ಮಹಾರಾಷ್ಟ್ರ ಫಲಿತಾಂಶ: ಮತ ಎಣಿಕೆ ಶುರುವಾಗಿದ್ದು ಆರಂಭಿಕ ಟ್ರೆಂಡ್ ಪ್ರಕಾರ ಮಹಾಯುತಿಗೆ ಮುನ್ನಡೆ, ಗಮನಿಸಬೇಕಾದ 5 ಮುಖ್ಯ ಅಂಶಗಳು ಇಲ್ಲಿವೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾರಾಷ್ಟ್ರ ಫಲಿತಾಂಶ: ಮತ ಎಣಿಕೆ ಶುರುವಾಗಿದ್ದು ಆರಂಭಿಕ ಟ್ರೆಂಡ್ ಪ್ರಕಾರ ಮಹಾಯುತಿಗೆ ಮುನ್ನಡೆ, ಗಮನಿಸಬೇಕಾದ 5 ಮುಖ್ಯ ಅಂಶಗಳು ಇಲ್ಲಿವೆ

ಮಹಾರಾಷ್ಟ್ರ ಫಲಿತಾಂಶ: ಮತ ಎಣಿಕೆ ಶುರುವಾಗಿದ್ದು ಆರಂಭಿಕ ಟ್ರೆಂಡ್ ಪ್ರಕಾರ ಮಹಾಯುತಿಗೆ ಮುನ್ನಡೆ, ಗಮನಿಸಬೇಕಾದ 5 ಮುಖ್ಯ ಅಂಶಗಳು ಇಲ್ಲಿವೆ

Maharashtra Election results: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಶುರುವಾಗಿದೆ. ಮಹಾರಾಷ್ಟ್ರ ಫಲಿತಾಂಶವನ್ನು ಗಮನಿಸುವಾಗ ಆರಂಭಿಕ ಟ್ರೆಂಡ್ ಪ್ರಕಾರ ಮಹಾಯುತಿಗೆ ಮುನ್ನಡೆ ಕಂಡುಬಂದಿದೆ. ಈ ನಡುವೆ ಗಮನಿಸಬೇಕಾದ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.

ಮಹಾರಾಷ್ಟ್ರ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮತ ಎಣಿಕೆ ಶುರುವಾಗಿದೆ, ಆರಂಭಿಕ ಟ್ರೆಂಡ್ ಪ್ರಕಾರ ಮಹಾಯುತಿಗೆ ಮುನ್ನಡೆ ಕಂಡುಬಂದಿದೆ. ಪುಣೆಯ ಮತ ಎಣಿಕೆ ಕೇಂದ್ರದ ಬಳಿ ಬಿಗಿ ಬಂದೋಬಸ್ತ್‌ ಒದಗಿಸುವ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.
ಮಹಾರಾಷ್ಟ್ರ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮತ ಎಣಿಕೆ ಶುರುವಾಗಿದೆ, ಆರಂಭಿಕ ಟ್ರೆಂಡ್ ಪ್ರಕಾರ ಮಹಾಯುತಿಗೆ ಮುನ್ನಡೆ ಕಂಡುಬಂದಿದೆ. ಪುಣೆಯ ಮತ ಎಣಿಕೆ ಕೇಂದ್ರದ ಬಳಿ ಬಿಗಿ ಬಂದೋಬಸ್ತ್‌ ಒದಗಿಸುವ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.

Maharashtra Election results: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು (ನವೆಂಬರ್ 23) ಬೆಳಗ್ಗೆ 8 ಗಂಟೆಗೆ ಶುರುವಾಗಿದ್ದು, ಆರಂಭಿಕ ಟ್ರೆಂಡ್ ಪ್ರಕಾರ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ಮಹಾಯುತಿ ಮುನ್ನಡೆಯಲ್ಲಿದೆ. ಆರಂಭಿಕ ಟ್ರೆಂಡ್ ಪ್ರಕಾರ, 288 ಸ್ಥಾನಗಳ ಅಂಚೆ ಮತ ಎಣಿಕೆ ಶುರುವಾಗುತ್ತಿದ್ದಂತೆ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮಹಾಯುತಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) 19 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ನವೆಂಬರ್ 20ರಂದು ನಡೆದಿದ್‌ದು, ಈ ಬಾರಿ ಶೇಕಡ 66 ಮತದಾನವಾಗಿದೆ. 2019ರಲ್ಲಿ ಶೇಕಡ 61 ಮತದಾನವಷ್ಟೇ ಆಗಿತ್ತು.

