8 ತಿಂಗಳಲ್ಲಿ 32 ಕೆಜಿ ಇಳಿಸಿಕೊಂಡ ಶಿಕ್ಷಕಿ, 24 ವಾರಗಳಲ್ಲಿ 31 ಕೆಜಿ ತೂಕ ಕಳೆದುಕೊಂಡ ಫಿಟ್‌ನೆಸ್ ಟ್ರೈನರ್‌; ಹೀಗಿತ್ತು ವೈಟ್‌ಲಾಸ್ ಜರ್ನಿ
ಕನ್ನಡ ಸುದ್ದಿ  /  ಜೀವನಶೈಲಿ  /  8 ತಿಂಗಳಲ್ಲಿ 32 ಕೆಜಿ ಇಳಿಸಿಕೊಂಡ ಶಿಕ್ಷಕಿ, 24 ವಾರಗಳಲ್ಲಿ 31 ಕೆಜಿ ತೂಕ ಕಳೆದುಕೊಂಡ ಫಿಟ್‌ನೆಸ್ ಟ್ರೈನರ್‌; ಹೀಗಿತ್ತು ವೈಟ್‌ಲಾಸ್ ಜರ್ನಿ

8 ತಿಂಗಳಲ್ಲಿ 32 ಕೆಜಿ ಇಳಿಸಿಕೊಂಡ ಶಿಕ್ಷಕಿ, 24 ವಾರಗಳಲ್ಲಿ 31 ಕೆಜಿ ತೂಕ ಕಳೆದುಕೊಂಡ ಫಿಟ್‌ನೆಸ್ ಟ್ರೈನರ್‌; ಹೀಗಿತ್ತು ವೈಟ್‌ಲಾಸ್ ಜರ್ನಿ

ತೂಕ ಇಳಿಕೆ ಮಾಡಿಕೊಂಡವರಲ್ಲಿ ಪ್ರತಿಯೊಬ್ಬರ ಕಥೆಯೂ ಬೇರೆ ಬೇರೆಯಾಗಿದೆ. ಕಠಿಣ ಪರಿಶ್ರಮ ಹಾಗೂ ಸಮರ್ಪಣಾ ಮನೋಭಾವದಿಂದ ಸಾಧಿಸಿ ತೋರಿಸಿದ್ದಾರೆ.ನೋಯ್ಡಾದ ಶಿಕ್ಷಕಿಯೊಬ್ಬರು ಎಂಟು ತಿಂಗಳಿನಲ್ಲಿ 32 ಕೆಜಿ ತೂಕ ಕಳೆದುಕೊಂಡರೆ, ಅಮೆರಿಕದ ಫಿಟ್ನೆಸ್ ತರಬೇತುದಾರ್ತಿ 24 ವಾರಗಳಲ್ಲಿ 31 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇವರ ತೂಕ ಇಳಿಕೆ ಪ್ರಯಾಣ ಹೀಗಿತ್ತು.

ನೋಯ್ಡಾದ ಶಿಕ್ಷಕಿಯೊಬ್ಬರು 32 ಕೆಜಿ ತೂಕ ಇಳಿಸಿಕೊಂಡಿದ್ದರೆ, ಅಮೆರಿಕದ ಫಿಟ್ನೆಸ್ ತರಬೇತುದಾರ್ತಿ 31 ಕೆಜಿ ಇಳಿಸಿಕೊಂಡಿದ್ದಾರೆ. ಇಲ್ಲಿದೆ ಸ್ಫೂರ್ತಿಯ ಕಥೆ.
ನೋಯ್ಡಾದ ಶಿಕ್ಷಕಿಯೊಬ್ಬರು 32 ಕೆಜಿ ತೂಕ ಇಳಿಸಿಕೊಂಡಿದ್ದರೆ, ಅಮೆರಿಕದ ಫಿಟ್ನೆಸ್ ತರಬೇತುದಾರ್ತಿ 31 ಕೆಜಿ ಇಳಿಸಿಕೊಂಡಿದ್ದಾರೆ. ಇಲ್ಲಿದೆ ಸ್ಫೂರ್ತಿಯ ಕಥೆ. (Shutterstock)

