ಜೀರ್ಣಕ್ರಿಯೆಯಿಂದ ಒತ್ತಡ ನಿವಾರಣೆಯವರೆಗೆ: ಚಂದ್ರ ನಮಸ್ಕಾರದಲ್ಲಿದೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಪರಿಹಾರ
ಕನ್ನಡ ಸುದ್ದಿ  /  ಜೀವನಶೈಲಿ  /  ಜೀರ್ಣಕ್ರಿಯೆಯಿಂದ ಒತ್ತಡ ನಿವಾರಣೆಯವರೆಗೆ: ಚಂದ್ರ ನಮಸ್ಕಾರದಲ್ಲಿದೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಪರಿಹಾರ

ಜೀರ್ಣಕ್ರಿಯೆಯಿಂದ ಒತ್ತಡ ನಿವಾರಣೆಯವರೆಗೆ: ಚಂದ್ರ ನಮಸ್ಕಾರದಲ್ಲಿದೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಪರಿಹಾರ

Chandra Namaskar: ಪ್ರತಿದಿನ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ನಮಗೆಲ್ಲರಿಗೂ ಸೂರ್ಯ ನಮಸ್ಕಾರ ತಿಳಿದಿದೆ. ಆದರೆ ಚಂದ್ರ ನಮಸ್ಕಾರದ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಚಂದ್ರ ನಮಸ್ಕಾರ ಎಂದರೇನು? ಅದನ್ನು ಅಭ್ಯಾಸ ಮಾಡುವುದು ಹೇಗೆ? ಮತ್ತು ಅದರಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಓದಿ.

ಜೀರ್ಣಕ್ರಿಯೆಯಿಂದ ಒತ್ತಡ ನಿವಾರಣೆಯವರೆಗೆ: ಚಂದ್ರ ನಮಸ್ಕಾರದಲ್ಲಿದೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಪರಿಹಾರ
ಜೀರ್ಣಕ್ರಿಯೆಯಿಂದ ಒತ್ತಡ ನಿವಾರಣೆಯವರೆಗೆ: ಚಂದ್ರ ನಮಸ್ಕಾರದಲ್ಲಿದೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಪರಿಹಾರ (PC: Freepik)

ಯೋಗ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುವ ಕ್ರಮಬದ್ಧವಾದ ವ್ಯಾಯಾಮ. ಇದು ಮೂಳೆ ಮತ್ತು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಎಂಬ ನಂಬಿಕೆಯಿದೆ. ಸೂರ್ಯ ನಮಸ್ಕಾರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಆದರೆ, ಚಂದ್ರ ನಮಸ್ಕಾರ ಎಂದರೇನು? ಈ ಪ್ರಶ್ನೆ ಹಲವರಲ್ಲಿದೆ. ಸೂರ್ಯ ನಮಸ್ಕಾರದಂತೆ ಚಂದ್ರ ನಮಸ್ಕಾರವು ಸಹ ಪ್ರತಿನಿತ್ಯ ಮಾಡುವಂತಹ ಯೋಗಾಭ್ಯಾಸವಾಗಿದೆ. ಇದು ಪೂರ್ತಿ ದೇಹಕ್ಕೆ ಕೆಲಸ ನೀಡುತ್ತದೆ. ಸೂರ್ಯ ನಮಸ್ಕಾರವು ಸೂರ್ಯನಿಗೆ ಮಾಡುವಂತಹ ನಮಸ್ಕಾರವಾಗಿದೆ. ಅದೇ ರೀತಿ ಚಂದ್ರ ನಮಸ್ಕಾರವು ಚಂದ್ರನಿಗೆ ಮಾಡುವಂತಹ ನಮಸ್ಕಾರವಾಗಿದೆ. ಅಂದರೆ ಚಂದ್ರನು ಉದಯಿಸುವ ಸಮಯ ಸಂಜೆಯ ಸಮಯದಲ್ಲಿ ಅಭ್ಯಾಸ ಮಾಡುವ ಯೋಗಾಭ್ಯಾಸವಾಗಿದೆ. ಚಂದ್ರನು ನಮ್ಮ ಭಾವನೆ, ಬುದ್ಧಿವಂತಿಕೆ ಮತ್ತು ಅಭಿರುಚಿಯನ್ನು ಪ್ರತಿನಿಧಿಸುತ್ತಾನೆ. ಚಂದ್ರನು ಎಡಭಾಗದ ಶಕ್ತಿಯನ್ನು ಪ್ರತಿನಿಧಿಸುತ್ತಾನೆ. ಆದರೆ ಸೂರ್ಯನು ಬಲ ಭಾಗವನ್ನು ಪ್ರತಿನಿಧಿಸುತ್ತಾನೆ ಎಂದು ಹಿಂದೂಸ್ತಾನ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಅಕ್ಷರ ಯೋಗ ಕೇಂದ್ರದ ಸಂಸ್ಥಾಪಕ, ಅಂಕಣಕಾರ ಮತ್ತು ಲೇಖಕ ಹಿಮಾಲಯನ್ ಸಿದ್ಧಾ ಅಕ್ಷರ್ ಅವರು ಚಂದ್ರನ ನಮಸ್ಕಾರದ ಮಹತ್ವವನ್ನು ಹಂಚಿಕೊಂಡಿದ್ದಾರೆ. ಚಂದ್ರ ನಮಸ್ಕಾರ ಮಾಡುವುದರಿಂದ ಒತ್ತಡ ನಿವಾರಣೆ, ಜೀರ್ಣಕ್ರಿಯೆ, ಉಸಿರಾಟ, ರಕ್ತಪರಿಚಲನೆ ಮುಂತಾದ ದೇಹದ ಕಾರ್ಯಗಳು ಸುಧಾರಿಸುತ್ತವೆ.

