ಕನ್ನಡ ಸುದ್ದಿ  /  ಜೀವನಶೈಲಿ  /  Yoga Benefits: ಬಕಾಸನ, ಸರ್ವಾಂಗಾಸನ, ಬ್ರಹ್ಮಾಂಡ ಧ್ಯಾನ ಮಾಡೋದು ಹೇಗೆ ಗೊತ್ತೆ? ಏಕಾಗ್ರತೆ, ಮಾನಸಿಕ ಆರೋಗ್ಯ ಹೆಚ್ಚಿಸುವ ಯೋಗಾಸನಗಳಿವು

Yoga Benefits: ಬಕಾಸನ, ಸರ್ವಾಂಗಾಸನ, ಬ್ರಹ್ಮಾಂಡ ಧ್ಯಾನ ಮಾಡೋದು ಹೇಗೆ ಗೊತ್ತೆ? ಏಕಾಗ್ರತೆ, ಮಾನಸಿಕ ಆರೋಗ್ಯ ಹೆಚ್ಚಿಸುವ ಯೋಗಾಸನಗಳಿವು

Bakasana Sarvangasana Bramanda dyana benefits: ಯೋಗಾಸನದಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಇದು ದೇಹವನ್ನು ಫಿಟ್ ಆಗಿಡುವುದು ಮಾತ್ರವಲ್ಲದೆ, ಮಾನಸಿಕ ಚುರುಕುತನ, ಜ್ಞಾಪಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಯೋಗಾಸನಕ್ಕಿದೆ. ಬಕಾಸನ, ಸರ್ವಾಂಗಾಸನ, ಬ್ರಹ್ಮಾಂಡ ಧ್ಯಾನ ಯೋಗಾಸನ ಮಾಡುವುದು ಹೇಗೆ ಮತ್ತು ಇವುಗಳಿಂದ ದೊರಕುವ ಪ್ರಯೋಜನಗಳ ವಿವರ ಇಲ್ಲಿದೆ.

Yoga Benefits: ಬಕಾಸನ, ಸರ್ವಾಂಗಾಸನ, ಬ್ರಹ್ಮಾಂಡ ಧ್ಯಾನ
Yoga Benefits: ಬಕಾಸನ, ಸರ್ವಾಂಗಾಸನ, ಬ್ರಹ್ಮಾಂಡ ಧ್ಯಾನ

ಯೋಗಾಸನ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಯೋಗವು ನಿಮ್ಮ ಮೆದುಳಿನಲ್ಲಿ ಹೊಸ ಕೋಶಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಅದರ ಕಾರ್ಯವನ್ನು ಸುಧಾರಿಸುತ್ತದೆ. ಯಾವುದೇ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಮತ್ತು ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ನಿಮಗೆ ಕಷ್ಟವಾಗುತ್ತಿದೆಯೇ? ಮೆದುಳಿನ ಚುರುಕುತನದ ಕೊರತೆಯಿಂದ ಈ ರೀತಿ ಆಗುವ ಸಾಧ್ಯತೆ ಹೆಚ್ಚಿದೆ. ಜ್ಞಾಪಕ ಶಕ್ತಿ, ಆಲೋಚನೆ, ಭಾವನೆ, ಹಸಿವು ಮತ್ತು ಪ್ರತಿ ದೈಹಿಕ ಕಾರ್ಯ ಮತ್ತು ಪ್ರಕ್ರಿಯೆಗಳನ್ನು ನಿಯಂತ್ರಿಸುವಂತಹ ದೈನಂದಿನ ಕಾರ್ಯಗಳನ್ನು ನಿರ್ವಹಿಸುವಲ್ಲಿ ನಿಮ್ಮ ಮೆದುಳು ಅಸಾಧಾರಣ ಪಾತ್ರವನ್ನು ವಹಿಸುತ್ತದೆ. ನಿಮ್ಮ ಮೆದುಳು ಚುರುಕಾಗಿಲ್ಲದಿದ್ದರೆ, ಸಾಮಾನ್ಯ ಕಾರ್ಯಗಳನ್ನು ನಿರ್ವಹಿಸಲು ನಿಮಗೆ ಕಷ್ಟವಾಗುತ್ತದೆ.

