ಮೈಗ್ರೇನ್‌ಗೆ ಮದ್ದಿಲ್ಲ ಅಂತ ಚಿಂತೆ ಮಾಡ್ಬೇಡಿ, ಈ ಒಂದೇ ಒಂದು ಪದಾರ್ಥವನ್ನು ನಿಮ್ಮ ಡಯೆಟ್‌ನಲ್ಲಿ ಸೇರಿಸಿ; ತಲೆನೋವು ಮಾಯವಾಗುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಮೈಗ್ರೇನ್‌ಗೆ ಮದ್ದಿಲ್ಲ ಅಂತ ಚಿಂತೆ ಮಾಡ್ಬೇಡಿ, ಈ ಒಂದೇ ಒಂದು ಪದಾರ್ಥವನ್ನು ನಿಮ್ಮ ಡಯೆಟ್‌ನಲ್ಲಿ ಸೇರಿಸಿ; ತಲೆನೋವು ಮಾಯವಾಗುತ್ತೆ

ಮೈಗ್ರೇನ್‌ಗೆ ಮದ್ದಿಲ್ಲ ಅಂತ ಚಿಂತೆ ಮಾಡ್ಬೇಡಿ, ಈ ಒಂದೇ ಒಂದು ಪದಾರ್ಥವನ್ನು ನಿಮ್ಮ ಡಯೆಟ್‌ನಲ್ಲಿ ಸೇರಿಸಿ; ತಲೆನೋವು ಮಾಯವಾಗುತ್ತೆ

ಮೈಗ್ರೇನ್ ತಲೆನೋವಿನ ಸಮಸ್ಯೆ ಎಲ್ಲರಿಗೂ ಇರುವುದಿಲ್ಲ. ಆದರೆ ಇದ್ದವರಿಗೆ ಇದು ನರಕ ತೋರಿಸುತ್ತದೆ. ಈ ತಲೆನೋವು ವಿಚಿತ್ರವಾಗಿದ್ದು ವಿಪರೀತ ಹಿಂಸೆ ನೀಡುತ್ತದೆ. ಇದಕ್ಕೆ ಕೆಲವೊಂದು ಮನೆಮದ್ದುಗಳಿದ್ದರೂ ಔಷಧಿಯಿಂದ ಗುಣವಾಗುವುದು ಕಡಿಮೆ. ಅಂತಹ ಸಂದರ್ಭದಲ್ಲಿ ಈ ಕೆಲವು ಆಹಾರಗಳನ್ನು ನಿಮ್ಮ ಡಯೆಟ್‌ನಲ್ಲಿ ಸೇರಿಸಬೇಕು. ಇದರಿಂದ ಮೈಗ್ರೇನ್ ಹೇಳ ಹೆಸರಿಲ್ಲದಂತಾಗುತ್ತದೆ.

ಮೈಗ್ರೇನ್ ನಿವಾರಿಸುವ ನೈಸರ್ಗಿಕ ವಿಧಾನ
ಮೈಗ್ರೇನ್ ನಿವಾರಿಸುವ ನೈಸರ್ಗಿಕ ವಿಧಾನ (PC: Canva)

ಒತ್ತಡ, ಹಾರ್ಮೋನುಗಳಲ್ಲಿನ ವ್ಯತ್ಯಾಸ, ನಿದ್ದೆಯ ಕೊರತೆ, ಕೆಲವು ನಿರ್ದಿಷ್ಟ ಆಹಾರಗಳ ಸೇವನೆ ಹೀಗೆ ಹಲವು ಕಾರಣಗಳಿಂದ ಮೈಗ್ರೇನ್ ಸಮಸ್ಯೆ ವೃದ್ಧಿಯಾಗುತ್ತದೆ. ಇದು ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಜಾಗತಿಕ ಸಮಸ್ಯೆ. ಕೆಲವೊಮ್ಮೆ ಋತುಮಾನಗಳ ಬದಲಾವಣೆಯೂ ಮೈಗ್ರೇನ್‌ಗೆ ಕಾರಣವಾಗಬಹುದು. ಇದೊಂದು ವಿಚಿತ್ರ ತಲೆನೋವಾಗಿದ್ದು, ಇದರ ನಿವಾರಣೆಗೆ ಶಾಶ್ವತ ಪರಿಹಾರಗಳಿಲ್ಲ.