ಚಂದ್ರ ನಮಸ್ಕಾರದಲ್ಲಿ ಬರುವ ಆಸನಗಳು

1) ಪ್ರಣಾಮ ಆಸನ

2) ಹಸ್ತ ಉತ್ತಾನಾಸನ

3) ಪಾದಹಸ್ತಾಸನ

4) ಅಶ್ವಸಂಚಲನಾಸನ

5) ಅರ್ಧ ಚಂದ್ರಾಸನ

6) ಸಂತೋಲನಾಸನ

7) ಅಷ್ಟಾಂಗ ಪ್ರಣಾಮಾಸನ

8) ಭುಜಂಗಾಸನ

9) ಅಧೋಮುಖಿ ಶ್ವಾನಾಸನ

10) ಅಶ್ವಸಂಚಲನಾಸನ

11) ಅರ್ಧ ಚಂದ್ರಾಸನ

12) ಪಾದಹಸ್ತಾಸನ

13) ಹಸ್ತ ಉತ್ತಾನಾಸನ

14) ಪ್ರಣಾಮಾಸನ

ಚಂದ್ರ ನಮಸ್ಕಾರದಿಂದ ಸಿಗುವ ಆರೋಗ್ಯ ಪ್ರಯೋಜನಗಳು

ಚಂದ್ರ ನಮಸ್ಕಾರದಿಂದ ದೈಹಿಕವಾಗಿ ಅನೇಕ ಪ್ರಯೋಜನಗಳಿವೆ. ಇದು ಕೆಳ ಬೆನ್ನನ್ನು ಬಲಪಡಿಸುತ್ತದೆ. ಇದು ಭುಜಗಳಿಗೆ ಶಕ್ತಿಯನ್ನು ತುಂಬುತ್ತದೆ. ಮಂಡಿಚಿಪ್ಪುಗಳನ್ನು ನಯಗೊಳಿಸುವ ಮೂಲಕ ಮೊಣಕಾಲಿನ ಸಮಸ್ಯೆ ದೂರವಾಗಿಸುತ್ತದೆ. ಚಂದ್ರ ನಮಸ್ಕಾರವು ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ದೇಹದ ಭಾಗಗಳು ಸಮತೋಲನದಿಂದಿರುವಂತೆ ಮಾಡುತ್ತದೆ. ಇದು ಬೆನ್ನುಮೂಳೆ ಗಟ್ಟಿಮುಟ್ಟಾಗಿರಲು ಮತ್ತು ಬೆಳೆಯಲು ಸಹಾಯ ಮಾಡುತ್ತದೆ. ಕಾಲುಗಳ ಹಿಂಭಾಗ ಮತ್ತು ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುವುದರ ಮೂಲಕ ಕಾಲಿಗೆ ಹೆಚ್ಚು ಶಕ್ತಿ ಸಂಚಾರವಾಗುವಂತೆ ಮಾಡುತ್ತದೆ. ನಿಯಮಿತವಾಗಿ ಚಂದ್ರ ನಮಸ್ಕಾರವನ್ನು ಅಭ್ಯಾಸ ಮಾಡುವುದರಿಂದ ಜೀರ್ಣಕ್ರಿಯೆ, ಉಸಿರಾಟ ಮತ್ತು ರಕ್ತಪರಿಚಲನಾ ವ್ಯವಸ್ಥೆ ಮುಂತಾದ ದೇಹದ ಕಾರ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಂದ್ರ ನಮಸ್ಕಾರವು ದಿನಪೂರ್ತಿ ಕೆಲಸ ಮಾಡಿ ದಣಿದ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಒತ್ತಡ ನಿವಾರಿಸುವುದರ ಮೂಲಕ ಮಾನಸಿಕ ಆರೋಗ್ಯ ಸುಧಾರಿಸುವಂತೆ ಮಾಡುತ್ತದೆ. ಈ ಚಂದ್ರ ನಮಸ್ಕಾರ ಯೋಗಾಸನವನ್ನು ಸಂಜೆ 6 ಗಂಟೆಯ ನಂತರ ಚಂದ್ರನಿಗೆ ಅಭಿಮುಖವಾಗಿ ಅಭ್ಯಾಸ ಮಾಡಲಾಗುತ್ತದೆ.

Whats_app_banner