ಮಹಾರಾಷ್ಟ್ರ ಫಲಿತಾಂಶ: ಅದಕ್ಕೂ ಮೊದಲು ಗಮನಿಸಬೇಕಾದ 5 ಅಂಶಗಳಿವು

ಮಹಾರಾಷ್ಟ್ರ ಎಕ್ಸಿಟ್ ಪೋಲ್ ಪ್ರಕಾರವೂ ಆರು ಎಕ್ಸಿಟ್‌ ಪೋಲ್‌ಗಳಲ್ಲಿ ಮಹಾಯುತಿಗೆ ಗೆಲುವು ತೋರಿಸಿದ್ದರೆ, ಎರಡರಲ್ಲಿ ಮಹಾ ವಿಕಾಸ್ ಅಘಾಡಿ ಜತೆಗೆ ಸಮಬಲದ ಸ್ಪರ್ಧೆ ತೋರಿಸಿದೆ. ಹೀಗಾಗಿ, ಮಹಾರಾಷ್ಟ್ರದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆಡಳಿತಾರೂಢ ಮಹಾಯುತಿ ಅಥವಾ ವಿಪಕ್ಷ ಮಹಾ ವಿಕಾಸ್ ಅಘಾಡಿ ಈ ಎರಡರ ಪೈಕಿ ಯಾರು ಅಧಿಕಾರಕ್ಕೆ ಬರಬಹುದು ಎಂಬ ಕುತೂಹಲ ಎಲ್ಲರೂ ಹೆಚ್ಚಾಗಿದೆ.

1) ಮಹಾರಾಷ್ಟ್ರ ಚುನಾವಣೆ 2024: ಕಳೆದ 5 ವರ್ಷದಲ್ಲಿ ಬದಲಾದ ರಾಜಕೀಯ ಚಿತ್ರಣ

ಮಹಾರಾಷ್ಟ್ರದಲ್ಲಿ 2014 ರಿಂದೀಚೆಗೆ ಬಿಜೆಪಿ ಹೆಚ್ಚು ಪ್ರಭಾವಿ ಪಕ್ಷವಾಗಿದ್ದು, 2014 ಮತ್ತು 2019ರ ಚುನಾವಣೆಯಲ್ಲಿ 100 ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಲ್ಲಿ ಗೆಲುವು ದಾಖಲಿಸಿದೆ. ಆದಾಗ್ಯೂ ಮೈತ್ರಿ ರಾಜಕಾರಣ ಮುಂದುವರಿಸಿದೆ. ಇನ್ನುಳಿದಂತೆ ಶಿವ ಸೇನಾ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಹೆಚ್ಚು ಪ್ರಭಾವಿಗಳಾಗಿ ಬೆಳೆದವು. ಕಾಂಗ್ರೆಸ್ ಪ್ರಭಾವ ಈ ಅವಧಿಯಲ್ಲಿ ಕುಸಿದಿದ್ದು, ಮೈತ್ರಿ ರಾಜಕಾರಣಕ್ಕೆ ನೆಚ್ಚಿಕೊಂಡಿದೆ. ಈ ಪೈಕಿ ಕಳೆದ ಐದು ವರ್ಷದ ಅವಧಿಯಲ್ಲಿ ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಶಿವ ಸೇನಾ ಮತ್ತು ಎನ್‌ಸಿಪಿ ಎರಡು ಹೋಳಾಗಿದ್ದು ಈ ಬಾರಿ ಕುತೂಹಲ ಹೆಚ್ಚಾಗಲು ಕಾರಣವಾಗಿದೆ. ಹೆಚ್ಚಿನ ವಿವರಕ್ಕೆ ಕ್ಲಿಕ್‌ ಮಾಡಿ 👉🏻 ಮಹಾರಾಷ್ಟ್ರ ಫಲಿತಾಂಶಕ್ಕೂ ಮುನ್ನ 5ವರ್ಷದಲ್ಲಿ ಬದಲಾದ ರಾಜಕೀಯ ಚಿತ್ರಣಕ್ಕಾಗಿ 5 ಗ್ರಾಫ್‌ ನೋಡೋಣ

