ವಾವ್ ಬ್ಯೂಟಿ! ಇಲ್ಲಿದೆ ಬಾಲಿವುಡ್ ನಟಿ ಸೋನಂ ಕಪೂರ್ ಸ್ಲಿಂ ಬಾಡಿ ರಹಸ್ಯ: ಇದು ಸುಂದರಿಯ ಡಯೆಟ್ ಪ್ಲಾನ್, ಗೊತ್ತಿರ್ಲಿ ಇದು ಸೀಕ್ರೆಟ್
ಕನ್ನಡ ಸುದ್ದಿ  /  ಜೀವನಶೈಲಿ  /  ವಾವ್ ಬ್ಯೂಟಿ! ಇಲ್ಲಿದೆ ಬಾಲಿವುಡ್ ನಟಿ ಸೋನಂ ಕಪೂರ್ ಸ್ಲಿಂ ಬಾಡಿ ರಹಸ್ಯ: ಇದು ಸುಂದರಿಯ ಡಯೆಟ್ ಪ್ಲಾನ್, ಗೊತ್ತಿರ್ಲಿ ಇದು ಸೀಕ್ರೆಟ್

ವಾವ್ ಬ್ಯೂಟಿ! ಇಲ್ಲಿದೆ ಬಾಲಿವುಡ್ ನಟಿ ಸೋನಂ ಕಪೂರ್ ಸ್ಲಿಂ ಬಾಡಿ ರಹಸ್ಯ: ಇದು ಸುಂದರಿಯ ಡಯೆಟ್ ಪ್ಲಾನ್, ಗೊತ್ತಿರ್ಲಿ ಇದು ಸೀಕ್ರೆಟ್

Sonam Kapoor Diet Plan: ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಬಾಲಿವುಡ್ ನಟಿ ಸೋನಂ ಕಪೂರ್ ಒಂದು ದಿನದಲ್ಲಿ ಏನು ತಿನ್ನುತ್ತಾರೆ ಎಂಬ ಕುತೂಹಲ ನಿಮಗಿದೆಯಾ? ಇತ್ತೀಚೆಗೆ ಅವರು ತನ್ನ ಇನ್ಸ್ಟಾಗ್ರಾಂ ರೀಲ್‍ನಲ್ಲಿ ಎಲ್ಲವನ್ನೂ ಬಹಿರಂಗಪಡಿಸಿದ್ದಾರೆ. ಬಾಲಿವುಡ್ ನಟಿಯ ಡಯೆಟ್ ಪ್ಲಾನ್ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಮುಂದೆ ಓದಿ. (ಬರಹ: ಪ್ರಿಯಾಂಕಾ ಗೌಡ)

ಬಾಲಿವುಡ್ ನಟಿ ಸೋನಂ ಕಪೂರ್ ಸ್ಲಿಂ ಬಾಡಿ ರಹಸ್ಯ: ಇಲ್ಲಿದೆ ನೋಡಿ ಸುಂದರಿಯ ಡಯೆಟ್ ಪ್ಲಾನ್, ಗೊತ್ತಿರ್ಲಿ ಇದು ಸೀಕ್ರೆಟ್ ವಿಷ್ಯ
ಬಾಲಿವುಡ್ ನಟಿ ಸೋನಂ ಕಪೂರ್ ಸ್ಲಿಂ ಬಾಡಿ ರಹಸ್ಯ: ಇಲ್ಲಿದೆ ನೋಡಿ ಸುಂದರಿಯ ಡಯೆಟ್ ಪ್ಲಾನ್, ಗೊತ್ತಿರ್ಲಿ ಇದು ಸೀಕ್ರೆಟ್ ವಿಷ್ಯ (facebook.com/OfficialSonamKapoor)

