ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಬ್ರೊಕೊಲಿ ಉಪಹಾರ ಬೆಸ್ಟ್: ಇಲ್ಲಿದೆ ರೆಸಿಪಿ ಮಾಡುವ ವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಬ್ರೊಕೊಲಿ ಉಪಹಾರ ಬೆಸ್ಟ್: ಇಲ್ಲಿದೆ ರೆಸಿಪಿ ಮಾಡುವ ವಿಧಾನ

ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಬ್ರೊಕೊಲಿ ಉಪಹಾರ ಬೆಸ್ಟ್: ಇಲ್ಲಿದೆ ರೆಸಿಪಿ ಮಾಡುವ ವಿಧಾನ

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ನಾರಿನ ಅಂಶ ಹೆಚ್ಚಿರುವ ಉಪಹಾರ ರೆಸಿಪಿ ಇಲ್ಲಿದೆ. ಇದನ್ನು ತಯಾರಿಸಲು ಹೆಚ್ಚೇನೂ ಸಮಯ ಹಿಡಿಯಲ್ಲ. ಇದು ಕೇವಲ ಹತ್ತು ನಿಮಿಷಗಳಲ್ಲಿ ಸಿದ್ಧವಾಗಿರುತ್ತದೆ. ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಈ ಬ್ರೊಕೊಲಿ ರೆಸಿಪಿ ಮಾಡುವುದು ತುಂಬಾನೇ ಸುಲಭ.ಇಲ್ಲಿದೆಬ್ರೊಕೊಲಿ ಮಾಡುವ ವಿಧಾನ.

ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಬ್ರೊಕೊಲಿ ಉಪಹಾರ ಬೆಸ್ಟ್: ಇಲ್ಲಿದೆ ರೆಸಿಪಿ ಮಾಡುವ ವಿಧಾನ
ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಬ್ರೊಕೊಲಿ ಉಪಹಾರ ಬೆಸ್ಟ್: ಇಲ್ಲಿದೆ ರೆಸಿಪಿ ಮಾಡುವ ವಿಧಾನ (PC: Pixabay)

ಬೆಳಗಿನ ಉಪಹಾರವು ದಿನದ ಪ್ರಮುಖ ಊಟವಾಗಿದೆ. ಬೆಳಗ್ಗೆ ಸೇವಿಸುವ ಆಹಾರವು ಸಂಪೂರ್ಣವಾಗಿ ಆರೋಗ್ಯಕರವಾಗಿರಬೇಕು. ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಗಿನ ಉಪಾಹಾರಕ್ಕಾಗಿ ಹೆಚ್ಚಿನ ಫೈಬರ್ ಉಪಹಾರವನ್ನು ಸೇವಿಸುತ್ತಾರೆ. ಅಂದರೆ ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ದಿನವಿಡೀ ಕಡಿಮೆ ಆಹಾರವನ್ನು ಸೇವಿಸುತ್ತಾರೆ. ಆದ್ದರಿಂದ ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ನಾರಿನ ಅಂಶ ಹೆಚ್ಚಿರುವ ಉಪಹಾರ ರೆಸಿಪಿ ಇಲ್ಲಿದೆ. ಇದರಲ್ಲಿ ಬ್ರೊಕೊಲಿ, ಕರಿಮೆಣಸು, ಕಡಲೆಕಾಯಿ ಮತ್ತು ಬೆಳ್ಳುಳ್ಳಿಯನ್ನು ಮಾತ್ರ ಬಳಸಲಾಗಿದೆ. ಹಾಗಂತ ಇದನ್ನು ತಯಾರಿಸಲು ಹೆಚ್ಚೇನೂ ಸಮಯ ಹಿಡಿಯಲ್ಲ. ಇದು ಕೇವಲ ಹತ್ತು ನಿಮಿಷಗಳಲ್ಲಿ ಸಿದ್ಧವಾಗಿರುತ್ತದೆ. ಹೆಚ್ಚಿನ ಪೋಷಕಾಂಶಗಳಿರುವ ಈ ಉಪಹಾರವನ್ನು ನೀವು ಪ್ರಯತ್ನಿಸಲೇಬೇಕು. ಇದನ್ನು ತಯಾರಿಸುವ ವಿಧಾನ ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

ಬ್ರೊಕೊಲಿ ಉಪಹಾರ ರೆಸಿಪಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ಬ್ರೊಕೊಲಿ- ಕಾಲು ಕೆಜಿ, ಬೆಳ್ಳುಳ್ಳಿ ಎಸಳು- ಮೂರು, ಕಾಳುಮೆಣಸಿನ ಪುಡಿ- ಕಾಲು ಚಮಚ, ನೆಲಗಡಲೆ- ಸ್ವಲ್ಪ, ಚಿಲ್ಲಿ ಫ್ಲೇಕ್ಸ್- ಒಂದು ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಆಲಿವ್ ಎಣ್ಣೆ- ಎರಡು ಟೀ ಚಮಚ, ಹಸಿರು ಮೆಣಸಿನಕಾಯಿ- 1.

