ಕನ್ನಡ ರಾಜ್ಯೋತ್ಸವ ರಸಪ್ರಶ್ನೆ: ಈ 10 ಪ್ರಶ್ನೆಗಳಿಗೆ ಉತ್ತರಿಸಿ, ಕರುನಾಡಿನ ಕುರಿತು ನಿಮ್ಮ ಜ್ಞಾನ ಪರೀಕ್ಷಿಸಿಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕನ್ನಡ ರಾಜ್ಯೋತ್ಸವ ರಸಪ್ರಶ್ನೆ: ಈ 10 ಪ್ರಶ್ನೆಗಳಿಗೆ ಉತ್ತರಿಸಿ, ಕರುನಾಡಿನ ಕುರಿತು ನಿಮ್ಮ ಜ್ಞಾನ ಪರೀಕ್ಷಿಸಿಕೊಳ್ಳಿ

ಕನ್ನಡ ರಾಜ್ಯೋತ್ಸವ ರಸಪ್ರಶ್ನೆ: ಈ 10 ಪ್ರಶ್ನೆಗಳಿಗೆ ಉತ್ತರಿಸಿ, ಕರುನಾಡಿನ ಕುರಿತು ನಿಮ್ಮ ಜ್ಞಾನ ಪರೀಕ್ಷಿಸಿಕೊಳ್ಳಿ

ಕನ್ನಡ ರಾಜ್ಯೋತ್ಸವ ರಸಪ್ರಶ್ನೆ: ಕರ್ನಾಟಕದ ಏಕೀಕರಣ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ, ವಿಶಾಲ ಮೈಸೂರು ರಾಜ್ಯ, ಕನ್ನಡದ ಮುಖ್ಯಮಂತ್ರಿಗಳು, ಕನ್ನಡದ ಕವಿಗಳು, ಗ್ರಂಥಗಳು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಪಟ್ಟ ಕನ್ನಡ ರಾಜ್ಯೋತ್ಸವ 2024ರ ರಸಪ್ರಶ್ನೆಗಳನ್ನು ಉತ್ತರದೊಂದಿಗೆ ಇಲ್ಲಿ ನೀಡಲಾಗಿದೆ.

ಕನ್ನಡ ರಾಜ್ಯೋತ್ಸವ ರಸಪ್ರಶ್ನೆ: ಈ 10 ಪ್ರಶ್ನೆಗಳಿಗೆ ಉತ್ತರಿಸಿ
ಕನ್ನಡ ರಾಜ್ಯೋತ್ಸವ ರಸಪ್ರಶ್ನೆ: ಈ 10 ಪ್ರಶ್ನೆಗಳಿಗೆ ಉತ್ತರಿಸಿ

ಕನ್ನಡ ರಾಜ್ಯೋತ್ಸವ ರಸಪ್ರಶ್ನೆ: ರಾಜ್ಯೋತ್ಸವ 2024ರ ಸಂಭ್ರಮದಲ್ಲಿ ಶಾಲಾ ಮಕ್ಕಳಿಗೆ, ವಿವಿಧ ಸಂಘಸಂಸ್ಥೆ, ಕಾಲೇಜು, ಆಫೀಸ್‌ಗಳಲ್ಲಿ, ಮಹಿಳಾ ಮಂಡಳಿಗಳಲ್ಲಿ ರಸಪ್ರಶ್ನೆ ಸ್ಪರ್ಧೆ ಇದ್ದೇ ಇರುತ್ತದೆ. ಕನ್ನಡಿಗರಿಗೆ ಕರ್ನಾಟಕದ ಬಗ್ಗೆ, ಕನ್ನಡದ ಬಗ್ಗೆ ಎಷ್ಟು ಗೊತ್ತಿದೆ ಎಂದು ತಿಳಿಯುವಂತಹ ಸಂದರ್ಭ ಇದಾಗಿದೆ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಪಟ್ಟ ಹತ್ತು ರಶಪ್ರಶ್ನೆಗಳನ್ನು ಇಲ್ಲಿ ನೀಡಿದೆ. ಕೊನೆಗೆ ಉತ್ತರವನ್ನೂ ನೀಡಲಾಗಿದೆ. ಉತ್ತರವನ್ನು ನೋಡದೆ ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಸಿ. ಕೊನೆಗೆ ನೀವು ನೀಡಿರುವ ಉತ್ತರ ಸರಿ ಇದೆಯೇ ಎಂದು ನೀಡಲಾದ ಸರಿ ಉತ್ತರಗಳ ಜತೆ ಹೋಲಿಕೆ ಮಾಡಿನೋಡಿ. ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಪಟ್ಟ ಭಾಷಣಗಳು, ಪ್ರಬಂಧಗಳನ್ನೂ ಹಿಂದೂಸ್ತಾನ್‌ ಟೈಮ್ಸ್‌ ಪ್ರಕಟಿಸಿದೆ. ಬನ್ನಿ ಈಗ ಕ್ವಿಜ್‌ ಆರಂಭಿಸೋಣ.

ಕನ್ನಡ ರಾಜ್ಯೋತ್ಸವ ರಸಪ್ರಶ್ನೆ: ಪ್ರಶ್ನೆಗಳು ಮತ್ತು ಉತ್ತರಗಳು

1. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ವರ್ಷ ಯಾವುದು?

