ISKCON Vedic Planetarium: ಇಸ್ಕಾನ್‌ನಿಂದ ಜಗತ್ತಿನ ಅತಿದೊಡ್ಡ ಮಂದಿರ ನಿರ್ಮಾಣ, ಮಾಯಾಪುರದ ಅದ್ಭುತ ದೇಗುಲದ ಅಚ್ಚರಿಯ ಸಂಗತಿಗಳಿವು
ಇಸ್ಕಾನ್ ಸಂಸ್ಥೆಯು ಪಶ್ಚಿಮ ಬಂಗಾಳದಲ್ಲಿ ಜಗತ್ತಿನಲ್ಲೀಯೇ ಬೃಹತ್ ಧಾರ್ಮಿಕ ಮಂದಿರವೊಂದನ್ನು ನಿರ್ಮಿಸಲಿದೆ. ವೇದಿಕ್ ಪ್ಲಾನೇಟಿರಿಯಂ ಎಂಬ ದೇಗುಲ ನಿರ್ಮಾಣಕ್ಕೆ 100 ದಶಲಕ್ಷ ಡಾಲರ್ ಖರ್ಚಾಗಲಿದೆ. ಈಗಾಗಲೇ ಜಗತ್ತಿನ ಬೃಹತ್ ದೇಗುಲವೆಂಬ ಹೆಸರು ಪಡೆದ ಅಂಕೊರ್ ವಾಟ್‌ಗಿಂತಲೂ ಈ ದೇವಾಲಯ ದೊಡ್ಡದಾಗಿರಲಿದೆ.
ಭಾರತವು ಹೊಸ ಆರ್ಕಿಟೆಕ್ಟ್ ದಾಖಲೆ ಬರೆಯಲು ಸಿದ್ಧವಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ವೇದಿಕ್ ಪ್ಲಾನೆಟೇರಿಯಂ ನಿರ್ಮಾಣಗೊಳ್ಳಲಿದ್ದು, ಇದು ವಿಶ್ವದ ಬೃಹತ್ ಧಾರ್ಮಿಕ ಮಂದಿರವಾಗಲಿದೆ. ಈಗಾಗಲೇ ಕೊಲಂಬಿಯಾದಲ್ಲಿ 400 ಎಕರೆ ವ್ಯಾಪ್ತಿಯಲ್ಲಿರುವ ವಿಶ್ವದ ಬೃಹತ್ ದೇಗುಲ ಅಂಕೋರ್ ಕೋಟ್ ದಾಖಲೆಯನ್ನು ಭಾರತದ ಮಂದಿರ ಮುರಿಯಲಿದೆ.
ವೇದಿಕ್ ಪ್ಲಾನೇಟೇರಿಯಂ (Temple of Vedic Planetarium)
ಟೆಂಪಲ್ ಆಫ್ ವೇದಿಕ್ ಪ್ಲಾನೆಟೇರಿಯಂ ಎನ್ನುವುದು ಇಂಟರ್‌ನ್ಯಾಷನಲ್ ಸೊಸೈಟಿ ಆಫ್ ಕೃಷ್ಣ ಕಾನ್ಶಿಸ್ನೆಸ್ (ಇಸ್ಕಾನ್)ನ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸಲಿದೆ. ಈ ದೇವಾಲಯ 2024ಕ್ಕೆ ಭಕ್ತರಿಗೆ ಪ್ರವೇಶಕ್ಕೆ ಮುಕ್ತವಾಗಲಿದೆ. ವಿಶ್ವದ ಅತಿದೊಡ್ಡ ಗುಮ್ಮಟವನ್ನು ಹೊಂದಿರುವ ಈ ಮಂದಿರವು ಪ್ರವಾಸಿಗರಿಗೆ ಕಾಸ್ಮಿಕ್ ಸೃಷ್ಟಿಯ ಹೊಸ ಅನುಭವ ನೀಡಲಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಈ ದೇಗುಲದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊರೊನಾದಿಂದಾಗಿ ಈ ದೇವಾಲಯದ ನಿರ್ಮಾಣ ವಿಳಂಬವಾಗಿದೆ. ಪಶ್ಚಿಮ ಬಂಗಾಳದ ನಾಡಿಯ ಜಿಲ್ಲೆಯ ವ್ಯಾಟಿಕನ್‌ನಲ್ಲಿರುವ ತಾಜ್‌ಮಹಲ್ ಮತ್ತು ಸೇಂಟ್ ಪಾಲ್ಸ್ ಕ್ಯಾಥೆಡ್ರಲ್‌ಗಿಂತಲೂ ಈ ದೇಗುಲ ದೊಡ್ಡದಾಗಿರಲಿದೆ.
ಏನಿದು ಕಾಸ್ಮಿಕ್ ಅನುಭವ?
ಈ ವೈದಿಕ್ ತಾರಾಲಯವು ಪುರಾಣದ ಪ್ರಕಾರ ಗ್ರಹ ವ್ಯವಸ್ಥೆ ಹೇಗಿರಲಿದೆ ಎಂದು ತಿಳಿಸುವ ಬೃಹತ್ ತಿರುಗುವ ಮಾದರಿಯನ್ನು ಹೊಂದಿರಲಿದೆ. ಈ ಗ್ರಹಗಳ ಚಲನೆಗಳು ಮನುಷ್ಯರಿಗೆ ಹೇಗೆ ಸಂಬಂಧಿಸಿವೆ ಎನ್ನುವ ವಿವರಣೆಗಳೂ ಇರಲಿವೆ.
