ತೂಕ ಇಳಿಕೆಗೆ ಚಿಂತಿಸುತ್ತಿದ್ದೀರಾ: ಪ್ರತಿದಿನ 7000 ಹೆಜ್ಜೆ ನಡೆಯಿರಿ, ಖಂಡಿತ ಉತ್ತಮ ಫಲಿತಾಂಶ ನಿಮ್ಮದಾಗುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ತೂಕ ಇಳಿಕೆಗೆ ಚಿಂತಿಸುತ್ತಿದ್ದೀರಾ: ಪ್ರತಿದಿನ 7000 ಹೆಜ್ಜೆ ನಡೆಯಿರಿ, ಖಂಡಿತ ಉತ್ತಮ ಫಲಿತಾಂಶ ನಿಮ್ಮದಾಗುತ್ತೆ

ತೂಕ ಇಳಿಕೆಗೆ ಚಿಂತಿಸುತ್ತಿದ್ದೀರಾ: ಪ್ರತಿದಿನ 7000 ಹೆಜ್ಜೆ ನಡೆಯಿರಿ, ಖಂಡಿತ ಉತ್ತಮ ಫಲಿತಾಂಶ ನಿಮ್ಮದಾಗುತ್ತೆ

ಆರೋಗ್ಯ ಹಾಗೂ ತೂಕ ಇಳಿಕೆಗೆ ವಾಕಿಂಗ್ (ನಡಿಗೆ) ಮಾಡುವುದು ಬಹಳ ಉಪಯುಕ್ತ. ಪ್ರತಿದಿನ ಸುಮಾರು 7,000 ಹೆಜ್ಜೆಯಾದರೂ ನೀವು ನಡೆಯಲೇಬೇಕು. ತೂಕ ಇಳಿಸುವ ಪ್ರಯಾಣವನ್ನು ಪ್ರಾರಂಭಿಸಲು ವಾಕಿಂಗ್ ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ಇದು ಕಡಿಮೆ ಪರಿಣಾಮಕಾರಿಯಾಗಿದ್ದರೂಕ್ಯಾಲೊರಿ ಬರ್ನ್ ಮಾಡಲು ಉತ್ತಮ ಮಾರ್ಗ. ಕ್ರಮೇಣ ಇದನ್ನು ಹೆಚ್ಚಿಸಬಹುದು.

ಆರೋಗ್ಯ ಹಾಗೂ ತೂಕ ಇಳಿಕೆಗೆ ವಾಕಿಂಗ್ (ನಡಿಗೆ) ಮಾಡುವುದು ಬಹಳ ಉಪಯುಕ್ತ.
ಆರೋಗ್ಯ ಹಾಗೂ ತೂಕ ಇಳಿಕೆಗೆ ವಾಕಿಂಗ್ (ನಡಿಗೆ) ಮಾಡುವುದು ಬಹಳ ಉಪಯುಕ್ತ. (shutterstock)

ತೂಕ ಕಳೆದುಕೊಳ್ಳಲು ಯೋಚಿಸುತ್ತಿದ್ದೀರಾ. ಇದಕ್ಕಾಗಿ ಇಂಟರ್ನೆಟ್‌ನಲ್ಲಿ ತಡಕಾಡುತ್ತಿರುವಿರಾ? ಅದರಲ್ಲಿರುವ ಸಲಹೆಗಳನ್ನು ನೋಡಿ ಪೆಚ್ಚಾಗಿದ್ದೀರಾ? ತೂಕ ಇಳಿಕೆಗೆ ಇದೇ ಮೊದಲ ಬಾರಿ ಪ್ರಯತ್ನಿಸುತ್ತಿದ್ದರೆ ನಿಮಗಾಗಿ ಇಲ್ಲಿ ಕೆಲವು ಸಲಹೆಗಳನ್ನು ಕೊಡುತ್ತಿದ್ದೇವೆ. ಅದನ್ನು ಪಾಲಿಸಿ. ಉತ್ತಮ ಫಲಿತಾಂಶವನ್ನು ಖಂಡಿತಾ ಪಡೆಯುವಿರಿ. ಹಾಗಂತ ಸೋಂಬೇರಿಯಂತೆ ಬಿದ್ದುಕೊಂಡಿದ್ದರೆ, ಅಂದುಕೊಂಡಿದ್ದನ್ನು ಸಾಧಿಸುವುದು ಸುಲಭವಲ್ಲ. ಇದಕ್ಕಾಗಿ ಕಠಿಣ ಪರಿಶ್ರಮ ಬಹಳ ಮುಖ್ಯ. ಆಹಾರ ಕ್ರಮ, ಹೆಚ್ಚು ನಡೆಯುವುದು, ದೇಹವನ್ನು ಹೈಡ್ರೀಕರಿಸಿಕೊಳ್ಳುವುದು ತೂಕ ನಷ್ಟ ಪ್ರಯಾಣದಲ್ಲಿ ಬಹಳ ಮುಖ್ಯ.

