Jr NTR: ಜ್ಯೂ ಎನ್‌ಟಿಆರ್‌ ಅಭಿಮಾನಿಯ ಸಾವಿಗೆ ಫ್ಯಾನ್‌ ವಾರ್‌ ಕಾರಣ ಆಯ್ತಾ; ಶ್ಯಾಮ್‌ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಟನ ಅಭಿಮಾನಿಗಳು
ಕನ್ನಡ ಸುದ್ದಿ  /  ಮನರಂಜನೆ  /  Jr Ntr: ಜ್ಯೂ ಎನ್‌ಟಿಆರ್‌ ಅಭಿಮಾನಿಯ ಸಾವಿಗೆ ಫ್ಯಾನ್‌ ವಾರ್‌ ಕಾರಣ ಆಯ್ತಾ; ಶ್ಯಾಮ್‌ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಟನ ಅಭಿಮಾನಿಗಳು

Jr NTR: ಜ್ಯೂ ಎನ್‌ಟಿಆರ್‌ ಅಭಿಮಾನಿಯ ಸಾವಿಗೆ ಫ್ಯಾನ್‌ ವಾರ್‌ ಕಾರಣ ಆಯ್ತಾ; ಶ್ಯಾಮ್‌ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಟನ ಅಭಿಮಾನಿಗಳು

ಕೆಲವು ದಿನಗಳ ಹಿಂದೆ ಶ್ಯಾಮ್‌, ತೆಲುಗು ಚಿತ್ರರಂಗದ ಹಿರಿಯ ಸ್ಟಾರ್‌ ನಟನನ್ನು ಉದ್ಧೇಶಿಸಿ, ಆತನಿಗಿಂತ ಜ್ಯೂನಿಯರ್‌ ಎನ್‌ಟಿಆರ್‌ ದೊಡ್ಡ ನಟ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದರು. ಬಹುಶ: ಇದೇ ಆತನ ಸಾವಿಗೆ ಕಾರಣ ಆಯ್ತಾ? ಎಂದು ಜ್ಯೂ ಎನ್‌ಟಿಆರ್‌ ಫ್ಯಾನ್ಸ್‌ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಶ್ಯಾಮ್‌ ಸಾವಿಗೆ ಅನುಮಾನ ವ್ಯಕ್ತಪಡಿಸಿದ ಜ್ಯೂ ಎನ್‌ಟಿಆರ್‌ ಅಭಿಮಾನಿಗಳು
ಶ್ಯಾಮ್‌ ಸಾವಿಗೆ ಅನುಮಾನ ವ್ಯಕ್ತಪಡಿಸಿದ ಜ್ಯೂ ಎನ್‌ಟಿಆರ್‌ ಅಭಿಮಾನಿಗಳು (PC: Twitter)

ಸಿನಿಮಾ ಸ್ಟಾರ್‌ಗಳಿಗೆ ಲಕ್ಷಾಂತರ ಅಭಿಮಾನಿಗಳಿರುತ್ತಾರೆ. ಇದೇ ಅಭಿಮಾನಿಗಳು ತಮ್ಮ ಮೆಚ್ಚಿನ ನಟರ ಸಿನಿಮಾ ಬಿಡುಗಡೆ ಆದಾಗ ತಮ್ಮ ಮನೆಯ ಹಬ್ಬದಂತೆ ಸಂಭ್ರಮಿಸುತ್ತಾರೆ. ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸುತ್ತಾರೆ. ಹಾಗೇ ಬೇರೆ ನಟನ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಬಗ್ಗೆ ಮಾತನಾಡಿದರೆ ಬೇಸರ ವ್ಯಕ್ತಪಡಿಸುತ್ತಾರೆ. ಇದೇ ವಿಚಾರಕ್ಕೆ ಚಿತ್ರರಂಗದಲ್ಲಿ ಆಗ್ಗಾಗ್ಗೆ ಫ್ಯಾನ್‌ ವಾರ್‌ ನಡೆಯುತ್ತಲೇ ಇರುತ್ತದೆ.

ಇದನ್ನೂ ಓದಿ: ಅರ್ಜುನ್‌ ಕಪೂರ್‌ ಬರ್ತ್‌ಡೇ ಪಾರ್ಟಿಯಲ್ಲಿ ಮಲೈಕಾ ಅರೋರಾ ಡ್ಯಾನ್ಸ್‌ ; ನೆಟಿಜನ್ಸ್‌ನಿಂದ ಹೊಗಳಿಕೆ ತೆಗಳಿಕೆಯ ಕಾಮೆಂಟ್ಸ್‌

