Opinion: ಕರ್ನಾಟಕದ ಜಿಲ್ಲಾ ಕೇಂದ್ರಗಳಿಗೂ ವಿಸ್ತರಣೆಯಾಗಲಿ ಕಿಡ್ನಿ ಕಸಿ ಸೌಲಭ್ಯ; ಮೂತ್ರಪಿಂಡ ಕಸಿ ತಜ್ಞ ಡಾ ಅಜಯ್ ಶೆಟ್ಟಿ ಆಶಯ-opinion renal transplant specialist dr ajay s shetty advocates forexpanded kidney transplant access across karnataka uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Opinion: ಕರ್ನಾಟಕದ ಜಿಲ್ಲಾ ಕೇಂದ್ರಗಳಿಗೂ ವಿಸ್ತರಣೆಯಾಗಲಿ ಕಿಡ್ನಿ ಕಸಿ ಸೌಲಭ್ಯ; ಮೂತ್ರಪಿಂಡ ಕಸಿ ತಜ್ಞ ಡಾ ಅಜಯ್ ಶೆಟ್ಟಿ ಆಶಯ

Opinion: ಕರ್ನಾಟಕದ ಜಿಲ್ಲಾ ಕೇಂದ್ರಗಳಿಗೂ ವಿಸ್ತರಣೆಯಾಗಲಿ ಕಿಡ್ನಿ ಕಸಿ ಸೌಲಭ್ಯ; ಮೂತ್ರಪಿಂಡ ಕಸಿ ತಜ್ಞ ಡಾ ಅಜಯ್ ಶೆಟ್ಟಿ ಆಶಯ

Dr Ajay S Shetty Opinion; ಮಣಿಪಾಲ ಆಸ್ಪತ್ರೆಯ ಮೂತ್ರಪಿಂಡ ಕಸಿ ತಜ್ಞ ಡಾ.ಅಜಯ್‌ ಶೆಟ್ಟಿ ಕರ್ನಾಟಕದಲ್ಲಿ ಕಿಡ್ನಿ ದಾನಕ್ಕೆ ಸಂಬಂಧಿಸಿದ ಸವಾಲು ಮತ್ತು ಅವಕಾಶಗಳ ಕಡೆಗೆ ಬೆಳಕು ಚೆಲ್ಲಿದ್ದು, ಜಿಲ್ಲಾ ಮಟ್ಟಕ್ಕೂ ಅಂಗಾಂಗ ಕಸಿ ಸೌಲಭ್ಯ ವಿಸ್ತರಣೆಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಜಿಲ್ಲಾ ಕೇಂದ್ರಗಳಿಗೂ ವ್ಯಾಪಿಸಲಿ ಕಿಡ್ನಿ ಕಸಿ ಸೌಲಭ್ಯ; ಮೂತ್ರಪಿಂಡ ಕಸಿ ತಜ್ಞ ಡಾ.ಅಜಯ್ ಶೆಟ್ಟಿ ಆಶಯ
ಕರ್ನಾಟಕದ ಜಿಲ್ಲಾ ಕೇಂದ್ರಗಳಿಗೂ ವ್ಯಾಪಿಸಲಿ ಕಿಡ್ನಿ ಕಸಿ ಸೌಲಭ್ಯ; ಮೂತ್ರಪಿಂಡ ಕಸಿ ತಜ್ಞ ಡಾ.ಅಜಯ್ ಶೆಟ್ಟಿ ಆಶಯ

ಪ್ರಸ್ತುತ ಕಾಲಘಟ್ಟದಲ್ಲಿ ಮಧುಮೇಹ ಉಲ್ಭಣಗೊಂಡವರಲ್ಲಿ ಕಿಡ್ನಿ ಸಮಸ್ಯೆ ಬೇಗ ಕಾಣಿಸಿಕೊಳ್ಳುತ್ತದೆ. ಇದಲ್ಲದೆ ಮೂತ್ರ ಪಿಂಡದ ಇತರೆ ಸಮಸ್ಯೆ ಅನುಭವಿಸುತ್ತಿರುವವರೂ ಇದ್ದಾರೆ. ಮೂತ್ರಪಿಂಡ ಜೋಡಿಸುವ ಮೂಲಕ ಅಥವಾ ಮೂತ್ರಪಿಂಡ ಕಸಿ ಮಾಡುವ ಮೂಲಕ ಅನೇಕ ರೋಗಿಗಳ ಸಮಸ್ಯೆ ನಿವಾರಿಸಲಾಗುತ್ತಿದ್ದು, ಈ ಸೌಲಭ್ಯ ಮಹಾನಗರಗಳಲ್ಲಿ ಮಾತ್ರ ಲಭ್ಯವಿದೆ. ನಮ್ಮ ರಾಜ್ಯ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮೂತ್ರಪಿಂಡ ಕಸಿಗೆ ಸಂಬಂಧಿಸಿದ ಸುಧಾರಿತ ಸೌಲಭ್ಯವಿದೆ. ಮತ್ತೆ ಇದು ಸ್ವಲ್ಪ ದುಬಾರಿ ಕೂಡ.