ದೇವಾಲಯದ ಹಿಂದಿನ ಕಲ್ಪನೆ
ಶ್ರೀಲ ಪ್ರಭುಪಾದರ ದೂರದೃಷ್ಟಿ ಈ ಬೃಹತ್ ಮಂದಿರದ ನಿರ್ಮಾಣದ ಹಿಂದಿದೆ. ಅಮೆರಿಕದ ಕ್ಯಾಪಿಟಲ್ ಕಟ್ಟಡದಿಂದ ಪ್ರೇರಿತವಾಗಿರುವ ಈ ಮಂದಿರದ ವಿನ್ಯಾಸವು ಆಕರ್ಷಕವಾಗಿದೆ. ವಾಷ್ಟಿಂಗ್ಟನ್‌ನಲ್ಲಿದ್ದಾಗ ಶ್ರೀಲ ಪ್ರಭುಪಾದರಿಗೆ ಇಂತಹ ಭವ್ಯ ಮಂದಿರವನ್ನು ಭಾರತದಲ್ಲಿ ನಿರ್ಮಿಸಬೇಕೆಂದು ಮನಸ್ಸಾಗಿತ್ತು. 1976ರಲ್ಲಿ ಮೂಡಿದ ಇಂತಹ ಕನಸು ಈಗ ಸಾಕಾರಗೊಳ್ಳುತ್ತಿದೆ.
ಕ್ಯಾಪಿಟಲ್ ಕಟ್ಟಡದ ನಿರ್ಮಾಣ ಮಾಡಿರುವ ಹೆನ್ರಿ ಫೋರ್ಡ್ ಅವರ ಮೊಮ್ಮಗ ಆಲ್ಪ್ರೇಡ್ ಫೋರ್ಡ್ ಅವರು 1975ರಲ್ಲಿ ಇಸ್ಕಾನ್ ಸೇರಿದ್ದರು. ತಮ್ಮ ಹೆಸರನ್ನು ಅಂಬರೀಶ್ ದಾಸ್ ಎಂದು ಬದಲಾಯಿಸಿಕೊಂಡಿದ್ದರು.ಹೊಸ ದೇಗುಲದ ವೆಚ್ಚಕ್ಕೆ ಕೊಡುಗೆ ನೀಡುವಂತೆ ಶಶ್ರೀಲ ಪ್ರಭುಪಾದರು ಕೇಳಿದ್ದರು. ಆಲ್ಪ್ರೇಡ್ ಫೋರ್ಡ್ ಅವರು ಖುಷಿಯಿಂದ 30 ದಶಲಕ್ಷ ಡಾಲರ್ ನೀಡಿದ್ದರು. ಸುಮಾರು ಹತ್ತು ಸಾವಿರ ಭಕ್ತರು ಒಂದೇ ಬಾರಿ ದೇಗುಲದೊಳಗೆ ಪ್ರಾರ್ಥಿಸಲು ಅವಕಾಶವಿದೆ.
ವೇದಿಕ್ ಪ್ಲಾನೇಟೋರಿಯಂ ಕುರಿತು ಏಳು ಅಚ್ಚರಿಯ ವಿಷಯಗಳು
- ವೇದಿಕ್ ಪ್ಲಾನೇಟೋರಿಯಂ ದೇವಾಲಯವು ಅತಿದೊಡ್ಡ ಗುಮ್ಮಟ ಹೊಂದಿರುವ ವಿಶ್ವದ ಬೃಹತ್ ಸ್ಮಾರಕ/ಮಂದಿರ/ದೇವಾಲಯವಾಗಿದೆ.
- ರಾಧಿ ಮತ್ತು ಕೃಷ್ಣನ ಸಂಯೋಜಿತ ಅವತಾರವೆಂದು ಪರಿಗಣಿಸಲಾದ ಹದಿನೈದನೇ ಶತಮಾನದ ಭಾರತೀಯ ವೈಷ್ಣವ ಸಂತ ಚೈತನ್ಯ ಮಹಾಪ್ರಭುಗಳ ಜನ್ಮಸ್ಥಳವಾದ ಮಾಯಾಪುರದಲ್ಲಿ ಈ ದೇಗುಲ ನಿರ್ಮಾಣಗೊಳ್ಳುತ್ತಿದೆ.
- ಹೆಸರಾಂತ ಉದ್ಯಮಿ ಹೆನ್ರಿ ಫೋರ್ಡ್ ಅವರ ಮೊಮ್ಮಗ ಈ ದೇಗುಲದ ಮೂಲಸೌಕರ್ಯ ನಿರ್ಮಾಣಕ್ಕಾಗಿ 30 ಮಿಲಿಯನ್ ಡಾಲರ್ ನೀಡಿದ್ದಾರೆ.
- ದೇಗುಲಕ್ಕೆ ನೀಲಿ ಬೊಲಿವಿಯನ್ ಅಮೃತಶಿಲೆ ಬಳಸಲಾಗಿದೆ. ವಿಯಾಟ್ನಾಂನಿಂದ ಅಮೃತಶಿಲೆ ತರಲಾಗಿದೆ.
- ಜಗತ್ತಿನಾದ್ಯಂತ ಇರುವ ಭಕ್ತರನ್ನು ಸೆಳೆಯಲು ಮಾಯಾಪುರ ದೇಗುಲದ ಸುತ್ತಲೂ ಸುಂದರ ನಗರ ಅಭಿವೃದ್ಧಿಪಡಿಸಲು ಇಸ್ಕಾನ್ ಸಂಸ್ಥೆಯು ಅಲ್ಲಿನ ರಾಜ್ಯದ ಪ್ರವಾಸೋದ್ಯಮ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿದೆ.
ವಿಭಾಗ