Entertainment News in Kannada Live September 23, 2024: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಭೇಟಿ ಮಾಡಿದ ಮಹೇಶ್ ಬಾಬು; ರಾಜಮೌಳಿ ಸಿನಿಮಾ ಲುಕ್ ಇದೇನಾ ಎಂದು ಪ್ರಶ್ನಿಸುತ್ತಿರುವ ಫ್ಯಾನ್ಸ್
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 23 Sep 202403:23 PM IST
ಟಾಲಿವುಡ್ ಸ್ಟಾರ್ ಹೀರೋ ಮಹೇಶ್ ಬಾಬು, ಸೋಮವಾರ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ, ಪ್ರವಾಹ ಸಂತ್ರಸ್ತರ ಪರಿಹಾರಕ್ಕಾಗಿ ಸಿಎಂಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಸಿಎಂ ಭೇಟಿ ಮಾಡಿರುವ ಫೋಟೋದಲ್ಲಿ ಮಹೇಶ್ ಬಾಬು ಉದ್ದನೆಯ ಹೇರ್ ಸ್ಟೈಲ್ ಮತ್ತು ಗಡ್ಡದೊಂದಿಗೆ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Mon, 23 Sep 202402:32 PM IST
- BBK 11: ಬಿಗ್ ಬಾಸ್ ಕನ್ನಡ ಸೀಸನ್ 11ರ ಸುದ್ದಿಗೋಷ್ಠಿಯಲ್ಲಿ ರಮ್ಮಿ ಪ್ರಾಯೋಜಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಎದುರಾದ ಪ್ರಶ್ನೆಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಸಮಾಜದಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ, ಆಯ್ಕೆ ನಮ್ಮದಲ್ಲವೇ? ಎಂದಿದ್ದಾರೆ.
Mon, 23 Sep 202401:12 PM IST
- ಜೂನಿಯರ್ ಪುನೀತ್ ರಾಜ್‌ಕುಮಾರ್ ಎಂದೇ ಖ್ಯಾತಿ ಪಡೆದ ನಟ ಆನಂದ್ ಆರ್ಯ ಅನಾರೋಗ್ಯ ಕಾರಣದಿಂದ ಆಸ್ಪತ್ರೆ ಸೇರಿದ್ದಾರೆ. ಈ ಹಿಂದೆ ಛಾಯಾ ಮತ್ತು ಮಾರಕಾಸ್ತ್ರ ಸಿನಿಮಾಗಳಲ್ಲಿ ಆನಂದ್ ನಟಿಸಿದ್ದರು. ಸಾಕಷ್ಟು ಶೋಗಳಲ್ಲಿ ಪುನೀತ್ ರೀತಿಯಲ್ಲಿಯೇ ಕಂಡು ಎಲ್ಲರನ್ನು ರಂಜಿಸಿದ್ದಾರೆ ಈ ನಟ.
Mon, 23 Sep 202412:43 PM IST
ಹೊಸಬರು ನಿರ್ಮಿಸಿ, ನಿರ್ದೇಶನ ಮಾಡಿರುವ ಬಾಲ್ಯ ಸಿನಿಮಾ ಟೀಸರ್ ಬಿಡುಗಡೆ ಆಗಿದ್ದು ತೆರೆಗೆ ಬರಲು ಸಿದ್ಧವಿದೆ. ಚಿತ್ರತಂಡ ಇತ್ತೀಚೆಗೆ ಸುದ್ದಿಗೋಷ್ಟಿ ನಡೆಸಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಸಿನಿಮಾವನ್ನು ಪ್ರತಿ ಪೋಷಕರು ಹಾಗೂ ಮಕ್ಕಳು ನೋಡಬೇಕು ಎಂದು ಚಿತ್ರತಂಡ ಹೇಳಿದೆ.
