Constipation: ಮತ್ತೆ ಮತ್ತೆ ಮಲಬದ್ಧತೆ ಸಮಸ್ಯೆ ಕಾಡುತ್ತಿದೆಯಾ; ಈ ಯೋಗಾಸನಗಳನ್ನು ನಿತ್ಯ ಮಾಡಿ
Yoga for Constipation ಮಲಬದ್ಧತೆ ನಿವಾರಣೆಗೆ ಕೆಲವೊಂದು ಯೋಗ ಭಂಗಿಗಳನ್ನು ನಿತ್ಯ ಅಭ್ಯಾಸ ಮಾಡಬಹುದು. ನಿಯಮಿತವಾಗಿ ಯೋಗ ಅಭ್ಯಾಸ ಮಾಡಿದಾಗ, ನಿತ್ಯ ಕ್ರಿಯೆಗಳು ಸುಗಮವಾಗು ಆಗುತ್ತವೆ. ಮಲಬದ್ಧತೆ ಆಗಾಗ ಕಾಡುತ್ತಿದ್ದರೆ ಈ ಸರಳ ಯೋಗಾಸನಗಳನ್ನು ಪ್ರಯತ್ನಿಸಿ.
ಆಹಾರ ಸೇವನೆಯಲ್ಲಿ ಏರುಪೇರಾದಾಗ ಮಲಬದ್ಧತೆ (Constipation) ಸಮಸ್ಯೆ ಕಾಡುತ್ತದೆ. ಆದರೆ, ಇದನ್ನು ಕೆಲವೊಬ್ಬರು ಕಡೆಗಣಿಸುತ್ತಾರೆ. ಆಗಾಗ ಮಲಬದ್ಧತೆ ಸಮಸ್ಯೆ ಕಾಣಿಸಿಕೊಂಡರೆ ಹೊಟ್ಟೆ ಮತ್ತು ಶ್ರೋಣಿಯ ಅಸ್ವಸ್ಥತೆ ಉಂಟಾಗಬಹುದು. ನಿತ್ಯಕ್ರಿಯೆಗಳು ಸರಿಯಾಗಿ ಆದರೆ, ದೇಹ ಉಲ್ಲಾಸದಿಂದಿರುತ್ತದೆ. ಹೀಗಾಗಿ ಮಲಬದ್ಧತೆ ಆಗಾಗ ಕಾಣಿಸಿಕೊಂಡರೆ, ಅದರ ಕಡೆಗಣನೆ ಸಲ್ಲದು.
ನಿತ್ಯ ಯೋಗಾಭ್ಯಾಸ ಮಾಡುವುದರ ಮೂಲಕ, ಮಲಬದ್ಧತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆಯಾಸ, ಹೊಟ್ಟೆಯಲ್ಲಿ ಉಬ್ಬುವಿಕೆ ಸೇರಿದಂತೆ ದೇಹದ ಉಲ್ಲಾಸಕ್ಕೆ ಯೋಗಗಳು ಸಹಕಾರಿ. ಯೋಗದ ಮೂಲಕ, ದೇಹವನ್ನು ಶಕ್ತಿಯುತಗೊಳಿಸಬಹುದು. ಕೆಲವೊಂದು ಯೋಗ ಭಂಗಿಗಳಿಂದ ಮಲಬದ್ಧತೆ ನಿವಾರಿಸಬಹುದು. ನಿಯಮಿತವಾಗಿ ಯೋಗ ಅಭ್ಯಾಸ ಮಾಡಿದಾಗ, ಕರುಳಿನ ಚಲನೆಯನ್ನು ಸಾಮಾನ್ಯ ಸ್ಥಿತಿಗೆ ತರಬಹುದು. ಮಲಬದ್ಧತೆ ಸಮಸ್ಯೆ ನಿವಾರಣೆಗೆ ಮಾಡಬಹುದಾದ ಸರಳ ಯೋಗಾಸನಗಳು ಇಲ್ಲಿವೆ.
