ಕನ್ನಡ ಸುದ್ದಿ  /  ಜೀವನಶೈಲಿ  /  Arm Fat: ಕೈಗಳು ದಪ್ಪವಾಗಿ ಡ್ರೆಸ್‌ ಟೈಟ್‌ ಅನ್ನಿಸ್ತಾ ಇದ್ಯಾ; ತೋಳಿನ ಕೊಬ್ಬು ಕರಗಿಸಲು ಇಲ್ಲಿದೆ 5 ಪರಿಣಾಮಕಾರಿ ವ್ಯಾಯಾಮ

Arm Fat: ಕೈಗಳು ದಪ್ಪವಾಗಿ ಡ್ರೆಸ್‌ ಟೈಟ್‌ ಅನ್ನಿಸ್ತಾ ಇದ್ಯಾ; ತೋಳಿನ ಕೊಬ್ಬು ಕರಗಿಸಲು ಇಲ್ಲಿದೆ 5 ಪರಿಣಾಮಕಾರಿ ವ್ಯಾಯಾಮ

ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವವರ ಪೈಕಿ ನೀವು ಒಬ್ಬರಾಗಿದ್ದು, ಫಿಟ್‌ನೆಸ್‌ ವಿಚಾರದಲ್ಲಿ ನೆಗ್ಲೆಕ್ಟ್‌ ಮಾಡಿದ್ರೆ ನಿಮಗೂ ಈ ಸಮಸ್ಯೆ ಎದುರಾಗಿರುತ್ತದೆ, ಅದೇನೆಂದರೆ ತೋಳಿನ ಭಾಗದಲ್ಲಿ ಕೊಬ್ಬು ಸಂಗ್ರಹವಾಗಿ ಕೈ ದಪ್ಪಗಾಗುವುದು. ತೋಳಿನ ಭಾಗದ ಕೊಬ್ಬು ಕರಗಿಸಲು ನೀವು ಪರಿಣಾಮಕಾರಿ ವ್ಯಾಯಾಮಕ್ಕಾಗಿ ಎದುರು ನೋಡುತ್ತಿದ್ದರೆ ಇಲ್ಲಿದೆ ಒಂದಿಷ್ಟು ಐಡಿಯಾಗಳು.

ತೋಳಿನ ಕೊಬ್ಬು ಕರಗಿಸಲು ಇಲ್ಲಿದೆ 5 ಪರಿಣಾಮಕಾರಿ ವ್ಯಾಯಾಮ
ತೋಳಿನ ಕೊಬ್ಬು ಕರಗಿಸಲು ಇಲ್ಲಿದೆ 5 ಪರಿಣಾಮಕಾರಿ ವ್ಯಾಯಾಮ

ಡೆಸ್ಕ್‌ ಜಾಬ್‌ ಅಂದರೆ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಮುಂದೆ ಕುಳಿತು ಕೆಲಸ ಮಾಡುವವರು ಗಂಟೆಗಟ್ಟಲ್ಲೇ ಕುಳಿತಲ್ಲೇ ಕುಳಿತಿರಬೇಕಾಗುತ್ತದೆ. ಇದರಿಂದ ಅವರಿಗೆ ಸಕ್ರಿಯವಾಗಿರಲು ಮತ್ತು ಸ್ನಾಯುವಿನ ಟೋನ್ ಅನ್ನು ಕಾಪಾಡಿಕೊಳ್ಳಲು ಸವಾಲಾಗಬಹುದು. ಜಡ ಜೀವನಶೈಲಿ ನಿಮ್ಮದಾಗಿದ್ದರೂ ಫಿಟ್ನೆಸ್‌ ಗುರಿಗಳನ್ನು ಸಾಧಿಸುವುದು ದೊಡ್ಡ ಸಾಧನೆಯೇನಲ್ಲ. ಕುಳಿತಲ್ಲೇ ಕುಳಿತು ಕೆಲಸ ಮಾಡುವುದು ತೋಳಿನಲ್ಲಿ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ. ತೋಳಿನ ಕೊಬ್ಬನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಹಾಗೂ ಟೋನ್‌ ವೃದ್ಧಿಸಿಕೊಳ್ಳಲು ಕೆಲವು ವ್ಯಾಯಾಮಗಳ ಮೇಲೆ ಕೇಂದ್ರೀಕರಿಸಬೇಕಾಗಬಹುದು. ಈ ವ್ಯಾಯಾಮಗಳು ತೋಳಿನ ಕೊಬ್ಬು ಕರಗಿಸುವುದು ಮಾತ್ರವಲ್ಲ ಪರಿಣಾಮಕಾರಿಯಾಗಿ ತೋಳಿಗೆ ಆಕಾರ ನೀಡಲು ಸಹಕಾರಿ.

ತೋಳಿನ ಕೊಬ್ಬು ಕರಗಿಸುವ 5 ಪರಿಣಾಮ ಕಾರಿ ವ್ಯಾಯಾಮಗಳಿವು

ಕುಳಿತಲ್ಲೇ ತೋಳುಗಳನ್ನು ತಿರುಗಿಸುವುದು

ಪಾದಗಳನ್ನು ನೆಲಕ್ಕೆ ಊರಿ, ನೇರವಾಗಿ ಕುರ್ಚಿಯ ಮೇಲೆ ಕುಳಿತುಕೊಳ್ಳಿ. ಕೈಗಳನ್ನು ಮಡಿಸಿ ಭುಜದ ಮೇಲಿಡಿ. ಈಗ ಹಿಂದಕ್ಕೆ ಸ್ವಲ್ಪ ಹೊತ್ತು ಮುಂದಕ್ಕೆ ಸ್ವಲ್ಪ ಹೊತ್ತು ತಿರುಗಿಸಿ. 30 ಸೆಕೆಂಡ್‌ ಮುಂದೆ 30 ಸೆಕಂಡ್‌ ಹಿಂದೆ ತಿರುಗಿಸಿ.