Mon, 23 Sep 202412:04 PM IST
- kiccha sudeep Bigg Boss Kannada Remuneration: ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್ 11 ನಡೆಯಲಿದೆ. ಬಿಬಿಕೆ11 ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಉತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಬಿಬಿಕೆ 11 ನಿರೂಪಣೆಗೆೆ ಪಡೆಯುವ ಸಂಭಾವನೆಯ ವಿಚಾರವೂ ಚರ್ಚೆಯಾಗಿದೆ.
Mon, 23 Sep 202412:04 PM IST
ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಪ್ರಕರಣ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರದಲ್ಲಿ ಸಂತ್ರಸ್ತೆಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬೆಂಬಲ ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ವಿಚಾರದ ಬಗ್ಗೆ ಅಲ್ಲು ಅರ್ಜುನ್ ಮಾತನಾಡದಿದ್ರೂ ಪುಷ್ಪ 2 ಸಿನಿಮಾ ನಿರ್ಮಾಪಕ ಪ್ರತಿಕ್ರಿಯಿಸಿದ್ದಾರೆ.
Mon, 23 Sep 202411:52 AM IST
- Bigg Boss Kannada season 11 contestants: ಸೆ. 29ರ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಲಿದೆ. ಹೆಲ್ ಮತ್ತು ಹೆವೆನ್ ಎಂಬ ಪರಿಕಲ್ಪನೆಯಲ್ಲಿ ಈ ಸಲದ ಶೋ ನಡೆಯಲಿದೆ ಎಂಬ ಸುಳಿವು ಪ್ರೋಮೋದಲ್ಲಿ ಸಿಕ್ಕಿದೆ. ಜತೆಗೆ ಒಂದು ದಿನ ಮುನ್ನವೇ ಸ್ಪರ್ಧಿಗಳು ಯಾರೆಂದೂ ಗೊತ್ತಾಗಲಿದೆ.
Mon, 23 Sep 202410:43 AM IST
- Drithi Rajkumar: ಪುನೀತ್ ರಾಜ್‌ಕುಮಾರ್ ಹಿರಿ ಮಗಳು ಧೃತಿ ರಾಜ್‌ಕುಮಾರ್ ಹಂಚಿಕೊಂಡ ಹೊಸ ಫೋಟೋಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಕೆಲವರು ಇಂಥ ಫೋಟೋಗಳನ್ನು ಶೇರ್ ಮಾಡಬೇಡಿ. ನಮ್ಮ ಬಾಸ್ ಮರ್ಯಾದೆ ತೆಗೀಬೇಡಿ ಎಂದೂ ಬೇಡಿಕೊಳ್ಳುತ್ತಿದ್ದಾರೆ.
Mon, 23 Sep 202409:54 AM IST
ಆಮೀರ್ ಖಾನ್ ನಿರ್ಮಾಣದಲ್ಲಿ ಕಿರಣ್ ರಾವ್ ನಿರ್ದೇಶನ ಮಾಡಿರುವ ಲಾಪತಾ ಲೇಡೀಸ್ ಸಿನಿಮಾ ಭಾರತೀಯ ಚಿತ್ರರಂಗದಿಂದ 2025ರ ಆಸ್ಕರ್ ರೇಸ್‌ಗೆ ಎಂಟ್ರಿ ಕೊಟ್ಟಿದೆ. ಸಿನಿಮಾ 2023 ಸೆಪ್ಟೆಂಬರ್‌ನಲ್ಲಿ ತೆರೆ ಕಂಡಿತ್ತು. ಸಿನಿಮಾ ಖಂಡಿತ ಪ್ರಶಸ್ತಿ ಗೆಲ್ಲುವುದು ಎಂದು ನಿರ್ದೇಶಕಿ ಕಿರಣ್ ರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Mon, 23 Sep 202408:57 AM IST
