ಕನ್ನಡ ತರಗತಿಯಲ್ಲಿ ಹಳೆಗನ್ನಡ ಪದ್ಯವನ್ನು ತಪ್ಪಿಲ್ಲದೆ ಹೇಳಿ ಎಲ್ಲರನ್ನೂ ಬೆರಗುಗೊಳಿಸಿದ ಭಾಗ್ಯ
ಭಾಗ್ಯ, ಟೀಚರ್ ಹೇಳಿಕೊಟ್ಟ ಹಳೆಗನ್ನಡ ಪದ್ಯವನ್ನು ನಿರರ್ಗಳವಾಗಿ ಹೇಳಿ ತನ್ವಿ ಸೇರಿದಂತೆ ಎಲ್ಲರಿಗೂ ಶಾಕ್ ನೀಡುತ್ತಾಳೆ. ನಿಮಗೆ ಒಳ್ಳೆ ಭವಿಷ್ಯ ಇದೆ ಎಂದು ಟೀಚರ್ ಭಾಗ್ಯಳ ಬೆನ್ನುತಟ್ಟಿ ಹೊಗಳುತ್ತಾರೆ.
Bhagyalaskhmi Kannada Serial: ಸೂಕ್ತ ಕಾರಣ ಇಲ್ಲದೆ ನನ್ನನ್ನು ಸ್ಕೂಲ್‌ನಿಂದ ಹೊರ ಕಳಿಸಲು ಸಾಧ್ಯವಿಲ್ಲ. ನನಗೆ ಅಡ್ಮಿಷನ್ ನೀಡಿದ ಪ್ರೊಫೆಸರ್ ರಾಮ್ ದಾಸ್ ಕಾಮತ್ ಪತ್ರಕ್ಕೆ ಸಹಿ ಹಾಕಿದರೆ ಸ್ಕೂಲಿನಿಂದ ಹೊರಗೆ ಹೋಗ್ತೀನಿ ಎಂದು ಕನ್ನಿಕಾ ಬಳಿ ಖಡಕ್ ಮಾತುಗಳನ್ನು ಆಡುವ ಭಾಗ್ಯ ಕ್ಲಾಸ್‌ಗೆ ಬಂದು ಕೂರುತ್ತಾಳೆ.
ಭಾಗ್ಯ ವಾಪಸ್ ಬಂದಿದ್ದಕ್ಕೆ ತನ್ವಿಗೆ ಗಾಬರಿ
ಅಡ್ಮಿಷನ್ ಕ್ಯಾನ್ಸಲ್ ಆಗಿದೆ ಎಂದು ಅಟೆಂಡರ್ ಬಂದು ಹೇಳಿದಾಗ ತನ್ವಿ ಹಾಗೂ ಆಕೆಯ ಫ್ರೆಂಡ್ಸ್ ಬಹಳ ಖುಷಿಯಾಗುತ್ತಾರೆ. ಆದರೆ ಭಾಗ್ಯ ಮತ್ತೆ ವಾಪಸ್ ಬಂದಾಗ ತನ್ವಿಗೆ ಶಾಕ್ ಆಗುತ್ತದೆ. ಮತ್ತೆ ಅಮ್ಮ ವಾಪಸ್ ಬಂದಳಲ್ಲಾ ಎಂಬ ಚಿಂತೆ ಕಾಡುತ್ತದೆ. ಅದೇ ವೇಳೆ ಕನ್ನಡ ತರಗತಿ ನಡೆಯುತ್ತಿರುತ್ತದೆ. ಆದರೆ ತನ್ವಿ ಮಾತ್ರ ಭಾಗ್ಯಳನ್ನು ಪಾಠ ಕೇಳಲು ಬಿಡದೆ, ಅಡ್ಮಿಷನ್ ಕ್ಯಾನ್ಸಲ್ ಆದರೂ ಹೇಗೆ ವಾಪಸ್ ಬಂದೆ ಎಂದು ಕೇಳುತ್ತಳೇ ಇರುತ್ತಾಳೆ. ಭಾಗ್ಯ ಎಷ್ಟು ಅವಾಯ್ಡ್ ಮಾಡಲು ಯತ್ನಿಸಿದರೂ ತನ್ವಿ ಮಾತ್ರ ಬಿಡುವುದೇ ಇಲ್ಲ. ಕೋಪಗೊಂಡ ಭಾಗ್ಯ, ಸುಮ್ಮನೆ ಪಾಠ ಕೇಳು ತನ್ವಿ ಎಂದು ಜೋರಾಗಿ ಗದರುತ್ತಾಳೆ.
