Entertainment News in Kannada Live September 20, 2024: ತೆಲುಗಿನ ಅರುಂಧತಿ ಚಿತ್ರದ ಈ ಬಾಲನಟಿ ನೆನಪಿದ್ದಾರಾ? ಗುರುತೇ ಸಿಗದಷ್ಟು ಬದಲಾಗಿದ್ದಾರೆ ಅಂದಿನ ಪುಟ್ಟ ಪೋರಿ
Sep 20, 2024 06:44 PM IST
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
- ಸ್ಟಾರ್ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದ ಅರುಂಧತಿ ಸಿನಿಮಾ, ವಿಮರ್ಶೆ ದೃಷ್ಟಿಯಿಂದ ಮಾತ್ರವಲ್ಲದೆ, ಕಲೆಕ್ಷನ್ ವಿಚಾರದಲ್ಲಿಯೂ ಒಳ್ಳೆಯ ಕಮಾಯಿ ಮಾಡಿತ್ತು. ಆ ಚಿತ್ರದಲ್ಲಿ ನಟಿಸಿದ್ದ ಬಾಲನಟಿ ಈಗ ಹೇಗಾಗಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಫೋಟೋಗಳು.
- ಮಲಯಾಳಂ ಕ್ರೈಂ ಥ್ರಿಲ್ಲರ್ ಶೈಲಿಯ ಸಿಐಡಿ ರಾಮಚಂದ್ರನ್ ರಿಟೈರ್ಡ್ ಎಸ್‌ಐ ಸಿನಿಮಾ ಒಟಿಟಿ ಅಂಗಳ ಪ್ರವೇಶಿಸಿದೆ. ಕೊಲೆ ಪ್ರಕರಣವೊಂದರ ಸುತ್ತ ಇಡೀ ಚಿತ್ರ ಸುತ್ತುತ್ತದೆ. ಕಲಾಭವನ್ ಶಾಜನ್, ಬೈಜು ಸಂತೋಷ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.
- ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಪಾತ್ರದ ಮೂಲಕ ಜನಮನ ಗೆದ್ದಿರುವ ದೀಪಕ್ ಸುಬ್ರಹ್ಮಣ್ಯ ಇದೀಗ, ಮಿಸ್ಟರ್ ರಾಣಿ ಚಿತ್ರದ ಮೂಲಕ ಆಗಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ.
ಹೊಸಬರಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ನಟ ದುನಿಯಾ ವಿಜಯ್ ಈಗ ಬೇಗೂರ್ ಕಾಲೋನಿ ತಂಡಕ್ಕೂ ಸಾಥ್ ನೀಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಮೋಶನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಸೂರ್ಯ, ಬಾಬಿ ಡಿಯೋಲ್, ದಿಶಾ ಪಟಾನಿ ಅಭಿನಯದ ಕಂಗುವಾ ಸಿನಿಮಾ ಹೊಸ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ನವೆಂಬರ್ 14 ರಂದು ಸಿನಿಮಾ ಬಿಡುಗಡೆ ಆಗುತ್ತಿರುವುದಾಗಿ ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿದೆ. ಚಿತ್ರವನ್ನು ಸಿರುತೈ ಶಿವ ನಿರ್ದೇಶನ ಮಾಡುತ್ತಿದ್ದಾರೆ.
- ವರುಣ್ ಆರಾಧ್ಯ ಮತ್ತು ವರ್ಷಾ ಕಾವೇರಿ ವಾಟ್ಸಾಪ್ ಚಾಟ್ ಲೀಕ್ ಆದ ಬೆನ್ನಲ್ಲೇ, ವರುಣ್‌ಗೆ ನೆಟ್ಟಿಗರು ಒಂದಷ್ಟು ಪ್ರಶ್ನೆ ಕೇಳಿದ್ದರು. ಚಾಟ್ ಪೋಟೋಗಳನ್ನು ಮುಂದಿಟ್ಟುಕೊಂಡು, ಇದ್ದಕ್ಕೆ ಏನ್ ಹೇಳ್ತಿರಿ ವರುಣ್ ಎಂದಿದ್ದರು. ಈ ನಡುವೆಯೇ ವರ್ಷಾ ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ, ದೇವರಿಗೆ ಎಲ್ಲವೂ ಗೊತ್ತು ಎಂಬರ್ಥದ ಪೋಸ್ಟ್ ಹಂಚಿಕೊಂಡಿದ್ದರು.