- Bhairadevi Kannada Movie Trailer: ಭೈರಾದೇವಿ ಸಿನಿಮಾ ಬಿಡುಗಡೆ ಸನಿಹದಲ್ಲಿ ಇರುವಾಗಲೇ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ದೊಡ್ಡ ನಿರ್ಧಾರದ ಸುಳಿವೊಂದನ್ನು ನೀಡಿದ್ದಾರೆ. ಆ ಸುದ್ದಿ ಸುಳ್ಳಾಗಲಿ ಎಂದು ಅವರ ಫ್ಯಾನ್ಸ್ ಬಯಸುತ್ತಿದ್ದಾರೆ. ಅಷ್ಟಕ್ಕೂ ರಾಧಿಕಾ ಹೇಳಿದ್ದೇನು? ಇಲ್ಲಿದೆ ನೋಡಿ ವಿವರ
Mon, 23 Sep 202405:59 AM IST
ಟಾಲಿವುಡ್ ಗಣ್ಯರಿಗಾಗಿ ದೇವರ ಸಿನಿಮಾ ವಿಶೇಷ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಸೆಪ್ಟೆಂಬರ್ 27 ರಂದು ತೆರೆಗೆ ಬರುತ್ತಿರುವ ಸಿನಿಮಾ ವಿಮರ್ಶೆ ಈಗಲೇ ಹೊರ ಬಿದ್ದಿದೆ. ಸಿನಿಮಾ, ಖಂಡಿತ ಬ್ಲಾಕ್ ಬಸ್ಟರ್ ಆಗಲಿದೆ ಎಂದು ಸಿನಿಮಾ ನೋಡಿದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಜ್ಯೂ ಎನ್‌ಟಿಆರ್ ಜೊತೆಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ.
Mon, 23 Sep 202405:24 AM IST
ಝೀ ಕನ್ನಡ ಧಾರಾವಾಹಿ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಮತ್ತು ಶಿವು ಹಾಗೂ ಅವನ ತಂಗಿಯರೆಲ್ಲ ಸೇರಿಕೊಂಡು ರವಿಕೆ ಹೊಲಿಸಲು ಹೋಗುತ್ತಾರೆ. ಆದರೆ ಅಲ್ಲಿ ನಡೆದ ಒಂದು ಘಟನೆಯಲ್ಲಿ ಎಲ್ಲರಿಗೂ ಅಸಮಾಧಾನ ಆಗುತ್ತದೆ. ಅಂತಹದ್ದು ಏನಾಯ್ತು ನೋಡಿ.
Mon, 23 Sep 202404:52 AM IST
ಸ್ಪಾನಿಷ್ ನಟ, ಆಸ್ಕರ್ ವಿಜೇತ ಹಾವಿಯರ್ ಬಾರ್ದೆಮ್ ಕುರಿತು ಡಿಜಿಟಲ್ ಕ್ರಿಯೇಟರ್ ದೀಪಾ ಹಿರೇಗುತ್ತಿ, ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನೋ ಕಂಟ್ರಿ ಫಾರ್ ಓಲ್ಡ್ ಮೆನ್, ಬ್ಯೂಟಿಫುಲ್ ಎರಡೂ ಸಿನಿಮಾಗಳಲ್ಲಿ ಬಾರ್ದೆಮ್ ವಿಭಿನ್ನ ಪಾತ್ರಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Mon, 23 Sep 202404:00 AM IST
- Amruthadhaare serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಭಾನುವಾರದ ಸಂಚಿಕೆಯಲ್ಲಿ ಅವಘಡವೊಂದು ನಡೆದಿದೆ. ಜೈದೇವ್ ಮತ್ತು ದಿಯಾಳ ಚೆಲ್ಲಾಟ ನೋಡುತ್ತಿರುವಾಗಲೇ ಮಲ್ಲಿಗೆ ಟಿಟಿ ವಾಹನವೊಂದು ಬಂದು ಡಿಕ್ಕಿ ಹೊಡೆದಿದೆ. ಸೀರಿಯಸ್ ಆಗಿ ಗಾಯಗೊಂಡ ಮಲ್ಲಿ ಆಸ್ಪತ್ರೆ ಸೇರಿದ್ದಾಳೆ.