪರ ಪಟ್ಟ ಪಡೆದು ಜೈಲು ಸೇರುವ ಸಾಧ್ಯತೆ ಇದೆ.

Whats_app_banner