ಪೋಷಕರೇ ಮುಟ್ಟಿನ ಬಗ್ಗೆ ಮುಚ್ಚುಮರೆ ಬೇಡ, ಮಕ್ಕಳಿಗೆ ನೀಡಿ ಆರೋಗ್ಯಕರ ಮಾಹಿತಿ; ಮುಕ್ತ ಮಾತಿಗೆ ಈ ವಯಸ್ಸು ಸೂಕ್ತ-women health talking to children about periods right age to talk about menstruation with child parenting tips jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪೋಷಕರೇ ಮುಟ್ಟಿನ ಬಗ್ಗೆ ಮುಚ್ಚುಮರೆ ಬೇಡ, ಮಕ್ಕಳಿಗೆ ನೀಡಿ ಆರೋಗ್ಯಕರ ಮಾಹಿತಿ; ಮುಕ್ತ ಮಾತಿಗೆ ಈ ವಯಸ್ಸು ಸೂಕ್ತ

ಪೋಷಕರೇ ಮುಟ್ಟಿನ ಬಗ್ಗೆ ಮುಚ್ಚುಮರೆ ಬೇಡ, ಮಕ್ಕಳಿಗೆ ನೀಡಿ ಆರೋಗ್ಯಕರ ಮಾಹಿತಿ; ಮುಕ್ತ ಮಾತಿಗೆ ಈ ವಯಸ್ಸು ಸೂಕ್ತ

Parenting Tips: ಹೆಣ್ಣು ಮಕ್ಕಳ ಮುಟ್ಟಿನ ಕುರಿತು ಮಕ್ಕಳೊಂದಿಗೆ ಮಾತನಾಡಲು ಪೋಷಕರು ಹಿಂದೆ ಮುಂದೆ ನೋಡುತ್ತಾರೆ. ಆದರೆ, ಸರಿಯಾದ ವಯಸ್ಸಿನಲ್ಲಿ ಮಕ್ಕಳಿಗೆ ಪಿರಿಯಡ್ಸ್‌ ಕುರಿತ ಸೂಕ್ತ ಮಾಹಿತಿ ನೀಡಬೇಕು. ಇದು ಹೆತ್ತವರ ಜವಾಬ್ದಾರಿ. ಮಕ್ಕಳು ತಮ್ಮ ದೇಹವನ್ನು ಅರ್ಥಮಾಡಿಕೊಂಡು, ಅದಕ್ಕೆ ಸರಿಯಾಗಿ ಬದುಕಲು ಅವಕಾಶ ಮಾಡಿಕೊಡಬೇಕು.

ಮುಟ್ಟಿನ ಕುರಿತು ಮಕ್ಕಳಿಗೆ ನೀಡಿ ಆರೋಗ್ಯಕರ ಮಾಹಿತಿ
ಮುಟ್ಟಿನ ಕುರಿತು ಮಕ್ಕಳಿಗೆ ನೀಡಿ ಆರೋಗ್ಯಕರ ಮಾಹಿತಿ

ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಮಕ್ಕಳಿಗೆ ತಿಳಿದಿರಬೇಕು. ವೈಯಕ್ತಿಕ ಶುಚಿತ್ವದ ಕುರಿತು ಮಕ್ಕಳಿಗೆ ಅರಿವಾಗಬೇಕು. ದೇಹ ಹಾಗೂ ಆರೋಗ್ಯದ ಕುರಿತಾಗಿ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸುವುದು ಹೆತ್ತವರು ಹಾಗೂ ಹಿರಿಯರ ಕರ್ತವ್ಯ. ಸಾಮಾನ್ಯವಾಗಿ ಇತರ ಎಲ್ಲಾ ವಿಚಾರಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಮಕ್ಕಳಿಗೆ ಹೆತ್ತವರು ಹೇಳುತ್ತಾರೆ. ಆದರೆ, ಹೆಣ್ಣು ಮಕ್ಕಳ ಮುಟ್ಟಿನ (ಪಿರಿಯಡ್ಸ್) ವಿಚಾರ ಬಂದಾಗ ಪೋಷಕರು ಹಿಂದೆ ಸರಿಯುವುದು ಹೆಚ್ಚು. ಇದು ತಪ್ಪು.

