Entertainment News in Kannada Live October 1, 2024: ಚೆನ್ನೈ ಆಸ್ಪತ್ರೆಗೆ ದಾಖಲಾದ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಆಗಿದ್ದೇನು; ಡಿಸ್ಚಾರ್ಜ್‌ಗೆ ಇನ್ನೆರಡು ದಿನ ಬೇಕು ಎಂದ ವೈದ್ಯರು
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Tue, 01 Oct 202402:22 PM IST
- Rajinikanth: ತಮಿಳು ನಟ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಚೆನ್ನೈನ ಅಪೊಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತಿದ್ದು, ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ಹೇಳಲಾಗಿದೆ.
Tue, 01 Oct 202410:52 AM IST
- ನೀವು ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ಬೋರಾಗಿ ಬೈದುಕೊಳ್ಳುವವರೇ ಜಾಸ್ತಿ. ಆದರೆ ಈ ಯುವತಿ ಹೇಗೆ ಎಂಜಾಯ್ ಮಾಡಿದ್ದಾರೆ ನೋಡಿ. ನೆಟ್ಟಿಗರಂತು ಈಕೆಯ ವಿಡಿಯೋ ನೋಡಿ, ಬೆಂಗಳೂರು ಟ್ರಾಫಿಕ್‌ನಲ್ಲಿ ಹೀಗೂ ಎಂಜಾಯ್ ಮಾಡ್ಬಹುದಾ? ಎಂದಿದ್ದಾರೆ.
Tue, 01 Oct 202410:39 AM IST
ಸೆಪ್ಟೆಂಬರ್ 27 ರಂದು ತೆರೆ ಕಂಡ ದೇವರ ಸಿನಿಮಾ ವಿಶ್ವಾದ್ಯಂತ 4 ದಿನಗಳಲ್ಲಿ 304 ಕೋಟಿ ರೂ . ಕಲೆಕ್ಷನ್ ಮಾಡಿದೆ. ಈ ವಿಚಾರವನ್ನು ಖುದ್ದು ಚಿತ್ರತಂಡ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದೆ. ಈ ಮೂಲಕ ಸಿನಿಮಾ ಹಾಕಿದ ಬಂಡವಾಳವನ್ನು ವಾಪಸ್ ಗಳಿಸಿದೆ.
Tue, 01 Oct 202409:38 AM IST
ರಜಾ ಕಾಲದಲ್ಲಿ ಹೇಗಪ್ಪ ಟೈಮ್ ಕಳೆಯೋದು ಅಂತ ಚಿಂತೆ ಬೇಡ. ಈ ವಾರ ಬರೋಬ್ಬರಿ 29 ಒಟಿಟಿ ರಿಲೀಸ್ ಇವೆ. ಈ ಪೈಕಿ 12 ಸ್ಪೆಷಲ್ ಮೂವಿಸ್, ವೆಬ್‌ಸೀರೀಸ್ ಇವೆ. ಯಾವ ಒಟಿಟಿಯಲ್ಲಿ ಏನಿದೆ - ಇಲ್ಲಿದೆ ವಿವರ.
Tue, 01 Oct 202408:36 AM IST
- ಥಿಯೇಟರ್‌ಗಳಿಗೆ ಹೋಲಿಸಿದರೆ The Goat ಚಲನಚಿತ್ರವು Netflix OTTಯಲ್ಲಿ ಹೆಚ್ಚಿನ ವೀಕ್ಷಣೆ ಹಾಗೂ ಲಾಭವನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಎರಡೇ ದಿನಗಳಲ್ಲಿ ನೀವು ನಿಮ್ಮ ಮನೆಯಲ್ಲಿ ಈ ಚಿತ್ರ ವೀಕ್ಷಣೆ ಮಾಡಬಹುದಾಗಿದೆ. 'ದಿ ಗೋಟ್' ಓಟಿಟಿ ಸ್ಟ್ರೀಮಿಂಗ್ ಡೇಟ್ ಫಿಕ್ಸ್ ಆಗಿದೆ.
Tue, 01 Oct 202408:12 AM IST
ನಾಮಿನೇಶನ್ ವಿಚಾರವಾಗಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ ಶುರುವಾಗಿದೆ. ಗೌತಮಿ , ನರಕವಾಸಿಗಳ ಮೇಲೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ನಮಗಿಂತ ಹೆಚ್ಚಾಗಿ ಅವರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಭವ್ಯಾ ಗೌಡ , ಯಮುನಾ ಶ್ರೀನಿಧಿ ಆರೋಪಿಸುತ್ತಾರೆ. ಗೌತಮಿ ಹೆಸರು ಹೇಳಿದ್ದಕ್ಕೆ ಶಿಶಿರ್ ಶಾಸ್ತ್ರಿ ಕೋಪಗೊಳ್ಳುತ್ತಾರೆ.
Tue, 01 Oct 202408:03 AM IST
- Thangalaan OTT: ಕಳೆದ ವಾರ ಆನ್‌ಲೈನ್‌ನಲ್ಲಿ ಬಿಡುಗಡೆಯಾಗುತ್ತದೆ ಎಂದುಕೊಂಡಿದ್ದ ತಂಗಲಾನ್ ಸಿನಿಮಾ ಇನ್ನೂ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್ ಆಗಿಲ್ಲ. ಪಾ ರಂಜಿತ್ ನಿರ್ದೇಶನದ, ಚಿಯಾನ್ ಚಿಕ್ರಮ್ ಅಭಿನಯದ ತಂಗಲಾನ್ ಒಟಿಟಿ ಬಿಡುಗಡೆ ಅಪ್‌ಡೇಟ್ ಇಲ್ಲಿದೆ.