ಇದನ್ನೂ ಓದಿ | Galentines Day: ಏನಿದು ಗ್ಯಾಲೆಂಟೈನ್ಸ್ ಡೇ, ಈ ದಿನವನ್ನು ಯಾವಾಗ, ಯಾಕೆ ಆಚರಿಸುತ್ತಾರೆ, ಇದು ಸಿಂಗಲ್ಸ್ ಡೇನಾ? ಇಲ್ಲಿದೆ ಉತ್ತರ
ಮಯೂರಾಸನ
ಕೈಯನ್ನು ಸಮತೋಲನ ಮಾಡುವ ನವಿಲು ಭಂಗಿಯು ಯೋಗದಿಂದ ಭಂಗಿಯಾಗಿದೆ. ನೆಲದ ಮೇಲೆ ಮಂಡಿಯೂರಿ ಕುಳಿತುಕೊಂಡು, ಅಂಗೈಗಳನ್ನು ನೆಲದ ಮೇಲೆ ಊರಬೇಕು. ಎರಡೂ ಕಾಲುಗಳನ್ನು ಹಿಂದಕ್ಕೆ ಚಾಚಿ ಮೊಣಕೈಗಳ ಮೇಲೆ ಹೊಕ್ಕಳು ಬರುವಂತೆ ಶರೀರವನ್ನು ಇಟ್ಟುಕೊಳ್ಳಬೇಕು. ದೇಹವು ನವಿಲಿನಂತೆ ಕಾಣಿಸಬೇಕು. ಅನಂತರ ಉಸಿರನ್ನು ನಿಧಾನವಾಗಿ ಹೊರಗೆ ಬಿಡಬೇಕು. ಈ ಭಂಗಿಯು ಸ್ನಾಯುಗಳಿಗೆ ವಿಶ್ರಾಂತಿ ನೀಡಲು ಮತ್ತು ದೇಹದ ಸಮತೋಲನ ಪರೀಕ್ಷಿಸಲು ಪ್ರಮುಖ ಆಸನವಾಗಿದೆ.
ಇದನ್ನೂ ಓದಿ | ಪೋಷಕರೇ ಮುಟ್ಟಿನ ಬಗ್ಗೆ ಮುಚ್ಚುಮರೆ ಬೇಡ, ಮಕ್ಕಳಿಗೆ ನೀಡಿ ಆರೋಗ್ಯಕರ ಮಾಹಿತಿ; ಮುಕ್ತ ಮಾತಿಗೆ ಈ ವಯಸ್ಸು ಸೂಕ್ತ
ಅರ್ಧ-ಮತ್ಸ್ಯೇಂದ್ರಾಸನ
ಅರ್ಧ ಮತ್ಸ್ಯೇಂದ್ರಾಸನವು ಅತ್ಯಂತ ಸುಲಭವಾಗಿ ಅನುಸರಿಸಬಹುದಾದ ಹಂತಗಳನ್ನು ಹೊಂದಿದೆ. ಕುಳಿತು ಮಾಡುವ ಈ ಆಸನದಲ್ಲಿ ಬೆನ್ನು, ಹೊಟ್ಟೆ, ಸೊಂಟದ ವ್ಯಾಯಾಮ ಆಗುತ್ತವೆ. ದೇಹವನ್ನು ಚಾಪೆಯಿಂದ ಎತ್ತದಂತೆ ಖಚಿತಪಡಿಸಿಕೊಳ್ಳಬೇಕು. ಅಲ್ಲದೆ ಬೆನ್ನಿನ ಕೆಳಭಾಗವನ್ನು ತಗ್ಗಿಸದಂತೆ ನೋಡಿಕೊಳ್ಳಬೇಕು.
ಬದ್ಧ ಕೋನಸಾನ
ಇದು ಚಿಟ್ಟೆ ಭಂಗಿ. ಕುಳಿತುಕೊಂಡು ಎರಡು ಕಾಲುಗಳು ತೊಡೆಯ ಭಾಗಕ್ಕೆ ಸ್ಪರ್ಷಿಸುವಂತೆ ಮಡಚಬೇಕು. ಪಾದಗಳನ್ನು ಒಂದಕ್ಕೊಂದು ಪರಸ್ಪರ ಹತ್ತಿರ ಅಂಗಾಲುಗಳನ್ನು ಮೇಲ್ಮುಖವಾಗಿ ತಿರುಗಿಸಬೇಕು. ಈ ವೇಳೆ ಬೆನ್ನು ಮತ್ತು ನಿಮ್ಮ ದೃಷ್ಟಿ ನೇರವಾಗಿರಬೇಕು.