ಮೂತ್ರಪಿಂಡ ಸಮಸ್ಯೆ ಅನುಭವಿಸುತ್ತಿರುವವರು, ಡಯಾಲಿಸಿಸ್‌ಗೆ ಒಳಗಾಗುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಇಂತಹವರ ಅನುಕೂಲಕಕ್ಕಾಗಿ ಸರ್ಕಾರ ಚಿಕಿತ್ಸಾ ಸೌಲಭ್ಯವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು. ಸೌಲಭ್ಯಗಳನ್ನು ಉನ್ನತೀಕರಿಸುವ ಕೆಲಸವನ್ನೂ ಮಾಡಬೇಕು. ಅಂಗಾಂಗ ಕಸಿ ಸೌಲಭ್ಯ ವಿಶೇಷವಾಗಿ ಕಿಡ್ನಿ ಕಸಿ ಸೌಲಭ್ಯವನ್ನು ಜಿಲ್ಲಾ ಮಟ್ಟಕ್ಕೂ ವಿಸ್ತರಿಸಬೇಕು ಎಂಬ ಬೇಡಿಕೆ ಇದೆ. ಇದಕ್ಕೆ ಪೂರಕವಾಗಿ ಮಣಿಪಾಲ ಆಸ್ಪತ್ರೆಯ ಮೂತ್ರಪಿಂಡ ಕಸಿತಜ್ಞ ಡಾ.ಅಜಯ್‌ ಶೆಟ್ಟಿ ಕರ್ನಾಟಕದಲ್ಲಿ ಕಿಡ್ನಿ ದಾನಕ್ಕೆ ಸಂಬಂಧಿಸಿದ ಸವಾಲು ಮತ್ತು ಅವಕಾಶಗಳ ಕಡೆಗೆ ಬೆಳಕು ಚೆಲ್ಲಿದ್ದಾರೆ.

ಕರ್ನಾಟಕದಲ್ಲಿ ಕಿಡ್ನಿ ದಾನ; ಪ್ರಸ್ತುತ ಸವಾಲುಗಳು ಮತ್ತು ಅವಕಾಶಗಳು- ಡಾ. ಅಜಯ್ ಶೆಟ್ಟಿ ಅಭಿಮತ

ಭಾರತದ ಉಳಿದ ಭಾಗದಲ್ಲಿರುವಂತೆ ಕರ್ನಾಟಕದಲ್ಲಿಯೂ ಕಿಡ್ನಿ ದಾನವು ಸಮಸ್ಯೆಗಳನ್ನು ಎದುರಿಸುತ್ತಿವೆ ಮತ್ತು ಸುಧಾರಣೆಗೆ ಅವಕಾಶಗಳನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಲ್ಲಿ, ರಾಜ್ಯವು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮತ್ತು ಅದನ್ನು ಸುಲಭಗೊಳಿಸಲು ವ್ಯವಸ್ಥೆಗಳನ್ನು ಸ್ಥಾಪಿಸುವಲ್ಲಿ ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ. 2023 ರಲ್ಲಿ, ರಾಜ್ಯವು ಅಂಗಾಂಗ ದಾನಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವನ್ನು ಕಂಡಿತು ಮತ್ತು 178 ಅಂಗಾಂಗ ದಾನಗಳೊಂದಿಗೆ ಭಾರತದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿತು. ಆದರೆ, ಜೀವಂತ ವ್ಯಕ್ತಿಗಳ ಮತ್ತು ಮರಣ ಹೊಂದಿದವರ ಅಂಗ ದಾನಗಳೊಂದಿಗೆ ಇನ್ನೂ ಅನೇಕ ಸವಾಲುಗಳಿವೆ.

ಕಿಡ್ನಿ ದಾನದಲ್ಲಿ ಇರುವ ಸವಾಲುಗಳು

ಅಂಗಾಂಗ ಕಸಿಗಾಗಿ ಸಾವಿರಾರು ಜನರು ಕಾಯುತ್ತಿರುವ ಈ ಸಂದರ್ಭದಲ್ಲಿ, ದಾನಿಗಳ ಸಂಖ್ಯೆ ಮತ್ತು ಅಗತ್ಯದ ನಡುವೆ ಇನ್ನೂ ದೊಡ್ಡ ಅಂತರವಿದೆ. ಅಂಗಾಂಗ ದಾನದ ಬಗ್ಗೆ ಜನರಿಗೆ ಇನ್ನೂ ಸಾಕಷ್ಟು ತಿಳಿಯದೆ ಇರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಕರ್ನಾಟಕದ ಅನೇಕ ಜನರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಕಿಡ್ನಿ ದಾನ ಹೇಗೆ ಕೆಲಸ ಮಾಡುತ್ತದೆ ಅಥವಾ ಅದರ ಪ್ರಯೋಜನಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ತಪ್ಪು ಕಲ್ಪನೆಗಳು ಮತ್ತು ಸುಳ್ಳು ಸುದ್ದಿಗಳು ವೇಗವಾಗಿ ಹರಡುತ್ತವೆ, ಮತ್ತು ಇದರಿಂದಾಗಿ ಅನೇಕ ಜನರು ಅಂಗಾಂಗ ದಾನವನ್ನು ಮಾಡಲು ಹೆದರುತ್ತಾರೆ. ದಾನದ ನಂತರ ದಾನಿಯ ಆರೋಗ್ಯದ ಬಗ್ಗೆ ಚಿಂತೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆ, ಇವೆಲ್ಲವೂ ಅಂಗಾಂಗ ದಾನಿಗಳ ಕಡಿಮೆ ಸಂಖ್ಯೆಗೆ ಕಾರಣವಾಗಿದೆ.