ಮುಟ್ಟು ಸೇರಿದಂತೆ ವೈಯಕ್ತಿಕ ವಿಷಯಗಳ ಬಗ್ಗೆ ಮಕ್ಕಳೊಂದಿಗೆ ಮಾತನಾಡಲು ಪೋಷಕರಿಗೆ ಸ್ವಲ್ಪ ಕಷ್ಟವಾಗಬಹುದು. ಆದರೆ ಮಕ್ಕಳಿಗೆ ಸೂಕ್ತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡಬೇಕು. ಇದು ಹೆತ್ತವರ ಜವಾಬ್ದಾರಿ. ಮಕ್ಕಳು ತಮ್ಮ ದೇಹವನ್ನು ಅರ್ಥಮಾಡಿಕೊಂಡು, ಅದಕ್ಕೆ ಸರಿಯಾಗಿ ಬದುಕಲು ಅವಕಾಶ ಮಾಡಿಕೊಡಬೇಕು. ವೈಯಕ್ತಿಕ ಶುಚಿತ್ವದಲ್ಲಿ ಸಹಾಯ ಮಾಡಿ, ಅವರ ಆರೋಗ್ಯದ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆತ್ತವರೇ ನೆರವಾಗಬೇಕು.

ಪಿರಿಯಡ್ಸ್ ಬಗ್ಗೆ ಮಕ್ಕಳೊಂದಿಗೆ ಯಾವಾಗ ಮಾತನಾಡಬೇಕು?

ಮುಟ್ಟಿನ ಬಗ್ಗೆ ಮಾತನಾಡುವುದು ಒಂದು ನಿರ್ದಿಷ್ಟ ವಯಸ್ಸಿನಲ್ಲಿ ದೊಡ್ಡ ಚರ್ಚೆಯಂತಾಗಬಾರದು. ಅದರ ಬದಲಾಗಿ, ಈ ವಿಚಾರವಾಗಿ ಮಕ್ಕಳೊಂದಿಗೆ ತುಸು ಬೇಗನೆ ಮಾತನಾಡಿ. ನಿಮ್ಮ ಮಗುವಿನ ತಿಳುವಳಿಕೆಯನ್ನು ನಿಧಾನವಾಗಿ ಹೆಚ್ಚಿಸುವ ಪ್ರಯತ್ನ ಮಾಡಿ. ಈ ವಿಚಾರವನ್ನು ಕೇವಲ ಹೆಣ್ಣು ಮಕ್ಕಳೊಂದಿಗೆ ಮಾತನಾಡಬೇಕು ಹಾಗೂ ಗಂಡು ಮಕ್ಕಳೊಂದಿಗೆ ಚರ್ಚಿಸಬಾರದು ಎಂಬ ಭಾವನೆಯನ್ನು ಮನಸಿನಿಂದ ತೆಗೆದು ಹಾಕಿ. ಗಂಡಾಗಲಿ ಅಥವಾ ಹೆಣ್ಣಾಗಲಿ, ಮುಟ್ಟಿನ ಬಗ್ಗೆ ವಿಶ್ವಾಸಾರ್ಹ ಮಾಹಿತಿಯು ಎಲ್ಲಾ ಮಕ್ಕಳಿಗೂ ಅಗತ್ಯ. ಹೀಗಾಗಿ ನೀವು ನಿಮ್ಮ ಮಕ್ಕಳೊಂದಿಗೆ ಮಾತನಾಡುವುದಷ್ಟೇ ಮುಖ್ಯ.

ಮಕ್ಕಳು ಪ್ರಶ್ನೆ ಕೇಳಿದಾಗ ಸಹನೆಯಿಂದ ಸರಿಯಾದ ಉತ್ತರಿಸಿ

5 ವರ್ಷದ ಮಗುವೊಂದು ಟ್ಯಾಂಪೋನ್‌ ಅಥವಾ ಸ್ಯಾನಿಟರಿ ಪ್ಯಾಡ್‌ ಅನ್ನು ನೋಡಿದಾಗ, ಅದು ಏನು ಎಂದು ಪ್ರಶ್ನೆ ಕೇಳುತ್ತದೆ. ಆಗ ನೀವು ಅವರಿಗೆ ಏನು ಉತ್ತರ ಕೊಡಬಹುದು ನೋಡಿ. ಮಕ್ಕಳು ಪ್ರಶ್ನೆ ಕೇಳಿದಾಗ, “ಇದೆಲ್ಲಾ ನಿನಗೆ ಬೇಕಿಲ್ಲ. ಅದೆಲ್ಲಾ ಕೇಳಬಾರದು” ಎಂಬ ಉತ್ತರ ಕೊಡಬೇಡಿ. ಬದಲಿಗೆ ಹೀಗೆ ಹೇಳಿ…

