Kannada Serial TRP: ಮತ್ತೆ ನಾನೇ ಕಿಂಗ್‌ ಎಂದು ತೋರಿಸಿದ ಪುಟ್ಟಕ್ಕನ ಮಕ್ಕಳು; ಟಿಆರ್‌ಪಿ ಲೆಕ್ಕಾಚಾರದಲ್ಲಿ ಬಿಗ್‌ಬಾಸ್‌ಗೆ ಸಿಕ್ಕಿದ್ದೇನು?‌
ಕನ್ನಡ ಸುದ್ದಿ  /  ಮನರಂಜನೆ  /  Kannada Serial Trp: ಮತ್ತೆ ನಾನೇ ಕಿಂಗ್‌ ಎಂದು ತೋರಿಸಿದ ಪುಟ್ಟಕ್ಕನ ಮಕ್ಕಳು; ಟಿಆರ್‌ಪಿ ಲೆಕ್ಕಾಚಾರದಲ್ಲಿ ಬಿಗ್‌ಬಾಸ್‌ಗೆ ಸಿಕ್ಕಿದ್ದೇನು?‌

Kannada Serial TRP: ಮತ್ತೆ ನಾನೇ ಕಿಂಗ್‌ ಎಂದು ತೋರಿಸಿದ ಪುಟ್ಟಕ್ಕನ ಮಕ್ಕಳು; ಟಿಆರ್‌ಪಿ ಲೆಕ್ಕಾಚಾರದಲ್ಲಿ ಬಿಗ್‌ಬಾಸ್‌ಗೆ ಸಿಕ್ಕಿದ್ದೇನು?‌

Bigg Boss Kannada 11 TRP: ಕನ್ನಡ ಕಿರುತೆರೆಯಲ್ಲೀ ಧಾರಾವಾಹಿಗಳು ಹೊಸ ಹೊಸ ದಾಖಲೆ ಬರೆಯುತ್ತಿವೆ. ಅತ್ಯಧಿಕ ನಂಬರ್‌ ಪಡೆದುಕೊಂಡು, ಹೆಚ್ಚಿನ ವೀಕ್ಷಕರನ್ನು ಸಂಪಾದಿಸಿಕೊಳ್ಳುತ್ತಿವೆ. ಅದರಂತೆ, ಈ ಹಿಂದಿನ ವಾರದ ಸೀರಿಯಲ್‌ ಟಿಆರ್‌ಪಿ ಹೇಗಿತ್ತು? ಬಿಗ್‌ಬಾಸ್‌ ಕನ್ನಡ 11ಕ್ಕೆ ಸಿಕ್ಕ ನಂಬರ್‌ ಎಷ್ಟು? ಇಲ್ಲಿದೆ ಮಾಹಿತಿ.

ಟಿಆರ್‌ಪಿ ಲೆಕ್ಕಾಚಾರದಲ್ಲಿ ಬಿಗ್‌ಬಾಸ್‌ಗೆ ಸಿಕ್ಕಿದ್ದೇನು?‌
ಟಿಆರ್‌ಪಿ ಲೆಕ್ಕಾಚಾರದಲ್ಲಿ ಬಿಗ್‌ಬಾಸ್‌ಗೆ ಸಿಕ್ಕಿದ್ದೇನು?‌

Kannada Serial TRP: ಟಿಆರ್‌ಪಿ ಲೆಕ್ಕಾಚಾರದಲ್ಲಿ ಜೀ ಕನ್ನಡದ ಸೀರಿಯಲ್‌ಗಳು ದಾಪುಗಾಲಿಟ್ಟಿವೆ. ಆ ಪೈಕಿ ಮೊದಲ ಸ್ಥಾನಕ್ಕೆ ಮತ್ತೆ ಲಗ್ಗೆ ಇಟ್ಟಿದೆ ಪುಟ್ಟಕ್ಕನ ಮಕ್ಕಳು ಸೀರಿಯಲ್.‌ ಬರೀ ಧಾರಾವಾಹಿಗಳು ಮಾತ್ರವಲ್ಲ, ರಿಯಾಲಿಟಿ ಶೋಗಳ ಟಿಆರ್‌ಪಿಯಲ್ಲಿಯೂ ಸಾಕಷ್ಟು ಏರಿಳಿತ ಕಂಡಿದೆ. ಆ ಪೈಕಿ ಎಲ್ಲರ ದೃಷ್ಟಿ ತನ್ನತ್ತ ಸೆಳೆದಿರುವ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಸಹ ಒಳ್ಳೆಯ ನಂಬರ್ಸ್‌ ತನ್ನದಾಗಿಸಿಕೊಂಡಿದೆ. ಹಾಗಾದರೆ, ಈ ವಾರದ ಟಾಪ್‌ 10 ಧಾರಾವಾಹಿಗಳು ಯಾವವು? ಅವುಗಳಿಗೆ ಸಿಕ್ಕ ಟಿಆರ್‌ಪಿ ಎಷ್ಟು ಇಲ್ಲಿದೆ ಮಾಹಿತಿ.

