ದರ್ಶನ್ ನನ್ನ ಫ್ಯಾಮಿಲಿ, ನನ್ನ ಬ್ರದರ್, ಅವರ ಜತೆ ಸಿನಿಮಾ ಮಾಡೇ ಮಾಡ್ತೀನಿ ಎಂದ ನಿರ್ದೇಶಕ ಪ್ರೇಮ್
ಕೆಡಿ ಸಿನಿಮಾದ ಶಿವ ಶಿವ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆಯೂ ನಿರ್ದೇಶಕ ಪ್ರೇಮ್ ಮಾತನಾಡಿದ್ದಾರೆ. ದರ್ಶನ್ ನನ್ನ ಫ್ಯಾಮಿಲಿ, ನನ್ನ ಬ್ರದರ್, ದರ್ಶನ್ ಜತೆ ಸಿನಿಮಾ ಮಾಡೇ ಮಾಡ್ತಿನಿ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ಕೆಡಿ ಸಿನಿಮಾದ ಶಿವ ಶಿವ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆಯೂ ನಿರ್ದೇಶಕ ಪ್ರೇಮ್ ಮಾತನಾಡಿದ್ದಾರೆ. ದರ್ಶನ್ ಜತೆ ಸಿನಿಮಾ ಮಾಡ್ತೀರಾ ಎಂಬ ಪ್ರಶ್ನೆಗೆ ಪ್ರೇಮ್ "ಖಂಡಿತಾ ಮಾಡೇಮಾಡ್ತಿನಿ. ದರ್ಶನ್ ನನ್ನ ಫ್ಯಾಮಿಲಿ, ದರ್ಶನ್ ನನ್ನ ಬ್ರದರ್, ದರ್ಶನ್ ಜತೆ ನನ್ನ ಫಸ್ಟ್ ಸಿನಿಮಾ ಕರಿಯಾ ಮಾಡಿದಾಗ ನಾವು ಫ್ರೆಂಡ್ಸ್. ಆದರೆ, ನನಗಿಂತ ಮೊದಲು ರಕ್ಷಿತಾ ಅವರು ದರ್ಶನ್‌ಗೆ ಫ್ರೆಂಡ್. ಒಬ್ಬರ ಕಷ್ಟಕ್ಕೆ ಒಬ್ಬರು ಬೆಂಬಲ ನೀಡುತ್ತಿದ್ದರು" ಎಂದು ನಿರ್ದೇಶಕ ಪ್ರೇಮ್ ನೆನಪಿಸಿಕೊಂಡಿದ್ದಾರೆ.
ದರ್ಶನ್ ಜತೆ ಸಿನಿಮಾ ಮಾಡ್ತೀನಿ ಎಂದ ಪ್ರೇಮ್
"ಖಂಡಿತಾ ದರ್ಶನ್ ಜತೆಗೆ ಸಿನಿಮಾ ಮಾಡೇ ಮಾಡ್ತಿನಿ. ಸದ್ಯ ಕೆಡಿ ಸಿನಿಮಾದ ಕೆಲಸ ನಡೆಯುತ್ತಿದೆ. ಕೆಡಿ ಎಲ್ಲಾ ಮುಗಿದ ಮೇಲೆ ಖಂಡಿತಾ ಅವರ ಜತೆ ಸಿನಿಮಾ ಮಾಡ್ತಿನಿ. ಎಲ್ಲರೂ ಸ್ನೇಹಿತರೇ, ನಾವೆಲ್ಲರೂ ಒಂದೇ ಕುಟುಂಬ. ನಮ್ಮ ಚಿತ್ರರಂಗ ಎಲ್ಲಾ ಒಂದೇ ಕುಟುಂಬ. ಈಗ ದರ್ಶನ್ ಆರಾಮವಾಗಿದ್ರೆ ನಾನೇ ಅವರನ್ನ ಇಲ್ಲಿಗೆ ಕರೆಯುತ್ತಿದ್ದೆ. ಬಾ ಬ್ರದರ್ ಎಂದು ಫಸ್ಟ್ ಸಾಂಗ್ ರಿಲೀಸ್ ಮಾಡಲು ಕರೆಯುತ್ತಿದ್ದೆ. ಸ್ವಲ್ಪ ಬೆನ್ನು ನೋವು ಇರುವುದರಿಂದ ಅವರನ್ನು ಕರೆದಿಲ್ಲ. ನೆಕ್ಸ್ಟ್ ಖಂಡಿತಾ ಕರೆಯುವೆ. ಅವರು ನನಗೆ, ರಕ್ಷಿತಾಗೆ, ಧ್ರುವಗೆ ಸೇರಿದಂತೆ ಎಲ್ಲರಿಗೂ ಸಪೋರ್ಟ್ ಮಾಡ್ತಾರೆ" ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.
