ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live September 20, 2024 : ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ, ಮುನಿರತ್ನ ಮತ್ತೆ ಬಂಧನ: ಅತ್ಯಾಚಾರ, ಹನಿಟ್ರ್ಯಾಪ್ ಪ್ರಕರಣದಲ್ಲಿ ಅರೆಸ್ಟ್
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Fri, 20 Sep 202405:09 PM IST
ಕರ್ನಾಟಕ News Live: ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ, ಮುನಿರತ್ನ ಮತ್ತೆ ಬಂಧನ: ಅತ್ಯಾಚಾರ, ಹನಿಟ್ರ್ಯಾಪ್ ಪ್ರಕರಣದಲ್ಲಿ ಅರೆಸ್ಟ್
- BJP MLA Munirathna: ಬಿಜೆಪಿ ಶಾಸಕ ಮುನಿರತ್ನ ಮತ್ತು ಇತರ ಆರು ಮಂದಿ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಪ್ರಕರಣ ದಾಖಲಾಗಿದೆ. ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ರಾತ್ರಿ ಪ್ರಕರಣ ದಾಖಲಾಗಿದೆ.
Fri, 20 Sep 202402:40 PM IST
ಕರ್ನಾಟಕ News Live: ಕರ್ನಾಟಕದ ಮುಜರಾಯಿ ದೇವಾಲಯಗಳಲ್ಲಿ ನಂದಿನಿ ತುಪ್ಪ ಬಳಕೆ ಕಡ್ಡಾಯ; ತಿರುಪತಿ ಲಡ್ಡು ವಿವಾದ ಬೆನ್ನಲ್ಲೇ ಎಚ್ಚತ್ತ ಸರ್ಕಾರ
- Muzrai Department: ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ವಿವಾದದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ, ತನ್ನ ವ್ಯಾಪ್ತಿಗೆ ಬರುವ ದೇವಸ್ಥಾನಗಳ ಪ್ರಸಾದದಲ್ಲಿ ನಂದಿನಿ ತುಪ್ಪವನ್ನೇ ಬಳಕೆ ಮಾಡುವಂತೆ ಆದೇಶ ಹೊರಡಿಸಿದೆ.
Fri, 20 Sep 202401:33 PM IST
ಕರ್ನಾಟಕ News Live: ನೀನೇನು ಸತ್ಯ ಹರಿಶ್ಚಂದ್ರನಾ? ನಿನ್ನ ಮೇಧಾವಿ ಅನ್ಕೊಂಡಿದ್ದೆ, ನೀನು ಹೆಬ್ಬೆಟ್ಟೇ; ಕೃಷ್ಣ ಬೈರೇಗೌಡ ಆರೋಪಕ್ಕೆ ಹೆಚ್ಡಿಕೆ ವಾಗ್ದಾಳಿ
- HD Kumaraswamy: ತನ್ನ ವಿರುದ್ಧ ಡಿನೋಟಿಫಿಕೇಷನ್ ಆರೋಪ ಮಾಡಿದ್ದ ಸಚಿವ ಕೃಷ್ಣ ಬೈರೇಗೌಡ ಹಾಗೂ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಅಲ್ಲದೆ, ಡಿಕೆ ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
Fri, 20 Sep 202412:50 PM IST
ಕರ್ನಾಟಕ News Live: ಕೃಷಿ ಇಲಾಖೆಯ 945 ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಅಧಿಸೂಚನೆ; ಈ ದಿನದಿಂದ ಅರ್ಜಿ ಶುರು, ವಿದ್ಯಾರ್ಹತೆ ವಿವರ
- ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಕ್ಕೆ ಕರ್ನಾಟಕ ಲೋಕಸೇವಾ ಆಯೋಗ ಹೊಸ ಅಧಿಸೂಚನೆ ಪ್ರಕಟಿಸಿದೆ. ಗ್ರೂಪ್ ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ಯಾವಾಗ ಆರಂಭ, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು, ವಯಸ್ಸು ಸೇರಿದಂತೆ ಎಲ್ಲಾ ವಿವರ ಇಲ್ಲಿದೆ.