ಎ. 1956

ಬಿ. 2006

ಸಿ. 2008

ಡಿ. 1973

2. ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದ ವರ್ಷ ಯಾವುದು?

ಎ. 1956

ಬಿ. 1906

ಸಿ. 1971

ಡಿ. 1973

3. ಕರ್ನಾಟಕ ಏಕೀಕರಣಗೊಂಡ ವರ್ಷ ಯಾವುದು?

ಎ. 1956

ಬಿ. 1947

ಸಿ. 1950

ಡಿ. 2006

4. ಕರ್ನಾಟಕದ ಮೊದಲ ಮುಖ್ಯ ಮಂತ್ರಿ ಯಾರು?

ಎ. ಕೆ.ಸಿ.ರೆಡ್ಡಿ

ಬಿ. ಕೆಂಗಲ್ ಹನುಮಂತಯ್ಯ

ಸಿ. ಎಸ್. ನಿಜಲಿಂಗಪ್ಪ

5. ಅಚ್ಚಗನ್ನಡದ ಕವಿ ಎಂದು ಹೆಸರಾದವರು ಯಾರು?

ಎ. ಆಂಡಯ್ಯ

ಬಿ. ನಯಸೇನ

ಸಿ. ದುರ್ಗಸಿಂಹ

ಡಿ. ಮಹಲಿಂಗರಂಗ

6. ಕನ್ನಡದ ಮೊಟ್ಟಮೊದಲ ಉಪಲಬ್ಧ ಗ್ರಂಥ ಯಾವುದು?

ಎ. ಕವಿರಾಜಮಾರ್ಗ

ಬಿ. ವಡ್ಡಾರಾಧನೆ

ಸಿ. ಪಂಚತಂತ್ರ

ಡಿ. ಆದಿಪುರಾಣ

7. ಕರ್ನಾಟಕದ ಗಾಂಧಿ ಎಂದು ಹೆಸರಾದವರು ಯಾರು?

ಎ. ಹರ್ಡೇಕರ್ ಮಂಜಪ್ಪ

ಬಿ. ಖಾನ್ ಅಬ್ದುಲ್ ಗಫಾರ್ ಖಾನ್

ಸಿ. ಎಸ್. ನರಸಿಂಹಯ್ಯ

8. ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನು ಕರೆಯಲಾಗುತ್ತದೆ?

ಎ. ಆಲೂರು ವೆಂಕಟರಾಯರು

ಬಿ. ಕಾರ್ನಾಡ್ ಸದಾಶಿವರಾವ್

ಸಿ. ಬೆನಗಲ್ ಶಾಮರಾವ್

ಡಿ. ಹಟ್ಟಿಯಂಗಡಿ ನಾರಾಯಣರಾವ್

9. ಕರ್ನಾಟಕ ದ ಗತವೈಭವ ಕೃತಿಯನ್ನು ಬರೆದವರು ಯಾರು?

ಎ. ಆಲೂರು ವೆಂಕಟರಾಯರು

ಬಿ. ಮಳಲಿ ಸುಬ್ಬರಾವ್

ಸಿ. ಗಳಗನಾಥರು

ಡಿ. ಪಾರ್ಥಿಸುಬ್ಬ

10.ಕನ್ನಡದ ಮೊಟ್ಟಮೊದಲ ಶಾಸನ ಯಾವುದು?

ಎ. ಬಾದಾಮಿ ಶಾಸನ

ಬಿ. ವಿಜಯನಗರ ಶಾಸನ

ಸಿ. ಹಲ್ಮಿಡಿ ಶಾಸನ

ಡಿ. ತಾಳಗುಂದ ಶಾಸನ

ಸರಿ ಉತ್ತರಗಳು

1. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ವರ್ಷ -2008

2. ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದ ವರ್ಷ -1973

3. ಕರ್ನಾಟಕ ಏಕೀಕರಣಗೊಂಡ ವರ್ಷ -1956

4. ಕರ್ನಾಟಕದ ಮೊದಲ ಮುಖ್ಯ ಮಂತ್ರಿ- ಕೆ.ಸಿ.ರೆಡ್ಡಿ

5. ಅಚ್ಚಗನ್ನಡದ ಕವಿ ಎಂದು ಹೆಸರಾದವರು- ಅಂಡಯ್ಯ

6. ಕನ್ನಡದ ಮೊಟ್ಟಮೊದಲ ಉಪಲಬ್ಧ ಗ್ರಂಥ - ಕವಿರಾಜಮಾರ್ಗ

7. ಕರ್ನಾಟಕದ ಗಾಂಧಿ ಎಂದು ಹೆಸರಾದವರು- ಹರ್ಡೇಕರ್ ಮಂಜಪ್ಪ

8. ಕರ್ನಾಟಕದ ಕುಲಪುರೋಹಿತ- ಆಲೂರು ವೆಂಕಟರಾಯರು

9. ಕರ್ನಾಟಕ ದ ಗತವೈಭವ ಕೃತಿ ಬರೆದವರು- ಆಲೂರು ವೆಂಕಟರಾಯರು

10. ಕನ್ನಡದ ಮೊಟ್ಟಮೊದಲ ಶಾಸನ- ಹಲ್ಮಿಡಿ ಶಾಸನ

Whats_app_banner