ಕನ್ನಡ ಸುದ್ದಿ  /  ಜೀವನಶೈಲಿ  /  Depression Relief Tips: ಕಾಡುವ ಖಿನ್ನತೆಗೆ ನಿಮ್ಮಲ್ಲೇ ಇದೆ ಔಷಧ; ಡಿಪ್ರೆಶನ್‌ನಿಂದ ಹೊರಬರಲು ಇಲ್ಲಿದೆ ಸ್ವಆರೈಕೆ ಟಿಪ್ಸ್‌

Depression Relief tips: ಕಾಡುವ ಖಿನ್ನತೆಗೆ ನಿಮ್ಮಲ್ಲೇ ಇದೆ ಔಷಧ; ಡಿಪ್ರೆಶನ್‌ನಿಂದ ಹೊರಬರಲು ಇಲ್ಲಿದೆ ಸ್ವಆರೈಕೆ ಟಿಪ್ಸ್‌

Depression relief tips: ಅನೇಕ ಕಾರಣಗಳಿಂದ ಇಂದು ಹಲವರು ಖಿನ್ನತೆಗೆ ಜಾರುತ್ತಿದ್ದಾರೆ. ಇದು ಒಂದು ರೀತಿಯ ಕಾಯಿಲೆಯಾಗಿದ್ದರೂ ಜನರು ಇದನ್ನು ನಿರ್ಲಕ್ಷ್ಯ ಮಾಡುವುದೇ ಹೆಚ್ಚು. ಹೀಗಾಗಿ ಖಿನ್ನತೆಗೆ ಜಾರದಂತೆ ತಡೆಯಲು ನಿಮಗೆ ನೀವೇ ಸ್ವ ಆರೈಕೆ ಮಾಡಿಕೊಳ್ಳಬೇಕು. ಇಲ್ಲಿದೆ ನಿಮಗಾಗಿ ಸಲಹೆ..

Depression Relief tips: ಕಾಡುವ ಖಿನ್ನತೆಗೆ ನಿಮ್ಮಲ್ಲೇ ಇದೆ ಔಷಧ
Depression Relief tips: ಕಾಡುವ ಖಿನ್ನತೆಗೆ ನಿಮ್ಮಲ್ಲೇ ಇದೆ ಔಷಧ

ದೇಹಕ್ಕೆ ಗಾಯವಾದರೆ ಅಥವಾ ಕಾಯಿಲೆ ಬಂದರೆ ನಾವು ವೈದ್ಯರನ್ನು ಸಂಪರ್ಕಿಸುತ್ತೇವೆ. ಆದರೆ, ಮನಸ್ಸಿನ ಕಾಯಿಲೆ ಬಗ್ಗೆ ನಿರ್ಲಕ್ಷಿಸುವುದೇ ಹೆಚ್ಚು. ನಮ್ಮಲ್ಲಿ ಬಹುತೇಕ ಮಂದಿ ಇಂದು ಖಿನ್ನತೆ (ಮಾನಸಿಕ ಅಸ್ವಸ್ಥತೆ) ಯಿಂದ ಬಳಲುತ್ತಿದ್ದಾರೆ. ಬಹುತೇಕ ಮಂದಿ ಇದನ್ನು ನಿರ್ಲಕ್ಷ್ಯ ಮಾಡುವುದೇ ಹೆಚ್ಚು. ಇತ್ತೀಚೆಗಂತೂ ಖಿನ್ನತೆಯಿಂದ ಬಹುತೇಕರು ಬಳಲುತ್ತಿರುವುದು ತೀವ್ರ ಕಳವಳವನ್ನುಂಟು ಮಾಡಿದೆ. ಅದರಲ್ಲೂ ಯಾರಾದರೂ ಮನರೋಗ ತಜ್ಞರನ್ನು ಸಂಪರ್ಕಿಸಿದ್ದು ಗೊತ್ತಾದ್ರೆ, ಊರಿಗೆ ಊರೇ ಅವರನ್ನು ಬೇರೆ ರೀತಿಯಲ್ಲೇ ನೋಡುತ್ತದೆ. ಅಥವಾ ಹುಚ್ಚನ ಪಟ್ಟ ಕಟ್ಟುತ್ತದೆ.