2) ಪ್ರಮುಖ ಪಕ್ಷಗಳ ವಿಭಜನೆ ಬಳಿಕ ನಡೆದ ಮೊದಲ ಚುನಾವಣೆ; ಕಣದಲ್ಲಿರುವ ಪ್ರಮುಖರು ಯಾರು

ಸದ್ಯ ಮಹಾರಾಷ್ಟ್ರ ಚುನಾವಣಾ ಕಣದ 288 ಕ್ಷೇತ್ರಗಳ ಕಡೆಗೊಮ್ಮೆ ನೋಟ ಹರಿಸುವುದಕ್ಕೆ ಈ ಕ್ಷಣ ಒಂದು ನಿಮಿತ್ತ. ಮಹಾರಾಷ್ಟ್ರ ವಿಧಾನಸಭೆಗೆ 2019ರಲ್ಲಿ ಚುನಾವಣೆ ನಡೆದ ಬಳಿಕ ಬಿಜೆಪಿ 105 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಅದನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿ ಮೊದಲು ಆಡಳಿತ ಚುಕ್ಕಾಣಿ ಹಿಡಿದುದು ಶಿವ ಸೇನಾ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ). ಇದರಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಪಕ್ಷ ಕೈ ಜೋಡಿಸಿಕೊಂಡು ಸರ್ಕಾರ ರಚಿಸಿದ್ದವು. ಎರಡು ವರ್ಷ ದಾಟುತ್ತಲೇ ಅಜಿತ್ ಪವಾರ್ ಎನ್‌ಸಿಪಿಯನ್ನು ಏಕನಾಥ ಶಿಂಧೆ ಶಿವ ಸೇನಾವನ್ನು ಒಡೆದು ತಮ್ಮ ಬೆಂಬಲಿಗರೊಂದಿಗೆ ಹೊರಬಂದು ಬಿಜೆಪಿ ಜತೆಗೆ ಕೈ ಜೋಡಿಸಿದ್ದರಿಂದ ಮಹಾಯುತಿ ಸರ್ಕಾರ ರಚನೆಯಾಯಿತು. ಹೀಗಾಗಿ ಈ ಬಾರಿ ಎರಡೂ ಮೈತ್ರಿಗೆ ಈ ಚುನಾವಣೆ ಪ್ರತಿಷ್ಠೆಯ ವಿಚಾರ. ಎಷ್ಟು ಕ್ಷೇತ್ರಗಳಲ್ಲಿ ಮಹಾಯುತಿ ಪಕ್ಷಗಳಿಗೂ ಮಹಾ ವಿಕಾಸ್ ಅಘಾಡಿ ಪಕ್ಷಗಳಿಗೂ ನೇರ ಸ್ಪರ್ಧೆ ಇದೆ? ಪ್ರಮುಖ ಸ್ಪರ್ಧಿಗಳು ಯಾರು ಎಂಬ ವಿವರಕ್ಕೆ ಕ್ಲಿಕ್ ಮಾಡಿ 👉🏻 ಮಹಾರಾಷ್ಟ್ರ ಚುನಾವಣೆ ಕಣದಲ್ಲಿ ಪಕ್ಷವಾರು ನೇರ ಸ್ಪರ್ಧೆ ಎಷ್ಟು ಕ್ಷೇತ್ರದಲ್ಲಿ? ಪ್ರಮುಖ ಅಭ್ಯರ್ಥಿಗಳಾರು, ಪಕ್ಷಗಳ ಬಲಾಬಲ ಹೇಗಿದೆ

3) ಮಹಾರಾಷ್ಟ್ರ ಚುನಾವಣೆ ಎಕ್ಸಿಟ್ ಪೋಲ್ ಫಲಿತಾಂಶ ಏನಾಯಿತು

ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಆರು ಎಕ್ಸಿಟ್‌ ಪೋಲ್‌ಗಳ ಪೈಕಿ 4 ಹೇಳಿದೆ. ಅಗತ್ಯ ಬಹುಮತದೊಂದಿಗೆ ಆರಾಮವಾಗಿ ಆಡಳಿತ ಚುಕ್ಕಾಣಿ ಮೇಲಿನ ಹಿಡಿತ ಬಿಗಿಗೊಳಿಸಲಿದೆ ಎಂದು ಬುಧವಾರ (ನವೆಂಬರ್ 20) ಎಕ್ಸಿಟ್‌ ಪೋಲ್ (ಮತದಾನೋತ್ತರ ಸಮೀಕ್ಷೆ) ಫಲಿತಾಂಶ ಹೇಳಿದ್ದು, ಇನ್ನೆರಡಲ್ಲಿ ವಿಪಕ್ಷ ಮೈತ್ರಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಜತೆಗೆ ಸಮಬಲದ ಸ್ಪರ್ಧೆ ಕಂಡುಬಂದಿದೆ. ಫಲಿತಾಂಶ ನೋಡುವ ಮೊದಲು ಎಕ್ಸಿಟ್ ಪೋಲ್‌ ವಿವರವನ್ನು ಮತ್ತೊಮ್ಮೆ ನೋಡುವುದಕ್ಕೆ ಕ್ಲಿಕ್ ಮಾಡಿ 👉🏻 ಮಹಾಯುತಿ ಅಧಿಕಾರಕ್ಕೆ ಎಂದಿವೆ 4 ಎಕ್ಸಿಟ್‌ ಪೋಲ್ ಫಲಿತಾಂಶ, ಇನ್ನೆರಡಲ್ಲಿ ಸಮಬಲದ ಪೈಪೋಟಿ ಸುಳಿವು

4) ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಫಲೋಡಿ ಬೆಟ್ಟಿಂಗ್ ಮಾರುಕಟ್ಟೆ ಭವಿಷ್ಯ

ಚುನಾವಣೆ ನಡೆಯುವಾಗ ಬೆಟ್ಟಿಂಗ್ ನಡೆಯುವುದು ಸಾಮಾನ್ಯ. ರಾಜಸ್ಥಾನದ ಫಲೋಡಿ ಬೆಟ್ಟಿಂಗ್ ಬಜಾರ್ ಅಥವಾ ಫಲೋಡಿ ಬೆಟ್ಟಿಂಗ್ ಮಾರುಕಟ್ಟೆ ಚುನಾವಣಾ ಬೆಟ್ಟಿಂಗ್ ವಿಚಾರದಲ್ಲಿ ಪ್ರಸಿದ್ಧ. ಮಹಾರಾಷ್ಟ್ರ ಚುನಾವಣೆ ಬಗ್ಗೆ ಮತದಾನ ದಿನವೇ ಅಪರಾಹ್ನ ಫಲೋಡಿ ಬೆಟ್ಟಿಂಗ್ ಮಾರುಕಟ್ಟೆ ತನ್ನ ಭವಿಷ್ಯ ನುಡಿದಿದೆ. ಅದು ಮಹಾಯುತಿ ಪರ ಒಲವು ಇರುವುದಾಗಿ ಘೋಷಿಸಿತ್ತು. ಈ ವಿವರ ಓದಲು ಕ್ಲಿಕ್ ಮಾಡಿ 👉🏻 ಮಹಾಯುತಿ ಪರ ಜನರ ಒಲವು ಅಂತಿದೆ ಫಲೋಡಿ ಸಟ್ಟಾ ಬಜಾರ್‌

5) ಮಹಾರಾಷ್ಟ್ರ ಫಲಿತಾಂಶ ನಿರೀಕ್ಷೆಯಲ್ಲಿರುವಾಗಲೇ ಹೈವೋಲ್ಟೇಜ್ ಕ್ಷೇತ್ರಗಳ ಕಡೆಗೊಂದು ನೋಟ

ಮಹಾರಾಷ್ಟ್ರ ಫಲಿತಾಂಶದ ನಿರೀಕ್ಷೆಯ ಹೊತ್ತು. ಮತ ಎಣಿಕೆ ಪ್ರಗತಿಯಲ್ಲಿದೆ. ಹೀಗಿರುವಾಗಲೇ ಮಹಾರಾಷ್ಟ್ರ ಚುನಾವಣೆಯಲ್ಲಿ ತೀವ್ರ ಪೈಪೋಟಿ ಇರುವಂತಹ ಅಥವಾ ತುಂಬಾ ಮಹತ್ವ ಪಡೆದುಕೊಂಡ ಕ್ಷೇತ್ರಗಳನ್ನು ಗುರುತಿಸುವುದಾದರೆ 5 ಪ್ರಮುಖ ಕ್ಷೇತ್ರಗಳನ್ನು ಗಮನಿಸಬಹುದು. ಈ ಐದೂ ಕ್ಷೇತ್ರಗಳು ತಮ್ಮದೇ ಆದ ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಂಡಿದ್ದು ಹೈವೋಲ್ಟೇಜ್ ಕ್ಷೇತ್ರಗಳಾಗಿ ಗುರುತಿಸಿಕೊಂಡಿವೆ. ವರ್ಲಿ, ಬಾರಾಮತಿ, ವಾಂದ್ರೆ ಈಸ್ಟ್‌, ನಾಗಪುರ ನೈಋತ್ಯ, ಕೊಪ್ರಿ-ಪಚ್ಪಖಾಡಿ ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರಗಳಾಗಿದ್ದು, ಅವುಗಳ ವಿವರಕ್ಕೆ ಕ್ಲಿಕ್ ಮಾಡಿ 👉🏻 ಮತದಾರರಲ್ಲಿ ರೋಚಕ ಭಾವ, ಎದುರಾಳಿಗಳಲ್ಲಿ ಆತಂಕ ಸೃಷ್ಟಿರುವ 5 ಹೈವೋಲ್ಟೇಜ್ ಕ್ಷೇತ್ರಗಳಿವು

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.