ಬಾಲಿವುಡ್‍ನ ಜನಪ್ರಿಯ ನಟಿಗಳಲ್ಲೊಬ್ಬರು ಸೋನಂ ಕಪೂರ್. ಪ್ರಖ್ಯಾತ ನಟ ಅನಿಲ್ ಕಪೂರ್ ಅವರ ಪುತ್ರಿಯೂ ಆಗಿರುವ ಸೋನಂ ಕಪೂರ್, ಕೆಲವು ಹಿಂದಿ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೇವಲ ಸಿನಿಮಾವಷ್ಟೇ ಅಲ್ಲದೆ ತನ್ನ ದೇಹವನ್ನು ಫಿಟ್ ಆಗಿರಿಸುವಲ್ಲಿಯೂ ಇವರು ಗಮನಸೆಳೆದಿದ್ದಾರೆ. ಆರೋಗ್ಯಕರ ಜೀವನಶೈಲಿಗೆ ಆಹಾರಕ್ರಮವನ್ನು ಸಮತೋಲನಗೊಳಿಸುವುದರ ಮೇಲೆ ಸೋನಂ (Sonam Kapoor Diet Plan) ಹೆಚ್ಚು ಗಮನಹರಿಸುತ್ತಾರೆ. ಬಹುತೇಕ ಎಲ್ಲಾ ನಟ-ನಟಿಯರೂ ತಮ್ಮ ದೇಹವನ್ನು ಫಿಟ್ ಆಗಿ ಇರಿಸಲು ಸಾಕಷ್ಟು ಶ್ರಮ ವಹಿಸುತ್ತಾರೆ. ಜಿಮ್ ವರ್ಕೌಟ್, ಯೋಗ ಮಾಡುವುದು, ಡಯೆಟ್ ಮಾಡುವುದು ಇತ್ಯಾದಿಗಳನ್ನು ಚಾಚುತಪ್ಪದೆ ಮಾಡುತ್ತಾರೆ. ಅಲ್ಲದೆ, ತಮ್ಮ ಆಹಾರ ಕ್ರಮಗಳನ್ನು ಕೂಡ ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಯಾವಾಗಲೂ ಪೌಷ್ಟಿಕಾಂಶಭರಿತ ಆಹಾರ ಸೇವನೆಗೆ ಒಲವು ತೋರುತ್ತಾರೆ. ಈ ನಡುವೆ ನಟಿ ಸೋನಂ ಕಪೂರ್ ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರೀಲ್ಸ್ ವೊಂದು ಅಭಿಮಾನಿಗಳನ್ನು ಬೆರಗಾಗಿಸಿದೆ.

ಸೋನಂ ಕಪೂರ್ ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ, ಒಂದು ದಿನದಲ್ಲಿ ತಾನು ಏನು ತಿನ್ನುತ್ತೇನೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಬೆಳಗ್ಗೆ 6 ಗಂಟೆಗೆ ಅಡುಗೆ ಮನೆಗೆ ಎಂಟ್ರಿ ಕೊಡುವ ನಟಿ, ಅನುಯಾಯಿಗಳಿಗೆ ತನ್ನ ಬಾಣಸಿಗನನ್ನು ಪರಿಚಯಿಸಿದ್ದಾರೆ. ನಿಂಬೆ ಹಣ್ಣನ್ನು ಕತ್ತರಿಸುವ ಮೂಲಕ ವಿಡಿಯೋ ಪ್ರಾರಂಭವಾಗುತ್ತದೆ. ಒಂದು ಗ್ಲಾಸ್ ನಿಂಬೆ ನೀರನ್ನು ಕುಡಿಯುವ ಮೂಲಕ ತನ್ನ ದಿನಚರಿಯನ್ನು ನಟಿ ಪ್ರಾರಂಭಿಸುತ್ತಾರೆ. ನಂತರ ನಟಿ ಓಟ್ ಹಾಲನ್ನು ಬಳಸಿ ಕಾಲಜನ್ ಚಾಕೊಲೇಟ್ ಕಾಫಿಯನ್ನು ತಯಾರಿಸಿ, ಸೇವಿಸುತ್ತಾರೆ.