ಗ್ರಾಮೀಣ ಭಾಗದಲ್ಲಿ ಅಂಗಾಂಗ ಕಸಿಗೆ ಸೌಲಭ್ಯ ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಬೆಂಗಳೂರಿನಂತಹ ನಗರಗಳು ಸುಧಾರಿತ ವೈದ್ಯಕೀಯ ಸೌಲಭ್ಯಗಳೊಂದಿಗೆ ಹೆಚ್ಚು ಸಂಖ್ಯೆಯ ಮೂತ್ರಪಿಂಡ ಕಸಿಗಳನ್ನು ಮಾಡಲು ಸುಸಜ್ಜಿತವಾಗಿವೆ, ಆದರೆ ಸಣ್ಣ ಪಟ್ಟಣಗಳು ​​​​ಮತ್ತು ಹಳ್ಳಿಗಳು ಮೃತ ದಾನಿಗಳಿಂದ ಅಂಗಾಂಗ ದಾನಗಳನ್ನು ಮಾಡಿಸಲು ಅಗತ್ಯವಾದ ಆರೋಗ್ಯ ಮೂಲಸೌಕರ್ಯವನ್ನು ಹೊಂದಿಲ್ಲ.

ಮೂತ್ರ ಪಿಂಡ ದಾನ ಎಷ್ಟು ಮುಖ್ಯ ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರಿಂದ ಮತ್ತು ಅಂಗಾಂಗ ದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವುದರ ಮೂಲಕ, ಅಂಗಾಂಗ-ದಾನಕ್ಕೆ ಸಂಬಂಧಪಟ್ಟ ಹಲವಾರು ಸವಾಲುಗಳನ್ನು ಪರಿಹರಿಸಬಹುದಾಗಿದೆ. ಇದರಿಂದ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಅದೇ ರೀತಿ ಭಾರತ ಸರ್ಕಾರ ಇಡೀ ದೇಶದಲ್ಲಿ ಮೂತ್ರಪಿಂಡ ದಾನವನ್ನು ಹೆಚ್ಚಿಸಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನಗಳು ಮತ್ತು ಸಮುದಾಯದ ಜನರಲ್ಲಿ ಮಾತುಕತೆಗಳನ್ನು ನಡೆಸುವ ಮೂಲಕ ಹೆಚ್ಚಿನ ಜನರನ್ನು ದಾನಿಗಳಾಗಲು ಪ್ರೋತ್ಸಾಹಿಸಬಹುದು.

ಇದಲ್ಲದೇ, ಸಂಭಾವ್ಯ ದಾನಿಗಳನ್ನು ಹುಡುಕಲು ಮತ್ತು ಅಂಗಾಂಗಳನ್ನು ಸಂಗ್ರಹಿಸಲು ನಮಗೆ ದೃಢವಾದ ನೀತಿಗಳು ಮತ್ತು ಉತ್ತಮ ಸೌಲಭ್ಯಗಳ ಅಗತ್ಯವಿದೆ. ಒಟ್ಟಾಗಿ ಕೆಲಸ ಮಾಡುವ ಮೂಲಕ, ನಾವು ಖಂಡಿತವಾಗಿಯೂ ಕಿಡ್ನಿ ದಾನಿಗಳ ಸಂಖ್ಯೆಯನ್ನು ಹೆಚ್ಚಿಸಬಹುದು, ಹೆಚ್ಚಿನ ಜೀವಗಳನ್ನು ಉಳಿಸಬಹುದು ಮತ್ತು ತೀವ್ರ ಮೂತ್ರಪಿಂಡ ವೈಫಲ್ಯವಿರುವ ಅನೇಕ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು.

(ಲೇಖನ- ಡಾ. ಅಜಯ್ ಎಸ್ ಶೆಟ್ಟಿ, ಲೀಡ್ ಕನ್ಸಲ್ಟೆಂಟ್ - ರೀನಲ್ ಟ್ರಾನ್ಸ್​ಪ್ಲಾಂಟೇಷನ್ ಮತ್ತು ರೋಬೋಟಿಕ್ ಸರ್ಜನ್, ಮಣಿಪಾಲ್ ಆಸ್ಪತ್ರೆ ಯಶವಂತಪುರ ಮತ್ತು ಹೆಬ್ಬಾಳ)

mysore-dasara_Entry_Point