ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live October 2, 2024 : ಯಾರಿಗೆ ಸಿಎಂ ಗದ್ದುಗೆ, ದಿನಕ್ಕೊಂದು ಬೆಳವಣಿಗೆ; ಡಿಕೆ ಶಿವಕುಮಾರ್, ಪರಮೇಶ್ವರ್ ಭೇಟಿ ಬೆನ್ನಲ್ಲೇ ಮೂವರು ದಲಿತ ಸಚಿವರ ಗೌಪ್ಯ ಸಭೆ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Wed, 02 Oct 202402:34 PM IST
ಕರ್ನಾಟಕ News Live: ಯಾರಿಗೆ ಸಿಎಂ ಗದ್ದುಗೆ, ದಿನಕ್ಕೊಂದು ಬೆಳವಣಿಗೆ; ಡಿಕೆ ಶಿವಕುಮಾರ್, ಪರಮೇಶ್ವರ್ ಭೇಟಿ ಬೆನ್ನಲ್ಲೇ ಮೂವರು ದಲಿತ ಸಚಿವರ ಗೌಪ್ಯ ಸಭೆ
- ರಾಜಕೀಯ ವಿಶ್ಲೇಷಣೆ: ಎರಡು ದಿನಗಳ ಹಿಂದಷ್ಟೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಗೃಹ ಜಿ ಪರಮೇಶ್ವರ ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದರು. ಇದೀಗ ಮೂವರು ದಲಿತ ಸಚಿವರು ಗೌಪ್ಯ ಸಭೆ ನಡೆಸಿರುವುದು ಮತ್ತಷ್ಟು ಚರ್ಚೆ ಹುಟ್ಟು ಹಾಕಿದೆ.
Wed, 02 Oct 202402:02 PM IST
ಕರ್ನಾಟಕ News Live: ಮೈಸೂರು ದಸರಾ: ಅರಮನೆಯಲ್ಲಿ ರಾಜಮನೆತನದ ಖಾಸಗಿ ದರ್ಬಾರ್‌ಗೆ ಸಕಲ ಸಿದ್ಧತೆ; ನವರಾತ್ರಿಯ ಕಾರ್ಯಕ್ರಮಗಳ ಸಂಪೂರ್ಣ ವಿವರ
- ಅಕ್ಟೋಬರ್ 3ರಂದು ಶರನ್ನವರಾತ್ರಿಯ ಶುಭಾರಂಭದ ದಿನ. ಹೀಗಾಗಿ ಮೈಸೂರು ಅರಮನೆಯಲ್ಲಿ ರಾಜಮನೆತನದ ಖಾಸಗಿ ದರ್ಬಾರ್ ಆರಂಭವಾಗಲಿದ್ದು, ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ನವರಾತ್ರಿಯಲ್ಲಿ ಮೈಸೂರು ಅರಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರ ಇಲ್ಲಿದೆ.
Wed, 02 Oct 202401:18 PM IST
ಕರ್ನಾಟಕ News Live: ಮುಡಾ ಹಗರಣದ ಒತ್ತಡದ ನಡುವೆ ಇಂದು ರಾತ್ರಿಯೇ ಮೈಸೂರಿಗೆ ಹೊರಟ ಸಿದ್ದರಾಮಯ್ಯ; ನಾಳೆ ದಸರಾ ಉದ್ಘಾಟನೆಯಲ್ಲಿ ಭಾಗಿ
- ಸದ್ಯ ಮುಡಾ ಹಗರಣ ಪ್ರಕರಣದ ಒತ್ತಡದಲ್ಲಿರುವ ಸಿಎಂ ಸಿದ್ದರಾಮಯ್ಯ, ದಸರಾ ಉದ್ಘಾಟನೆಯಲ್ಲಿ ಭಾಗಿಯಾಗಲು ಹೊರಟಿದ್ದಾರೆ. ಗುರುವಾರ ನಾಡಹಬ್ಬಕ್ಕೆ ಚಾಲನೆ ಸಿಗುತ್ತಿದ್ದು, ಬುಧವಾರವಾದ ಇಂದೇ ಬೆಂಗಳೂರಿನಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
Wed, 02 Oct 202412:40 PM IST
ಕರ್ನಾಟಕ News Live: ಶಹನಾಯ್ ವಾದಕ ಪಂಡಿತ್ ಬಸವರಾಜ ಭಜಂತ್ರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ; ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ
- ಶಹನಾಯ್ ವಾದಕ ಪಂಡಿತ್ ಬಸವರಾಜ ಭಜಂತ್ರಿ ಹೆಡಿಗ್ಗೊಂಡ ಅವರಿಗೆ, ಈ ಬಾರಿಯ ದಸರಾ ಮಹೋತ್ಸವದಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