ತೂಕ ಇಳಿಕೆಗೆ ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾದವರು ಅನೇಕರಿದ್ದಾರೆ. ತೂಕವನ್ನು ಹೇಗೆಲ್ಲಾ ಇಳಿಸಿಕೊಂಡರು ಎಂಬ ಸ್ಪೂರ್ತಿಯ ಕಥೆಗಳ ಬಗ್ಗೆ ನೀವು ಓದಿರಬಹುದು. ತೂಕ ಇಳಿಕೆ ಮಾಡಿಕೊಂಡವರಲ್ಲಿ ಪ್ರತಿಯೊಬ್ಬರ ಕಥೆಯೂ ಬೇರೆ ಬೇರೆಯಾಗಿದೆ. ಹಾಗಂತ ಅದೇನು ಸುಲಭದ ಹಾದಿಯಾಗದಿದ್ದರೂ, ಕಠಿಣ ಪರಿಶ್ರಮ ಹಾಗೂ ಸಮರ್ಪಣಾ ಮನೋಭಾವದಿಂದ ಸಾಧಿಸಿ ತೋರಿಸಿದ್ದಾರೆ. ಇದೇ ರೀತಿ ಅಮೆರಿಕದ ಫಿಟ್‌ನೆಸ್ ತರಬೇತುದಾರ್ತಿ ಟಾರಾ ಡಿಕ್ಸನ್ ತನ್ನ ತೂಕ ಇಳಿಸುವ ಪ್ರಯಾಣದಿಂದ ಖಂಡಿತಾ ಪ್ರೇರೇಪಿಸುತ್ತಾಳೆ. ತಾಯಿಯೂ ಆಗಿರುವ ಟಾರಾ ಡಿಕ್ಸನ್ ಅವರು ತಮ್ಮ ಫಿಟ್‌ನೆಸ್ ಪ್ರಯಾಣದ ಬಗ್ಗೆ ವಿವರಿಸಿದ್ದಾರೆ.

12 ವಾರಗಳಲ್ಲಿ ವ್ಯತ್ಯಾಸ ಪ್ರಾರಂಭವಾಗುತ್ತದೆ

ತೂಕ ಇಳಿಕೆ ಪ್ರಯಾಣದ ಮೊದಲಿಗೆ ಅಂತಹ ವ್ಯತ್ಯಾಸ ಕಂಡುಬರದಿದ್ದರೂ ನಿರಂತರ ಪರಿಶ್ರಮ ಹಾಕಬೇಕು. ನಾಲ್ಕು ವಾರಗಳ ನಿರಂತರ ಪರಿಶ್ರಮದಿಂದ ವ್ಯತ್ಯಾಸವನ್ನು ಗಮನಿಸಬಹುದು. ಎಂಟು ವಾರಗಳಲ್ಲಿ ನೀವು ವ್ಯತ್ಯಾಸವನ್ನು ಪ್ರಾರಂಭಿಸುತ್ತೀರಿ. 12 ವಾರಗಳಲ್ಲಿ ಖಂಡಿತಾ ನಿಮಗೆ ವ್ಯತ್ಯಾಸ ಶುರುವಾಗುತ್ತದೆ. 16 ವಾರಗಳಲ್ಲಿ ಇತರೆ ಜನರು ನಿಮ್ಮಲ್ಲಿ ವ್ಯತ್ಯಾಸವನ್ನು ಗಮನಿಸುತ್ತಾರೆ. ಹೀಗಾಗಿ ಕಠಿಣವೆನಿಸಿದರೂ ನಿಮ್ಮ ತೂಕ ಇಳಿಕೆಯ ಪ್ರಯಾಣವನ್ನು ಮಾತ್ರ ಮೊಟಕುಗಳಿಸಬೇಡಿ. ಆರೋಗ್ಯಯುತವಾಗಿ ತೂಕ ಇಳಿಕೆ ಮಾಡಬಹುದು. 24 ವಾರಗಳಲ್ಲಿ ನಿಮ್ಮ ಗುರಿಯನ್ನು ತಲುಪಬಹುದು. ನಾಲ್ಕು ವಾರಗಳಲ್ಲಿ ವ್ಯತ್ಯಾಸ ಗೊತ್ತಾಗದಿದ್ದರೆ ತೂಕ ಇಳಿಕೆಯನ್ನು ಮುಂದುವರಿಸದೆ ಇರಬೇಡಿ. ತೂಕ ಇಳಿಕೆಯ ಪ್ರಯಾಣವನ್ನು ಮುಂದುವರೆಸಿ. ಖಂಡಿತಾ ವ್ಯತ್ಯಾಸವನ್ನು ಗಮನಿಸುವಿರಿ ಎಂದು ಟಾರಾ ಡಿಕ್ಸನ್ ಹೇಳಿದ್ದಾರೆ. ಟಾರಾ ಡಿಕ್ಸನ್ 10 ತಿಂಗಳುಗಳಲ್ಲಿ 31 ಕೆ.ಜಿ ತೂಕವನ್ನು ಇಳಿಸಿಕೊಂಡಿದ್ದಾರೆ.

ತೂಕ ಇಳಿಕೆಯ ಪ್ರಯಾಣದಲ್ಲಿ ಹೇಗಿತ್ತು, ತಾನು 24 ವಾರಗಳಲ್ಲಿ 31 ಕೆ.ಜಿ ಹೇಗೆ ತೂಕ ಕಳೆದುಕೊಂಡೆ ಎಂಬ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿವರಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದು, ಇದೊಂದು ಅದ್ಭುತ ರೂಪಾಂತರವಾಗಿದೆ. ಈ ಆಹಾರಕ್ರಮವೋ ಅಥವಾ ವ್ಯಾಯಾಮವೇ ಎಂಬುದಾಗಿ ಕೇಳಿದ್ದಾರೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಯಾವುದೇ ಫಲಿತಾಂಶವನ್ನು ಕಾಣುತ್ತಿಲ್ಲವೇ? ಕ್ಯಾಲೋರಿ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಡಿ. ಆಹಾರದ ಹೊರತಾಗಿ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಪ್ರಯತ್ನಿಸುತ್ತಿದ್ದರೆ ದೇಹವನ್ನು ದಂಡಿಸಬೇಕು.

