Railway News: ಮಾರ್ಗ ದುರಸ್ತಿ, ಫೆ 24,25 ರಂದು ಕರ್ನಾಟಕದಲ್ಲಿ ಕೆಲ ರೈಲು ಸೇವೆ ವ್ಯತ್ಯಯ
Train service ಕೆಲವು ಮಾರ್ಗಗಳಲ್ಲಿ ದುರಸ್ತಿ ಇರುವ ಕಾರಣದಿಂದ ಕರ್ನಾಟಕದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಗಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಫೆಬ್ರವರಿ 24 ಮತ್ತು 25 ರಿಂದ ಹಲವು ಕಡೆ ರೈಲ್ವೆ ಮಾರ್ಗಗಳ ದುರಸ್ಥಿ ಕಾರ್ಯ ನಡೆಯುತ್ತಿರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಬೆಂಗಳೂರು, ಮಂಡ್ಯ, ಹಾಸನ, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ರೈಲ್ವೆ ಮಾರ್ಗಗಳ ಕೆಲಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗಳ ಕಾರಣಕ್ಕೆ ಅರಸೀಕೆರೆ- ಮೈಸೂರು ರದ್ದಾದರೆ, ಮೈಸೂರು -ಶಿವಮೊಗ್ಗ ರೈಲಿನ ಸಂಚಾರದಲ್ಲಿ ಭಾಗಶಃ ವ್ಯತ್ಯಯವಾಗಲಿದೆ.
ಈ ಕುರಿತು ನೈರುತ್ಯ ರೈಲ್ವೆ ಪ್ರಕಟಣೆ ಹೊರಟಿಸಿದ್ದು, ಶನಿವಾರ ಹಾಗೂ ಭಾನುವಾರ ವ್ಯತ್ಯಯವಾಗುವ ರೈಲುಗಳ ವಿವರ ಇಲ್ಲಿದೆ.
ರೈಲುಗಳ ಸೇವೆಯಲ್ಲಿ ಬದಲಾವಣೆ
- ಮಾವಿನಕೆರೆ ಮತ್ತು ಹೊಳೆ ನರಸೀಪುರ ನಿಲ್ದಾಣಗಳ ನಡುವಿನ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ, ಈ ಕೆಳಗಿನ ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ.
- ಫೆಬ್ರವರಿ 24 ಮತ್ತು 25, 2024 ರಂದು ರೈಲು ಸಂಖ್ಯೆ 06213 ಅರಸೀಕೆರೆ-ಮೈಸೂರು ವಿಶೇಷ ಎಕ್ಸ್ ಪ್ರೆಸ್ ರೈಲಿನ ಸಂಚಾರ ರದ್ದುಗೊಳ್ಳಲಿದೆ.
ಇದನ್ನೂ ಓದಿರಿ: ಆತಂಕ ಸೃಷ್ಟಿಸಿದ ಉತ್ತರ ಕನ್ನಡ ಕಡಲ ತೀರದಲ್ಲಿ ಚೀನಾ ಬೋಟ್ ಸಂಚಾರ ವದಂತಿ!
- ಫೆಬ್ರವರಿ 24 ಮತ್ತು 25, 2024 ರಂದು ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್ ಪ್ರೆಸ್ ರೈಲು ಮೈಸೂರು ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
- ಈಶಾನ್ಯ ಗಡಿನಾಡು ರೈಲ್ವೆಯ ಬಮುನಿಗಾಂವ್ ಮತ್ತು ಚಯಗಾಂವ್ ನಿಲ್ದಾಣಗಳ ನಡುವೆ ನಡೆಯುತ್ತಿರುವ ಜೋಡಿ ಮಾರ್ಗ ಕಾಮಗಾರಿ ನಡೆಯುತ್ತಿದೆ. ಫೆಬ್ರವರಿ 23, 2024 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12503 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಅಗರ್ತಲಾ ದ್ವಿ-ಸಾಪ್ತಾಹಿಕ ಹಮ್ಸಫರ್ ಎಕ್ಸ್ ಪ್ರೆಸ್ ರೈಲು ನ್ಯೂ ಬೊಂಗೈಗಾಂವ್, ರಂಗಿಯಾ ಮತ್ತು ಕಾಮಾಕ್ಯ ನಿಲ್ದಾಣಗಳ ಮೂಲಕ ಸಂಚರಿಸಲಿದೆ ಎಂದು ಈಶಾನ್ಯ ಗಡಿನಾಡು ರೈಲ್ವೆಯು ಸೂಚಿಸಿದೆ.
ಇದನ್ನೂ ಓದಿರಿ: ಭಾರತ-ಇಂಗ್ಲೆಂಡ್ 4ನೇ ಟೆಸ್ಟ್; ಟೆಸ್ಟ್ ಕ್ಯಾಪ್ ಪಡೆದು ತಾಯಿಯ ಪಾದ ಮುಟ್ಟಿ ನಮಸ್ಕರಿಸಿದ ಆಕಾಶ್ ದೀಪ್
ಈ ಸಮಯದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗಲಿದ್ದು, ಸಹಕರಿಸಬೇಕು ಎಂದು ನೈರುತ್ಯ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.