ಯೋಗದ ಪ್ರಾಣಾಯಾಮ ವಿಧಾನಗಳನ್ನು ಅಭ್ಯಾಸ ಮಾಡುವುದರಿಂದ ಆಂತರಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಮೆದುಳಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ. ಮೆದುಳಿನ ಶಕ್ತಿ ಮತ್ತು ನರ ಚಟುವಟಿಕೆ ವರ್ಧನೆಗಾಗಿ ನಿಮ್ಮ ದೈನಂದಿನ ದಿನಚರಿಯಲ್ಲಿ ಈ ಕೆಳಗಿನ ಯೋಗಾಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಮಾನಸಿಕ ಆರೋಗ್ಯ ಮತ್ತು ಅರಿವಿನ ಸಾಮರ್ಥ್ಯಗಳನ್ನು ನೀವು ಸುಧಾರಿಸಬಹುದು:

1. ಬಕಾಸನ (ಬಕಪಕ್ಷಿ ಭಂಗಿ)

ಬಕ ಎಂದರೆ ಒಂದು ಪಕ್ಷಿ. ಈ ಪಕ್ಷಿಗೆ ಕಾಲುಗಳು ಉದ್ದವಾಗಿದ್ದು, ಕಾಲುಗಳ ಮೇಲ್ಭಾಗ ಚಿಕ್ಕದಾಗಿರುತ್ತದೆ. ತನ್ನ ಆಹಾರಕ್ಕಾಗಿ ಕಾದು ಕುಳಿತುಕೊಳ್ಳುವ ಈ ಪಕ್ಷಿಗೆ ಬಕಪಕ್ಷಿ ಎಂದು ಹೆಸರು. ಆ ಪಕ್ಷಿಯನ್ನು ಹೋಲುವ ಈ ಆಸನಕ್ಕೆ ಬಕಾಸನ ಎಂದು ಹೆಸರು.

ಟ್ರೆಂಡಿಂಗ್​ ಸುದ್ದಿ

ಈ ಆಸನವನ್ನು ಮಾಡುವ ವಿಧಾನ: ಸಮಾನವಾಗಿ ನಿಂತಿರುವ ಸ್ಥಾನದಲ್ಲಿ ಪ್ರಾರಂಭಿಸಿ. ಮುಂದಕ್ಕೆ ಬಾಗಿ, ನಿಮ್ಮ ಅಂಗೈಗಳನ್ನು ನಿಮ್ಮ ಮುಂದೆ ನೆಲದ ಮೇಲೆ ಸಮತಟ್ಟಾಗಿ ಇರಿಸಿ. ಎರಡೂ ಕೈಗಳನ್ನು ಮುಂದ ಇಡಿ. ನಂತರ ನಿಧಾನಕ್ಕೆ ನಿಮ್ಮ ಸೊಂಟವನ್ನು ಮೇಲಕ್ಕೆತ್ತಿ. ನಿಧಾನವಾಗಿ ನೆಲದಲ್ಲಿರುವ ಕಾಲ್ಬೆರಳುಗಳನ್ನು ಮೇಲಕ್ಕೆತ್ತಿ. ನಿಮ್ಮ ಮೊಣಕೈಗಳನ್ನು ಸ್ವಲ್ಪ ಬಗ್ಗಿಸಿ. ಈಗ ನಿಧಾನವಾಗಿ ಎರಡೂ ಪಾದಗಳನ್ನು ನೆಲದಿಂದ ಮೇಲಕ್ಕೆತ್ತಿ. ನಿಮ್ಮ ಪಾದಗಳನ್ನು ಒಟ್ಟಿಗೆ ತನ್ನಿ. ಸಾಧ್ಯವಾದಷ್ಟು ನಿಮ್ಮ ತೋಳುಗಳನ್ನು ನೇರಗೊಳಿಸಲು ಶ್ರಮಿಸಿ.

2. ಸರ್ವಾಂಗಾಸನ

ಸರ್ವಾಂಗ ಎಂದರೆ ದೇಹದ ಎಲ್ಲಾ ಭಾಗಗಳು. ಈ ಆಸನ ಭಂಗಿಯಿಂದ ಶರೀರದ ಎಲ್ಲಾ ಅಂಗಗಳಿಗೆ ವ್ಯಾಯಾಮ ಒದಗುವುದರಿಂದ ಸರ್ವಾಂಗಾಸನ ಎಂಬ ಹೆಸರಿದೆ.

ವಿಧಾನ: ನಿಮ್ಮ ದೇಹದ ಪಕ್ಕದಲ್ಲಿ ನಿಮ್ಮ ತೋಳುಗಳನ್ನಿರಿಸಿ ನಿಮ್ಮ ಬೆನ್ನಿನ ಮೇಲೆ ಮಲಗಿ. ನಂತರ ನೆಲದಿಂದ ನಿಮ್ಮ ಕಾಲುಗಳನ್ನು ನಿಧಾನವಾಗಿ ಮೇಲಕ್ಕೆತ್ತಿ. ನೆಲಕ್ಕೆ ಲಂಬವಾಗಿ ಮೇಲಕ್ಕೆತ್ತಿ ಪಾದಗಳನ್ನು ಮೇಲಕ್ಕೆತ್ತಿ. ನಿಮ್ಮ ಸೊಂಟವನ್ನು ನಿಧಾನವಾಗಿ ಮೇಲಕ್ಕೆತ್ತಿ. ಬೆಂಬಲಕ್ಕಾಗಿ ನಿಮ್ಮ ಕೈಗಳನ್ನು ನಿಮ್ಮ ಸೊಂಟದಿಂದ ಸ್ವಲ್ಪ ಮೇಲಕ್ಕೆ ಹಿಡಿದುಕೊಳ್ಳಿ. ನಿಮ್ಮ ಭುಜಗಳಿಂದ ನಿಮ್ಮ ಮುಂಡ, ಸೊಂಟ, ಕಾಲುಗಳು ಮತ್ತು ಪಾದಗಳಿಗೆ ನೇರ ರೇಖೆಯನ್ನು ಗುರಿಯಾಗಿಸಿ. ನಿಮ್ಮ ಪಾದಗಳ ಕಡೆಗೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ.

