Entertainment News in Kannada Live October 10, 2024: ಮಧ್ಯರಾತ್ರಿಯಿಂದಲೇ ‘ಮಾರ್ಟಿನ್’ ದರ್ಶನ, 3000ಕ್ಕೂ ಅಧಿಕ ತೆರೆಗಳ ಮೇಲೆ ಧ್ರುವ ಸರ್ಜಾ ಅಬ್ಬರ, 50 ಸಾವಿರ ಟಿಕೆಟ್ ಸೋಲ್ಡ್ ಔಟ್
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Thu, 10 Oct 202401:55 PM IST
- Martin Movie Release Update: ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಮಾರ್ಟಿನ್ ಸಿನಿಮಾ ಅಕ್ಟೋಬರ್ 11ರಂದು ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಅದಕ್ಕೂ ಮುನ್ನ ಮುಂಗಡ ಬುಕಿಂಗ್ ವಿಚಾರದಲ್ಲಿಯೂ ಈ ಸಿನಿಮಾ ಸದ್ದು ಮಾಡುತ್ತಿದೆ. ಮೊದಲ ದಿನವೇ 50 ಸಾವಿರ ಸನಿಹ ಟಿಕೆಟ್‌ಗಳು ಬಿಕರಿಯಾಗಿವೆ.
Thu, 10 Oct 202412:34 PM IST
- Krishnam Pranaya Sakhi OTT: ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಒಟಿಟಿಗೆ ಆಗಮಿಸಲು ಸಜ್ಜಾಗಿದೆ. ಅಮೆಜಾನ್ ಪ್ರೈಂ ಈ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದಿದೆ.
Thu, 10 Oct 202410:28 AM IST
ಬಿಎಸ್‌ಪಿ ವರ್ಮಾ ನಿರ್ದೇಶನದ ಮಫ್ತಿ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಚಿತ್ರಕ್ಕೆ ಪ್ರಭು ಮುಂಡ್ಕೂರ್ ವರ್ಮಾ ಕಥೆ ಬರೆದಿದ್ದು ಪ್ರಿಯಾಂಕಾ ಉಪೇಂದ್ರ, ರೀಷ್ಮಾ ನಾಣಯ್ಯ, ಖುಷಿ ರವಿ, ಅಂಕಿತಾ ಅಮರ್ ಸೇರಿದಂತೆ 9 ನಟಿಯರು ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
Thu, 10 Oct 202410:26 AM IST
- OTT Movies List: ಒಟಿಟಿಯಲ್ಲಿ ಸರಣಿ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ವೀಕ್ಷಕನ ಮುಂದೆ ಬಂದಿದೆ. ಚಿತ್ರಮಂದಿರಗಳಲ್ಲಿ ಸದ್ದು ಮಾಡಿ, ಭರ್ಜರಿ ಕಮಾಯಿ ಮಾಡಿದ್ದ ಸಿನಿಮಗಳು ಒಟಿಟಿಗೆ ಎಂಟ್ರಿಕೊಟ್ಟಿವೆ. ಇವುಗಳ ಜತೆಗೆ ವಿದೇಶಿ ಭಾಷೆಯ ಹಾರರ್ ಥ್ರಿಲ್ಲರ್ ವೆಬ್‌ಸಿರೀಸ್‌ಗಳೂ ಸ್ಟ್ರೀಮಿಂಗ್ ಆರಂಭಿಸಿವೆ.
Thu, 10 Oct 202409:23 AM IST
- ಕನ್ನಡ ಕಿರುತೆರೆಯಲ್ಲಿ ಬಿಗ್‌ಬಾಸ್ ಆರಂಭವಾಗಿದೆ. ಇತ್ತ ಬೇರೆ ವಾಹಿನಿಗಳಲ್ಲಿ ರಿಯಾಲಿಟಿ ಶೋಗಳು ಅಬ್ಬರಿಸುತ್ತಿವೆ. ಈ ನಡುವೆ ಸೀರಿಯಲ್‌ಗಳೂ ನೋಡುಗರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಹೊಸತನ್ನು ಕೊಡುತ್ತಿವೆ. ಇದೀಗ ಈ ಎಲ್ಲ ಶ್ರಮಕ್ಕೆ ಸಿಕ್ಕ ಟಿಆರ್‌ಪಿ ಎಷ್ಟು? ಬಿಗ್‌ಬಾಸ್‌ನಿಂದ ಯಾವೆಲ್ಲ ಸೀರಿಯಲ್‌ಗಳಿಗೆ ಹೊಡೆತ ಬಿದ್ದಿದೆ? ಇಲ್ಲಿದೆ ವಿವರ.