ಇಂದಿನಿಂದ (ಸೆ.20) ಮೂರು ದಿನಗಳ ಕಾಲ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಮೈಸೂರು-ಕೊಡಗು ಸಂಸದರಾದ ಯುದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಂಸದರಿಗೆ ನಿರೂಪಕ ಸೃಜನ್ ಲೋಕೇಶ್ ಕೆಲವು ಫನ್ನಿ ಪ್ರಶ್ನೆಗಳನ್ನು ಕೇಳಿದ್ದಾರೆ.
ದೇವರ ಚಿತ್ರದ ರನ್ ಟೈಮ್ ಬಗ್ಗೆ ಒಂದು ಕುತೂಹಲಕಾರಿ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಿನಿಮಾದ ರನ್ ಟೈಮ್ 15 ಕಡಿಮೆಯಾಗಿದೆ ಎಂದು ವರದಿಯಾಗಿದೆ. ಅದಕ್ಕಾಗಿ ದಾವೂದಿ ಸಾಂಗ್ ಸೇರಿದಂತೆ ಜಾನ್ವಿ ಕಪೂರ್ ಹಾಗೂ ಜ್ಯೂನಿಯರ್ ಎನ್‌ಟಿಆರ್ ಅಭಿನಯದ ಕೆಲವೊಂದು ಲವ್ ಸೀನ್‌ಗಳಿಗೆ ಕತ್ತರಿ ಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
- OTT releases: ಈ ವಾರಾಂತ್ಯದಲ್ಲಿ ಮನೆಯಲ್ಲಿ ಕುಳಿತು ಹೊಸ ಸಿನಿಮಾ, ವೆಬ್ ಸರಣಿ ನೋಡಲು ಬಯಸುವವರಿಗೆ ಜಿಯೋ ಸಿನೆಮಾ, ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗಳಲ್ಲಿ ಹಲವು ಹೊಸ ಸಿನಿಮಾಗಳು ಕಾಯುತ್ತಿವೆ. ಚಿಯಾನ್ ವಿಕ್ರಮ್ ನಟನೆಯ ತಂಗಲಾನ್ ಚಿತ್ರವು ಸೆಪ್ಟೆಂಬರ್ 20ರಂದು ಬಿಡುಗಡೆಯಾಗುತ್ತಿದೆ.
- ಸೀತಾ ರಾಮ ಧಾರಾವಾಹಿ: ಇಲ್ಲಿಯವರೆಗೂ ಭಾರ್ಗವಿ ಗಮನಕ್ಕೆ ಬರದ ಒಂದು ವಿಚಾರ, ಅದೀಗ ಶಾಲಿನಿ ಮೂಲಕ ಗೊತ್ತಾಗಿದೆ. ಈ ಮೂಲಕ ಸಿಹಿ ಹುಟ್ಟಿನ ರಹಸ್ಯ ಬಯಲಾಗೋ ಸಮಯ ಹತ್ತಿರ ಬಂದಂತೆ ಗೋಚರವಾಗುತ್ತಿದೆ.
- ಕಂಡೋರ್ ಮನೆ ಕಥೆ ಒಟಿಟಿ ಬಿಡುಗಡೆ ದಿನಾಂಕ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಈತ ಸೋಮಾರಿ ವ್ಯಕ್ತಿಯಾಗಿ ನಟಿಸಿದ್ದು, ಕೆಲಸ ಮತ್ತು ಹಣ ಗಳಿಕೆ ಕುರಿತು ಆಸಕ್ತಿಯೇ ಹೊಂದಿರುವುದಿಲ್ಲ. ಅನಿರೀಕ್ಷಿತ ಸಂದರ್ಭವೊಂದು ಈತ ಕೆಲಸ ಮಾಡುವಂತೆ ಮಾಡುತ್ತದೆ.
ವರುಣ್ ಆರಾಧ್ಯ , ವರ್ಷಾ ಕಾವೇರಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ವರುಣ್ ಆರಾಧ್ಯ ರೀಲ್ಸ್ ಮಾಡಿ, ಯೂಟ್ಯೂಬ್‌ನಿಂದ ಗಳಿಸಿದ ಹಣ ಇನ್ನೂ ವರ್ಷಾ ಕಾವೇರಿ ಅಕೌಂಟ್‌ನಲ್ಲೇ ಇದೆ. ನಾನು ಹಣ ಕೇಳಿದರೂ ಇದುವರೆಗೂ ಅವರು ಸರಿಯಾಗಿ ಪ್ರತಿಕ್ರಿಯಿಸಿಲ್ಲ ಎಂದು ಆರೋಪಿಸಿದ್ದಾರೆ.