ಖಿನ್ನತೆ ಎಂಬುದು ಮಾನಸಿಕ ಅಥವಾ ಮನಸ್ಥಿತಿಯ ಅಸ್ವಸ್ಥತೆಯಾಗಿದ್ದು, ಒಬ್ಬ ವ್ಯಕ್ತಿಯು ದುಃಖ ಅಥವಾ ಕಡಿಮೆ ಮನಸ್ಥಿತಿಯ ನಿರಂತರ ಭಾವನೆಯನ್ನು ಹೊಂದಿರುತ್ತಾನೆ. ಇದು ಬೇರೆ-ಬೇರೆ ಕಾರಣಗಳಿಂದ ಸಂಭವಿಸಬಹುದು. ಖಿನ್ನತೆಯಲ್ಲಿರುವವರು ನಿಧಾನವಾಗಿ ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುತ್ತಾರೆ. ಎಲ್ಲವನ್ನೂ ಅರ್ಥಹೀನರಂತೆ ನೋಡುತ್ತಾರೆ. ಖಿನ್ನತೆಯ ಕೆಲವು ಲಕ್ಷಣಗಳೆಂದರೆ ಕೋಪ, ದುಃಖದ ಭಾವನೆ, ನಿದ್ರಾ ಭಂಗ ಮತ್ತು ಆಸಕ್ತಿಯ ಕೊರತೆ.

ಟ್ರೆಂಡಿಂಗ್​ ಸುದ್ದಿ

ಮಾನಸಿಕ ಅಸ್ವಸ್ಥತೆಯ ಯಾವೆಲ್ಲಾ ಕಾರಣಗಳಿಂದ ಬರುತ್ತದೆ ಅನ್ನೋದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ವಿವಿಧ ಕಾರಣಗಳಿಂದ ವ್ಯಕ್ತಿಯು ಖಿನ್ನತೆಗೊಳಗಾಗಬಹುದು. ಇದರಿಂದ ಹೊರಬರಲು ನಮಗೆ ನಾವೇ ದಾರಿ ಮಾಡಿಕೊಳ್ಳಬೇಕು. ಇದಕ್ಕಾಗಿ ಈ ಸಲಹೆಗಳನ್ನು ಅನುಸರಿಸಿ..

ಸಂತೋಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿರಿ

ನೀವು ಯಾವುದಾದರೂ ಆಸಕ್ತಿ ಹೊಂದಿರುವ ಹವ್ಯಾಸಗಳು ಮತ್ತು ವಿಷಯಗಳನ್ನು ಸಕ್ರಿಯವಾಗಿ ಅನುಸರಿಸಬೇಕು. ನಿಮಗೆ ಖುಷಿ ಕೊಡುವ ಕೆಲಸಗಳನ್ನು ಹೆಚ್ಚಾಗಿ ಮಾಡಬೇಕು. ವಾಕಿಂಗ್ ಹೋಗುವುದು, ಆಟ ಆಡುವುದು, ಸ್ನೇಹಿತರೊಂದಿಗೆ ಸಮಯ ಕಳೆಯುವುದು ಇತ್ಯಾದಿ. ಕರಾಳ ಘಟನೆಗಳನ್ನು ಮನಸ್ಸಿಗೆ ಹೆಚ್ಚು ಹಚ್ಚಿಕೊಳ್ಳದೆ, ಬೇಸರವನ್ನು ಆಪ್ತರ ಬಳಿ ಹೇಳಿಕೊಂಡು ಹೊರಹಾಕಿ. ಇದರಿಂದ ಮನಸ್ಸು ನಿರ್ಲಿಪ್ತವಾಗಿ, ಹೃದಯದ ಭಾರ ಕಡಿಮೆಯಾದಂತಾಗುತ್ತದೆ. ಇಲ್ಲದಿದ್ದಲ್ಲಿ, ಇದನ್ನೇ ಯೋಚನೆ ಮಾಡುತ್ತಾ ಕುಳಿತರೆ ಖಿನ್ನೆತೆಗೆ ಜಾರುವ ಸಂಭವ ಹೆಚ್ಚು.

ಸಾಧನೆಗಳ ಪಟ್ಟಿ

ನೀವು ಸ್ವತಃ ನಿಮ್ಮ ಸಾಧನೆಗಳ ಬಗ್ಗೆ ಖುಷಿ ಪಡಬೇಕು. ಅದು ಎಷ್ಟೇ ಚಿಕ್ಕ ಸಾಧನೆಯಾದರೂ ಸರಿ, ತಾನದನ್ನು ಮಾಡಿದೆ ಅನ್ನೋ ಆತ್ಮತೃಪ್ತಿ ನಿಮಗಿದ್ದರೆ ಸಾಕು. ಯಾರಿಗಾದರೂ ಸಹಾಯ ಮಾಡುವುದರಲಿ, ಸ್ನೇಹಿತರ ಕಷ್ಟಕ್ಕೆ ಹೆಗಲಾಗಿ ನಿಲ್ಲುವುದು ಇತ್ಯಾದಿ. ಇದರಿಂದ ನಿಮ್ಮಲ್ಲಿ ತಾನು ಸಹಾಯ ಮಾಡಿದೆ, ಇದೂ ಒಂದು ಸಾಧನೆಯೇ ಹೌದು ಎಂಬ ಸಂತೋಷವೂ ಉಂಟಾಗುತ್ತದೆ.