3. ಬ್ರಹ್ಮಾಂಡ ಧ್ಯಾನ

ಬ್ರಹ್ಮಾಂಡದ ಧ್ವನಿಯಾದ ಓಂ ಅನ್ನು ಯೋಗ ಮತ್ತು ಧ್ಯಾನದ ಅವಧಿಗಳಲ್ಲಿ ಹೆಚ್ಚಾಗಿ ಪಠಿಸಲಾಗುತ್ತದೆ. ಇದು ನಿಮ್ಮ ಶಾಂತಿಯುತ ಮತ್ತು ಸಾವಧಾನತೆಯನ್ನು ಹೆಚ್ಚಿಸುತ್ತದೆ. ಕೇವಲ ಶಬ್ಧಕ್ಕಿಂತ ಹೆಚ್ಚಾಗಿ, ಇದು ಮಂತ್ರ, ಬ್ರಹ್ಮಾಂಡದ ಶಕ್ತಿಯೊಂದಿಗೆ ನಿಮ್ಮನ್ನು ಸಂಪರ್ಕಿಸುವ ಮೂಲಕ ಆಂತರಿಕ ಶಾಂತಿಯನ್ನು ಕಂಡುಕೊಳ್ಳುವ ಕಂಪನವಾಗಿದೆ.

ಅಲ್ಲದೆ, ಈ ಧ್ಯಾನದ ಸಮಯದಲ್ಲಿ ಮರಗಳು, ನದಿಗಳು, ಸಮುದ್ರಗಳು, ಕಾಡುಗಳು ಮತ್ತು ಸರೋವರಗಳು ಮುಂತಾದ ಅಂಶಗಳನ್ನು ಒಳಗೊಂಡಂತೆ ಸಂಪೂರ್ಣ ಸೌರವ್ಯೂಹವನ್ನು ದೃಶ್ಯೀಕರಿಸುವುದನ್ನು ಒಳಗೊಂಡಿರುತ್ತದೆ. ಇದರಿಂದ ನಿಮ್ಮ ಮನಸ್ಸನ್ನು ಬಲಗೊಳಿಸಿ, ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದೆಡೆ ಗಮನವನ್ನು ಕೇಂದ್ರೀಕರಿಸುವಂತೆ ಮಾಡಲು ಸಹಾಯಕವಾಗಿದೆ. ಏಕಾಗ್ರತೆಯನ್ನು ಸಹ ಸುಧಾರಿಸುತ್ತದೆ.

ಯೋಗವು ಮನಸ್ಸು ಮತ್ತು ದೇಹದ ನಡುವೆ ಗಟ್ಟಿಯಾದ ಸಂಪರ್ಕವನ್ನು ರೂಪಿಸುವ ಸಾಂಪ್ರದಾಯಿಕ ವಿಜ್ಞಾನವಾಗಿ ಕಾರ್ಯನಿರ್ವಹಿಸುತ್ತದೆ. ಈ ಆಸನಗಳು ಪ್ರಯತ್ನಿಸುವುದರಿಂದ ಯೋಗವು ದೇಹದಿಂದ ಮೆದುಳಿಗೆ ಅದರ ಅದ್ಭುತ ಪರಿಣಾಮಗಳನ್ನು ರವಾನಿಸುತ್ತದೆ. ದೇಹದಲ್ಲಿ ಪ್ರಯೋಜನಕಾರಿ ಪ್ರತಿಫಲನವನ್ನು ಉಂಟುಮಾಡುತ್ತದೆ. ನಿಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಯೋಗಾಸನವನ್ನು ಪ್ರಯತ್ನಿಸುವುದರಿಂದ ಅರಿವಿನ ಕಾರ್ಯ ಮತ್ತು ಮೆದುಳಿನ ಆರೋಗ್ಯವನ್ನು ಹೆಚ್ಚು ಸುಧಾರಿಸಬಹುದು. ಈ ಮೂಲಕ ಮೆದುಳಿನ ಪ್ರಕ್ರಿಯೆಗಳನ್ನು ಸಮತೋಲನಗೊಳಿಸಬಹುದು.

ಲೇಖನ: ಪ್ರಿಯಾಂಕ ಗೌಡ