ತೆಲುಗು ಚಿತ್ರರಂಗದಲ್ಲಿ ಫ್ಯಾನ್‌ ವಾರ್‌ ಇತರ ಚಿತ್ರರಂಗಗಳಿಗಿಂತ ಸ್ವಲ್ಪ ಹೆಚ್ಚು ಎಂದೇ ಹೇಳಬಹುದು. 2 ದಿನಗಳ ಹಿಂದಷ್ಟೇ ತೆಲುಗು ಸ್ಟಾರ್‌ ನಟ ಜ್ಯೂನಿಯರ್‌ ಎನ್‌ಟಿಆರ್‌ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. 23 ವರ್ಷ ವಯಸ್ಸಿನ ಶ್ಯಾಮ್‌ ಆಂಧ್ರಪ್ರದೇಶದ ತೂರ್ಪು ಗೋದಾವರಿಯ ಕೊಪ್ಪಿಗುಂಟ ಗ್ರಾಮದವರು. ಆದರೆ ಶ್ಯಾಮ್‌ ಚಿಂತಲೂರು ಎಂಬ ಗ್ರಾಮದಲ್ಲಿ ನೆಲೆಸಿದ್ದರು. ಇತ್ತೀಚೆಗೆ ತಮ್ಮ ರೂಮ್‌ನಲ್ಲಿ ಶ್ಯಾಮ್‌ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶ್ಯಾಮ್‌ ಸಾವಿಗೆ ಸ್ನೇಹಿತರು, ಎನ್‌ಟಿಆರ್‌ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಆತನ ಫೋಟೋಗಳನ್ನು ಹಾಕಿ ವಿಷಾದ ವ್ಯಕ್ತಪಡಿಸಿದ್ದರು. ಆದರೆ ಇದೀಗ ಶ್ಯಾಮ್‌ ಸಾವಿನ ಬಗ್ಗೆ ಎಲ್ಲರೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಕಾಟೇರ ಚಿತ್ರದ ಹೊಸ ಪಾತ್ರಗಳನ್ನು ಪರಿಚಯಿಸಿದ ತರುಣ್‌ ಸುಧೀರ್‌; ಚೊಂಗ್ಲಾ ಪುಟ್ಟರಾಜುಗೆ ಬರ್ತ್‌ಡೇ ಶುಭ ಕೋರಿದ ತಂಡ

ಸೋಷಿಯಲ್‌ ಮೀಡಿಯಾದಲ್ಲಿ ಶ್ಯಾಮ್‌ ಸಾವಿನ ವಿಚಾರವಾಗಿ ಜ್ಯೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. ಶ್ಯಾಮ್‌ ಆತ್ಮಹತ್ಯೆ ಮಾಡಿಕೊಂಡಿರುವುದೇ ನಿಜ ಆದರೆ ಆತನ ಆತನ ಕಾಲುಗಳು ನೆಲಕ್ಕೆ ಹೇಗೆ ತಾಕುತ್ತದೆ? ಆತ್ಮಹತ್ಯೆ ಮಾಡಿಕೊಂಡಿದ್ದಲ್ಲಿ ಶ್ಯಾಮ್‌ ಮೂಗಿನಲ್ಲಿ ಏಕೆ ಗಾಯಗಳಾಯ್ತು? ಶ್ಯಾಮ್‌ ಮಾದಕ ವಸ್ತುಗಳನ್ನು ಬಳಸಿದಲ್ಲಿ , ಆ ಮತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಏಕೆ ಸಾಧ್ಯವಾಯ್ತು? ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವಿಡಿಯೋಗಳಲ್ಲಿ ಶ್ಯಾಮ್‌ ಬಾಯಿಯಲ್ಲಿ ಏನೂ ಇರಲಿಲ್ಲ. ಆದರೆ ನಂತರ ಆತನ ಬಾಯಿಯಲ್ಲಿ ಜಗಿದ ವಸ್ತುಗಳು ಹೇಗೆ ಪತ್ತೆಯಾಯ್ತು? ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.

ಪ್ರಭಾಸ್‌ ಅಭಿನಯದ ಆದಿಪುರುಷ್‌ 10 ದಿನಗಳಲ್ಲಿ ಮಾಡಿದ ಲಾಭ ಎಷ್ಟು; ಜನರನ್ನು ಸೆಳೆಯಲು ಚಿತ್ರತಂಡದ ಹೊಸ ಪ್ಲ್ಯಾನ್‌

ಜ್ಯೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳು #WeWantJusticeForShyamNTR ಅಡಿ ಟ್ವಿಟ್ಟರ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆ ಶ್ಯಾಮ್‌, ತೆಲುಗು ಚಿತ್ರರಂಗದ ಹಿರಿಯ ಸ್ಟಾರ್‌ ನಟನನ್ನು ಉದ್ಧೇಶಿಸಿ, ಆತನಿಗಿಂತ ಜ್ಯೂನಿಯರ್‌ ಎನ್‌ಟಿಆರ್‌ ದೊಡ್ಡ ನಟ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದರು. ಬಹುಶ: ಇದೇ ಆತನ ಸಾವಿಗೆ ಕಾರಣ ಆಯ್ತಾ? ಯಾರೋ ಶ್ಯಾಮ್‌ನನ್ನು ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಶ್ಯಾಮ್‌ ಸ್ನೇಹಿತರು, ಜ್ಯೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಸದ್ಯಕ್ಕೆ ಶ್ಯಾಮ್‌ ಸಾವಿನ ಸುದ್ದಿ ತೆಲುಗು ಚಿತ್ರರಂಗದಲ್ಲಿ ಭಾರೀ ಚರ್ಚೆಯಾಗುತ್ತಿದೆ.

Whats_app_banner