ನಿಮ್ಮ ಆಪ್ತರಿಗಾಗಿ ಸಮಯವನ್ನು ಮೀಸಲಿಡಿ

ಆಪ್ತರಿಗಾಗಿ ನಿಮ್ಮ ಸಮಯವನ್ನು ಅವರಿಗೆ ಮೀಸಲಿಡುವುದರಿಂದ ಸಂತೋಷವಾಗಿ ಕಾಲ ಕಳೆಯಬಹುದು. ಇದರಿಂದ ಮನಸ್ಸಿನಲ್ಲಿರುವ ನಿರ್ಲಿಪ್ತ ಭಾವನೆಗಳು ಹಗುರವಾಗುತ್ತದೆ.

ಹಾಡುಗಳ ಪಟ್ಟಿ

ನೀವು ಇಷ್ಟಪಡುವ, ನಿಮಗೆ ಖುಷಿ ಕೊಡುವ ಹಾಡುಗಳ ಪ್ಲೇ ಪಟ್ಟಿಯನ್ನು ರಚಿಸಬೇಕು. ಕತ್ತಲೆಯಾಗುತ್ತಿದ್ದಂತೆ ಅಥವಾ ಒಬ್ಬಂಟಿ ಎಂದು ಭಾವಿಸಿದಾಗ ಈ ಹಾಡುಗಳನ್ನು ಪ್ಲೇ ಮಾಡಬಹುದು. ಹಾಡಿಗೆ ನೃತ್ಯ ಮಾಡುತ್ತಾ ಆನಂದಿಸಬಹುದು. ಇದರಿಂದ ನಿಮಗೆ ನೀವೇ ಸಮಯ ನೀಡಿದಂತಾಗುತ್ತದೆ.

ಹೊಸದನ್ನು ಕಲಿಯಿರಿ

ಹೊಸದನ್ನು ಕಲಿಯಲು ಸಮಯವನ್ನು ಮೀಸಲಿಟ್ಟಾಗ, ನಾವು ತಕ್ಷಣವೇ ಅದರಲ್ಲಿ ತೊಡಗಿಸಿಕೊಳ್ಳುತ್ತೇವೆ. ಅಲ್ಲದೆ, ಹೊಸ ಆಸಕ್ತಿಗಳನ್ನು ಕಂಡುಕೊಳ್ಳುತ್ತೇವೆ. ಹೊಸದನ್ನು ಕಲಿಯುವುದರಿಂದ ನಮ್ಮ ಮನಸ್ಸನ್ನು ಬೇಡವಾದ ಆಲೋಚನೆಗಳಿಂದ ದೂರವಿಡುತ್ತದೆ. ಇದರಿಂದ ಮನಸ್ಸಿಗೆ ನೆಮ್ಮದಿ ತರುತ್ತದೆ.

ಖಿನ್ನತೆಯು ನಿಮ್ಮ ಜೀವನದ ಅತ್ಯಂತ ಸವಾಲಿನ ಅನುಭವಗಳಲ್ಲಿ ಒಂದಾಗಿರಬಹುದು. ವಾಸ್ತವವಾಗಿ, ಖಿನ್ನತೆಯು ಗಂಭೀರವಾದ ಮಾನಸಿಕ ಅಸ್ವಸ್ಥತೆಯಾಗಿದ್ದು ಅದು ನಿಮ್ಮ ಭಾವನೆಗಳನ್ನು ನಿಭಾಯಿಸಲು ಮತ್ತು ಜೀವನವನ್ನು ನಿಭಾಯಿಸಲು ಕಷ್ಟವಾಗಿಸುತ್ತದೆ. ಆದರೆ, ನಿಮ್ಮ ಜೀವನ ನಿಮ್ಮ ಕೈಯಲ್ಲೇ. ಜೀವನವನ್ನು ಸರಿ ದಾರಿಗೆ ತರಲು ಏನೆಲ್ಲಾ ಪ್ರಯತ್ನಿಸಬಹುದು ಅನ್ನೋ ಸಲಹೆಗಳನ್ನು ನಾವು ನಿಮಗೆ ನೀಡಿದ್ದೇವೆ. ಬದಲಾವಣೆ ಮಾಡುವುದು, ಎಷ್ಟೇ ಚಿಕ್ಕದಾಗಿದ್ದರೂ ಪ್ರಯತ್ನಿಸಲು ಯೋಗ್ಯವಾಗಿದೆ. ನಿಮ್ಮನ್ನು ನೀವೇ ಪುಶ್ ಮಾಡಿಕೊಳ್ಳುವುದರಿಂದ ಜೀವನವನ್ನು ಮರಳಿ ಟ್ರ್ಯಾಕ್ ಗೆ ತರಬಹುದು.