ಕರ್ನಾಟಕದ ಜಲಾಶಯದ ಮಟ್ಟ ಜುಲೈ 19; ಆಲಮಟ್ಟಿ, ಕೆಆರ್‌ಎಸ್‌ ಸೇರಿ ವಿವಿಧ ಜಲಾಶಯಗಳ ನೀರಿನ ಮಟ್ಟದ ವಿವರ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಜಲಾಶಯದ ಮಟ್ಟ ಜುಲೈ 19; ಆಲಮಟ್ಟಿ, ಕೆಆರ್‌ಎಸ್‌ ಸೇರಿ ವಿವಿಧ ಜಲಾಶಯಗಳ ನೀರಿನ ಮಟ್ಟದ ವಿವರ ಹೀಗಿದೆ

ಕರ್ನಾಟಕದ ಜಲಾಶಯದ ಮಟ್ಟ ಜುಲೈ 19; ಆಲಮಟ್ಟಿ, ಕೆಆರ್‌ಎಸ್‌ ಸೇರಿ ವಿವಿಧ ಜಲಾಶಯಗಳ ನೀರಿನ ಮಟ್ಟದ ವಿವರ ಹೀಗಿದೆ

ಕರ್ನಾಟಕದ ಜಲಾಶಯದ ನೀರಿನ ಮಟ್ಟ ಜುಲೈ 19; ರಾಜ್ಯದ ಉದ್ದಗಲಕ್ಕೂ ವ್ಯಾಪಕ ಮಳೆಯಾಗುತ್ತಿದ್ದು, ವಿವಿಧ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ. ಕೆಆರ್‌ಎಸ್ ಜಲಾಶಯದ ನೀರು ಭರ್ತಿಯಾಗಲು ಇನ್ನು 10 ಅಡಿ ಬಾಕಿದೆ. ಕಬಿನಿಯಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಹರಿಯಲು ಬಿಡಲಾಗುತ್ತಿದೆ. ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಹೀಗಿದೆ.

ಕರ್ನಾಟಕದ ಜಲಾಶಯದ ಮಟ್ಟ ಜುಲೈ 19; ಆಲಮಟ್ಟಿ, ಕೆಆರ್‌ಎಸ್‌ ಸೇರಿ ವಿವಿಧ ಜಲಾಶಯಗಳ ನೀರಿನ ಮಟ್ಟದ ವಿವರ. (ಸಾಂಕೇತಿಕ ಚಿತ್ರ)
ಕರ್ನಾಟಕದ ಜಲಾಶಯದ ಮಟ್ಟ ಜುಲೈ 19; ಆಲಮಟ್ಟಿ, ಕೆಆರ್‌ಎಸ್‌ ಸೇರಿ ವಿವಿಧ ಜಲಾಶಯಗಳ ನೀರಿನ ಮಟ್ಟದ ವಿವರ. (ಸಾಂಕೇತಿಕ ಚಿತ್ರ) (HTKannada)

ಬೆಂಗಳೂರು: ಕರ್ನಾಟಕದ ಉದ್ದಗಲಕ್ಕೂ ಕಳೆದ ಒಂದು ವಾರದಿಂದ ಮುಂಗಾರು ಮಳೆ ತೀವ್ರಗೊಂಡಿದೆ. ಕರಾವಳಿ ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ಧಾರಕಾರ ಮಳೆಯಾಗಿದೆ. ಇದಲ್ಲದೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಲಿ ಕೃಷ್ಣರಾಜ ಸಾಗರ (ಕೆ ಆರ್‌ ಸಾಗರ) ಅಣೆಕಟ್ಟೆಯಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದೆ. ಕೆಆರ್‌ಎಸ್ ಜಲಾಶಯ ಭರ್ತಿ ಆಗುವುದಕ್ಕೆ ಇನ್ನು 10 ಅಡಿ ಬಾಕಿ ಇದೆ. ಇನ್ನು ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಬಿದ್ದ ಕಾರಣ, ಕೃಷ್ಣಾ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದೆ. ರಾಜಾಪುರ ಬ್ಯಾರಕ್‌ನಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಮೂಲಕ ಕೃಷ್ಣಾ ನದಿಗೂ ಭಾರಿ ಪ್ರಮಾಣದ ನೀರು ಹರಿಯತೊಡಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಜುಲೈ 19ರ ಮಾಹಿತಿ ಪ್ರಕಾರ, ರಾಜ್ಯದ 7 ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. 7 ಜಲಾಶಯಗಳಲ್ಲಿ ನೀರಿನ ಮಟ್ಟ ಶೇಕಡ 55 ರಿಂದ ಶೇಕಡ 75 ನಡುವೆ ಇದೆ. ಇನ್ನೂ ಏಳು ಜಲಾಶಯಗಳಲ್ಲಿ ನೀರಿನ ಮಟ್ಟ ಶೇಕಡ 25 ರಿಂದ ಶೇಕಡ 55ರ ನಡುವೆ ಇದೆ. ಸದ್ಯ ಮಳೆಯಾಗುತ್ತಿರುವ ಕಾರಣ ಕೆಲವು ಕಡೆ ಜಲಾಶಯಗಳಿಗೆ ನೀರಿನ ಒಳ ಹರಿವು ಉಂಟಾಗಿದೆ. ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಇಂದು (ಜುಲೈ 19) ಹೀಗಿದೆ.