ಬಿಗ್‌ಬಾಸ್‌ಗೆ ಸಿಕ್ಕ ನಂಬರ್ಸ್‌ ಎಷ್ಟು?

ತಾಯಿ ನಿಧನದ ಹಿನ್ನೆಲೆಯಲ್ಲಿ ಎರಡು ವಾರ ಬಿಗ್‌ ಬಾಸ್‌ ನಿರೂಪಣೆ ಕಡೆ ಬಾರದ ಕಿಚ್ಚ ಸುದೀಪ್‌, ಎಲ್ಲ ಮುಗಿಸಿ ಬಂದ ವಾರ ಒಳ್ಳೆಯ ಟಿಆರ್‌ಪಿ ಸಿಕ್ಕಿತ್ತು. ಅದರಂತೆ, ಈ ಹಿಂದಿನ ವಾರದ ಟಿಆರ್‌ಪಿ ಲೆಕ್ಕಾಚಾರ ನೋಡುವುದಾದರೆ, ಸೋಮವಾರದಿಂದ ಶುಕ್ರವಾರದ ವರೆಗೆ 6.7 ಟಿಆರ್‌ಪಿ ಸಿಕ್ಕರೆ, ಶನಿವಾರದ ಸಂಚಿಕೆಗೆ 8.1 ಟಿಆರ್‌ಪಿ ಸಿಕ್ಕಿದೆ. ಭಾನುವಾರ ಬರೋಬ್ಬರಿ 9.3 ಟಿಆರ್‌ಪಿ ಪಡೆದುಕೊಂಡಿದೆ.

ಪುಟ್ಟಕ್ಕನ ಮಕ್ಕಳು

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅಗ್ರಸ್ಥಾನದಲ್ಲಿ ತನ್ನ ಓಟವನ್ನು ಮುಂದುವರಿಸಿದೆ. ಈ ಸೀರಿಯಲ್‌ ವಾರ ಎರಡಂಕಿಯನ್ನು ಟಾಟಿದೆ. ಈ ಮೂಲಕ 10.5 ಟಿಆರ್‌ಪಿ ಪಡೆದು, ಮೊದಲ ಸ್ಥಾನದಲ್ಲಿದೆ.

ಅಮೃತಧಾರೆ

ಜೀ ಕನ್ನಡ ಗೌತಮ್‌ ಮತ್ತು ಭೂಮಿಕಾ ಜೋಡಿಯ ಅಮೃತಧಾರೆ ಸೀರಿಯಲ್ ಸಹ ವೀಕ್ಷಕರನ್ನು ಸೆಳೆಯುತ್ತಿದೆ. ಈ ಸೀರಿಯಲ್‌ ಈ ವಾರ 8.6 ಟಿಆರ್‌ಪಿ ಪಡೆದುಕೊಳ್ಳುವ ಮೂಲಕ ಟಾಪ್‌ 10ರಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ವಾರಕ್ಕಿಂತ ಮುಂದಡಿ ಇರಿಸಿದೆ.

ಲಕ್ಷ್ಮೀ ನಿವಾಸ

ಬಹುತಾರಾಗಣದ ಲಕ್ಷ್ಮೀ ನಿವಾಸ ಸೀರಿಯಲ್‌ ಎರಡನೇ ಸ್ಥಾನದಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿತ್ತು. ಆದರೆ ಕಳೆದ ಎರಡು ವಾರ ಮೂರನೇ ಸ್ಥಾನದಲ್ಲಿ. ಈ ವಾರವೂ 8.5 ಟಿಆರ್‌ಪಿ ಪಡೆದುಕೊಂಡಿದೆ. ಆದರೆ, ಕಳೆದ ವಾರಕ್ಕೆ ಹೋಲಿಸಿದರೆ ಟಿಆರ್‌ಪಿಯಲ್ಲಿ ಏರಿಕೆಯಾಗಿದೆ.