ಇದೊಂದು ಸಂಕೀರ್ಣ ಸಮಸ್ಯೆ, ಮೈಗ್ರೇನ್‌ ಅತಿಯಾದ ತಲೆನೋವು ಉಂಟು ಮಾಡಬಹುದು. ಈ ಸಮಸ್ಯೆ ಇರುವವರಿಗೆ ಶಬ್ದ ಹಾಗೂ ಬೆಳಕಿನ ಸೂಕ್ಷ್ಮತೆಗೆ ತಲೆನೋವು ಬರುತ್ತದೆ. ಕೆಲವೊಮ್ಮೆ ವಾಕರಿಕೆ ಕೂಡ ಬರಬಹುದು. ಇದಕ್ಕೆ ಜೀವನಶೈಲಿ ಹಾಗೂ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದರಿಂದ ಪರಿಹಾರ ಕಂಡುಕೊಳ್ಳಬಹುದು. ಕೆಲವು ನಿರ್ದಿಷ್ಟ ಆಹಾರಗಳು ಮೈಗ್ರೇನ್ ತಲೆನೋವಿನ ಲಕ್ಷಣಗಳ ನಿವಾರಣೆಗೆ ಸಹಾಯ ಮಾಡುತ್ತವೆ. ಅಂತಹ ವಸ್ತುಗಳಲ್ಲಿ ಎಕ್ಸ್ಟ್ರಾ ಒರಿಜಿನ್‌ ಆಲಿವ್ ಎಣ್ಣೆ ಕೂಡ ಒಂದು. ಮೆಡಿಟರೇನಿಯನ್ ಡಯೆಟ್‌ನಲ್ಲಿ ಸ್ಟಾರ್ ಎನ್ನಿಸಿಕೊಂಡಿರುವ ಈ ಆಲಿವ್ ಎಣ್ಣೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಆರೋಗ್ಯಕರ ಕೊಬ್ಬಿನಾಂಶ ಇರುವ ಮೆಡಿಟರೇಯಿನ್ ವರ್ಜಿನ್ ಆಲಿವ್ ಎಣ್ಣೆಯು ಮೈಗ್ರೇನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೈಗ್ರೇನ್ ಕಡಿಮೆಯಾಗಲು ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆ ಹೇಗೆ ಸಹಾಯ ಮಾಡುತ್ತದೆ?

ತಜ್ಞರ ಪ್ರಕಾರ ಆಲಿವ್ ಎಣ್ಣೆಯು ಒಲಿಯೊಕಾಂಥಾಲ್ ಎನ್ನುವ ಅಂಶವನ್ನು ಹೊಂದಿದೆ. ಇದು ಉರಿಯೂತದ ಗುಣಲಕ್ಷಣಗಳ ಶಕ್ತಿ ಕೇಂದ್ರವಾಗಿದ್ದು, ಮೈಗ್ರೇನ್‌ನಿಂದ ಬಳಲುತ್ತಿರುವವರಿಗೆ ತಲೆನೋವು ನಿವಾರಣೆಗೆ ಸಹಾಯ ಮಾಡುತ್ತದೆ.

ಒಲಿಯೊಕಾಂತಲ್‌ನ ಪ್ರಭಾವ ದೇಹದ ಮೇಲೆ ಆಗಬೇಕೆಂದರೆ ಅದನ್ನು ನೇರವಾಗಿ ಮೂರ್ನಾಲ್ಕು ಹನಿ ಕುಡಿಯಬೇಕು. ಮೈಗ್ರೇನ್ ಇರುವವರು ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆ ತಂದು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸುಮಾರು 20 ಮಿಲಿ ಅಥವಾ ಒಂದು ಚಮಚವನ್ನು ಕುಡಿಯಲು ಸೂಚಿಸಲಾಗುತ್ತದೆ. ಇದನ್ನು ಕುಡಿದ ನಂತರ ಬೇರೆ ಯಾವುದೇ ಪದಾರ್ಥವನ್ನು ಕುಡಿಯಲು ಅಥವಾ ತಿನ್ನಲು 20 ನಿಮಿಷ ಕಾಯಬೇಕು. ಈ ವಿಧಾನವು ಓಲಿಯೊಕಾಂಥಲ್‌ಗಳನ್ನು ರಕ್ತಪ್ರವಾಹಕ್ಕೆ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಅದು ದೇಹದ ಮೇಲೆ ಮ್ಯಾಜಿಕ್ ರೀತಿಯಲ್ಲಿ ಕೆಲಸ ಮಾಡುತ್ತದೆ.

ಮ್ಯಾಜಿಕ್‌ನಂತೆ ಕೆಲಸ ಮಾಡುವ ಮೆಗ್ನೀಶಿಯಂ

ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆಯು ಮೆಗ್ನಿಶಿಯಂನಲ್ಲಿ ಸಮೃದ್ಧವಾಗಿದೆ. ಇದು ಮೈಗ್ರೇನ್ ನೋವನ್ನು ನಿವಾರಿಸಲು ಮತ್ತು ತಡೆಗಟ್ಟಲು ಅಗತ್ಯವಾದ ಖನಿಜವಾಗಿದೆ. ಇದು ಮೈಗ್ರೇನ್ ಹೆಚ್ಚಲು ಕಾರಣವಾಗುವ ಕ್ಯಾಲ್ಸಿಟೋನಿನ್ ಜೀನ್-ಸಂಬಂಧಿತ ಪೆಪ್ಟೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮೆಗ್ನೀಸಿಯಮ್ ರಕ್ತದ ಹರಿವನ್ನು ನಿಯಂತ್ರಿಸುತ್ತದೆ ಮತ್ತು ನ್ಯೂರೋಜೆನಿಕ್ ಉರಿಯೂತವನ್ನು ಕಡಿಮೆ ಮಾಡುತ್ತದೆ.

