ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 26; ಆಲಮಟ್ಟಿ ಡ್ಯಾಮ್ ಸಂಪೂರ್ಣ ಭರ್ತಿ, ವಿವಿಧ ಜಲಾಶಯಗಳ ವಿವರ ಇಲ್ಲಿದೆ-rain news dam water level today august 26 monday alamatti dam full tungabhadra karnataka water reservoir kabini jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 26; ಆಲಮಟ್ಟಿ ಡ್ಯಾಮ್ ಸಂಪೂರ್ಣ ಭರ್ತಿ, ವಿವಿಧ ಜಲಾಶಯಗಳ ವಿವರ ಇಲ್ಲಿದೆ

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 26; ಆಲಮಟ್ಟಿ ಡ್ಯಾಮ್ ಸಂಪೂರ್ಣ ಭರ್ತಿ, ವಿವಿಧ ಜಲಾಶಯಗಳ ವಿವರ ಇಲ್ಲಿದೆ

ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿವೆ. ಈ ನಡುವೆ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ವಿವಿಧ ಡ್ಯಾಮ್‌ಗಳ ಒಳಹರಿವು ಹೆಚ್ಚಿದ್ದು, ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. ಆಗಸ್ಟ್‌ 26ರಂದು ರಾಜ್ಯದ ಜಲಾಶಯಗಳ ನೀರಿನ ಮಟ್ಟ ಹೀಗಿದೆ.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 26; ಆಲಮಟ್ಟಿ ಡ್ಯಾಮ್ ಸಂಪೂರ್ಣ ಭರ್ತಿ
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 26; ಆಲಮಟ್ಟಿ ಡ್ಯಾಮ್ ಸಂಪೂರ್ಣ ಭರ್ತಿ (PTI file)

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಗಸ್ಟ್‌ 25ರ ಭಾನುವಾರ ಮಳೆಯಾಗಿದೆ. ನೆೈರುತ್ಯ ಮಾನ್ಸೂನ್ ಕರಾವಳಿ ಜಿಲ್ಲೆಗಳಲ್ಲಿ ಸಕ್ರಿಯವಾಗಿತ್ತು. ಇದೇ ವೇಳೆ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಕರಾವಳಿ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಮತ್ತು ಉಳನಾಡಿನ ಹಲವು ಸ್ಥಳಗಳಲ್ಲಿ ಭಾನುವಾರ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕ್ಯಾಸೆಲ್‌ರಾಕ್‌ನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಈ ನಡುವೆ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ವಿಜಯಪುರದ ಆಲಮಟ್ಟಿ ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗಿದೆ. ಜಲಾಶಯಕ್ಕೆ 28838 ಕ್ಯೂಸೆಕ್ಸ್‌ ನೀರು ಹರಿದುಬಂದಿದ್ದು, 27880 ಕ್ಯೂಸೆಕ್ಸ್‌ ನೀರನ್ನು ಹೊರಗೆ ಬಿಡಲಾಗಿದೆ. ಹಾಸನ ಜಿಲ್ಲೆಯ ಹೇಮಾವತಿ ಜಲಾಶಯ ಕೂಡಾ 97 ಪ್ರತಿಶತದಷ್ಟು ಭರ್ತಿಯಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟವನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಪ್ರಕಟಿಸಿದೆ. ವಿವರಗಳು ಇಲ್ಲಿವೆ.

ಆಲಮಟ್ಟಿ ಜಲಾಶಯ‌ (ಸಂಪೂರ್ಣ ಭರ್ತಿ)

  • ನೀರಿನ ಮಟ್ಟ: 1704.7 ಫೀಟ್
  • ಒಳಹರಿವು: 28838 ಕ್ಯೂಸೆಕ್ಸ್
  • ಹೊರಹರಿವು: 27880 ಕ್ಯೂಸೆಕ್ಸ್‌

ತುಂಗಭದ್ರಾ ಜಲಾಶಯ (80 ಪ್ರತಿಶತ ಭರ್ತಿ)