“ಮಹಿಳೆಯರಲ್ಲಿ ಪ್ರತಿ ತಿಂಗಳು ಯೋನಿಯಿಂದ ಸ್ವಲ್ಪ ಸ್ವಲ್ಪವೇ ರಕ್ತಸ್ರಾವವಾಗುತ್ತದೆ. ಇದನ್ನು ಮುಟ್ಟು ಅಥವಾ ಪಿರಿಯಡ್ಸ್ ಎಂದು ಕರೆಯಲಾಗುತ್ತದೆ. ರಕ್ತಸ್ರಾವವಾಗುವುದು ಯಾವುದೇ ಗಾಯದಿಂದ ಅಲ್ಲ. ಅದು ನೈಸರ್ಗಿಕ ಪ್ರಕ್ರಿಯೆ. ಅಲ್ಲದೆ ಇದು ಅವರ ದೇಹವು ಮಗುವೊಂದಕ್ಕೆ ಸಿದ್ಧವಾಗುವ ಹಂತ. ಈ ರಕ್ತಸ್ರಾವವನ್ನು ಟ್ಯಾಂಪೋನ್‌ ಹಿಡಿದಿಟ್ಟುಕೊಳ್ಳುತ್ತದೆ. ಆಗ ಒಳ ಉಡುಪುಗಳಿಗೆ ರಕ್ತ ಅಂಟುವುದಿಲ್ಲ.” ಹೀಗೆ ಮಕ್ಕಳ ವಯಸ್ಸಿಗೆ ಅನುಸಾರವಾಗಿ ನೀವು ಉತ್ತರ ಕೊಡಬಹುದು. ನಿಮ್ಮ ಮಗು ಗಂಡು ಅಥವಾ ಹೆಣ್ಣು ಎಂಬ ಆಧಾರದಲ್ಲಿ ಉತ್ತರ ನೀಡಿದರೆ ಇನ್ನೂ ಉತ್ತಮ.

ಇದನ್ನೂ ಓದಿ | Heart Health: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನದ ಆಹಾರ ಕ್ರಮದಲ್ಲಿರಲಿ ಈ ಪದಾರ್ಥಗಳು

ಒಂದು ವೇಳೆ ನಿಮ್ಮ ಮಗು ಈ ಬಗ್ಗೆ ಪ್ರಶ್ನೆಗಳನ್ನು ಕೇಳದಿದ್ದರೂ, ನೀವಾಗಿಯೇ ವಿಷಯ ತಂದು ಅವರಿಗೆ ಮುಟ್ಟಿನ ಬಗ್ಗೆ ತಿಳಿಸಬಹುದು. ಅವರು 6ರಿಂದ 7 ವರ್ಷ ವಯಸ್ಸಿಗೆ ಬಂದಾಗ, ಹೆಚ್ಚಿನ ಮಕ್ಕಳು ಪಿರಿಯಡ್ಸ್‌ ಕುರಿತ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಪಡೆಯುತ್ತಾರೆ. ಈ ಕುರಿತು ಮಾತನಾಡಲು ಎದುರಾಗುವ ಸೂಕ್ತ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಿ.

ಮಕ್ಕಳಲ್ಲಿ ಮುಟ್ಟಿನ ಅರಿವು ಮೂಡಿಸಲು ಸೂಕ್ತ ಸಮಯ

  • ಮಕ್ಕಳು ಪ್ರೌಢಾವಸ್ಥೆ ಬಂದಾಗ
  • ಅವರು ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಕೇಳಿದಾಗ ಅಥವಾ ಹೇಳಿದಾಗ
  • ಮಗು ಎಲ್ಲಿಂದ ಬರುತ್ತವೆ ಎಂದು ನಿಮ್ಮ ಮಗು ಕೇಳಿದಾಗ
  • ನೀವು ಪ್ಯಾಡ್‌ ಅಥವಾ ಟ್ಯಾಂಪೋನ್‌ ಖರೀದಿಸುವಾಗ ಮಕ್ಕಳು ಜೊತೆಗಿದ್ದಾಗ
  • ಬೇರೆ ಯಾರಾದರೂ ಪಿರಿಯಡ್ಸ್‌ ಬಗ್ಗೆ ಮಾತನಾಡುವುದನ್ನು ಕೇಳಿಸಿಕೊಂಡು ಮಕ್ಕಳು ಗೊಂದಲದಲ್ಲಿದ್ದಾಗ