ಆರೋಗ್ಯ ಹಾಗೂ ತೂಕ ಇಳಿಕೆಗೆ ವಾಕಿಂಗ್ (ನಡಿಗೆ) ಮಾಡುವುದು ಬಹಳ ಉಪಯುಕ್ತ. ಪ್ರತಿದಿನ ಸುಮಾರು 7,000 ಹೆಜ್ಜೆಯಾದರೂ ನೀವು ನಡೆಯಲೇಬೇಕು. ತೂಕ ಇಳಿಸುವ ಪ್ರಯಾಣವನ್ನು ಪ್ರಾರಂಭಿಸಲು ವಾಕಿಂಗ್ ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ಇದು ಕಡಿಮೆ ಪರಿಣಾಮಕಾರಿಯಾಗಿದ್ದರೂ ಕ್ಯಾಲೊರಿ ಬರ್ನ್ ಮಾಡಲು ಉತ್ತಮ ಮಾರ್ಗ. ಕ್ರಮೇಣ ಇದನ್ನು ಹೆಚ್ಚಿಸಬಹುದು.

ನಡಿಗೆಗಾಗಿ ಇಲ್ಲಿದೆ ಸಲಹೆ

ಹೆಜ್ಜೆಗಳನ್ನು ಟ್ರ್ಯಾಕ್ ಮಾಡಿ: ನೀವು ಪ್ರಸ್ತುತ ಎಷ್ಟು ಹೆಜ್ಜೆ ನಡೆಯುತ್ತಿದ್ದೀರಿ ಎಂಬುದನ್ನು ಗಮನಿಸಲು ಫೋನ್ ಅಪ್ಲಿಕೇಶನ್ ಅಥವಾ ಸ್ಮಾರ್ಟ್ ವಾಚ್ ಉಪಯೋಗಿಸಬಹುದು. ಪ್ರತಿ ವಾರ ಈ ಹೆಜ್ಜೆಗಳನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸಬಹುದು.

ನಡಿಗೆಯತ್ತ ಗಮನ ಇರಲಿ: ವಿರಾಮ ತೆಗೆದುಕೊಂಡಾಗ, ಇದ್ದ ಸ್ಥಳದಲ್ಲಿಯೇ ಸ್ವಲ್ಪ ನಡೆಯಿರಿ. ಹತ್ತಿರದ ಅಂಗಡಿಗೆ ಹೋಗಬೇಕೆಂದರೆ ಸ್ಕೂಟರ್ ತೆಗೆದುಕೊಂಡು ಹೋಗುವ ಬದಲು ವಾಕ್ ಮಾಡಿ. ಮಾಲ್, ರೆಸ್ಟೋರೆಂಟ್ ಇತ್ಯಾದಿಗಳಲ್ಲಿ ಎಲಿವೇಟರ್ ಬಳಸುವ ಬದಲು ಮೆಟ್ಟಿಲುಗಳನ್ನು ಬಳಸಿ. ನಡೆಯುವಾಗ ಉದಾಸೀನತೆ ಆಗುತ್ತದೆ ಎಂದರೆ ಯಾರೊಂದಿಗಾದರೂ ಫೋನ್‍ನಲ್ಲಿ ಮಾತನಾಡುವುದು ಅಥವಾ ಸಂಗೀತವನ್ನು ಆಲಿಸಬಹುದು.