  • ನೀರಿನ ಮಟ್ಟ: 1627.87 ಫೀಟ್
  • ಒಳಹರಿವು: 23725 ಕ್ಯೂಸೆಕ್ಸ್
  • ಹೊರಹರಿವು: 269 ಕ್ಯೂಸೆಕ್ಸ್‌

ಭದ್ರಾ ಜಲಾಶಯ (90 ಪ್ರತಿಶತ ಭರ್ತಿ)

  • ನೀರಿನ ಮಟ್ಟ: 2152.41 ಫೀಟ್
  • ಒಳಹರಿವು: 5486 ಕ್ಯೂಸೆಕ್ಸ್
  • ಹೊರಹರಿವು: 211 ಕ್ಯೂಸೆಕ್ಸ್‌

ಕೆಆರ್‌ಎಸ್ (ಕೃಷ್ಣರಾಜಸಾಗರ)‌ -96 ಪ್ರತಿಶತ ಭರ್ತಿ

  • ನೀರಿನ ಮಟ್ಟ: 2467.72 ಫೀಟ್
  • ಒಳಹರಿವು: 4695 ಕ್ಯೂಸೆಕ್ಸ್
  • ಹೊರಹರಿವು: 3183 ಕ್ಯೂಸೆಕ್ಸ್‌

ಹೇಮಾವತಿ ಜಲಾಶಯ (97 ಪ್ರತಿಶತ ಭರ್ತಿ)

  • ನೀರಿನ ಮಟ್ಟ: 2921.17 ಫೀಟ್
  • ಒಳಹರಿವು: 7473 ಕ್ಯೂಸೆಕ್ಸ್
  • ಹೊರಹರಿವು: 800 ಕ್ಯೂಸೆಕ್ಸ್

ಹವಾಮಾನ ಕುರಿತ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ಹಾರಂಗಿ ಜಲಾಶಯ (94 ಪ್ರತಿಶತ ಭರ್ತಿ)

  • ನೀರಿನ ಮಟ್ಟ: 2857.74 ಫೀಟ್
  • ಒಳಹರಿವು: 1659 ಕ್ಯೂಸೆಕ್ಸ್
  • ಹೊರಹರಿವು: 600 ಕ್ಯೂಸೆಕ್ಸ್

ಹಿಡ್ಕಲ್‌ ಜಲಾಶಯ (98 ಪ್ರತಿಶತ ಭರ್ತಿ)

  • ನೀರಿನ ಮಟ್ಟ: 2174.067 ಫೀಟ್
  • ಒಳಹರಿವು: 13524 ಕ್ಯೂಸೆಕ್ಸ್
  • ಹೊರಹರಿವು: 7685 ಕ್ಯೂಸೆಕ್ಸ್

ಮಲಪ್ರಭಾ (93 ಪ್ರತಿಶತ ಭರ್ತಿ)

  • ನೀರಿನ ಮಟ್ಟ: 2077.7 ಫೀಟ್
  • ಒಳಹರಿವು: 11912 ಕ್ಯೂಸೆಕ್ಸ್
  • ಹೊರಹರಿವು: 4361 ಕ್ಯೂಸೆಕ್ಸ್

ನಾರಾಯಣಪುರ ಜಲಾಶಯ (95 ಪ್ರತಿಶತ ಭರ್ತಿ)

  • ನೀರಿನ ಮಟ್ಟ: 1613.83 ಫೀಟ್
  • ಒಳಹರಿವು: 28480 ಕ್ಯೂಸೆಕ್ಸ್
  • ಹೊರಹರಿವು: 28497 ಕ್ಯೂಸೆಕ್ಸ್

ಕಬಿನಿ ಜಲಾಶಯ (94 ಪ್ರತಿಶತ ಭರ್ತಿ)

  • ನೀರಿನ ಮಟ್ಟ: 2282.28 ಫೀಟ್
  • ಒಳಹರಿವು: 2176 ಕ್ಯೂಸೆಕ್ಸ್
  • ಹೊರಹರಿವು: 1000 ಕ್ಯೂಸೆಕ್ಸ್

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | Karnataka Weather: ಬೆಳಗಾವಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ, ಮೀನುಗಾರರಿಗೆ ಎಚ್ಚರಿಕೆ