ಡೆವಿಲ್ ಸಿನಿಮಾದ ಶೂಟಿಂಗ್ ಯಾವಾಗ?
ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ದರ್ಶನ್ ಈಗ ಫಾರ್ಮ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆನ್ನು ನೋವಿನ ಕಾರಣ ರೆಸ್ಟ್‌ನಲ್ಲಿದ್ದಾರೆ. ಮುಂದಿನ ತಿಂಗಳಿನಿಂದ ಡೆವಿಲ್ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಕೆಡಿ ಸಿನಿಮಾದ ಶಿವ ಶಿವ ಹಾಡು ಬಿಡುಗಡೆ
ಶಿವ ಶಿವ ಹಾಡಿನಲ್ಲಿ ನಾನು ಕಾರಿನ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದೇನೆ. ಚಲಿಸುತ್ತಿರುವ ಕಾರಿನಲ್ಲಿ ಡ್ಯಾನ್ಸ್ ಮಾಡಿದ ಅನುಭವ ಬೇರೆ ರೀತಿ ಇತ್ತು. ನಿರ್ದೇಶಕ ಜೋಗಿ ಪ್ರೇಮ್ ಅವರ ಸ್ಪೂರ್ತಿಯಿಂದ ಇದಾಗಿದೆ. ಮುಂದೆ ನನ್ನನ್ನು ವಿಮಾನ ಹತ್ತಿಸಿದ್ರೂ ಅಚ್ಚರಿ ಇಲ್ಲ. ಒಂದು ಹಾಡಿನಲ್ಲಿ ರೀಷ್ಮಾ ನಾಣಯ್ಯ ಕೂಡ ಇದ್ದಾರೆ. ಅವರ ಡ್ಯಾನ್ಸ್ ಕೂಡ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಕೆಡಿ ದಿ ಡೆವಿಲ್ ಸಿನಿಮಾದ ಟೀಸರ್ ಕೂಡ ಬಿಡುಗಡೆ ಮಾಡುತ್ತೇವೆ. ಮುಂಬೈನಲ್ಲಿ ಇದನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಇದೆ. ಇದರ ಬಗ್ಗೆ ಪ್ರೇಮ್ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದ್ದಾರೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಶಿವರಾಜ್ ಕುಮಾರ್ ಬೇಗ ಗುಣವಾಗಿ ಬರಲಿ
ಹ್ಯಾಟ್ರಿಕ್‌ಹೀರೋ ಶಿವರಾಜ್ ಕುಮಾರ್ ಅವರಿಗೆ ಅಮೆರಿಕದ ಮಿಯಾಮಿಯಲ್ಲಿ ಸರ್ಜರಿ ನಡೆಯುತ್ತಿದೆ. ಅವರು ನಮ್ಮ ಲೆಜೆಂಡ್. ಸಿನಿಮಾ ರಂಗದ ದೊಡ್ಡ ಆಸ್ತಿ ಅವರು. ಅವರು ಬೇಗ ಗುಣವಾಗಿ ಬರಲಿ. ನಮ್ಮ ಆಯಸ್ಸು ಅವರಿಗೆ ಸಿಗಲಿ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೆಡಿ ಚಿತ್ರಕ್ಕಾಗಿ ಒಂದು ಸೆಟ್ ಹಾಕಲಾಗಿದೆ. ಎರಡು ಭಾಗಗಳಲ್ಲಿ ಕೆಡಿ ಸಿನಿಮಾ ಬಿಡುಗಡೆಯಾಗುತ್ತದೆ. ಇದೇ ಸೆಟ್‌ನಲ್ಲಿ ಕಾರ್ಯಕ್ರಮವೊಂದನ್ನು ಮಾಡುವ ಯೋಜನೆ ಇದೆ. ಕೆಡಿ ಚಿತ್ರವನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು. ಐದು ಭಾಷೆಯಲ್ಲಿಯೂ ಶಿವ ಶಿವ ಹಾಡು ಬಿಡುಗಡೆಯಾಗಿದೆ. ಅಲ್ಲಿನ ಸ್ಟಾರ್ ನಟ, ನಿರ್ದೇಶಕರಿಂದಲೇ ಆಯಾ ಭಾಷೆಯ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರೇಮ್ ಹೇಳಿದ್ದಾರೆ.