ಟ್ರೆಂಡಿಂಗ್​ ಸುದ್ದಿ

ಥ್ರೈಸೆಪ್‌ ಡಿಪ್ಸ್‌

ಕುರ್ಚಿಯ ತುದಿಯಲ್ಲಿ ಕುಳಿತು ಸೊಂಟಕ್ಕಿಂತ ಮೇಲ್ಭಾಗದಲ್ಲಿ ಕೈ ಇರಿಸಿಕೊಳ್ಳಿ. ದೇಹವನ್ನು ಮುಂದಕ್ಕೆ ಹಿಂದಕ್ಕೆ ಬಾಗಿಸಿ. ನಿಮ್ಮ ಮೊಣಕೈಗಳನ್ನು ಬಗ್ಗಿಸಿ ಮತ್ತು ನಿಮ್ಮ ದೇಹವನ್ನು ನೆಲದ ಕಡೆಗೆ ತಗ್ಗಿಸಿ, ನಂತರ ಆರಂಭಿಕ ಸ್ಥಾನಕ್ಕೆ ಹಿಂತಿರುಗಿ. ಇದು ಕೂಡ ತೋಳಿನ ಕೊಬ್ಬು ಕರಗಲು ಸಹಕಾರಿ.

ಸೀಟೆಡ್‌ ಫುಶ್‌ಅಪ್‌

ಕುರ್ಚಿಯ ಮೇಲೆ ನೇರವಾಗಿ ಕುಳಿತುಕೊಳ್ಳಿ. ಎರಡೂ ಕೈಗಳಿಂದ ಸೀಟುಗಳನ್ನು ಅಂದರೆ ನೀವು ಕುಳಿತುಕೊಳ್ಳುವ ಭಾಗವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ. ಈಗ ದೇಹವನ್ನ ಮೇಲಕ್ಕೆ ಎತ್ತಿ. ಹ್ಯಾಂಡಲ್‌ ಇರುವ ಚೇರ್‌ ಆದರೆ ಪಾದವನ್ನು ನೆಲಕ್ಕೆ ಊರಿ. ಕುರ್ಚಿಯ ಹ್ಯಾಂಡಲ್‌ ಮೇಲೆ ಕೈ ಇರಿಸಿ ದೇಹವನ್ನು ಮೇಲಕ್ಕೆ ಎತ್ತಿ.

ಸೀಟೆಡ್‌ ಪಂಚಸ್‌

ನೀವು ಕುಳಿತ ಜಾಗದಲ್ಲೇ ಪಂಚ್‌ ಮಾಡುವ ರೀತಿ ಕೈಗಳನ್ನು ಹಿಂದಕ್ಕೆ ಮುಂದಕ್ಕೆ ಮಾಡಿ. ಅರ್ಧ ನಿಮಿಷಗಳ ಕಾಲ ಈ ವ್ಯಾಯಾಮ ಮಾಡಿ. ಇದಕ್ಕೆ ಎರಡೂ ಕೈಗಳನ್ನು ಬಳಸಿ. ಕೈ ಎದೆಯ ನೇರಕ್ಕೆ ಇರಲಿ.

ಆರ್ಮ್‌ ಪ್ರೆಸಸ್‌

ನೇರವಾಗಿ ಕುರ್ಚಿಗೆ ಬೆನ್ನು ಆನಿಸಿ ಕುಳಿತುಕೊಳ್ಳಿ. ಕೈಗಳನ್ನು ಬೆಂಡಾಗಿಸಿ ಎದೆಯ ಮೇಲೆ ಇರಿಸಿ. ನಂತರ ಹಿಂದಕ್ಕೆ ಮುಂದಕ್ಕೆ ಮಾಡಿ, ಇದು ಕೂಡ ತೋಳಿನ ಕೊಬ್ಬು ಕರಗಿಸಲು ಪರಿಣಾಮಕಾರಿ ವ್ಯಾಯಾಮ.

ತೋಳು ದಪ್ಪವಾದ್ರೆ ಅಂದ ಕೆಡುವುದು ಮಾತ್ರವಲ್ಲ ಇಷ್ಟಬಂದ ಡ್ರೆಸ್‌ಗಳನ್ನು ಧರಿಸಲು ಸಾಧ್ಯವಾಗಿಲ್ಲ, ಹೆಣ್ಣುಮಕ್ಕಳಿಗಂತೂ ಇದು ಅಸಹ್ಯ ಕಾಣುತ್ತದೆ. ಹಾಗಾಗಿ ಕುಳಿತಲ್ಲೇ ಸುಲಭವಾಗಿ ಮಾಡಬಹುದಾದ ಈ ವ್ಯಾಯಾಮಗಳನ್ನು ಅಭ್ಯಾಸ ಮಾಡಿಕೊಳ್ಳಬಹುದು.