Fri, 20 Sep 202411:09 AM IST
ಕರ್ನಾಟಕ News Live: Dasara Holidays 2024: ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ; ಯಾವಾಗಿಂದ ರಜೆ ಆರಂಭ, ಎಷ್ಟು ದಿನ?
- Dasara Holidays 2024 in Karnataka: ನಾಡ ಹಬ್ಬ ದಸರಾ ಹಬ್ಬಕ್ಕೆ ಅದ್ಧೂರಿ ಸಿದ್ದತೆ ರಾಜ್ಯ ಸರ್ಕಾರ ನಡೆಸುತ್ತಿದೆ. ಇದರ ನಡುವೆ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20 ತನಕ ದಸರಾ ರಜೆ ಘೋಷಿಸಿದೆ. ಇಡೀ ಕರ್ನಾಟಕದ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಿದೆ.
Fri, 20 Sep 202409:39 AM IST
ಕರ್ನಾಟಕ News Live: 9ನೇ ತರಗತಿ ನೇ ಡ್ರಾಪ್‌ಔಟ್ ವ್ಯಕ್ತಿ ದೋಚಿದ್ದು ಬರೋಬ್ಬರಿ 2.11 ಕೋಟಿ ರೂ.; ಬಳ್ಳಾರಿ ಕಂಪೆನಿ ಹೆಸರಿನ ಹಣ ದೋಚಿದ್ದಖತರನಾಕ್ ಕಳ್ಳ ಅಂದರ್
ಬಳ್ಳಾರಿ ಮೂಲದ ಗಣಿ ಕಂಪೆನಿಗೆ ಬರಬೇಕಾಗಿದ್ದ ಕೋಟಿಗಟ್ಟಲೇ ಹಣವನ್ನು ನಕಲಿ ಐಡಿ ತಯಾರಿಸಿ ದೋಚಿದ್ದ ಮಧ್ಯಪ್ರದೇಶದ ಯುವಕನನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.
Fri, 20 Sep 202409:02 AM IST
ಕರ್ನಾಟಕ News Live: ಮೈಸೂರು ದಸರಾ ಉದ್ಘಾಟಿಸುವ ಹಿರಿಯ ಸಾಹಿತಿ ಹಂಪನಾಗರಾಜಯ್ಯ ಅವರ ಹಿನ್ನೆಲೆ ಏನು: 10 ಅಂಶಗಳು
- ಕನ್ನಡ ಸಾಹಿತ್ಯ ಕ್ಷೇತ್ರ, ಅಧ್ಯಾಪನ, ಸಂಶೋಧನಾ ಕ್ಷೇತ್ರದಲ್ಲಿ ಅಪರಿಮಿತ ಅನುಭವ ಇರುವ ಹಿರಿಯ ಸಾಹಿತಿ ಹಂಪನಾಗರಾಜಯ್ಯ ಅವರನ್ನು ಈ ಬಾರಿ ದಸರಾ ಉದ್ಘಾಟನೆಗೆ ಆಹ್ವಾನಿಸಲಾಗುತ್ತಿದೆ.
Fri, 20 Sep 202408:06 AM IST
ಕರ್ನಾಟಕ News Live: Breaking News: ಮೈಸೂರು ದಸರಾ ಉದ್ಘಾಟನೆಗೆ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಹೆಸರು ಅಂತಿಮ; ನಾಲ್ಕು ದಿನದ ಹಿಂದೆಯೇ ಪ್ರಕಟಿಸಿದ್ದ ಎಚ್‌ಟಿ
- ಮೈಸೂರು ದಸರಾ ಉದ್ಘಾಟನೆಗೆ ಹಿರಿಯ ಸಾಹಿತಿ ಹಂಪನಾಗರಾಜಯ್ಯ ಅವರ ಹೆಸರು ಅಂತಿಮಗೊಂಡಿದೆ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಇದನ್ನು ಪ್ರಕಟಿಸಿದ್ದಾರೆ.