ಹಲಾಸನ (ನೇಗಿಲು ಭಂಗಿ)
ಹಲ ಎಂದರೆ ಸಂಸ್ಕೃತದಲ್ಲಿ ನೇಗಿಲು ಎಂದರ್ಥ. ನೆಲದ ಮೇಲೆ ನೇರವಾಗಿ, ಅಂಗಾತ ಮಲಗಿಕೊಂಡು ಮಾಡುವ ಆಸನ ಇದು. ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಾ ಎರಡೂ ಕಾಲುಗಳನ್ನು ಉತ್ಥಿತ ಪಾದಾಸನದಂತೆ ನೆಲದಿಂದ ಮೇಲಕ್ಕೆ ಎತ್ತಬೇಕು. ಕೈಗಳನ್ನು ಬೆನ್ನಿಗೆ ಆಧಾರವಾಗಿ ಕೊಟ್ಟು ಸರ್ವಾಂಗಾಸನದಂತೆ ಕಾಲುಗಳನ್ನು ಮೇಲೆತ್ತಿ ಭೂಮಿಗೆ ಲಂಬವಾಗಿ ಕೈ ಮತ್ತು ಸೊಂಟವನ್ನು ನಿಲ್ಲಿಸಬೇಕು.
ಇದನ್ನೂ ಓದಿ | Thursday Motivation: ಜೀವನದಲ್ಲಿ ಸಾಧನೆಗೆ ಅಡ್ಡಿಯಾಗುವ ಈ 6 ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ
ಪವನಮುಕ್ತಾಸನ
ಪವನ ಎಂದರೆ ಗಾಳಿ. ಗಾಳಿಯನ್ನು ದೇಹದಿಂದ ಹೊರಹಾಕಲು ನೆರವಾಗುವ ಆಸನ. ನೆಲದ ಮೇಲೆ ಅಂಗಾಂತ ಮಲಗಿ, ಉಸಿರನ್ನು ನಿಧಾನವಾಗಿ ಒಳಕ್ಕೆ ತೆಗೆದುಕೊಳ್ಳುತ್ತಾ ಎರಡೂ ಕಾಲನ್ನು ಮಡಚಿ ಮಂಡಿಗಳು ಎದೆಯ ಮೇಲೆ ಬರುವಂತೆ ಬಗ್ಗಿಸಬೇಕು. ಉಸಿರನ್ನು ಹೊರಕ್ಕೆ ಬಿಡುತ್ತಾ ಕತ್ತನ್ನು ಸ್ವಲ್ಪ ಮುಂದಕ್ಕೆ ಬಗ್ಗಿಸಿ, ಮೂಗು ಮಂಡಿಗೆ ಮುಟ್ಟಿಸಲು ಪ್ರಯತ್ನಿಸಬೇಕು. ಕಾಲುಗಳನ್ನು ಎರಡೂ ಕೈಗಳಿಂದ ಸುತ್ತಿ ಹಿಡಿದುಕೊಳ್ಳಬೇಕು. ಇದೇ ಸ್ಥಿತಿಯಲ್ಲಿ ಶರೀರವನ್ನು ಹಿಂದಕ್ಕೂ ಮುಂದಕ್ಕೂ ತೂಗಾಡಿಸಬೇಕು. ದೇಹದಲ್ಲಿ ಇರುವ ಅನಗತ್ಯ ಅನಿಲ ಅಥವಾ ಗ್ಯಾಸ್ ಹೊರಹಾಕಲು ಈ ಆಸನ ಸೂಕ್ತ.
(This copy first appeared in Hindustan Times Kannada website. To read more like this please logon to kannada.hindustantimes.com)