ಹಳೆಗನ್ನಡ ಪದ್ಯವನ್ನು ನಿರರ್ಗಳವಾಗಿ ಹೇಳುವ ಭಾಗ್ಯ
ಭಾಗ್ಯಳ ಧ್ವನಿ ಕೇಳಿ ಟೀಚರ್ ಕೋಪದಿಂದ ಯಾರದು ಕ್ಲಾಸ್ ಮಧ್ಯೆ ಮಾತನಾಡಿದ್ದು ಎಂದು ಕೇಳುತ್ತಾರೆ. ಭಾಗ್ಯ ಆಂಟಿ ಮಾತನಾಡಿದ್ದು ಎಂದು ತನ್ವಿ ಸ್ನೇಹಿತರು ಚಾಡಿ ಹೇಳುತ್ತಾರೆ. ನಾನು ಮಾತನಾಡಿಲ್ಲ ಎಂದು ಹೇಳಿದರೂ ಟೀಚರ್ ಮಾತ್ರ ನಂಬುವುದಿಲ್ಲ. ಗಣಪತಿ ಆಣೆಗೂ ನಾನು ಮಾತನಾಡಿಲ್ಲ ಎಂದು ಹೇಳಿದಾಗ ಮಕ್ಕಳೆಲ್ಲಾ ನಗುತ್ತಾರೆ. ನೀವು ಮಾತನಾಡಿಲ್ಲ ಎಂದಾದರೆ ನಾನು ಇದುವರೆಗೂ ಏನು ಪಾಠ ಮಾಡಿದೆ ಹೇಳಿ ಎಂದಾಗ, ಭಾಗ್ಯಗೆ ಏನೂ ಬರುವುದಿಲ್ಲ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ, ಇದಕ್ಕೆ ನೀನು ಸ್ಕೂಲ್‌ಗೆ ಬರಬೇಡ ಎಂದು ಹೇಳಿದ್ದು ಅಂತ ತನ್ವಿಯೂ ಹೇಳುತ್ತಾಳೆ. ಆದರೆ ಭಾಗ್ಯ, ಟೀಚರ್ ಹೇಳಿಕೊಟ್ಟ ಹಳೆಗನ್ನಡ ಪದ್ಯವನ್ನು ನಿರರ್ಗಳವಾಗಿ ಹೇಳಿ ತನ್ವಿ ಸೇರಿದಂತೆ ಎಲ್ಲರಿಗೂ ಶಾಕ್ ನೀಡುತ್ತಾಳೆ. ನಿಮಗೆ ಒಳ್ಳೆ ಭವಿಷ್ಯ ಇದೆ ಎಂದು ಟೀಚರ್ ಭಾಗ್ಯಳ ಬೆನ್ನುತಟ್ಟಿ ಹೊಗಳುತ್ತಾರೆ.
ತಾಂಡವ್ ಡೂಪ್ಲೆಕೇಟ್ ಅಪ್ಪ
ಮತ್ತೊಂದೆಡೆ ಶ್ರೇಷ್ಠ ಹಾಗೂ ತಾಂಡವ್, ಅಪ್ಪ-ಅಮ್ಮನ ನಾಟಕ ಮಾಡುವವರಿಗಾಗಿ ರೆಸ್ಟೋರೆಂಟ್‌ನಲ್ಲಿ ಕಾಯುತ್ತಿರುತ್ತಾರೆ. ಅಷ್ಟರಲ್ಲಿ ವೇಟರ್ ಬಂದು ಮೇಲೆ ಒಬ್ಬರು ನಿಮ್ಮ ಹೆಸರು ಹೇಳಿ ನಿಮ್ಮಿಂದ ಬಿಲ್ ಪಡೆಯಲು ಹೇಳಿರುವುದಾಗಿ ತಿಳಿಸುತ್ತಾರೆ. 2 ಸಾವಿರ ಬಿಲ್ ನೋಡಿ ತಾಂಡವ್ ಹಾಗೂ ಶ್ರೇಷ್ಠ ಗಾಬರಿ ಆಗುತ್ತಾರೆ. ಮೇಲೆ ಬಂದು ನೋಡಿದರೆ ಅಲ್ಲಿ ತಾಂಡವ್ ಡೂಪ್ಲಿಕೇಟ್ ಅಪ್ಪ ಗಡತ್ತಾಗಿ ತಿನ್ನುವುದು ಕಾಣುತ್ತದೆ. (ಈ ಎಪಿಸೋಡ್‌ನಿಂದ ಮಂಜು ಪಾವಗಡ ಭಾಗ್ಯಲಕ್ಷಿ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.)
ದೇವಸ್ಥಾನದಲ್ಲಿ ಕುಸುಮಾ, ಧರ್ಮರಾಜ್
ದೇವಸ್ಥಾನದಲ್ಲಿ ಶ್ರೇಷ್ಠ ತಂದೆ ಜೇಬಿಗೆ ಪರ್ಸ್ ಹಾಕಿಕೊಳ್ಳುವಾಗ ಅದು ಕೆಳಗೆ ಬೀಳುತ್ತದೆ. ತಾಂಡವ್ ತಾಯಿ ಕುಸುಮಾ, ತಂದೆ ಧರ್ಮರಾಜ್ ಕೂಡಾ ದೇವಸ್ಥಾನಕ್ಕೆ ಹೋಗಿರುತ್ತಾರೆ. ಆ ಪರ್ಸ್ ಕುಸುಮಾಗೆ ಸಿಗುತ್ತದೆ. ಅದೇ ದೇವಸ್ಥಾನದಲ್ಲೇ ತಾಂಡವ್ ಅಪ್ಪ ಅಮ್ಮನನ್ನು ಭೇಟಿ ಮಾಡಿಸಲು ಶ್ರೇಷ್ಠ ಪ್ಲ್ಯಾನ್ ಮಾಡಿರುತ್ತಾಳೆ.
ತಾಂಡವ್, ಡೂಪ್ಲಿಕೇಟ್ ತಂದೆ ತಾಯಿಯನ್ನು ಶ್ರೇಷ್ಠ ತಂದೆ ತಾಯಿ ಒಪ್ಪುತ್ತಾರಾ? ಪರ್ಸ್ ಕಳೆದುಕೊಂಡ ಶ್ರೇಷ್ಠ ತಂದೆಗೆ ಕುಸುಮಾ ಪರ್ಸ್ ವಾಪಸ್ ನೀಡುತ್ತಾಳಾ? ಅವರೇ ತಾಂಡವ್ ನಿಜವಾದ ತಂದೆ ತಾಯಿ ಎಂದು ತಿಳಿಯುವುದಾ? ಎಲ್ಲದಕ್ಕೂ ಮುಂದಿನ ಎಪಿಸೋಡ್‌ನಲ್ಲಿ ಉತ್ತರ ದೊರೆಯಲಿದೆ.