Karnataka News Live September 25, 2024 : ನಂದಿನಿ ತುಪ್ಪ ಪ್ಯೂರ್ ಅಂತ ತಿರುಪತಿ ಪ್ರಸಾದದ ವಿವಾದ ಮತ್ತೆ ಸಾಬೀತು ಮಾಡ್ತು: ರೇಣುಕಾ ಮಂಜುನಾಥ್ ಬರಹ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Wed, 25 Sep 202404:34 PM IST
- Tirupati Laddu Row: ತಿರುಪತಿ ಲಾಡು ಪ್ರಸಾದದ ವಿವಾದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಕರ್ನಾಟಕದ ಹೆಮ್ಮೆ ನಂದಿನಿ ತುಪ್ಪಕ್ಕೆ ಬೇಡಿಕೆಯೂ ಹೆಚ್ಚಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ದೇಗುಲಕ್ಕೆ ನಮ್ಮ ನೆಲದ ಗೋವುಗಳ ತುಪ್ಪವೇ ಉತ್ಕೃಷ್ಟ ಎಂದೀಗ ಸಾರ್ವಜನಿಕವಾಗಿ ಸಾಬೀತಾಗಿದೆ!
Wed, 25 Sep 202402:29 PM IST
Bengaluru auto driver: 1996 ರಿಂದ ವಾಹನ ಚಲಾಯಿಸುತ್ತಿರುವ ಬೆಂಗಳೂರಿನ ಆಟೋ ಚಾಲಕ ಶಾಂತ ಗೌಡ ಎಂಬವರು, ಇಲ್ಲಿಯವರೆಗೆ ತಮ್ಮ ಗ್ರಾಹಕರಿಂದ ಹೆಚ್ಚುವರಿಯಾಗಿ ಒಂದೇ ಒಂದು ರೂಪಾಯಿ ಸಹ ಕೇಳಿಲ್ಲ ಎಂದು ಹೇಳಿದ್ದಾರೆ. ಕಾರಣ ಏನೆಂದು ವಿವರಿಸಿದ್ದಾರೆ ನೋಡಿ.
Wed, 25 Sep 202401:24 PM IST
- ಕರ್ನಾಟಕ ಸರಕಾರವು ಗೃಹಜ್ಯೋತಿ ಯೋಜನೆ ಮೂಲಕ ಉಚಿತ ವಿದ್ಯುತ್ ನೀಡುತ್ತಿದೆ. ಆದರೆ, ಈ ಸಮಯದಲ್ಲಿ ಹೊಸದಾಗಿ ಮನೆ ಕಟ್ಟುವವರಿಂದ ತಾತ್ಕಾಲಿಕ ಕರೆಂಟ್ ಮೀಟರ್‌ಗಾಗಿ ಹತ್ತಾರು ಸಾವಿರ ರೂಪಾಯಿಯನ್ನು ಠೇವಣಿ ಪಡೆದುಕೊಳ್ಳುವುದು ಮುಂದುವರೆದಿದೆ. ಈ ಠೇವಣಿ ವಾಪಸ್ ಪಡೆಯುವ ಬಗೆ ಹೇಗೆ ಎಂದು ಎಚ್‌ಟಿ ಕನ್ನಡದ ಓದುಗ ಶ್ರೀನಿವಾಸ ಮಠ ಪ್ರಶ್ನಿಸಿದ್ದಾರೆ.
Wed, 25 Sep 202412:28 PM IST
- Shiruru Hill Collapse Case: ಜುಲೈ 16 ರಂದು ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿದು 11 ಮಂದಿ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದರು. ಈ ಪೈಕಿ 8 ಮಂದಿಯನ್ನು ಈಗಾಗಲೇ ಪತ್ತೆ ಮಾಡಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿತ್ತು. ಇದೀಗ ಅರ್ಜುನನ ಮೃತದೇಹ ಪತ್ತೆಯಾಗಿದೆ.
Wed, 25 Sep 202411:37 AM IST
Chief Minister Siddaramaiah: ನಾನು ತನಿಖೆಗೆ ಹೆದರುವುದಿಲ್ಲ. ಕಾನೂನು ಹೋರಾಟಕ್ಕೆ ಸಿದ್ದರನಾಗಿದ್ದು, ತನಿಖೆಗೆ ಸಿದ್ದನಾಗಿದ್ದೇನೆ ಎಂದು ಮೂಡಾ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡಿದ ತೀರ್ಪಿನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ.
Wed, 25 Sep 202410:37 AM IST
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಹಣ ಬಳಕೆ ಮಾಡಿದ್ದರ ಹೇಳಿಕೆ ಹಿನ್ನೆಲೆಯಲ್ಲಿ ಹಣ ಮೂಲ ಪತ್ತೆಗೆ ಮುಂದಾಗಿರುವ ಆದಾಯ ತೆರಿಗೆ ಇಲಾಖೆ ನಟ ದರ್ಶನ್ ಗೆ ನೊಟೀಸ್ ಜಾರಿ ಮಾಡಿದೆ.