ಅಣ್ಣಯ್ಯ

ನಾಲ್ವರು ತಂಗಿಯರ ಜತೆ ಸಾಗುವ ಶಿವಣ್ಣನ ಕಥೆಯೇ ಅಣ್ಣಯ್ಯ. ಈ ಧಾರಾವಾಹಿ ಈ ವಾರ 7.7 ಟಿಆರ್‌ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದೆ. ಈ ಹಿಂದೆ 7.1 ಟಿಆರ್‌ಪಿ ಪಡೆದಿತ್ತು ಈ ಸೀರಿಯಲ್.‌

ಲಕ್ಷ್ಮೀ ಬಾರಮ್ಮ

ಕಲರ್ಸ್‌ ಕನ್ನಡದ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಈ ವಾರ ಟಾಪ್‌ ಐದರಲ್ಲಿ ಸ್ಥಾನ ಪಡೆದುಕೊಂಡಿದೆ. 6.9 ಟಿಆರ್‌ಪಿ ರೇಟಿಂಗ್‌ ಪಡೆಯುವ ಮೂಲಕ ಮುಂದಡಿ ಇರಿಸಿದೆ.

ಶ್ರಾವಣಿ ಸುಬ್ರಮಣ್ಯ

ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ನೋಡುಗರಿಂದ ಮೆಚ್ಚುಗೆ ಪಡೆದಿದೆ. ಸುಬ್ಬು ಮತ್ತು ಶ್ರಾವಣಿ ಜೋಡಿಗೆ ಮನೆ ಮಂದಿಯೂ ಫಿದಾ ಆಗಿದ್ದಾರೆ. ಈ ಹಿಂದೆ 6.9 ಟಿಆರ್‌ಪಿ ಪಡೆದಿದ್ದ ಈ ಸೀರಿಯಲ್‌ ಈಗ 6.7 ಟಿಆರ್‌ಪಿ ಪಡೆದು ಆರನೇ ಸ್ಥಾನದಲ್ಲಿದೆ.

ಭಾಗ್ಯಲಕ್ಷ್ಮೀ

ಅದೇ ರೀತಿ ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್ ಸಹ ಹೆಚ್ಚು ವೀಕ್ಷಕರನ್ನು ಹೊಂದಿರುವ ಸೀರಿಯಲ್.‌ ಈಗ 6.6 ಟಿಆರ್‌ಪಿ ಪಡೆದುಕೊಂಡು ಏಳನೇ ಸ್ಥಾನದಲ್ಲಿ ಉಳಿದುಕೊಂಡಿದೆ.

ರಾಮಾಚಾರಿ

ಕಲರ್ಸ್‌ ಕನ್ನಡದ ರಾಮಾಚಾರಿ ಸೀರಿಯಲ್‌ ಸಹ ಒಳ್ಳೆಯ ನಂಬರ್‌ ಪಡೆದುಕೊಂಡಿದೆ. ಆದರೆ, ಈ ಮೊದಲು ಈ ಧಾರಾವಾಹಿ ಟಾಪ್‌ ಐದರಲ್ಲಿ ಕಾಣಿಸಿಕೊಂಡಿತ್ತು. ಈಗ ಎಂಟನೇ ಸ್ಥಾನದಲ್ಲಿದೆ. 6.5 ಟಿಆರ್‌ಪಿ ಪಡೆದುಕೊಂಡಿದೆ.

ಸೀತಾ ರಾಮ

ಜೀ ಕನ್ನಡದ ಸೀತಾ ರಾಮ ಸೀರಿಯಲ್‌ ಈ ಹಿಂದಿನ ವಾರಕ್ಕೆ ಹೋಲಿಕೆ ಮಾಡಿದರೆ, ಒಂದು ಸ್ಥಾನ ಏರಿಕೆ ಕಂಡಿದೆ. ಕಳೆದ ಸಲ 10ನೇ ಸ್ಥಾನದಲ್ಲಿದ್ದ ಈ ಸೀರಿಯಲ್‌, ಈಗ 5.7 ಟಿಆರ್‌ಪಿ ಪಡೆದು 9ನೇ ಸ್ಥಾನಕ್ಕೆ ಏರಿಕೆಯಾಗಿದೆ.

ನಿನಗಾಗಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಈ ಹಿಂದೆ ಎಂಟನೇ ಸ್ಥಾನದಲ್ಲಿತ್ತು. ಈಗ 5.5 ಟಿಆರ್‌ಪಿ ಪಡೆದು, 10ನೇ ಸ್ಥಾನದಲ್ಲಿಉಳಿದಿದೆ.

Whats_app_banner