Tue, 01 Oct 202406:38 AM IST
3 ಗಂಡು ಮಕ್ಕಳ ತಂದೆ ಮಿಥುನ್ ಚಕ್ರವರ್ತಿ, ಒಂದು ಹೆಣ್ಣು ಮಗುವನ್ನು ಬಯಸಿದ್ದರು. ಅದೇ ಸಮಯಕ್ಕೆ ಕಸದ ತೊಟ್ಟಿಯಲ್ಲಿ ಯಾರೋ ಹೆಣ್ಣು ಮಗುವೊಂದನ್ನು ಬಿಸಾಡಿ ಹೋದ ಸುದ್ದಿ ಪೇಪರ್‌ನಲ್ಲಿ ಪ್ರಕಟವಾಗಿತ್ತು. ಸ್ವಲ್ಪವೂ ತಡ ಮಾಡದ ಮಿಥುನ್ ಚಕ್ರವರ್ತಿ ಕಾನೂನು ಪ್ರಕಾರ ಆ ಮಗುವನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಮಗಳಿಗೆ ದಿಶಾನಿ ಚಕ್ರವರ್ತಿ ಎಂದು ಹೆಸರಿಟ್ಟಿದ್ದಾರೆ.
Tue, 01 Oct 202405:59 AM IST
- ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಆದ್ರೆ ಪಾರು ಮಾತ್ರ ತಾನು ಇವರ ಕಾಟದಿಂದ ತಪ್ಪಿಸಿಕೊಂಡ್ರೆ ಸಾಕು ಎಂದು ಒದ್ದಾಡುತ್ತಾ ಇದ್ದಾಳೆ. ತಂಗಿಯರ ಮಾತಿನ ಪ್ರಕಾರ ಈ ಮದುವೆ ನಡೆಯೋದಿಲ್ಲ ಎಂದಾಗಿದೆ. ಕಾವೇರಜ್ಜಿ ಮಾತು ನಿಜವಾಗುತ್ತಾ ನೋಡಿ.
Tue, 01 Oct 202405:46 AM IST
ಹಿರಿಯ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ಗುಂಡು ತಗುಲಿದೆ. ಮಂಗಳವಾರ ಬೆಳಗ್ಗೆ ತಮ್ಮ ರಿವಾಲ್ವರ್ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ರಿವಾಲ್ವರ್ ಜಾರಿ ಕೆಳಗೆ ಬಿದ್ದು ಕಾಲಿಗೆ ಗುಂಡು ತಗುಲಿದೆ. ಕೂಡಲೇ ಕುಟುಂಬದವರು ಗೋವಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Tue, 01 Oct 202404:21 AM IST
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್ 30ರ ಎಪಿಸೋಡ್‌ನಲ್ಲಿ ಸುಂದ್ರಿಯನ್ನು ಶ್ರೇಷ್ಠಾ ಮನೆಯಿಂದ ಹೊರ ಹಾಕಿರುವ ವಿಚಾರ ಪೂಜಾಗೆ ತಿಳಿಯುತ್ತದೆ. ಅಕ್ಕನ ಒಪ್ಪಿಗೆ ಪಡೆದು ಪೂಜಾ ಸುಂದ್ರಿಯನ್ನು ಮನೆಗೆ ಕರೆತರುತ್ತಾಳೆ. ಸತ್ಯ ತಿಳಿದುಕೊಳ್ಳುವ ಉದ್ದೇಶದಿಂದ ಭಾಗ್ಯಾ, ಪೂಜಾ ಮಾತಿಗೆ ಒಪ್ಪಿಗೆ ಕೊಡುತ್ತಾಳೆ.
Tue, 01 Oct 202404:07 AM IST
- Amruthadhaare Serial Today Episode: ಅಮೃತಧಾರೆ ಧಾರಾವಾಹಿ ಭಾವನಾತ್ಮಕ ತಿರುವು ಪಡೆದಿದೆ. ಗೌತಮ್ ತನ್ನ ಅಮ್ಮ ಮತ್ತು ತಂಗಿಯ ಕಥೆಯನ್ನು ಭೂಮಿಕಾಳಿಗೆ ಹೇಳುತ್ತಾನೆ. ಇದೇ ಸಮಯದಲ್ಲಿ ಶಕುಂತಲಾದೇವಿ ಮತ್ತು ಲಕ್ಷ್ಮಿಕಾಂತ್ ಭಾಗ್ಯಾಳ ಸಾವಿನ ಕುರಿತು ಚರ್ಚಿಸುತ್ತಿದ್ದಾರೆ.
Tue, 01 Oct 202401:43 AM IST
500 ರೂ. ಮುಖಬೆಲೆಯ ನೋಟಿನಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್ ನಟ ಅನುಪಮ್ ಖೇರ್ ಫೋಟೋ ಪ್ರಿಂಟ್ ಮಾಡಿರುವ ವಂಚಕರು ಚಿನ್ನದ ವ್ಯಾಪಾರಿಗೆ ಮೋಸ ಮಾಡಿದ್ದಾರೆ. ಈ ಸುದ್ದಿಯನ್ನು ನಟ ಅನುಪಮ್ ಖೇರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.