Fri, 20 Sep 202407:39 AM IST
ಕರ್ನಾಟಕ News Live: ಮೈಸೂರು ದಸರಾ ಬಂದರೂ ವೆಬ್‌ಸೈಟ್ ಅಣಿಯಾಗಲಿಲ್ಲ: ತಿಂಗಳಿನಿಂದಲೂ ಕ್ಷಣಗಣನೆ ಆರಂಭ, ಪ್ರವಾಸಿಗರಿಗೆ ಮಾಹಿತಿ ಸಿಗೋದು ಯಾವಾಗ
- ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದರೂ ಇನ್ನೂ ಮಾಹಿತಿಯನ್ನೇ ನೀಡದೇ ಪ್ರಚಾರ ಚಟುವಟಿಕೆಗಳು ನಿಂತಂತೆ ಕಾಣುತ್ತಿವೆ. ದಸರಾ ವೆಬ್‌ಸೈಟ್ ಕೂಡ ಬಿಡುಗಡೆಯಾಗಿಲ್ಲ.
Fri, 20 Sep 202406:54 AM IST
ಕರ್ನಾಟಕ News Live: ದಾವಣಗೆರೆಯಲ್ಲೂ ಗಣೇಶನ ಮೆರವಣಿಗೆ ವೇಳೆ ಗಲಾಟೆ, ಮನೆಗಳ ಮೇಲೂ ಕಲ್ಲು ತೂರಾಟ; 30ಕ್ಕೂ ಹೆಚ್ಚು ಆರೋಪಿಗಳ ಬಂಧನ
- ಗಣೇಶ ಮೂರ್ತಿ ವಿಸರ್ಜನೆ ವೇಳೆ ನಾಗಮಂಗಲದ ಬಳಿಕ ಈಗ ದಾವಣಗೆರೆಯಲ್ಲೂ ಗಲಾಟೆ, ಕಲ್ಲು ತೂರಾಟಗಳು ನಡೆದಿವೆ.ಹಲವರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
Fri, 20 Sep 202405:38 AM IST
ಕರ್ನಾಟಕ News Live: ಮಲೆನಾಡಿಗೂ ಒಂದಾದರೂ ವಂದೇ ಭಾರತ್ ರೈಲು ಸಂಪರ್ಕ ಕೊಡಿ; ಶಿವಮೊಗ್ಗದಲ್ಲಿ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚಿದ ಕೂಗು
- ಶಿವಮೊಗ್ಗ ಜಿಲ್ಲೆ ಮಲೆನಾಡಿನ ಕೇಂದ್ರ ಸ್ಥಾನ. ಈ ಜಿಲ್ಲೆಗೂ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ಒದಗಿಸಿ ಎನ್ನುವ ಬೇಡಿಕೆಗೆ ಬಲವಾಗಿದೆ.