ಇದನ್ನೂ ಓದಿ | Viral Video: ಮಗಳ ಸೋಲನ್ನೇ ಗೆಲುವಾಗಿಸಿದ ಅಪ್ಪ; ಪುಟ್ಟ ಬಾಲಕಿಯ ಬೆಟ್ಟದಂಥಾ ಖುಷಿಗೆ ಹೆತ್ತವರೇ ಮುನ್ನುಡಿ

ನಿಮ್ಮ ಮಗುವಿಗೆ ಮುಟ್ಟಿನ ಕುರಿತು ತಿಳಿದಿದೆಯೇ ಎಂದು ಕೇಳಿ. ಆಗ ನೀವು ಅವರಿಗೆ ವಿವರವಾಗಿ ಹೇಳಬಹುದು. ನೀವು ಮಕ್ಕಳಿಗೆ ಹೀಗೆ ಹೇಳಬಹುದು.

ಒಂದು ಹುಡುಗಿ ದೊಡ್ಡವಳಾಗಿ ಬೆಳೆದಂತೆ, ಆಕೆಯ ದೇಹದಲ್ಲಿ ಬದಲಾವಣೆಯಾಗುತ್ತದೆ. ಆಕೆ ದೊಡ್ಡವಳಾದ ಮೇಲೆ ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಬಹುದು. ಆ ಮಗು ತಾಯಿಯ ದೇಹದೊಳಗೆ ಬೆಳೆಯಲು ಒಂದು ಸ್ಥಳ ಬೇಕು. ಮಗು ಬೆಳೆಯುವ ಸ್ಥಳವನ್ನು ಗರ್ಭಕೋಶ ಎಂದು ಕರೆಯಲಾಗುತ್ತದೆ. ಪ್ರತಿ ತಿಂಗಳು ಗರ್ಭಾಶಯದ ಪರದೆಯು ಮಗುವಿಗೆ ಸಿದ್ಧವಾಗುತ್ತದೆ. ಆರಂಭದಲ್ಲಿ ಗರ್ಭಕೋಶದಲ್ಲಿ ಮಗು ಇಲ್ಲದಿದ್ದರೆ, ಗರ್ಭಾಶಯದ ಪರದೆಯು ತೆರೆದುಕೊಂಡು ಸ್ವಲ್ಪ ಸ್ವಲ್ಪವೇ ರಕ್ತಸ್ರಾವವಾಗುತ್ತದೆ. ಆ ರಕ್ತವು ಮಹಿಳೆಯ ಯೋನಿಯ ಮೂಲಕ ಹೊರಬರುತ್ತದೆ.

ಪೋಷಕರು ಈ ಎಲ್ಲದರ ಬಗ್ಗೆ ಮಕ್ಕಳ ಬಳಿ ಮುಕ್ತವಾಗಿ ಮಾತನಾಡುವುದರಿಂದ ಮಕ್ಕಳಲ್ಲಿ ತಿಳುವಳಿಕೆ ಹೆಚ್ಚುವ ಜೊತೆಗೆ ಇಲ್ಲದ ಕುತೂಹಲಗಳು ಸೃಷ್ಟಿಯಾಗುವುದನ್ನೂ ತಡೆಯಬಹುದು. 

ಇದನ್ನೂ ಓದಿ | Brain Teaser: ನೀವು ಗಣಿತದಲ್ಲಿ ಪಂಟರಾದ್ರೆ ಈ ಪಜಲ್‌ ಬಿಡಿಸೋಕೆ ಟ್ರೈ ಮಾಡಿ; ಇದು ನೋಡಿದಷ್ಟು ಸುಲಭವಲ್ಲ

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point