- ಝೀ ಕನ್ನಡ ಧಾರಾವಾಹಿ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ತಂದೆಯಿಂದ ಏಟು ತಿಂದು ಬೇಸರವಾಗಿದ್ದರೆ. ಶಿವು ಏನು ನಿರ್ಧಾರ ತೆಗೆದುಕೊಳ್ಳಲಾಗದೆ ಆತಂಕದಲ್ಲಿದ್ದಾನೆ. ಪಾರು ಅಥವಾ ಮಾವ ಈಗ ಯಾರ ಮಾತು ಕೇಳಬೇಕು ಅನ್ನೋದೇ ಗೊಂದಲ.
- 1999ರಲ್ಲಿ ತೆರೆಗೆ ಬಂದಿದ್ದ ‘ಉಪೇಂದ್ರ’ ಸಿನಿಮಾವನ್ನು ಇದೀಗ ಮರು ಬಿಡುಗಡೆ ಮಾಡಿದ್ದಾರೆ ಚಿತ್ರದ ನಿರ್ಮಾಪಕರು. ಅಭಿಮಾನಿಗಳು ಈ ಕಲ್ಟ್ ಕ್ಲಾಸಿಕ್ ಚಿತ್ರವನ್ನು ಮತ್ತೆ ಚಿತ್ರಮಂದಿರದಲ್ಲಿ ನೋಡಿ ಪುಳಕಿತರಾಗಿದ್ದಾರೆ. ಫ್ಯಾನ್ಸ್ ಜತೆ ಕೂತು ಸಿನಿಮಾ ವೀಕ್ಷಿಸಿ ಭಾವುಕರಾಗಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್ 19ರ ಎಪಿಸೋಡ್‌ನಲ್ಲಿ ಮಗನ ನಂಬಿಕೆದ್ರೋಹ ನೆನೆದು ಕುಸುಮಾ ಕಣ್ಣೀರಿಡುತ್ತಾಳೆ. ತನ್ನ ಮುಂದೆಯೇ ತಾಳಿ ಕಟ್ಟುವಂತೆ ಕೇಳಿದ ಶ್ರೇಷ್ಠಾಗೆ ಬಾರಿಸುವ ಕುಸುಮಾ ಮಗನ ಕುತ್ತಿಗೆ ಹಿಡಿದು ಮನೆಗೆ ಎಳೆದೊಯ್ಯುತ್ತಾಳೆ.
- ಕಣ್ಣಿಲ್ಲ ಅಂದ್ರೂ ಜಗತ್ತಿನ ಸಕಲವನ್ನೂ ತಿಳಿಯುವ ಸ್ವಾಮಿಜಿ ಹೇಳಿದ್ರು ಸುಬ್ಬು, ಶ್ರಾವಣಿ ಭವಿಷ್ಯ. ವಿಜಯಾಂಬಿಕಾ ಬಗ್ಗೆ ನಿಗೂಢವಾಗಿ ಮಾತನಾಡಿದ ಸ್ವಾಮೀಜಿ, ತಲೆಯಲ್ಲಿ ಹುಳ ಬಿಟ್ಟುಕೊಂಡರು ಸುಬ್ಬು–ಶ್ರಾವಣಿ ಹಾಗೂ ಮನೆಯವರು. ಕಲಶ ಹೊತ್ತ ಶ್ರಾವಣಿ ತಲುಪಬೇಕಿದೆ ದೇವಸ್ಥಾನ, ಇದಕ್ಕೆ ಅಡ್ಡಿಪಡಿಸಲೆಂದೇ ಕಾಯುತ್ತಿದ್ದಾರೆ ವಿಜಯಾಂಬಿಕಾ ಮದನ್.
ಈ ಬಾರಿಯೂ ಕಿಚ್ಚ ಸುದೀಪ್, ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದರೂ ವೀಕ್ಷಕರಿಗೆ ನಿರಾಸೆ ಆಗುವ ವಿಚಾರವೊಂದಿದೆ. ಕಲರ್ಸ್ ಕನ್ನಡ ವಾಹಿನಿ ಹೊರತುಪಡಿಸಿ ಜಿಯೋದಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶವಿಲ್ಲ, 24 ಗಂಟೆ ಲೈವ್ ಕೂಡಾ ಇರುವುದಿಲ್ಲ ಎನ್ನಲಾಗುತ್ತಿದೆ.