Wed, 02 Oct 202411:41 AM IST
ಕರ್ನಾಟಕ News Live: ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ; ಮೈಸೂರು ಅರಮನೆ ಆವರಣ, ಚಾಮುಂಡಿ ಬೆಟ್ಟದಲ್ಲಿ ಸಕಲ ಸಿದ್ದತೆ
- ಅಕ್ಟೋಬರ್ 3ರ ಗುರುವಾರ ಬೆಳಗ್ಗೆ ವೃಶ್ಚಿಕ ಲಗ್ನದಲ್ಲಿ ನಾಡಿನ ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಅವರು ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
Wed, 02 Oct 202410:49 AM IST
ಕರ್ನಾಟಕ News Live: ಒಳಗೆ ಹೋಗು ಎಂದಿದ್ದಕ್ಕೆ ಬಿಎಂಟಿಸಿ ಕಂಡಕ್ಟರ್‌ಗೆ ಚಾಕುವಿನಿಂದ ಇರಿದ ವಲಸಿಗ; ಕೆಲಸ ಕಳೆದುಕೊಂಡ ಚಿಂತೆಯಲ್ಲಿ ಎಡವಟ್ಟು
- ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಒಳಗೆ ಯುವಕನೊಬ್ಬ ಭಾರಿ ರಾದ್ಧಾಂತ ಮಾಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಕಂಡಕ್ಟರ್‌ಗೆ ಚಾಕುವಿನಿಂದ ಇರಿದಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಗಾಯಗೊಂಡ ನಿರ್ವಾಹಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
Wed, 02 Oct 202409:56 AM IST
ಕರ್ನಾಟಕ News Live: ಶ್ಯೂರಿಟಿಗೆ ಪರದಾಡಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳು ಕೊನೆಗೂ ರಿಲೀಸ್; ಹೊರ ಬಂದ್ಮೇಲೆ ಹೇಳಿದ್ದೇನು?
- Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಎ15, ಎ16, ಎ17 ಆರೋಪಿಗಳು ತುಮಕೂರು ಜಿಲ್ಲಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
Wed, 02 Oct 202409:41 AM IST
ಕರ್ನಾಟಕ News Live: Video: ಬೆಂಗಳೂರಿನಲ್ಲಿ ಒಂಟಿ ಮಹಿಳೆ ಇದ್ದ ಕಾರಿನ ಗಾಜು ಒಡೆದು ಒಳನುಗ್ಗಲು ಯತ್ನ; ಪೊಲೀಸರಿಂದ ಕಾನೂನು ಕ್ರಮ
- ಬೆಂಗಳೂರಿನಲ್ಲಿ ಮಹಿಳೆ ಒಬ್ಬರೇ ಇದ್ದ ಕಾರಿಗೆ ದುಷ್ಕರ್ಮಿಯೊಬ್ಬ ನುಗ್ಗಲು ಯತ್ನಿಸಿದ ಘಟನೆ ನಡೆದಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೆಣ್ಣುಮಕ್ಕಳು ಒಬ್ಬರೇ ಓಡಾಡುವಾಗ ಮತ್ತಷ್ಟು ಜಾಗರೂಕರಾಗಿರಲು ವಿಡಿಯೋ ಎಚ್ಚರಿಸಿದೆ.
Wed, 02 Oct 202408:39 AM IST
ಕರ್ನಾಟಕ News Live: ಮೆಟ್ರೋ ಪ್ರಯಾಣಿಕರೇ ಗಮನಿಸಿ; ಅಕ್ಟೋಬರ್ 3ರಂದು ಈ ಮಾರ್ಗದಲ್ಲಿ ಬೆಂಗಳೂರು ಮೆಟ್ರೋ ರೈಲು ಸಂಚಾರ ಸ್ಥಗಿತ
- Namma Metro: ಅಕ್ಟೋಬರ್ 3ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೆಂಗಳೂರಿನ ಗ್ರೀನ್ಲೈನ್ನಲ್ಲಿ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಾಯ ಉಂಟಾಗಲಿದೆ.