ಎಂಟು ತಿಂಗಳಿನಲ್ಲಿ 32 ಕೆಜಿ ತೂಕ ಇಳಿಸಿಕೊಂಡ 34 ವರ್ಷದ ಶಿಕ್ಷಕಿ

ಗ್ರೇಟರ್ ನೋಯ್ಡಾದ 34 ವರ್ಷದ ಶಿಕ್ಷಕಿ ಆಕಾಂಶಾ ಲಾಲ್ ಎಂಬುವವರು ಎಂಟು ತಿಂಗಳಿನಲ್ಲಿ ಬರೋಬ್ಬರಿ 32 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಗರ್ಭಾವಸ್ಥೆಯ ನಂತರ ತೂಕ ಹೆಚ್ಚಳಗೊಂಡಿತ್ತು. ಕಠಿಣ ಪರಿಶ್ರಮ ಹಾಗೂ ಆರೋಗ್ಯಕರ ಆಹಾರ ಪದ್ಧತಿಯಿಂದ 89 ಕೆಜಿ ತೂಕ ಹೊಂದಿದ್ದ ಅವರು ಎಂಟು ತಿಂಗಳಿನಲ್ಲಿ ಬರೋಬ್ಬರಿ 57 ಕೆ.ಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ. ಜಂಕ್ ಫುಡ್‍ಗಳನ್ನು ತ್ಯಜಿಸಿದ ಅವರು, ಪ್ರತಿದಿನ ಓಡಲು ಶುರು ಮಾಡಿದ್ರು.

ಆಹಾರ ಪದ್ಧತಿಯಲ್ಲಿ ಬದಲಾವಣೆ

ಕೇವಲ ಓಟವಷ್ಟೇ ಅಲ್ಲ, ಆಹಾರ ಪದ್ಧತಿಯಲ್ಲಿ ಪ್ರಮುಖ ಬದಲಾವಣೆ ಮಾಡಿಕೊಂಡ ಆಕಾಂಶಾ, ಅನಾರೋಗ್ಯಕರ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಿದರು. ಉಗುರು ಬೆಚ್ಚಗಿನ ನೀರಿಗೆ ಜೇನುತುಪ್ಪ ಮತ್ತು ನೀರು ಹಾಗೂ ಉಗುರು ಬೆಚ್ಚಗಿನ ನೀರಿಗೆ ಕಾಮಕಸ್ತೂರಿ ಬೀಜಗಳನ್ನು ಸೇರಿಸಿ ಸೇವಿಸುತ್ತಿದ್ದರು.

ಬೆಳಗಿನ ಉಪಹಾರಕ್ಕೆ ಒಂದು ಲೋಟ ಹಾಲಿನೊಂದಿಗೆ 2 ಮೊಟ್ಟೆಯ ಬಿಳಿ ಭಾಗ, ಒಣ ಹಣ್ಣುಗಳು, ಓಟ್ಸ್‌ಗೆ ಜೇನುತುಪ್ಪ ಮಿಶ್ರಣ, ಅಥವಾ ತರಕಾರಿ ಅವಲಕ್ಕಿ ಸೇವಿಸುತ್ತಿದ್ದರು. ಒಂದು ರೋಟಿ ಅಥವಾ ದಾಲ್, ಅಥವಾ ತರಕಾರಿ ಸಬ್ಜಿ, ಒಂದು ರೊಟ್ಟಿಯನ್ನು ಪೀನಟ್ ಬಟರ್‌ನೊಂದಿಗೆ ಸೇವಿಸುತ್ತಿದ್ದರು. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡ ಟೀಚರ್, ತನ್ನ ದೇಹವನ್ನು ಕೂಡ ಸರಿಯಾದ ರೀತಿಯಲ್ಲಿ ದಂಡಿಸಿದ್ದಾರೆ. ವಾರಕ್ಕೆ ಐದು ದಿನ ಓಟ, ಮೂರು ದಿನ ಕರಾಟೆ ಅಭ್ಯಾಸ ಮಾಡಿದರೆ, ವಾರಕ್ಕೊಮ್ಮೆ ಕಿಕ್ ಬಾಕ್ಸಿಂಗ್‌ನಲ್ಲಿ ತೊಡಗುತ್ತಿದ್ದರು. ಒಟ್ಟಿನಲ್ಲಿ ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವದಿಂದ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ.

Whats_app_banner