ಬೆಳಗ್ಗೆ 6.45ಕ್ಕೆ, ನಟಿ ಸೋನಂ ನೆನೆಸಿದ ಬಾದಾಮಿಯ ಸಿಪ್ಪೆಯನ್ನು ತೆಗೆಯುತ್ತಾರೆ. ಪ್ರತಿದಿನ ಇದನ್ನು ಆಕೆ ಸೇವಿಸುತ್ತಾರಂತೆ. ನಂತರ ಬೆಳಗ್ಗೆ 9.45ಕ್ಕೆ ಉಪಾಹಾರವನ್ನು ಸಾಮಾನ್ಯವಾಗಿ ಮೊಟ್ಟೆ ಮತ್ತು ಟೋಸ್ಟ್ ಅನ್ನು ತಿನ್ನುತ್ತಾರೆ. ಮಧ್ಯಾಹ್ನದ ವೇಳೆ ಚಿಕನ್ ಅರಾಬಿಯಾಟಾ ಪಾಸ್ತಾವನ್ನು ಸವಿಯುತ್ತಾರೆ. ಜೊತೆಗೆ ಡೈನಿಂಗ್ ಟೇಬಲ್‍ನಲ್ಲಿ ತರಕಾರಿಗಳ ಮಿಶ್ರಣವಿರುವ ಬೌಲ್ ಅನ್ನು ಸಹ ನೀವು ಗಮನಿಸಬಹುದು.

ನಂತರ ಸಂಜೆ 4 ಗಂಟೆಗೆ, ಸೋನಂ ಕಪೂರ್ ಬಿಸಿ ಬಿಸಿಯಾದ ಪಾನೀಯವನ್ನು ಹೀರಿದ್ದಾರೆ. ತಮ್ಮ ಪತಿ ಆನಂದ್ ಅಹುಜಾ ಅವರೊಂದಿಗೆ ಸಂಜೆ 5:15 ಕ್ಕೆ ಟೋಸ್ಟ್ ಚಿಕನ್ ಸವಿದಿದ್ದಾರೆ. ಮೊಸರು, ಹಣ್ಣುಗಳ ಬೌಲ್‍ಗಳನ್ನು ಗಮನಿಸಬಹುದು. ಸ್ಟ್ರಾಬೆರಿ, ರಸ್‍ಬೆರ್ರಿ ಮುಂತಾದ ಹಣ್ಣುಗಳನ್ನು ಸವಿಯುತ್ತಾರೆ. ಅಂತಿಮವಾಗಿ, ಸಂಜೆ 7 ಗಂಟೆಗೆ ಆಚೆ ತೆರಳುವಾಗ ಬಿಸಿ ಬಾಟಲಿಯ ಸೂಪ್ ಅನ್ನು ಒಯ್ದಿದ್ದಾರೆ.

ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ, ತಾನು ಒಂದು ದಿನದಲ್ಲಿ ಏನು ತಿನ್ನುತ್ತೇನೆ ಎಂಬ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಅಲ್ಲದೆ ತಾನು ಸೇವಿಸುವ ಆಹಾರವನ್ನು ಆರೋಗ್ಯಕರವಾಗಿ ಮತ್ತು ರುಚಿಯಾಗಿ ತಯಾರಿಸಿ ಕೊಟ್ಟಿದ್ದಕ್ಕಾಗಿ ತನ್ನ ಶೆಫ್‍ಗೆ ಧನ್ಯವಾದ ತಿಳಿಸಿದ್ದಾರೆ. ತಾನು ಯಾವಾಗಲೂ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಟ ಎಂದರೂ 3 ರಿಂದ 4 ಲೀಟರ್ ನೀರು ಕುಡಿಯಲೇಬೇಕು ಎಂದು ಸೋನಂ ಕಪೂರ್ ತನ್ನ ಅನುಯಾಯಿಗಳಿಗೆ ತಿಳಿಸಿದ್ದಾರೆ. ಆರೋಗ್ಯ ಹಾಗೂ ಆರೋಗ್ಯಕರ ದೇಹಕ್ಕಾಗಿ ಪ್ರತಿದಿನ ಪ್ರತಿಯೊಬ್ಬರೂ ಇಷ್ಟು ಪ್ರಮಾಣದ ನೀರನ್ನು ಕುಡಿಯತಕ್ಕದ್ದು ಎಂದು ತಿಳಿಸಿದ್ದಾರೆ.

Whats_app_banner