Wed, 02 Oct 202408:38 AM IST
ಕರ್ನಾಟಕ News Live: ಬೆಂಗಳೂರು ಪಬ್‌ಗಳಲ್ಲಿ ಇಂಗ್ಲಿಷ್-ಹಿಂದಿ ಹಾಡು ಹಾಕಂಗಿಲ್ಲ; ಕನ್ನಡ ಹಾಡೇ ಹಾಕುವಂತೆ ಸ್ಥಳೀಯರ ಒತ್ತಾಯ
- ಕನ್ನಡಿಗರ ಒತ್ತಡದ ನಂತರ ಬೆಂಗಳೂರು ನಗರದ ಪಬ್‌ಗಳಲ್ಲಿ ನಿಧಾನವಾಗಿ ಕನ್ನಡ ಹಾಡುಗಳು ಕೇಳಿಬರುತ್ತಿವೆ. ಈವರೆಗೆ ಇಂಗ್ಲಿಷ್ ಅಥವಾ ಹಿಂದಿ ಹಾಡುಗಳಿಗೆ ಸೀಮಿತವಾಗಿದ್ದ ಪಬ್‌ಗಳು ಕನ್ನಡ ಹಾಡುಗಳನ್ನು ಹಾಕಲು ಪ್ರಾರಂಭಿಸುತ್ತಿವೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.
Wed, 02 Oct 202407:24 AM IST
ಕರ್ನಾಟಕ News Live: ಎಲ್ಲರೂ ನಿದ್ದೆ ಬಿಟ್ಟು ದುಡ್ಡು ದುಡಿದರೆ, ಬೆಂಗಳೂರಿನ ಈ ಯುವತಿ ನಿದ್ದೆ ಮಾಡಿಯೇ 9 ಲಕ್ಷ ಗೆದ್ದವ್ರೆ! ಈ ಸ್ಪರ್ಧೆಗೆ ಮತ್ತೆ ಅರ್ಜಿ ಆಹ್ವಾನ
- Sleep Champion: ಬೆಂಗಳೂರಿನ ಸ್ಟಾರ್ಟಪ್ ವೇಕ್‌ಫಿಟ್‌ನ ಸ್ಲೀಪ್ ಇಂಟರ್ನ್‌ಷಿಪ್ ಕಾರ್ಯಕ್ರಮದ 3ನೇ ಆವೃತ್ತಿಯಲ್ಲಿ ಇನ್ವೆಸ್ಟ್‌ಮೆಂಟ್ ಬ್ಯಾಂಕರ್, ಬೆಂಗಳೂರಿನ ಸಾಯಿಶ್ವರಿ ಪಾಟೀಲ್ ಅವರು ಸ್ಲೀಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೆ, 9 ಲಕ್ಷ ರೂಪಾಯಿ ಬಹುಮಾನವನ್ನೂ ಪಡೆದಿದ್ದಾರೆ. ಇದೀಗ ಈ ಸಂಸ್ಥೆ ನಾಲ್ಕನೇ ಆವೃತ್ತಿಗೂ ಅರ್ಜಿ ಆಹ್ವಾನಿಸಿದೆ.
Wed, 02 Oct 202402:31 AM IST
ಕರ್ನಾಟಕ News Live: ಮಿಷನ್ 3K– 3000 ಹಾರ್ಟ್ಸ್ ಒನ್ ಬೀಟ್: 24 ಗಂಟೆಗಳಲ್ಲಿ 3,319 ಸಿಪಿಆರ್, ಗಿನ್ನೆಸ್ ದಾಖಲೆ ಬರೆದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ
- ವಿಶ್ವ ಹೃದಯದ ದಿನದ ಅಂಗವಾಗಿ ಬೆಂಗಳೂರಿನ ಓಲ್ಡ್ ಮದ್ರಾಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆ ಮಿಷನ್ 3K– 3000 ಹಾರ್ಟ್ಸ್ ಒನ್ ಬೀಟ್ ಕಾರ್ಯಕ್ರಮ ಆಯೋಜಿಸಿತ್ತು. ಇದರಲ್ಲಿ 24 ಗಂಟೆಗಳಲ್ಲಿ 3,319 ಸಿಪಿಆರ್ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯ ಪುಟಗಳಲ್ಲಿ ಸೇರಿದೆ. ಈ ಕುರಿತ ಮಾಹಿತಿ ಇಲ್ಲಿದೆ.