ನಡಿಗೆಯ ಪ್ರಯೋಜನ: ನಡಿಗೆಯು ಹೃದಯರಕ್ತನಾಳದ ಆರೋಗ್ಯ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ವಿಶೇಷ ಉಪಕರಣಗಳು ಅಥವಾ ಜಿಮ್‌ಗೆ ಹೋಗದೆಯೇ ಫಿಟ್‌ನೆಸ್ ದಿನಚರಿಯಲ್ಲಿ ತೊಡಗಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ವಾರಕ್ಕೆ ಮೂರು ಬಾರಿ ಶಕ್ತಿ ತರಬೇತಿಯಲ್ಲಿ ತೊಡಗಿಕೊಳ್ಳಿ

ಶಕ್ತಿ ತರಬೇತಿಯು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ವಿಶ್ರಾಂತಿ ಸಮಯದಲ್ಲಿಯೂ ಸಹ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಆರಂಭಿಕರಾಗಿದ್ದರೆ ಹೆಚ್ಚಿನ ಭಾರವನ್ನು ಎತ್ತಬೇಕೆಂದಿಲ್ಲ. ಡಂಬೆಲ್ಸ್ ಅಥವಾ ಇತರೆ ಲಘು ವ್ಯಾಯಾಮವನ್ನು ಆಯ್ಕೆ ಮಾಡಬಹುದು. ವಾರಕ್ಕೆ ಎರಡರಿಂದ ಮೂರು ಬಾರಿ ಇವುಗಳನ್ನು ಪ್ರಯತ್ನಿಸಬಹುದು. ಕ್ರಮೇಣ ಇದನ್ನು ಹೆಚ್ಚಿಸಬಹುದು. ಇದು ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಹೈಡ್ರೇಟೆಡ್ ಆಗಿರುವುದು ಬಹಳ ಮುಖ್ಯ

ಹೈಡ್ರೇಟೆಡ್ ಆಗಿರುವುದು ತೂಕ ಇಳಿಕೆಯಲ್ಲಿ ಪ್ರಮುಖವಾಗಿದೆ. ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೆಯೇ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವು ನಿರ್ಜಲೀಕರಣಗೊಳ್ಳದಂತೆ ತಡೆಯುವುದು ಬಹಳ ಮುಖ್ಯ. ಸಾಕಷ್ಟು ನೀರು ಕುಡಿಯುವುದರಿಂದ ದೇಹವನ್ನು ಹೈಡ್ರೇಟೆಡ್ ಆಗಿರಿಸಬಹುದು. ಅಲ್ಲದೆ ಅನಗತ್ಯವಾಗಿ ತಿನ್ನುವ ಬಯಕೆಗಳನ್ನು ಕಡಿಮೆ ಮಾಡಬಹುದು. ನೀವು ಕಡಿಮೆ ನೀರು ಕುಡಿಯುತ್ತಿದ್ದರೆ ಈ ಸಲಹೆಗಳನ್ನು ಪಾಲಿಸಬಹುದು.

ನಿರ್ದಿಷ್ಟ ಗುರಿ ಇರಲಿ: ಮೊದಲಿಗೆ ದಿನಕ್ಕೆ 8 ರಿಂದ 10 ಲೋಟ ನೀರು ಕುಡಿಯುವ ಗುರಿಯನ್ನು ಹೊಂದಬೇಕು. ನಂತರ ಇದನ್ನು ಹೆಚ್ಚಿಸಬಹುದು.

ಊಟಕ್ಕೆ ಮುಂಚಿತವಾಗಿ ನೀರು ಕುಡಿಯಿರಿ: ಊಟಕ್ಕೆ ಮುನ್ನ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಹಾಗೆಯೇ ಅತಿಯಾಗಿ ತಿನ್ನುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ.