Fri, 20 Sep 202405:06 AM IST
ಕರ್ನಾಟಕ News Live: ಮಹಿಳಾ ಉದ್ಯೋಗಿಗಳಿಗೆ ಗುಡ್‌ನ್ಯೂಸ್, ಇನ್ನು ಮುಂದೆ ವರ್ಷದಲ್ಲಿ 6 ದಿನ ಸಿಗುತ್ತೆ ವೇತನ ಸಹಿತ ಮುಟ್ಟಿನ ರಜೆ, ಖಾಸಗಿ ವಲಯಕ್ಕೂ ಅನ್ವಯ
- ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ನೀಡಬೇಕು ಎಂದು ಮಹಿಳೆಯರು ಕೆಲವು ವರ್ಷಗಳಿಂದ ಪ್ರಸ್ತಾಪ ಮಾಡುತ್ತಲೇ ಇದ್ದಾರೆ. ಇದೀಗ ಅವರ ಕೂಗು ಸರ್ಕಾರದ ಕಿವಿ ತಲುಪಿದೆ. ರಾಜ್ಯದಲ್ಲಿ ಶೀಘ್ರದಲ್ಲೇ ವಾರ್ಷಿಕ ಆರು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ಜಾರಿಗೊಳಿಸುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಏನಿದು ವರದಿ ನೋಡಿ (ವರದಿ: ಎಚ್.ಮಾರುತಿ)
Fri, 20 Sep 202402:54 AM IST
ಕರ್ನಾಟಕ News Live: ಸರ್ಕಾರಿ ಉದ್ಯೋಗದ ಆಮಿಷ, ನಕಲಿ ನೇಮಕಾತಿ ಪಾತ್ರ ನೀಡಿ 23 ಲಕ್ಷ ರೂ ವಂಚನೆ; ಬೆಂಗಳೂರಿನ 6 ಆರೋಪಿಗಳ ವಿರುದ್ಧ ಎಫ್ ಐ ಆರ್
- ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಕಿತ್ತಿದ್ದೂ ಅಲ್ಲದೇ ನಕಲಿ ನೇಮಕಾತಿ ಪತ್ರ ನೀಡಿದ್ದ ಬೆಂಗಳೂರಿನ ಆರು ಮಂದಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
- (ವರದಿ: ಎಚ್. ಮಾರುತಿ, ಬೆಂಗಳೂರು)
Fri, 20 Sep 202401:46 AM IST
ಕರ್ನಾಟಕ News Live: ಕಾವೇರಿ ತೀರದಲ್ಲೂ ಗಂಗಾರತಿ ಪಕ್ಕಾ, ವಾರಣಾಸಿಗೆ ಹೊರಟಿತು ಸಚಿವ ಚಲುವರಾಯಸ್ವಾಮಿ ಮತ್ತವರ ತಂಡ: ದಸರಾಕ್ಕೆ ಆರಂಭಿಸಲು ಸಿದ್ದತೆ
- ಕರ್ನಾಟಕದ ಕಾವೇರಿ ನದಿ ತೀರದಲ್ಲಿ ಗಂಗಾ ಆರತಿ ಆರಂಭಿಸುವ ಸಂಬಂಧ ನೀರಾವರಿ ಇಲಾಖೆ ಸಮಿತಿ ರಚಿಸಿದ್ದು,ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದ ಸಮಿತಿ ವಾರಣಾಸಿ, ಹರಿದ್ವಾರಕ್ಕೆ ಭೇಟಿ ನೀಡಲಿದೆ.
- (ವರದಿ: ಎಚ್.ಮಾರುತಿ. ಬೆಂಗಳೂರು)
Fri, 20 Sep 202401:09 AM IST
ಕರ್ನಾಟಕ News Live: ಹಾಸನ, ಕಲಬುರಗಿ, ಮೈಸೂರು, ಬಾಗಲಕೋಟೆ, ಮಂಡ್ಯ, ಕೊಪ್ಪಳದಲ್ಲಿ ಬಿರು ಬಿಸಿಲು; ಬೆಂಗಳೂರಲ್ಲಿ ಹೇಗಿದೆ ಹವಾಮಾನ
- ಕರ್ನಾಟಕದ ಬಹುತೇಕ ಜಿಲ್ಲೆಗಳ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಂಡು ಬಂದಿದೆ. ಹಾಸನ, ಕಲುಬುರಗಿ, ಮಂಡ್ಯ, ಕೊಪ್ಪಳ ಸಹಿತ ಹಲವು ಭಾಗಗಳಲ್ಲಿ ಬಿಸಿಲಿನ ಪ್ರಮಾಣ ಏರಿಕೆಯಾಗಿದೆ. ಬೆಂಗಳೂರಿನಲ್ಲೂ ಶುಷ್ಕ ಹವಾಮಾನವೇ ಇರಲಿದೆ.