ಕರ್ನಾಟಕದಜಲಾಶಯಮಟ್ಟಜುಲೈ 19

1)ಲಿಂಗನಮಕ್ಕಿಜಲಾಶಯ

ನೀರಿನಮಟ್ಟ – 76.44 (ಟಿಎಂಸಿ)

ಒಳಹರಿವು - 77496ಕ್ಯೂಸೆಕ್‌

ಹೊರಹರಿವು 000ಕ್ಯೂಸೆಕ್

2)ಸುಪಾಜಲಾಶಯ

ನೀರಿನಮಟ್ಟ – 64.37 (ಟಿಎಂಸಿ)

ಒಳಹರಿವು - 47385ಕ್ಯೂಸೆಕ್‌

ಹೊರಹರಿವು - 000ಕ್ಯೂಸೆಕ್

3)ವಾರಾಹಿಜಲಾಶಯ

ನೀರಿನಮಟ್ಟ – 10.87ಟಿಎಂಸಿ

ಒಳಹರಿವು - 6559ಕ್ಯೂಸೆಕ್

ಹೊರಹರಿವು - 000

4)ಹಾರಂಗಿಜಲಾಶಯ

ನೀರಿನಮಟ್ಟ - 6.82ಟಿಎಂಸಿ

ಒಳಹರಿವು - 13188ಕ್ಯೂಸೆಕ್

ಹೊರಹರಿವು - 10000ಕ್ಯೂಸೆಕ್

5)ಹೇಮಾವತಿಜಲಾಶಯ

ನೀರಿನಮಟ್ಟ 31.63ಟಿಎಂಸಿ

ಒಳಹರಿವು - 35871ಕ್ಯೂಸೆಕ್

ಹೊರಹರಿವು - 1500ಕ್ಯೂಸೆಕ್‌

6)ಕೆಆರ್‌ಎಸ್ಜಲಾಶಯ

ನೀರಿನಮಟ್ಟ – 38.90ಟಿಎಂಸಿ

ಒಳಹರಿವು - 44617ಕ್ಯೂಸೆಕ್

ಹೊರಹರಿವು - 61200ಕ್ಯೂಸೆಕ್

7)ಕಬಿನಿಜಲಾಶಯ

ನೀರಿನಮಟ್ಟ - 17.05ಟಿಎಂಸಿ

ಒಳಹರಿವು - 49555ಕ್ಯೂಸೆಕ್

ಹೊರಹರಿವು - 181ಕ್ಯೂಸೆಕ್

8)ಭದ್ರಾಜಲಾಶಯ

ನೀರಿನಮಟ್ಟ 71.54ಟಿಎಂಸಿ

ಒಳಹರಿವು - 49555ಕ್ಯೂಸೆಕ್

ಹೊರಹರಿವು - 181ಕ್ಯೂಸೆಕ್

9)ತುಂಗಭದ್ರಾಜಲಾಶಯ

ನೀರಿನಮಟ್ಟ 55.97ಟಿಎಂಸಿ

ಒಳಹರಿವು - 106723ಕ್ಯೂಸೆಕ್

ಹೊರಹರಿವು - 592ಕ್ಯೂಸೆಕ್

10)ಘಟಪ್ರಭಾಜಲಾಶಯ

ನೀರಿನಮಟ್ಟ - 31.57ಟಿಎಂಸಿ

ಒಳಹರಿವು - 21455ಕ್ಯುಸೆಕ್‌

ಹೊರಹರಿವು - 1680ಕ್ಯೂಸೆಕ್

11)ಮಲಪ್ರಭಾಜಲಾಶಯ

ನೀರಿನಮಟ್ಟ 15.93ಟಿಎಂಸಿ

ಒಳಹರಿವು -10935

ಹೊರಹರಿವು -194ಕ್ಯೂಸೆಕ್

12)ಆಲಮಟ್ಟಿಜಲಾಶಯ

ನೀರಿನಮಟ್ಟ - 97.42ಟಿಎಂಸಿ

ಒಳಹರಿವು - 43478ಕ್ಯುಸೆಕ್‌

ಹೊರಹರಿವು - 65480ಕ್ಯೂಸೆಕ್

13)ನಾರಾಯಣಪುರಜಲಾಶಯ

ನೀರಿನಮಟ್ಟ – 33.57ಟಿಎಂಸಿ

ಒಳಹರಿವು - 65801ಕ್ಯೂಸೆಕ್

ಹೊರಹರಿವು - 70931ಕ್ಯೂಸೆಕ್

14)ವಾಣಿವಿಲಾಸಸಾಗರಜಲಾಶಯ

ನೀರಿನಮಟ್ಟ 17.96ಟಿಎಂಸಿ

ಒಳಹರಿವು - 0ಕ್ಯುಸೆಕ್‌

ಹೊರಹರಿವು 147ಕ್ಯೂಸೆಕ್‌

ಪ್ರವಾಹ ಪರಿಸ್ಥಿತಿಯ ಸ್ಥಿತಿಗತಿ ವರದಿ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಶೇರ್ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ ಅಘನಾಶಿನಿ, ತುಂಗಾ, ನೇತ್ರಾವತಿ, ಹಾರಂಗಿ ಮತ್ತು ಕಬಿನಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹ ಭೀತಿ ಉಂಟಾಗುವ ಸಾದ್ಯತೆಯಿದೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ಕೋರ್ಟ್‌ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

Whats_app_banner