ನೀರಿನ ಬಾಟಲಿಯನ್ನು ಒಯ್ಯಿರಿ: ನೀವು ಎಲ್ಲೇ ಹೋದರೂ ನೀರಿನ ಬಾಟಲಿಯನ್ನು ಒಯ್ಯಬೇಕು. ಆಗಾಗ ನೀರು ಕುಡಿಯುತ್ತಿರಬೇಕು. ದೇಹವನ್ನು ಹೈಡ್ರೀಕರಿಸಲು ದಿನವಿಡೀ ನೀರು ಕುಡಿಯುತ್ತಿರಬೇಕು.

ಹೆಚ್ಚು ನೀರು ಕುಡಿಯುವುದರ ಪ್ರಯೋಜನ: ಜೀರ್ಣಕ್ರಿಯೆ, ಚಯಾಪಚಯ ಮತ್ತು ಶಕ್ತಿಗೆ ದೇಹವು ಹೈಡ್ರೀಕರಣಗೊಂಡಿರುವುದು ಅತ್ಯಗತ್ಯ. ಹೆಚ್ಚು ನೀರು ಕುಡಿಯುವುದರಿಂದ ಕ್ಯಾಲೊರಿಗಳನ್ನು ಬರ್ನ್ ಮಾಡಲು ಟಾಕ್ಸಿನ್ ಹೊರಹಾಕಲು ಸಹಾಯ ಮಾಡುತ್ತದೆ.

ಆರೋಗ್ಯಕರ ಆಹಾರ ಸೇವನೆಯ ಸಲಹೆಗಳು

ತೂಕ ಇಳಿಕೆಯ ಪ್ರಯಾಣದಲ್ಲಿ ಆರೋಗ್ಯಕರ ಆಹಾರಗಳನ್ನು ಮಾತ್ರ ಸೇವಿಸಬೇಕು. ಇದರತ್ತ ಮಾತ್ರ ನಿಮ್ಮ ಗಮನವಿರಲಿ. ಫಾಸ್ಟ್ ಫುಡ್, ಬೇಕರಿ ತಿಂಡಿ, ಹೆಚ್ಚಿನ ಕೊಲೆಸ್ಟ್ರಾಲ್ ಇರುವ ಆಹಾರ ಪದಾರ್ಥಗಳನ್ನು ತ್ಯಜಿಸಿ. ಹಣ್ಣುಗಳು, ತರಕಾರಿಗಳು, ನೇರ ಪ್ರೋಟೀನ್‌ಗಳು, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಸೇವಿಸುವುದು ಬಹಳ ಮುಖ್ಯ. ಸಕ್ಕರೆ ಪಾನೀಯಗಳನ್ನು ಕೂಡ ಸೇವಿಸಬಾರದು. ಇದರ ಬದಲಿಗೆ ನೀರು, ಗಿಡಮೂಲಿಕೆ ಚಹಾಗಳು ಅಥವಾ ಬ್ಲಾಕ್ ಕಾಫಿ, ಗ್ರೀನ್ ಟೀ ಇತ್ಯಾದಿಯನ್ನು ಕುಡಿಯಬಹುದು.

ಒಟ್ಟಿನಲ್ಲಿ ತೂಕ ಇಳಿಕೆ ಪ್ರಯಾಣವು ಅಷ್ಟು ಸುಲಭವಾದ ಹಾದಿಯಲ್ಲ. ಹಾಗಂತ ಆತ್ಮವಿಶ್ವಾಸ, ತಾಳ್ಮೆ, ಪರಿಶ್ರಮ ಇದ್ದರೆ ಖಂಡಿತಾ ನೀವು ಈ ಹಾದಿಯಲ್ಲಿ ಯಶಸ್ಸನ್ನು ಪಡೆಯುವಿರಿ. ಅದೆಷ್ಟೋ ಮಂದಿ ತಮ್ಮ ತೂಕ ಇಳಿಕೆಯ ಹಾದಿಯಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಹಾಗಂತ ಅವರು ನಡೆದು ಬಂದ ಹಾದಿ ಹೂವಿನ ದಾರಿಯಾಗಿರಲಿಲ್ಲ ಎಂಬುದನ್ನು ನೆನಪಿಡಿ.

Whats_app_banner