Thu, 10 Oct 202408:51 AM IST
ಕೊತ್ತ ಬಂಗಾರು ಲೋಕಂ ಚಿತ್ರದ ಮೂಲಕ ತೆಲುಗು ಸಿನಿಪ್ರಿಯರಿಗೆ ಪರಿಚಯವಾಗಿದ್ದ ಶ್ವೇತಾ ಬಸು ಪ್ರಸಾದ್ ಕೆಲವು ವರ್ಷಗಳಿಂದ ನಟನಟಯಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಆಕೆ ನಟನೆಯಲ್ಲಿ ಬ್ಯುಸಿ ಇದ್ದಾರೆ. ಶ್ವೇತಾ ನಟನೆಯ ಜಿಂದಗಿನಾಮ ವೆಬ್ ಸರಣಿ ಸೋನಿ ಲಿವ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
Thu, 10 Oct 202407:39 AM IST
ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಹಿಂದಿ ಬಿಗ್‌ಬಾಸ್ ಶೋ ಅಕ್ಟೋಬರ್ 6 ರಿಂದ ಆರಂಭವಾಗಿದೆ. ಕಾರ್ಯಕ್ರಮದ ಸ್ಪರ್ಧಿ ವಕೀಲ ಗುಣರತ್ನ ಸದಾವರ್ತೆ ಜೊತೆ ಅವರ ಪ್ರೀತಿಯ ಕತ್ತೆ ಮ್ಯಾಕ್ಸ್ ಕೂಡಾ ಬಂದಿದೆ. ಆದರೆ ಮನರಂಜೆಗೆ ಪ್ರಾಣಿಗಳ ಬಳಕೆ ಬೇಡ ಎಂದು ಬಿಗ್‌ಬಾಸ್ ಆಯೋಜಕರಿಗೆ PETA ಪತ್ರ ಬರೆದಿದೆ.
Thu, 10 Oct 202405:14 AM IST
- Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಚಾಕು ಚುಚ್ಚಿಕೊಂಡ ಜೈದೇವ್‌ನ ಇನ್ನೊಂದು ಮುಖ ಇಂದಿನ ಸಂಚಿಕೆಯಲ್ಲಿ ಅನಾವರಣಗೊಂಡಿದೆ. ತಾನು ಬೇಕೆಂದು ಈ ರೀತಿ ಮಾಡಿಕೊಂಡೆ ಎಂದು ಹೇಳುತ್ತಾನೆ.
Thu, 10 Oct 202404:50 AM IST
- Rajesh Nataranga: ಕನ್ನಡ ಕಿರುತೆರೆ ಮತ್ತು ಸಿನಿಮಾರಂಗದಲ್ಲಿ ತಮ್ಮ ನಟನೆ ಮೂಲಕವೇ ಛಾಪು ಮೂಡಿಸಿರುವ ನಟ ರಾಜೇಶ್ ನಟರಂಗ. ಪೋಷಕ ಪಾತ್ರಗಳ ಮೂಲಕ ಗಮನ ಸೆಳೆದ ಇದೇ ರಾಜೇಶ್ ಅವರ ವೈಯಕ್ತಿಕ ಬದುಕು ಹೇಗಿದೆ? ಮಡದಿ, ಮಕ್ಕಳು ಏನ್ಮಾಡ್ತಿದ್ದಾರೆ? ಇಲ್ಲಿದೆ ವಿವರ.
Thu, 10 Oct 202404:46 AM IST
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 9ರ ಎಪಿಸೋಡ್‌ನಲ್ಲಿ ಕುಸುಮಾ ಹೊಸ ಅವತಾರ ಕಂಡು ಪೂಜಾ-ಸುಂದ್ರಿ ಶಾಕ್ ಆಗುತ್ತಾರೆ. ನಂತರ ಶ್ರೇಷ್ಠಾಗೆ ಪ್ರಜ್ಞೆ ತಪ್ಪಿಸಿ ಸ್ಕೂಟರ್‌ನಲ್ಲಿ ಅವಳ ಮನೆಗೆ ಶಿಫ್ಟ್ ಮಾಡುತ್ತಾರೆ.
Thu, 10 Oct 202404:08 AM IST
ಟಿಜೆ ಜ್ಞಾನವೇಲ್ ನಿರ್ದೇಶನದಲ್ಲಿ ರಜನಿಕಾಂತ್, ಐಪಿಎಸ್ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ವೇಟ್ಟೈಯನ್ ಸಿನಿಮಾ ಗುರುವಾರ ತೆರೆ ಕಂಡಿದೆ. ಚಿತ್ರದ ಡಿಜಿಟಲ್, ಸ್ಯಾಟಲೈಟ್ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಸಿನಿಮಾ ನವೆಂಬರ್ ಎರಡನೇ ವಾರದಲ್ಲಿ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ.
Thu, 10 Oct 202403:28 AM IST
- Vettaiyan: ವೆಟ್ಟೈಯಾನ್ ಚಿತ್ರ ಬಿಡುಗಡೆಯಾಗಿದ್ದು, ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ವಿಮರ್ಶೆ ಹಂಚಿಕೊಳ್ಳುತ್ತಿದ್ದಾರೆ. ಒಂದೆಡೆ ರಜನಿಕಾಂತ್ ನಟನೆ ಬಗ್ಗೆ ನಿರಾಶೆ ವ್ಯಕ್ತವಾಗಿದ್ದು, ಮತ್ತೊಂದೆಡೆ ಟ್ವಿಸ್ಟ್ ಬಗ್ಗೆಯೂ ಪ್ರತಿಕ್ರಿಯೆ ಬಂದಿವೆ. ಸಾಮಾಜಿಕ ಸಂದೇಶ ನಿರೀಕ್ಷಿಸುವವರು ಚಿತ್ರ ವೀಕ್ಷಿಸಬಹುದು ಎನ್ನುತ್ತಿದ್ದಾರೆ ವೀಕ್ಷಕರು.
Thu, 10 Oct 202403:21 AM IST
ಭಾರತದ ಉದ್ದಗಲಕ್ಕೂ ಇಂದು ಸೂಪರ್ ಸ್ಟಾರ್ ರಜನೀಕಾಂತ್ ಹವಾ. ಬಹುನಿರೀಕ್ಷಿತ ಸಿನಿಮಾ ವೆಟ್ಟೈಯಾನ್ ಸಿನಿಮಾ ತೆರೆಕಂಡಿದೆ. ಎಲ್ಲರಿಗೂ ಕುತೂಹಲ ಇರುವ ವಿಷಯ ಇದು. ವೆಟ್ಟೈಯಾನ್ ಸಿನಿಮಾದ ಬಜೆಟ್ ಎಷ್ಟು ಗೆಸ್ ಮಾಡ್ತೀರಾ; ಕ್ಲೂ ಕೊಡ್ಲಾ, ಪುಷ್ಪಾ1 ಫಿಲಂ ಕಲೆಕ್ಷನ್ ಆಸುಪಾಸು. ವೆಟ್ಟೈಯಾನ್ ಬಜೆಟ್ ಎಷ್ಟೆಂದು ನಿರ್ದೇಶಕ ಟಿಜೆ ಜ್ಞಾನವೇಲ್ ಹೇಳಿದ್ದಾರೆ. ಆ ವಿವರ ಇಲ್ಲಿದೆ
Thu, 10 Oct 202402:27 AM IST
ಬಹುನಿರೀಕ್ಷಿತ ವೆಟ್ಟೈಯಾನ್ ಚಿತ್ರ ರಿಲೀಸ್ ಆಗಿದೆ. ಸಿನಿಮಾ ನೋಡಿದವರು ಟಿಜೆ ಜ್ಞಾನವೇಲ್ ಸ್ಕ್ರೀನ್ ಪ್ಲೇ, ಅನಿರುದ್ಧ್ ಸಂಗೀತಕ್ಕೆ ಹ್ಯಾಟ್ ಆಫ್ ಹೇಳುತ್ತಿದ್ದಾರೆ. ರಜನಿಕಾಂತ್ ಇಷ್ಟಪಡದವರು ಕೂಡಾ ಈ ಸಿನಿಮಾ ನೋಡಿ ಇಷ್ಟಪಡುತ್ತಾರೆ. ಸಿನಿಮಾ ಥ್ರಿಲ್ಲರ್ ಮಾತ್ರವಲ್ಲದೆ ಮಾಸ್ ಆಗಿದೆ ಎಂದು ಸಿನಿಪ್ರಿಯರು ಟ್ವಿಟ್ಟರ್‌ನಲ್ಲಿ ರಿವ್ಯೂ ಬರೆದುಕೊಂಡಿದ್ದಾರೆ.
Thu, 10 Oct 202412:56 AM IST
ಟಿಜೆ ಜ್ಞಾನವೇಲು ನಿರ್ದೇಶನದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ವೆಟ್ಟೈಯಾನ್ ಸಿನಿಮಾ ದೇಶಾದ್ಯಂತ ಇಂದು ರಿಲೀಸ್ ಆಗುತ್ತಿದೆ. ಸಿನಿಮಾ ನೋಡಲು ಅನುಕೂಲವಾಗುವಂತೆ ಪುದುಚೇರಿಯ ವಾಸ್ಕೋ ಎಂಬ ಕಂಪನಿ ತನ್ನ ಸಿಬ್ಬಂದಿಗೆ ಸಾಮೂಹಿಕ ರಜೆ ಘೋಷಿಸಿದೆ.