Wed, 02 Oct 202401:05 AM IST
ಕರ್ನಾಟಕ News Live: ಸಿಗರೇಟ್ ತುಂಡು ಹಾಕಲು ಪ್ರತ್ಯೇಕ ಕಸದ ಬುಟ್ಟಿ; ಹೊಗೆ ಹಾಕಿಸುವ ಕಾರ್ಯಕ್ರಮಕ್ಕೆ ಬಿಬಿಎಂಪಿ ರಾಯಭಾರಿ; ರಾಜೀವ ಹೆಗಡೆ ಬರಹ
- ಸಿಗರೇಟ್ ತಯಾರಕ ಐಟಿಸಿ ಸಹಯೋಗದೊಂದಿಗೆ, ಬೆಂಗಳೂರು ನಗರದಲ್ಲಿ ಸಿಗರೇಟ್ ಬಟ್ಸ್ ಸಂಗ್ರಹಕ್ಕಾಗಿ ನಗರದ ಹಾಟ್ ಸ್ಪಾಟ್‌ಗಳಲ್ಲಿ ಪ್ರತ್ಯೇಕ ಬಿನ್‌ಗಳನ್ನು ಇರಿಸಲು ಬಿಬಿಎಂಪಿ ಮುಂದಾಗಿದೆ. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಾಜೀವ ಹೆಗಡೆ ಅವರ ಬರಹ ಹೀಗಿದೆ.
Wed, 02 Oct 202412:45 AM IST
ಕರ್ನಾಟಕ News Live: ಜೀವಂತವಾಗಿ ಹೂತುಹಾಕಿದ್ದ ನವಜಾತ ಶಿಶುವಿನ ರಕ್ಷಣೆ, ಕುಡಿದ ಮತ್ತಿನಲ್ಲಿ ನೆರೆಮನೆಯಾತನ ಕೊಲೆ; ಬೆಂಗಳೂರು ಅಪರಾಧ ಸುದ್ದಿ
- ನವಜಾತ ಶಿಶುವನ್ನು ಹೂತುಹಾಕಿ ಜೀವಂತ ಸಮಾಧಿ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸದ್ಯ ಹಸುಗೂಸನ್ನು ರಕ್ಷಿಸಲಾಗಿದೆ. ಮತ್ತೊಂದೆಡೆ ಕಾಲಿಗೆ ತುಳಿದ ಎಂಬ ಕಾರಣಕ್ಕೆ, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯು ನೆರಮನೆಯ ವ್ಯಕ್ತಿಯನ್ನೇ ಕೊಂದಿರುವ ಘಟನೆ ನಡೆದಿದೆ.
Wed, 02 Oct 202412:30 AM IST
ಕರ್ನಾಟಕ News Live: ಬೆಂಗಳೂರು: ಐಫೋನ್ 15 ಆರ್ಡರ್ ಮಾಡಿದ್ದ ವ್ಯಕ್ತಿಗೆ ಪ್ಯಾಕೇಜ್ ಕೊಡಲು ಬಂದ ನಕಲಿ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್; ಆಮೇಲೇನಾಯ್ತು?
- ತಾನು ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಎಂದು ಹೇಳಿ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಐಫೋನ್ 15 ಬದಲು ಬೇರೆಯೇ ಪ್ಯಾಕೇಜ್ ಕೊಡಲು ಪ್ರಯತ್ನಿಸಿರುವ ಘಟನೆ ನಡೆದಿದೆ. ಆದರೆ, ಆರ್ಡರ್ ಮಾಡಿದ ವ್ಯಕ್ತಿಯು ಚಾಣಾಕ್ಷತನದಿಂದ ಮೋಸ ಹೋಗುವುದರಿಂದ ಪಾರಾಗಿದ್ದಾರೆ.