ಬ್ರೊಕೊಲಿ ಉಪಹಾರ ಮಾಡುವ ವಿಧಾನ: ಮೊದಲಿಗೆ ಬ್ರೊಕೊಲಿಯನ್ನು ನುಣ್ಣಗೆ ಕತ್ತರಿಸಿ ಪಕ್ಕಕ್ಕೆ ಇರಿಸಿ. ನಂತರ ಬೆಳ್ಳುಳ್ಳಿ ಎಸಳನ್ನೂ ನುಣ್ಣಗೆ ಕತ್ತರಿಸಿ ಪಕ್ಕಕ್ಕೆ ಇಡಿ. ಕಡಲೆಕಾಳನ್ನು ಹುರಿದು ಸಿದ್ಧವಾಗಿಟ್ಟುಕೊಳ್ಳಿ. ಈಗ ಒಂದು ಕಡಾಯಿಯನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಆಲಿವ್ ಎಣ್ಣೆ ಸೇರಿಸಿ. ಇದಕ್ಕೆ ಬೆಳ್ಳುಳ್ಳಿ ಸೇರಿಸಿ ಹಸಿರು ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಬ್ರೊಕೋಲಿ ಮತ್ತು ಕಡಲೆಕಾಯಿ ಹಾಕಿ ಫ್ರೈ ಮಾಡಿ. ಜತೆಗೆ ಕತ್ತರಿಸಿದ ಮೆಣಸಿನಕಾಯಿ, ಕಾಳುಮೆಣಸಿನ ಪುಡಿ, ಚಿಲ್ಲಿ ಫ್ಲೇಕ್ಸ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈ ಮಿಶ್ರಣವನ್ನು ಐದು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ.

ಇಷ್ಟು ಮಾಡಿದರೆ ರುಚಿಕರವಾದ ಹಾಗೂ ಸಿಂಪಲ್ ಆಗಿ ತಯಾರಾಗುವ ಬ್ರೊಕೋಲಿ ಬ್ರೇಕ್ ಫಾಸ್ಟ್ ಸವಿಯಲು ರೆಡಿಯಾಗಿದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಇದು ಕೇವಲ 10 ನಿಮಿಷಗಳಲ್ಲಿ ತಯಾರಾಗುತ್ತದೆ. ಮಾಡಲು ಕೂಡ ಹೆಚ್ಚು ಕಷ್ಟಪಡುವ ಅಗತ್ಯವಿಲ್ಲ.

ಇಂದಿನ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಅನೇಕ ಮಂದಿ ತೂಕ ಹೆಚ್ಚಳದ ಸಮಸ್ಯೆಯನ್ನು ಹೊಂದಿದ್ದಾರೆ. ಇಂಥವರಿಗೆ ಬ್ರೊಕೊಲಿಯಿಂದ ತಯಾರಿಸಿದ ಉಪಹಾರ ಬೆಸ್ಟ್. ಇದನ್ನು ಒಂದು ತಿಂಗಳು ತಿಂದರೆ ಖಂಡಿತ ಮೂರರಿಂದ ಐದು ಕಿಲೋ ತೂಕ ಇಳಿಸಬಹುದು. ಇದು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದೆ. ಅಲ್ಲದೆ, ಬ್ರೊಕೊಲಿಯನ್ನು ಸೇವಿಸುವುದರಿಂದ ಇತರ ಆಹಾರಗಳನ್ನು ತಿನ್ನುವ ನಿಮ್ಮ ಬಯಕೆಯನ್ನು ಕಡಿಮೆ ಮಾಡುತ್ತದೆ. ದಿನದಲ್ಲಿ ಸೇವಿಸುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಿದರೆ ದೇಹದಲ್ಲಿನ ಕೊಬ್ಬು ಕೂಡ ಕರಗಲು ಪ್ರಾರಂಭಿಸುತ್ತದೆ. ಹೀಗಾಗಿ ಬ್ರೊಕೊಲಿ ಉಪಹಾರವನ್ನು ವಾರಕ್ಕೆ ನಾಲ್ಕರಿಂದ ಐದು ಬಾರಿ ತಿನ್ನಲು ಪ್ರಯತ್ನಿಸಿ. ನಿಮಗೆ ಖಂಡಿತ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ.

Whats_app_banner