ನೈಸರ್ಗಿಕವಾಗಿ ಮೈಗ್ರೇನ್ ಕಡಿಮೆ ಮಾಡುವ ಇತರ ಮಾರ್ಗಗಳು

ಲೈಟ್ ಆರಿಸಿ

ಸಾಮಾನ್ಯವಾಗಿ ಬೆಳಕಿನ ತೀವ್ರತೆಯು ಮೈಗ್ರೇನ್ ಹೆಚ್ಚಲು ಕಾರಣವಾಗುತ್ತದೆ. ಮೈಗ್ರೇನ್ ತಲೆನೋವು ಕಾಣಿಸಿದರೆ ಕೂಡಲೇ ಲೈಟ್ ಆಫ್ ಮಾಡಿ. ಕತ್ತಲೆ ಇರುವ, ವಿಶ್ರಾಂತ ಕೊಠಡಿಯಲ್ಲಿ ಕುಳಿತುಕೊಳ್ಳಿ. ನೋವು ನಿವಾರಣೆಗೆ ಮಲಗುವ ಪ್ರಯತ್ನ ಮಾಡಿ.

ಶಾಖ ಅಥವಾ ಕೋಲ್ಡ್‌ ಥೆರಪಿ

ಮೈಗ್ರೇನ್ ಉಂಟಾದಾಗ ತಲೆಭಾಗ ಹಾಗೂ ಕುತ್ತಿಗೆಯ ಭಾಗಕ್ಕೆ ಬಿಸಿ ಅಥವಾ ತಣ್ಣನೆಯ ವಸ್ತು ಇರಿಸಬೇಕು. ಇದು ನೋವನ್ನು ಕಡಿಮೆ ಮಾಡಿ, ಉದ್ವಿಗ್ನ ಸ್ನಾಯುಗಳನ್ನು ಶಾಂತಗೊಳಿಸುತ್ತದೆ.

ಕೆಫಿನ್ ಅಂಶ ಇರುವ ಪಾನೀಯ ಸೇವನೆ

ಕೆಫಿನ್ ಆರೋಗ್ಯಕ್ಕೆ ಕೆಟ್ಟದ್ದಲ್ಲವೇ ಎಂದು ನೀವು ಯೋಜಿಸಬಹುದು. ಆದರೆ ಮೈಗ್ರೇನ್ ಇರುವವರು ಕೆಫಿನ್ ಅಂಶ ಇರುವ ಚಹಾ ಅಥವಾ ಕಾಫಿ ಕುಡಿಯುವುದರಿಂದ ಆರಂಭಿಕ ಹಂತದ ತಲೆನೋವು ನಿವಾರಿಸಬಹುದು. ಆದರೆ ನೆನಪಿರಲಿ ಅತಿಯಾಗಿ ಕೆಫಿನ್ ಅಂಶ ಸೇವಿಸುವುದು ತಲೆನೋವು ಹೆಚ್ಚಲು ಕೂಡ ಕಾರಣವಾಗಬಹುದು.

ಊಟ ಬಿಡಬೇಡಿ

ಮೈಗ್ರೇನ್ ಸಮಸ್ಯೆ ಇರುವವರು ಊಟ ಬಿಡಬಾರರು, ಸ್ವಲ್ಪ ಸ್ವಲ್ಪ ತಿನ್ನುತ್ತಿರಬೇಕು. ಖಾಲಿ ಹೊಟ್ಟೆಯು ಮೈಗ್ರೇನ್‌ ಅಪಾಯವನ್ನು ಇನ್ನಷ್ಟು ಹೆಚ್ಚಿಸಬಹುದು.

ವ್ಯಾಯಾಮ

ವ್ಯಾಯಾಮ, ಯೋಗ, ವಾಕಿಂಗ್‌ನಂತಹ ದೈಹಿಕ ಚಟುವಟಿಕೆಯ ಸಮಯದಲ್ಲಿ ದೇಹವು ನಿಮ್ಮ ಮೆದುಳಿಗೆ ನೋವಿನ ಸಂಕೇತಗಳನ್ನು ನಿರ್ಬಂಧಿಸುವ ಕೆಲವು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಈ ರಾಸಾಯನಿಕಗಳು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎರಡು ಮೈಗ್ರೇನ್ ಹೆಚ್ಚಲು ಪ್ರಮುಖ ಕಾರಣಗಳಾಗಿವೆ. ಆ ಕಾರಣಕ್ಕೆ ಇದನ್ನು ನಿರ್ಬಂಧ ಮಾಡುವುದು ಅವಶ್ಯ.

(ಗಮನಿಸಿ: ಇದು ಸಾಮಾನ್ಯಜ್ಞಾನವನ್ನು ಆಧರಿಸಿದ ಬರಹ. ಆಯಿಲ್ ಎಣ್ಣೆ ಸೇವನೆಯಿಂದ ಮೈಗ್ರೇನ್ ನಿವಾರಣೆಯಾಗುವ ಬಗ್ಗೆ ತಜ್ಞರಿಂದ ಸಲಹೆ ಪಡೆದು ನಂತರ ಸೇವಿಸಿ)

Whats_app_banner