Wed, 25 Sep 202408:43 AM IST
- ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ವಿರುದ್ದ ತನಿಖೆ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ.
Wed, 25 Sep 202408:09 AM IST
- ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಉಪಟಳ ನೀಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
Wed, 25 Sep 202407:45 AM IST
- ಬೆಂಗಳೂರಿನ ಕೋಟ್ಯಂತರ ರೂ. ಬೆಲೆಬಾಳುವ ಅರಣ್ಯಭೂಮಿಯನ್ನು ವಾಪಾಸ್ ಪಡೆಯುವ ಬದಲು ಅನುಮತಿ ನೀಡಿರುವ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮುಂದಾಗಿದ್ದಾರೆ.
Wed, 25 Sep 202406:56 AM IST
- ವಿಜಯಪುರ ಹಾಗೂ ಹೂಟಗಿ ನಡುವಿನ ಮಾರ್ಗದಲ್ಲಿ ಲೋಕೋ ರೈಲು ಹಳಿ ತಪ್ಪಿದ್ದರಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಕೆಲವು ರೈಲು ರದ್ದಾದರೆ, ಇನ್ನಷ್ಟು ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ.
Wed, 25 Sep 202405:35 AM IST
- ತುಮಕೂರಿನಲ್ಲೂ ಜಿಲ್ಲಾಡಳಿತದಿಂದಲೇ ದಸರಾವನ್ನು ಆಚರಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳು ವಿಶೇಷವಾಗಿ ಇರಲಿವೆ.
- ವರದಿ: ಈಶ್ವರ್ ತುಮಕೂರು
Wed, 25 Sep 202405:04 AM IST
- ಈ ಬಾರಿ ಮೈಸೂರು ದಸರಾದ ಯುವ ದಸರಾದಲ್ಲಿ ಖ್ಯಾತ ಸಂಗೀತ ನಿರ್ದೇಶಕ 81 ರ ಇಳಿ ವಯಸ್ಸಿನಲ್ಲೂ ಇಳಯರಾಜ ಅವರು ಮೋಡಿ ಮಾಡಲಿದ್ದಾರೆ. ಎ.ಆರ್.ರಹಮಾನ್ ಕೂಡ ದಸರಾದಲ್ಲಿ ಭಾಗಿಯಾಗುತ್ತಿದ್ದಾರೆ.
Wed, 25 Sep 202404:24 AM IST
- Mysore Dasara Elephants memory ಮೈಸೂರು ದಸರಾದೊಂದಿಗೆ ಬೆರೆತು ಹೋಗಿರುವ ಆನೆಗಳು ಹಾಗೂ ಅವುಗಳ ಅನೂಹ್ಯ ಕ್ಷಣಗಳು, ಮಾವುತರ ಮಮಕಾರದ ಸೇವೆಗಳು ನಿಜಕ್ಕೂ ಅರಣ್ಯ ಇಲಾಖೆಯವರಿಗೆ ಪಾಠವಾದರೆ ಒಳಿತು ಎನ್ನುವುದು ಈ ವಾರದ ಕಾಡಿನ ಕಥೆಗಳ ಆಶಯ.
Wed, 25 Sep 202402:41 AM IST
- ಉಡುಪಿಯ ಲೇಖಕ ಜಿ.ರಾಜಶೇಖರ್ ಅವರ ಸ್ಮರಣಾರ್ಥ ಜ್ಞಾನ ವೇತನವನ್ನು ನೀಡುವುದಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೊಬರ್ 30 ಕಡೆಯ ದಿನಾಂಕ.
Wed, 25 Sep 202402:15 AM IST
- ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ನೆಚ್ಚಿನ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಮಕ್ಕಳೊಂದಿಗೆ ಆಡಿ ನಲಿದಿದ್ದಾರೆ. ಅನಂತಾಡಿ ಎಂಬಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)
Wed, 25 Sep 202401:54 AM IST
- ಕರ್ನಾಟಕದಲ್ಲಿ ಆಡಳಿತ ಚುರುಕಿಗೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಸೃಷ್ಟಿಸಲಾಯಿತು. ಆದರೆ ಅದಕ್ಕೆ ಬೇಕಾದ ವ್ಯವಸ್ಥೆಗಳೇ ಇಲ್ಲ. ಒತ್ತಡದಲ್ಲೇ ಈ ಅಧಿಕಾರಿಗಳು ಕೆಲಸ ಮಾಡುವ ಸನ್ನಿವೇಶವಿದೆ.
- (ವರದಿ: ಹರೀಶ ಮಾಂಬಾಡಿ, ಮಂಗಳೂರು)
Wed, 25 Sep 202401:08 AM IST
- ಕರ್ನಾಟಕದ ಕರಾವಳಿ,ಮಲೆನಾಡು ಹಾಗೂ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳು ಸೇರಿದಂತೆ ಒಂಬತ್ತು ಜಿಲ್ಲೆಗಳ ಹಲವು ಕಡೆಗಳಲ್ಲಿ ಬುಧವಾರ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದೆ.