Entertainment News in Kannada Live October 3, 2024: ಕರ್ನಾಟಕದಲ್ಲಿ ನಡೆಯದ ‘ದೇವರ’ ಆಟ; ಚಿತ್ರಮಂದಿರದತ್ತ ‘ಭೈರಾದೇವಿ’ಯ ಆಗಮನ, ಇನ್ಯಾವ ಚಿತ್ರಗಳು ಈ ವಾರ ರಿಲೀಸ್?
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Thu, 03 Oct 202402:10 PM IST
- ಕರ್ನಾಟಕದಲ್ಲಿ ಈ ವಾರ (ಅಕ್ಟೋಬರ್ 4) ಬೇರೆ ಬೇರೆ ಭಾಷೆಯ ಹತ್ತು ಹಲವು ಸಿನಿಮಾಗಳು ಬಿಡುಗಡೆ ಆಗಲು ಸಜ್ಜಾಗಿವೆ. ಆ ಪೈಕಿ ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ ಸಹ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ.
Thu, 03 Oct 202412:17 PM IST
- Vettaiyan the Hunter Trailer: ಕಾಲಿವುಡ್‌ನ ಬಹುನಿರೀಕ್ಷಿತ ವೆಟ್ಟೈಯಾನ್ ಚಿತ್ರ ಇದೀಗ ಟ್ರೇಲರ್ ಮೂಲಕ ಸದ್ದು ಮಾಡುತ್ತಿದೆ. ಅಕ್ಟೋಬರ್ 10ರಂದು ದಸರಾ ಹಬ್ಬದ ಪ್ರಯುಕ್ತ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಟ್ರೇಲರ್ ಸಹ ರಿಲೀಸ್ ಆಗಿದ್ದು, ಖಾಕಿ ತೊಟ್ಟು ತಲೈವಾ ರಜನಿಕಾಂತ್ ಮತ್ತೆ ಅಬ್ಬರಿಸಿದ್ದಾರೆ. ಅಮಿತಾಬ್ ಬಚ್ಚನ್ ಸಹ ಈ ಚಿತ್ರದಲ್ಲಿದ್ದಾರೆ.
Thu, 03 Oct 202410:21 AM IST
ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ಮೂಲವೆನಿಸಿಕೊಂಡಿರುವ ವಿಶ್ವ ಪ್ರಸಿದ್ಧ ಐಎಂಡಿಬಿ ಸೆಪ್ಟೆಂಬರ್ 22ರಲ್ಲಿ ಭಾರತೀಯ ಟಾಪ್ 250 ಸಿನಿಮಾಗಳ ಲಿಸ್ಟ್ ಸಿದ್ದಪಡಿಸಿದೆ. ಅದರಲ್ಲಿ ಕನ್ನಡದ ಕಾಂತಾರ, 777 ಚಾರ್ಲಿ, ಕೆಜಿಎಫ್ ಭಾಗ 1, ಕೆಜಿಎಫ್ ಭಾಗ 2 ಸಿನಿಮಾಗಳು ಕೂಡಾ ಸೇರಿವೆ.
Thu, 03 Oct 202409:42 AM IST
- ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಮುಂಬೈನಲ್ಲಿ ದೊಡ್ಡ ಸುದ್ದಿಗೋಷ್ಟಿ ನಡೆಸಿತ್ತು ಚಿತ್ರತಂಡ. ಈಗ ಇದೇ ಸಿನಿಮಾ ಅಕ್ಟೋಬರ್ 11ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಪ್ರಚಾರಕ್ಕೆಂದೇ ವಿಶೇಷ ರೂಪುರೇಷೆಯನ್ನೇ ಸಿದ್ಧಪಡಿಸಿಕೊಂಡಿದೆ.
Thu, 03 Oct 202409:03 AM IST
- bigg boss kannada Season 11: ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ವಿರುದ್ಧ ಇಡೀ ಮನೆ ಮಂದಿ ತಿರುಗಿಬಿದ್ದಿದೆ. ಕಿತ್ತಾಟ ಆಡುತ್ತಲೇ ಇಡೀ ಮನೆ ಮಂದಿಯ ನೆಮ್ಮದಿ ಹಾಳುಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಸ್ಪರ್ಧಿಗಳಷ್ಟೇ ಅಲ್ಲದೆ, ವೀಕ್ಷಕರೂ ಮಾಡುತ್ತಿದ್ದಾರೆ. ವೀಕ್ಷಕ ವಲಯದಿಂದಲೂ ಆಕ್ರೋಶ ವ್ಯಕ್ರವಾಗುತ್ತಿದೆ.
Thu, 03 Oct 202408:57 AM IST
ಸಮಂತಾ, ನಾಗ ಚೈತನ್ಯಗೆ ಡಿವೋರ್ಸ್ ಕೊಡಲು ಬಿಆರ್‌ಎಸ್ ನಾಯಕ ಕೆಟಿ ರಾಮಾರಾವ್ ಕಾರಣ ಎಂದು ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ ಹೇಳಿಕೆ ನೀಡಿದ್ದಾರೆ. ವಿವಾದಾತ್ಮಕ ಹೇಳಿಕೆಯಿಂದ ಸಮಂತಾ ಅಭಿಮಾನಿಗಳು ಗರಂ ಆಗಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಕೂಡಾ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಟಿಆರ್, ಸುರೇಖಾಗೆ ಮಾನಹಾನಿ ನೋಟಿಸ್ ಕಳಿಸಿದ್ದಾರೆ.
Thu, 03 Oct 202406:31 AM IST
ಮೂರನೇ ದಿನದ ಟಾಸ್ಕ್‌ನಲ್ಲಿ ಧನರಾಜ್ ಆಚಾರ್ ಹಾಗೂ ಮಾನಸಾ ಜೊತೆ ಕಿರಿಕ್ ಮಾಡಿಕೊಂಡಿದ್ದ ಲಾಯರ್ ಜಗದೀಶ್ ಈಗ ಬಿಸ್‌ಬಾಸ್‌ಗೆ ಆವಾಜ್ ಹಾಕುತ್ತಾರೆ. ಇಲ್ಲಿ ನಡೆಯುತ್ತಿರುವ ಮಾಫಿಯಾವನ್ನು ಬಯಲಿಗೆ ತರುತ್ತೇನೆ, ನನ್ನ ಎದುರು ಹಾಕಿಕೊಂಡು ಹೇಗೆ ಕಾರ್ಯಕ್ರಮ ನಡೆಸುತ್ತೀರಿ ನೋಡುತ್ತೇನೆ ಎಂದು ಆವಾಜ್ ಹಾಕಿದ್ದಾರೆ.
Thu, 03 Oct 202405:35 AM IST
ಬಿಗ್‌ಬಾಸ್ ಕಾರ್ಯಕ್ರಮ ಯುವಜನತೆಯನ್ನು ದಾರಿ ತಪ್ಪಿಸುತ್ತಿದೆ. ಸಾಮಾನ್ಯವಾಗಿ ವಿವಾದಕ್ಕೆ ಒಳಗಾದವರನ್ನು ಸ್ಪರ್ಧಿಗಳನ್ನಾಗಿ ಕರೆ ತರುತ್ತಾರೆ. ಆದ್ದರಿಂದ ಬಿಗ್‌ಬಾಸ್‌ಗೆ ಹೋಗಲು ಯುವಜನತೆ ಮಾಡಬಾರದ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಇಂತಹ ಶೋಗೆ ನಿಯಂತ್ರಣ ಹೇರಬೇಕು ಎಂದು ಅರುಣ್ ಜೋಳದಕೂಡ್ಲಿಗಿ ಎಂಬುವವರು ಫೇಸ್‌ಬುಕ್ ಪೋಸ್ಟ್ ಹಂಚಿಕೊಂಡಿದ್ದಾರೆ.
Thu, 03 Oct 202404:37 AM IST
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 2ರ ಎಪಿಸೋಡ್‌ನಲ್ಲಿ ಶ್ರೇಷ್ಠಾ, ಭಾಗ್ಯಾಗೆ ನಿಜ ಹೇಳಲು ದೇವಸ್ಥಾನಕ್ಕೆ ಹೊರಡುತ್ತಾಳೆ. ಅವಳನ್ನು ಹಿಡಿದು ಸುಂದ್ರಿ, ಪೂಜಾ ಸ್ಟೋರ್ ರೂಮ್‌ನಲ್ಲಿ ಕಟ್ಟಿ ಹಾಕುತ್ತಾರೆ. ಇತ್ತ ತಾಂಡವ್, ಭಾಗ್ಯಾ ಪ್ರಶ್ನೆಗೆ ಉತ್ತರಿಸದೆ ಅವಳ ಮಾತುಗಳಿಗೆ ಕೋಪಗೊಳ್ಳುತ್ತಾನೆ.
Thu, 03 Oct 202404:15 AM IST
- Amruthadhaare serial today episode: ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್ ಮಾಡಿದ ಎಲ್ಲಾ ಪಾಪದ ಕೆಲಸಗಳ ಕುರಿತು ಭೂಮಿಕಾಗೆ ತಿಳಿಯುತ್ತದೆ. ಪಾರ್ಥ, ಆನಂದ್, ಅಪರ್ಣಾ ಜತೆ ಈ ಕುರಿತು ಚರ್ಚಿಸುತ್ತಾರೆ. ಮಲ್ಲಿಗೆ ಮತ್ತಿನ ಔಷಧ ನೀಡಿರುವ ಕುರಿತು ನರ್ಸ್ ಕೂಡ ಮಾಹಿತಿ ನೀಡುತ್ತಾರೆ.
Thu, 03 Oct 202404:13 AM IST
- ಪಾರು ಮುಖ ನೋಡಿದರೆ ತಿಳಿಯುತ್ತೆ ಅವಳಿಗೆ ಎಷ್ಟು ಬೇಸರ ಆಗಿದೆ ಎಂದು. ಆದರೆ ಅಜ್ಜಿ ಮಾತ್ರ ಯಾವುದನ್ನೂ ಲೆಕ್ಕಿಸದೇ ಅವಳಿಗೆ ಬೇಸರ ಆಗುವ ಇನ್ನಷ್ಟು ಸಂಗತಿಗಳನ್ನು ಹೇಳುತ್ತಿದ್ದಾರೆ. ಅವರ ಮನೆಯಲ್ಲಿ ಪಾರು ಮುಂದೆ ಹೇಗೆ ಬಾಳ್ವೆ ಮಾಡ್ತಾಳೋ ಏನೋ? ಎಂಬ ಚಿಂತೆ ಪಾರ್ವತಿಯ ಅಮ್ಮನಿಗೆ ಆಗ್ತಾ ಇದೆ.
Thu, 03 Oct 202403:45 AM IST
ಸ್ಪರ್ಧಿ ಧನರಾಜ್‌ಗೆ ಪದೇ ಪದೆ ಕಾಮಿಡಿ ಪೀಸ್ ಎಂದು ಪದ ಬಳಕೆ ಮಾಡಿದ್ದರಿಂದ ಕೋಪಗೊಳ್ಳುವ ಮಾನಸಾ, ಪದೇ ಪದೇ ಹಾಗೆ ಹೇಳಬೇಡಿ ಎನ್ನುತ್ತಾಳೆ. ಮಾನಸಾ ಮಾತಿಗೆ ಕೋಪಗೊಳ್ಳುವ ಲಾಯರ್ ಜಗದೀಶ್, ಯಾವ ಸೀಮೆ ಹೆಂಗಸು ಇವಳು ಎಂದು ಅಸಭ್ಯ ಪದ ಬಳಸುತ್ತಾರೆ. ಇದರಿಂದ ಸಹಸ್ಪರ್ಧಿಗಳು ಕೋಪಗೊಳ್ಳುತ್ತಾರೆ.
Thu, 03 Oct 202402:38 AM IST
ಆಗಸ್ಟ್ 23 ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಪೌಡರ್ ಕನ್ನಡ ಸಿನಿಮಾ ಅಕ್ಟೋಬರ್ 4 ರಿಂದ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಈ ಚಿತ್ರದಲ್ಲಿ ದಿಗಂತ್, ಧನ್ಯಾ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ ಹಾಗೂ ಇನ್ನಿತರರು ನಟಿಸಿದ್ದಾರೆ.
Thu, 03 Oct 202401:24 AM IST
ಈ ವಾರ ನಾಮಿನೇಟ್ ಆದ ಸ್ಪರ್ಧಿಗಳಿಗೆ ಸೇಫ್ ಝೋನ್‌ನಿಂದ ಹೊರ ಬರಲು ಬಿಗ್‌ಬಾಸ್ ಒಂದು ಟಾಸ್ಕ್ ನೀಡಿದ್ದರು. ಅದು ಧನರಾಜ್ ಉಸ್ತುವಾರಿಯಲ್ಲಿ ಆರಂಭವಾಯ್ತು. ಆದರೆ ಆಟ ಆಡುವಾಗ ಯುಮುನಾ ಶ್ರೀನಿಧಿ ಕೆಳಗೆ ಬಿದ್ದಿದ್ದರಿಂದ ಜಗಳ ಶುರುವಾಯ್ತು. ಲಾಯರ್ ಜಗದೀಶ್ ಕೋಪದ ಮಾತುಗಳಿಗೆ ಧನರಾಜ್ ಕಾಮಿಡಿ ಮಾಡುತ್ತಲೇ ಉತ್ತರ ಕೊಟ್ಟರು.